24.7 C
Karnataka
April 3, 2025
ಮುಂಬಯಿ

ಕುಲಾಲ ಸಂಘ ಮುಂಬಯಿ ; 93ನೇ ವಾರ್ಷಿಕ ಮಹಾಸಭೆ



ಮುಂಬಯಿ: ನಾನು ಅಧ್ಯಕ್ಷನಾದ ನಂತರ ಪ್ರಥಮವಾಗಿ ಮಹಾಸಭೆಯನ್ನು ನಡೆಯುತ್ತಿದ್ದು,  ನನ್ನ ಅವಧಿಯಲ್ಲಿ ಕೆಲವು ಮಹತ್ತರ ಕಾರ್ಯಕ್ರಮಗಳು ನಡೆದಿದೆ ಅವುಗಳಲ್ಲಿ ಮಂಗಳೂರಿನ ಕುಲಶೇಖರ ದೇವಸ್ಥಾನದ ಜೀರ್ಣೋದ್ದಾರ, ಅಮೂಲ್ಯ ಪತ್ರಿಕೆಯ ಬೆಳ್ಳಿ ಹಬ್ಬ ಸೇರಿದ್ದು ಇದು ನನ್ನ ಸೌಭಾಗ್ಯ.  ಸಮಾಜ ಬಾಂದವರ ಹಾಗೂ ತುಳು ಕನ್ನಡಿಗರ ಮನನೋಯಿಸದೆ ಎಲ್ಲರಲ್ಲೂ ಪ್ರೀತಿಯನ್ನು ಗಳಿಸಿ ಸಮಾಜವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮದಾಗಿದೆ ಎಂದು ಕುಲಾಲ ಸಂಘ ಮುಂಬಯಿಯ  ಅಧ್ಯಕ್ಷರಾದ ರಘು ಎ .ಮೂಲ್ಯ ಹೇಳಿದರು.

ಕುಲಾಲ ಸಂಘ ಮುಂಬಯಿ 93ನೇ ವಾರ್ಷಿಕ ಮಹಾಸಭೆಯು ನ. 19 ರಂದು ಪೇಜಾವರ ಮಠದ ಸಭಾಗ್ರಹ, ಪ್ರಭಾತ್ ಕಾಲೊನಿ, ಸಂತಾಕ್ರುಜ್ (ಪೂ) ಮುಂಬಯಿ 400055 ಇಲ್ಲಿ ಸಂಘದ ಅಧ್ಯಕ್ಷರಾದ ರಘು ಎ .ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿದ್ದು ಎಲ್ಲರನ್ನು ಸ್ವಾಗತಿಸಿ ಕೊನೇಗೆ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು ಜಗತ್ತಿನಾದ್ಯಂತ ವರುವ ಕುಲಾಲರು ಬಲಿಷ್ಠರಾಗಿದ್ದಾರೆ ಸಂಪತ್ ಭರಿತರಾಗಿದ್ದಾರೆ. ಎಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸುವ ಶಕ್ತಿವಂತ ರಾಗಿದ್ದಾರೆ. ಹಿರಿಯರ ಚಿಂತನೆಯಂತೆ ಮುಂಬೈ ಕುಲಾಲ ಸಂಘ ಬಲಿಷ್ಠಗೊಂಡಿದೆ. ಸಂಘವು ಕೆಲವೇ ವರ್ಷಗಳಲ್ಲಿ ಶತಮಾನೋತ್ಸವವನ್ನು ಅತೀ ವಿಜ್ರಂಭಣೆಯಿಂದ ಆಚರಿಸಲಿದ್ದು ಸಮಾಜದ ಪ್ರತಿಯೊಬ್ಬರೂ ಸಂಘದ ಮುಂದಿನ ಯೋಜನೆಗಳಿಗೆ ಸಹಕರಿಸಬೇಕು ಎನ್ನುತ್ತಾ ನಿಮ್ಮೆಲ್ಲರ ಪ್ರೋತ್ಸಾಹದಿಂದ ಅಮೂಲ್ಯ ಪತ್ರಿಕೆಯ ಬೆಳ್ಳಿ ಹಬ್ಬವು ಅದ್ದೂರಿಯಾಗಿ ನಡೆದಿದೆ.  ಸಮಾಜದ ಯುವ ಜನಾಂಗವನ್ನು ಒಂದೇ ವೇದಿಕೆಗೆ ತರಲು ಮುಂದಿನ ವರ್ಷ ಕುಲಾಲ ಯುವ ಉತ್ಸವವನ್ನು ನಡೆಸಲಿದ್ದು ಯುವ ಜನಾಂಗವು ಕ್ರೀಯಾಶೀಲರಾಗಬೇಕು . ಸಂಘವು ನೀಡುತ್ತಿರುವ ಶೈಕ್ಷಣಿಕ ನೆರವು,  ವೈದ್ಯಕೀಯ ನೆರವು, ವಿದ್ಯಾರ್ಥಿ ವೇತನ ಹಾಗೂ ಸಂಘದ ಪ್ರತಿಯೊಂದು ಚಟುವಟಿಕೆಗಳಿಗೆ ದಾನಿಗಳು ಆಗಾಗ ಸಹಾಯ ಮಾಡುತ್ತಿದ್ದು  ಸಹಾಯ ಪಡೆದ ಎಲ್ಲರೂ ಮುಂದೆ ಸಂಘದಲ್ಲಿ ಕ್ರೀಯಾಶೀಲರಾಗಿ ಸಂಘವನ್ನು ಇನ್ನೂ ಉನ್ನತ ಮಟ್ಟಕ್ಕೇರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸಮಾಜ ಸಾಧಕರಾದ ಕುಲಾಲ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಪರಿವಾರ,  ಸಂಘದ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ  ಸಕ್ರಿಯ ಸದಸ್ಯ ಹಾಗೂ ಅಮೂಲ್ಯ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ ರಘುನಾಥ್ ಕರ್ಕೇರ ದಂಪತಿ ಬಾಯಂಧರ್ ಮತ್ತು ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಗೋರೆಗಾಂವ್ ನ ಸದ್ಗುರು ನಿತ್ಯಾನಂದ ಆಶ್ರಮದ ಅಧ್ಯಕ್ಷ ರಾಘು ಆರ್. ಮೂಲ್ಯ ಮತ್ತು ಪ್ರೇಮಲತಾ ಮೂಲ್ಯ ದಂಪತಿ ಗೋರೆಗಾಂವ್ ಇವರನ್ನು ಸನ್ಮಾನಿಸಲಾಯಿತು.

ಸಂಘಕ್ಕೆ ವಿಶೇಷವಾಗಿ ಸೇವೆ ಸಲ್ಲಿಸಿದ ಗಣ್ಯರಾದ ರೇಣುಕಾ ಎಸ್. ಸಾಲಿಯಾನ್ ಇವರಿಗೆ  ದಿ.  ಪಿ.ಕೆ . ಸಾಲಿಯಾನ್ ಸ್ಮರಣಾರ್ಥ ರೋಲಿಂಗ್ ಶೀಲ್ಡ್, ದಿ. ಪಿ .ಜಿ.ಮೂಲ್ಯ ಸ್ಮರಣಾರ್ಥ ನೀಡುವ ರೋಲಿಂಗ್ ಕಪ್ ನ್ನು ಹರಿಯಪ್ಪ ಕೆ. ಮೂಲ್ಯ ದೊಂಬಿವಲಿ, ದಿ. ಆರ್. ಎಂ.ಮಡ್ವ ಸ್ಮರಣಾರ್ಥ ರೋಲಿಂಗ್ ಶೀಲ್ಡ್ ನ್ನು ಸಂಘದ ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್ ಅವರಿಗೆ ನೀಡಿ ಗೌರವಿಸಲಾಯಿತು.

ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿಧ್ಯಾರ್ಥಿ ವೇತನ , ದತ್ತು ಸ್ವೀಕಾರ ದಾನಿಗಳಿಗೆ ಸನ್ಮಾನ,  ಘನ ಪೋಷಕ ಮತ್ತು ಮಹಾ ಪೋಷಕರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಗೌರವಿಸಿ ಅಭಿನಂದಿಸಿದರು.

ಅದೇ ರೀತಿ ಕುಲಾಲ ರತ್ನ ಬಂಟ್ವಾಳ ದಿ.ಬಾಬು ಸಲ್ಯಾನ್ ಸ್ಮಾರಕ ವಿಧ್ಯಾರ್ಥಿ ವೇತನ ಮತ್ತು ಪರ್ಯಾಯ ಫಲಕ, ಶಾಂತ ಸುಬ್ಬಯ್ಯ ಮತ್ತು ಡಾ. ಎಚ್. ಎಂ. ಸುಬ್ಬಯ್ಯ ವಿಧ್ಯಾರ್ಥಿ ವೇತನ, ಸುಂದರ್ ಕೆ. ಕರ್ಮರನ್ ಸ್ಮಾರಕ ವಿದ್ಯಾರ್ಥಿ ವೇತನ ಹಾಗೂ ಸುನಿಲ್ ಸಾಲ್ಯಾನ್ ಕೊಡಮಾಡಿದ ಸುಮಿತ್ರಾ ರಾಜು ಸಾಲ್ಯಾನ್ ವಿದ್ಯಾರ್ಥಿ ವೇತನ ವನ್ನು ಸಮಾಜದ ಅರ್ಹ ವಿಧ್ಯಾರ್ಥಿಗಳಿಗೆ ನೀಡಲಾಯಿತು.

ಕುಲಾಲ ಸಂಘ ಮುಂಬಯಿ ಮಹಾದಾನಿ, ಮುಂಬಯಿಯ ಉದ್ಯಮಿ ಸುನಿಲ್ ಸಾಲ್ಯಾನ್ ಮಾತನಾಡುತ್ತಾ ದೇಶದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸಂಘದಲ್ಲಿ ಉತ್ತಮ ಬದಲಾವಣೆಯಾರುತ್ತಿರುವುದು ಅಭಿನಂದನೀಯ. ಸಂಘದಲ್ಲಿ ಸೇವೆ ಮಾಡುತ್ತಿರುವಾಗಲೇ ಸೇವಾಕರ್ತರನ್ನು ಗುರುತಿಸಿ  ಅಭಿನಂದಿಸುತ್ತಿರುವುದು ಉತ್ತಮ ಕೆಲಸ ಅದೇ ರೀತಿ ತೆರೆ ಮರೆಯಲ್ಲಿ ಇದ್ದು ಸಂಘದ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸುವವರನ್ನೂ ಗುರುತಿಸಿ ಸನ್ಮಾನಿಸಬೇಕಾದದ್ದು ನಮ್ಮ ಕರ್ತವ್ಯ.  ಸಮಾಜದ ಮಕ್ಕಳು ಎಸ್.ಎಸ್.ಸಿ. ಹಾಗೂ ಎಚ್. ಎಸ್. ಸಿ ಯಲ್ಲಿ ೯೯% ಯಾ ಅದಕ್ಕಿಂತ ಅಧಿಕ ಅಂಕ ಗಳಿಸಿದಲ್ಲಿ ಅವರಿಗೆ ನಾನು ದೊಡ್ಡ ಮೊತ್ತವನ್ನು ನೀಡಿ ಅಭಿನಂದಿಸಲು ನಿರ್ದರಿಸಿರುವೆನು. ಸಂಘದಲ್ಲಿ ಯಾವುದೇ ಅಡಚಣೆ ಬಂದರೂ ನಮ್ಮ ಕಾರ್ಯ ನಾವು ಮುಂದುವರಿಸಬೇಕು. ಸಂಘದಲ್ಲಿ ಯಾವುದೇ ಅಧಿಕಾರವನ್ನು ಬಯಸದೆ ಸಂಘದ ಸಮಿತಿಯೊಂದಿಗಿದ್ದು ಕುಲಾಲ ಸಂಘಕ್ಕಾಗಿ ತಾನು ಕಾರ್ಯ ನಿರ್ವಹಿಸುವೆನು ಎಂದರು.

ಅಮೂಲ್ಯ ಸಂಪಾದಕರಾದ ಶಂಕರ್ ವೈ ಮೂಲ್ಯ ಮಾತನಾಡುತ್ತಾ ಅಮೂಲ್ಯದ ಬೆಳ್ಳಿ ಹಬ್ಬದ ಸಂಭ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ನತೆ ಸಲ್ಲಿಸುತ್ತಾ ಅಮೂಲ್ಯ ಪತ್ರಿಕೆಗೆ ದೀರ್ಘ ಕಾಲದಿಂದ ಜಾಹೀರಾತು ನೀಡಿ ಸಹಕರಿಸುತ್ತಾ ಬಂದಿರುವ ಎಲ್ಲರನ್ನೂ ಗೌರವಿಸಿದರು. ಪತ್ರಿಕೆಗೆ ಸಮಾಜ ಬಾಂದವರೆಲ್ಲರೂ ಚಂದಾದಾರರಾಗಿ ಅಮೂಲ್ಯ ವು ಎಲ್ಲರ ಮನೆಗೆ ತಲಪುವಂತಾಗಬೇಕು. ಸಮಾಜದ ಯುವ ಜನಾಂಗವು ಅಮೂಲ್ಯಕ್ಕೆ ಲೇಖನವನ್ನು ನೀಡಿ ತಮ್ಮ ಪ್ರತಿಭೆಯನ್ನು ಬೆಳಕಿಗೆ ತರುವಂತಾಗಬೇಕು. ಮುಂದಿನ ವರ್ಷ ಎಲ್ಲರೂ ಸೇರಿ ಯುವ ಉತ್ಸವ ಮಾಡೋಣ ಎಂದರು.

ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್ ಮಾತನಾಡುತ್ತಾ ಸಮಾಜಪರ ಸೇವೆಯಲ್ಲಿ ನಮ್ಮ ಸಂಘದ ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವರು. ಮಹಿಳಾ ವಿಭಾಗ ಸೇರಿ ಎಲ್ಲಾ ಸಮಿತಿಗಳು ಉತ್ತಮ ರೀತಿಯಲ್ಲಿ ಸಮಾಜದ ಕಾರ್ಯ ಮಾಡುತ್ತಿರುವರು. ನಮ್ಮ ಸಮಾಜದ ಹೆಚ್ಚಿನವರಿಗೆ ನಮ್ಮ ಕುಲದೇವರ ಬಗ್ಗೆ ತಿಳಿಯದಿದ್ದರೂ ಕುಲಶೇಖದ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರದ ನಂತರ ಈಗ ಎಲ್ಲರಿಗೂ ಅದು ತಿಳಿಯುವಂತಾಗಿದ್ದು ದಿನೇಶ್ ಕುಲಾಲ್ ಅವರನ್ನು ಅಭಿನಂದಿಸಬೇಕಾಗಿದೆ. ಅದೇ ರೀತಿ ಅಮೂಲ್ಯದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಸಂಘದ ಯುವ ಸದಸ್ಯ ವಿನೀತ್, ಪತ್ರಕರ್ತ ದಿನೇಶ್ ಕುಲಾಲ, ಲಕ್ಷ್ಮಣ್ ಸಿ ಮೂಲ್ಯ ಉಮೇಶ್ ಬಂಗೇರ ಮೊದಲಾದವರು ಮಾತನಾಡಿ ಉತ್ತಮ ಸಲಹೆ ಸೂಚನೆಯಿತ್ತರು.

ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿಗಳಾದ ಎಲ್ ಅರ್ ಮೂಲ್ಯ, ಲಕ್ಮಣ್ ಸಿ. ಮೂಲ್ಯ , ಜೊತೆ ಕೋಶಾಧಿಕಾರಿ, ಸುನಿಲ್ ಕೆ. ಕುಲಾಲ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಕೆ. ಗೋಪಾಲ ವೈ ಬಂಗೇರ, ಪಿ. ಶಂಕರ್ ಮೂಲ್ಯ, ಸಂಜೀವ ಎನ್ ಬಂಗೇರ, ಸುನಿಲ್ ಆರ್ ಸಾಲ್ಯಾನ್, ರೇಣುಕ ಎಸ್ ಸಾಲ್ಯಾನ್, ಪ್ರಸಾದ್ ಎಸ್. ಮೂಲ್ಯ, ಆನಂದ ಕೆ. ಕುಲಾಲ್, ಆನಂದ ಬಿ. ಮೂಲ್ಯ, , ಉಮೇಶ್ ಎಂ ಬಂಗೇರ, ನ್ಯಾ. ಉಮಾನಾಥ್ ಡಿ. ಕರ್ಕೇರ, ವೇಣುಗೋಪಾಲ ಡಿ. ಕರ್ಕೇರ, ಮಹಿಳಾ ವಿಭಾಗದ ಉಪ ಕಾರ್ಯ ಧ್ಯಕ್ಷೇ ಸುಚಿತ್ರ  ಬಂಜನ್  ಉಪಸ್ಥಿತರಿದ್ದರು.

ಸಂಘದ ಮಹಿಳೆಯರಿಂದ ಹಾಗೂ ಯುವ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಿತು. 

ಜಯಂತಿ ವಿ ಬಂಗೇರ ಪ್ರಾರ್ಥನೆ ನಂತರ ಸಂಘದ ವಾರ್ಷಿಕ ವರದಿಯ ಕಾರ್ಯಸೂಚಿಯಂತೆ ವರದಿ ವರ್ಷದ ವಾರ್ಷಿಕ ವರದಿಯನ್ನು ಕುಲಾಲ ಸಂಘ ಮುಂಬಯಿ ಯ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ ಸಭೆಯಲ್ಲಿ ಮಂಡಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನೂ ಸಭೆಯ ಮುಂದಿಡಲಾಯಿತು. ಕೊನೆಯಲ್ಲಿ ಕೋಶಾಧಿಕಾರಿ ಜಯ ಎಸ್ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು.

==

    ಸನ್ಮಾನಿತರ   ನುಡಿ

ಸಂಘದ ಉಪಸಮಿತಿಗಳ ಹಾಗೂ ಸ್ಥಳೀಯ ಸಮಿತಿಗಳ ಕಾರ್ಯ ಸ್ಲಾಘನೀಯ.  ಶಂಕರ್ ವೈ ಮೂಲ್ಯ ರ ನೇತೃತ್ವದಲ್ಲಿ ಜರಗಿದ ಅಮೂಲ್ಯ ಪತ್ರಿಕೆಯ ಬೆಳ್ಳಿ ಹಬ್ಬ ಸಂಬ್ರಮ, ದಿನೇಶ್ ಕುಲಾಲರ ನೇತೃತ್ವದಲ್ಲಿ ನಿಧಿ ಸಂಗ್ರಹಿಸಿ ಮಂಗಳೂರಿನ  ವೀರನಾರಾಯಣ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಸಂಘದ ಮತ್ತು ಸ್ಥಳೀಯ ಸಮಿತಿಗಳ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಭಿನಂದನೀಯ. ದಾನಿಗಳು ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿದ್ದು ಮಕ್ಕಳು ಇದರ ಪ್ರಯೋಜನ ಪಡೆಯುದರೊಂದಿಗೆ ಮುಂದೆ ಸಂಘದ ಮೂಲಕ ಸಮಾಜಕ್ಕೆ ಸಹಕರಿಸಬೇಕು. ಮಕ್ಕಳು ಎಷ್ಟೇ ದೂರ ಇದ್ದರೂ ಕುಲಾಲ ಸಂಘ ಹಾಗೂ ಸಮಾಜದೊಂದಿಗೆ ಸಂಪರ್ಕದಲ್ಲಿರಬೇಕು.  ಮಂಗಳೂರಿನಲ್ಲಿ ಕುಲಾಲ ಭವನದ ಕಾರ್ಯವು ಅಂತಿಮ ಘಟ್ಟದಲ್ಲಿದ್ದು ಎಲ್ಲರೂ ಅದಕ್ಕೆ ಸಹರಿಸಬೇಕು. ಜ್ಯೋತಿ ಕ್ರೆಡಿಟ್ ಸೊಸೈಟಿಗೆ ನಿಮ್ಮೆಲ್ಲರ ಹೆಚ್ಚಿನ ಪ್ರೋತ್ಸಾಹವಿರಲಿ.

                                                  – ಗಿರೀಶ್ ಬಿ. ಸಲ್ಯಾನ್ (ಸನ್ಮಾನಿತರು)

———

ಇಂದು ನನ್ನನ್ನು ಸನ್ಮಾನಿಸಿ ನನ್ನ ಸಮಾಜ ಸೇವೆಗೆ ಹೆಚ್ಚಿನ ಸ್ಪೂರ್ತಿಯನ್ನು ನೀಡಿದ ಕುಲಾಲ ಸಂಘ ಮುಂಬಯಿಯ ಪ್ರತಿಯೊಬ್ಬರಿಗೂ ಅಬಾರಿಯಾಗಿರುವೆನು.

  –ರಘುನಾಥ್ ಕರ್ಕೇರ ಬಾಯಂಧರ್ (ಸನ್ಮಾನಿತರು)

——-

ಸನ್ಮಾನ ಎಂಬುದು ಸಮಾಜ ಸೇವೆಯ ಮುಕ್ತಾಯವಲ್ಲ. ನನ್ನ ಸಮಾಜ ಸೇವೆಯನ್ನು ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಲು ನಾನು ಸಾದ್ಯವಾದ ಪ್ರಯತ್ನವನ್ನು ಮಾಡುವೆನು.

– ರಾಘು ಆರ್. ಮೂಲ್ಯ ಗೋರೆಗಾಂವ್ (ಸನ್ಮಾನಿತರು)

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈಡೊಂಬಿವಲಿ ಸ್ಥಳೀಯ ಕಚೇರಿ 75ನೇ ಪ್ರಜಾಪ್ರಭುತ್ವ ದಿನಾಚರಣೆ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk