
ಚಿತ್ರ ವರದಿ : ರವಿ.ಬಿ .ಅಂಚನ್ ಪಡುಬಿದ್ರಿ
ಮುಂಬಯಿ ನ. 5: ದಕ್ಷಿಣ ಮುಂಬಯಿ ಫೋರ್ಟ್ ಪರಿಸರದ ಎಸ್.ಎ. ಬ್ರೆಲ್ವಿ ರಸ್ತೆಯ ಉಡುಪಿ ಹೋಟೆಲ್ ಎದುರಿಗಿನ. ದಿ| ಎ.ಬಿ. ಶೆಟ್ಟಿಯವರ ಮುಂದಾಳುತ್ವದಲ್ಲಿ ಸ್ಥಾಪಿಸಲ್ಪಟ್ಟ 41 ವರ್ಷ ಪುರಾತನ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸಂಚಾಲಿತ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ಪೋರ್ಟ್ಸ್ ಕ್ಲಬ್ ಇದರ ಹಾಗೂ ದಾನಿಗಳ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ರಜತ ಪೀಠ ಸಮರ್ಪಣೆ ಕಾರ್ಯಕ್ರಮವು ಬೆಳಿಗ್ಗೆ 6.30 ರ ಶುಭ ಮುಹೂರ್ತದಲ್ಲಿ ಡೊಂಬಿವಲಿ ಅಜ್ದೆಪಾಡ ಶ್ರೀ ಅಯ್ಯಪ್ಪ ಮಂದಿರದ ತಂತ್ರಿ ವಿದ್ವಾನ್ ರಾಮಚಂದ್ರ ಬಾಯರ್ ಇವರ ಪೌರೋಹಿತ್ಯದಲ್ಲಿ ಚಂದ್ರಶೇಖರ ಗುರುಸ್ವಾಮಿ, ಪ್ರಕಾಶ್ ಕಾಂಚನ್ ಗುರು ಸ್ವಾಮಿ, ರಾಜ್ ಕುಮಾರ್ ಗುರು ಸ್ವಾಮಿ ಹಾಗೂ ಅಧ್ಯಕ್ಷರಾದ ಕಲಾಯಿ ಕೃಷ್ಣ ಶೆಟ್ಟಿ, ಮತ್ತು ಸಮಿತಿಯ ಸರ್ವ ಸದಸ್ಯರ ಹಾಗೂ ದಾನಿಗಳ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.




ಬೆಳಿಗ್ಗೆ 6.30 ಗಂಟೆಗೆ ಮಹಾಗಣಪತಿ ಹೋಮ, ರಜತ ಪೀಠ ಶುದ್ಧಿಜರಣ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವರಿಗೆ ಪಂಚಾಮೃತ ಅಭಿಷೇಕ ನಡೆದು ಶ್ರೀ ಸತ್ಯನಾರಾಯಣ ಮಹಾಪೂಜೆ, ಮಂಡಳಿಯ ಸದಸ್ಯರಿಂದ ಭಜನೆ ಕಾರ್ಯಕ್ರಮ ಹಾಗೂ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಮಹಾಗಣಪತಿ ಹೋಮ ಪೂಜೆ ಹಾಗೂ ಸತ್ಯನಾರಾಯಣ ಮಹಾ ಪೂಜೆಯ ವೃತದಾರಿಗಳಾಗಿ ಉಡುಪಿ ಹೋಟೆಲ್ ಮಾಲಕ ಧೀರಜ್ ಶೆಟ್ಟಿ, ಕಾಜಲ್ ಧೀರಜ್ ಶೆಟ್ಟಿ ದಂಪತಿ ಸಹಕರಿಸಿದರು.
ಅನ್ನ ಸಂತರ್ಪಣೆಯ ದಾನಿಯಾಗಿ ಧೀರಜ್ ಶೆಟ್ಟಿ ದಂಪತಿ ಸಹಕರಿಸಿದರು ಪೂಜೆಯಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಸಾಲ್ಯಾನ್, ರಮೇಶ್ ಶೆಟ್ಟಿ ಕಡಂದಲೆ, ಡೊಂಬಿವಲಿ ಅಜ್ದೆಪಾಡ ಅಯ್ಯಪ್ಪ ಮಂದಿರದ ನಾರಾಯಣ ಗುರುಸ್ವಾಮಿ, ಚಂದ್ರಹಾಸ ಗುರು ಸ್ವಾಮಿ ಇನ್ನಂಜೆ, ಸುರೇಶ್ ಶೆಟ್ಟಿ ಯೆಯ್ಯಾಡಿ ಗುರುಸ್ವಾಮಿ, ಸತೀಶ್ ಗುರು ಸ್ವಾಮಿ , ಶಿಬರೂರ್ ಗುತ್ತು ಸುರೇಶ್ ಶೆಟ್ಟಿ ಗುರು ಸ್ವಾಮಿ ರೇ ರೋಡ್, ಸುಧಾಕರ ಗುರು ಸ್ವಾಮಿ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಭಕ್ತ ವೃಂದ ಡೊಂಬಿವಲಿ, ದಾನಿಗಳಾದ ಸಿ.ಎಮ್.ಡಿ, ಕುಶಲ್ ದೇಸಾಯಿ ಅಪಾರ್ ಇಂಡಸ್ಟ್ರೀಸ್ ಲಿ., ಭರತ್ ಶೆಟ್ಟಿ, ರಾಜೇಶ್ ಹೆಗ್ಡೆ, ಕರುಣಾಕರ ಪೂಜಾರಿ , ಸುಭಾಷ್ ರೈ, ಮೋಹನ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಶ್ರೀನಿವಾಸ ಕೋಟ್ಟಾರಿ, ನವೀನ್ ಶೆಟ್ಟಿ ಪಡ್ರೆ, ಅಜಂತಾ ಜಯರಾಮ ಶೆಟ್ಟಿ, ಮತ್ತಿತರ ದಾನಿಗಳು ಉಪಸ್ಥಿತರಿದ್ದರು.
ಪೂಜಾ ಕಾರ್ಯಕ್ರಮ, ಅನ್ನ ಸಂತರ್ಪಣೆ ಸುಸಾಂಗವಾಗಿ ನೇರ ವೇರಲು ಸಮಿತಿಯ ಸದಸ್ಯರು ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಸಹಕರಿಸಿದರು.