September 6, 2026
Mumbai News Kannada
ಪ್ರಕಟಣೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) : ಫೆ. 8ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ





ಉಡುಪಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಉಡುಪಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡನಗುಡ್ಡೆ ಉಡುಪಿ, ವಿಷ್ಣುಮೂರ್ತಿ ಮಹಿಳಾ ಘಟಕ ದೊಡ್ಡನಗುಡ್ಡೆ ಇವರ ಮುಂದಾಳತ್ವದಲ್ಲಿ *ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ ಫೆಬ್ರವರಿ 08 ಬೆಳಗ್ಗೆ 10.30 ರಿಂದ ಮಧ್ಯಾನ್ನ 12.30 ರವರೆಗೆ ನಡೆಯಲಿರುವುದು.
ಮಾನವನ ನಿಜವಾದ ಜ್ಞಾನದ ಬಾಗಿಲು ಎಂದರೆ ಅದು ಕಣ್ಣು. ಅದರ ಸಂರಕ್ಷಣೆ ಅತಿ ಮುಖ್ಯ. ಇಂದಿನ ಆಧುನಿಕ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು, ಹಾಗೆ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ಅಪಾರವಾದ ತೊಂದರೆ ಉಂಟಾಗಿದೆ. ಇಂತಹ ಹಲವರು ಕಣ್ಣಿನ ದೋಷಗಳ ನಿವಾರಣೆಗೆ ಈ ಪುರಾತನ ಆಯುರ್ವೇದ ಸಿದ್ಧ ಕಣ್ಣಿನ ಹನಿಯ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿ. ಕಣ್ಣಿಗೆ ಹನಿ ಹಾಕುವುದರಿಂದ ಪ್ರಯೋಜನಗಳು:

  1. ಕಣ್ಣಿನಲ್ಲಿ ನೀರು ಬರುವುದು ಕಡಿಮೆಯಾಗುತ್ತದೆ.
  2. ⁠ಕಣ್ಣು ಕೆಂಪಗಾಗುವುದು, ಕಣ್ಣು ಉರಿಯುವುದೇ ಕಡಿಮೆಯಾಗುತ್ತದೆ 
  3. ⁠ಕಣ್ಣಿನ ಪೊರೆ ಬರುವ ಹಂತದವರಿಗೆ ಕಡಮೆಯಾಗುತ್ತದೆ 
  4. ⁠ದೃಷ್ಟಿ ದೋಷ ( ದೂರ ದೃಷ್ಟಿ, ಸಮೀಪ ದೃಷ್ಟಿ) ಕಡಿಮೆಯಾಗುತ್ತದೆ.
  5. ⁠ಮೈಗ್ರೇನ್ ನಂತಹ ತೊಂದರೆಗಳು ಕಡಿಮೆಯಾಗುತ್ತವೆ . 

ಈ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮವನ್ನು ವಂಶ ಪಾರಂಪರ್ಯ ಸಿದ್ಧ ವೈದ್ಯರಾದ ಮೋಕ್ಷಾನಂದ, ಮುತ್ತುಕೃಷ್ಣನ್ ಮತ್ತು ಆಯುರ್ವೇದ ಪರಿಣಿತತರಾದ ನುರಿತ ವೈದ್ಯರಿಂದ ಈ ಕಾರ್ಯಕ್ರಮ ಜರಗಲಿದೆ. 
ಈ ಕಾರ್ಯಕ್ರಮದ ಸದುಪಯೋಗವನ್ನು ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯ ಎಲ್ಲಾ ನಾಗರಿಕರು ಪಡೆಯಬೇಕೆಂದು ಸಮಿತಿಯ ಪ್ರಕಟಣೆ ತಿಳಿಸಿದೆ..

ಹೆಚ್ಚಿನ ಮಾಹಿತಿಗಾಗಿ ಈ ಕಾರ್ಯಕ್ರಮದ ಸಂಯೋಜಕಾರದ  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) ಇದರ ಜಿಲ್ಲಾ ಉಪಾದ್ಯಕ್ಷರಾದ ಅರುಣ್ ಪ್ರಕಾಶ್ ಶೆಟ್ಟಿ ( ಮೊಬೈಲ್ 9448410017), ಜಿಲ್ಲಾ ಕಾರ್ಯದರ್ಶಿ ಜಿ ಟಿ ಆಚಾರ್ಯ ( ಮೊಬೈಲ್ 9820357758) , ಸುರೇಂದ್ರ ಮೆಂಡನ್ ( 9448766792) ಇವರನ್ನು ಸಂಪರ್ಕಿಸಲು ಕೇಂದ್ರ ಸಮಿತಿ ಹಾಗು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.



Related posts

 ಪೆ 25,: ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ  

Mumbai News Desk

ಡೊಂಬಿವಲಿ: ಜ. 17ರಂದು ಶ್ರೀ ಮಹಾವಿಷ್ಣು ಮಂದಿರದ 49ನೇ ವಾರ್ಷಿಕ ಸತ್ಯನಾರಾಯಣ ಪೂಜೆ, ಶನಿ ಪೂಜೆ

Mumbai News Desk

  ಪುಣೆ  ‌:ಸುಂದರ ಪೂಜಾರಿ ಕಾಣೆಯಾಗಿದ್ದಾರೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ: ಡಿ. 20 ರಂದು 81ನೇ ವಾರ್ಷಿಕ ಮಹಾಪೂಜೆ

Mumbai News Desk

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ನ. 18ರಂದು ಉಡುಪಿಯಲ್ಲಿ ಸಮಾಲೋಚನೆ ಸಭೆ

Mumbai News Desk