
.
.
ಘಾಟಿಕೋಪರ್ ಪಶ್ಚಿಮ ಅಸಲ್ಫಾ ಸುಭಾಷ್ ನಗರದ ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ ಬರುವ ತಾ. 25-11-2023ನೇ ಶನಿವಾರ ಮಧ್ಯಾಹ್ನ ಘಂಟೆ 2.00ರಿಂದ ಸಾಮೂಹಿಕ ಶ್ರೀ ಶನಿ ಮಹಾಪೂಜೆ (ಶನಿ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ) ಜರಗಲಿರುವುದು.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದತ್ತಾತ್ರೇಯ, ಶ್ರೀ ಆದಿಮಾತೆ ದುರ್ಗಾಂಬಿಕಾ, ಶ್ರೀ ಅಂಜನೇಯ, ಶ್ರೀ ನಾಗಶೇಷ, ಶ್ರೀ ಚಾಮುಂಡಿ ದೈವ ಹಾಗೂ ಶ್ರೀ ಶನಿದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸುವ,
ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ (ರಿ.) ಪರವಾಗಿ , ಧರ್ಮದರ್ಶಿ ಶ್ರೀ ದೇವ್ ಬಿ. ಪೂಜಾರಿ(ಅಧ್ಯಕ್ಷರು) ಶ್ರೀ ಶಿವಪ್ಪ ಯು. ಪೂಜಾರಿ ಗೌ. ಪ್ರ. ಕಾರ್ಯದರ್ಶಿ ಶ್ರೀಮತಿ ಲತಾ ಎಸ್. ಪೂಜಾರಿ(ಗೌ.ಕೋಶಾಧಿಕಾರಿ) ಶ್ರೀ ಜಗದೀಶ್ ಭಟ್(ಪ್ರಧಾನ ಅರ್ಚಕರು)
ಕಾರ್ಯಕ್ರಮಗಳು –
ಮಧ್ಯಾಹ್ನ ಗಂಟೆ 2.00ಕ್ಕೆ ಕಲಶ ಪ್ರತಿಷ್ಠೆ
ಮಧ್ಯಾಹ್ನ ಗಂಟೆ 2.30ರಿಂದ : ಶನಿಗ್ರಂಥ ಪಾರಾಯಣ (ತಾಳಮದ್ದಳೆ ರೂಪದಲ್ಲಿ )
ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ತೀರ್ಥ ಪ್ರಸಾದ.
ರಾತ್ರಿ ಗಂಟೆ 8.30ಕ್ಕೆ ಭಜನೆ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ,
ರಾತ್ರಿ ಗಂಟೆ 9.30ರಿಂದ ಶ್ರೀ ಚಾಮುಂಡಿ ದೈವ ದರ್ಶನ
ವಿ.ಸೂ. : ಶ್ರೀ ಶನಿ ಪೂಜೆ ಕೊಡಲಿಚ್ಛಿಸುವವರು ರೂ. 501 ಕೊಟ್ಟು ಸಹಕರಿಸಬೇಕಾಗಿ ವಿನಂತಿ, ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ಮನಃಪೂರ್ವಕವಾಗಿ ಸ್ವೀಕರಿಸಲಾಗುವುದು.
ಹೆಚ್ಚಿನ ವಿವರಗಳಿಗೆ : 9819098524 / 9322120974.