
ಪ್ರವೀಣ್ ಭೋಜ ಶೆಟ್ಟಿ ಒಕ್ಕೂಟವನ್ನು ಬಲಿಷ್ಠ ಗೊಳಿಸಲು ಪ್ರೋತ್ಸಾಹಿಸಿದರು : ಐಕಳ ಹರೀಶ್ ಶೆಟ್ಟಿ.:
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ. ನ 27. ಜಾಗತಿಕಬಂಟರಸಂಘಗಳಒಕ್ಕೂಟ. ಮಹಾ ನಿರ್ದೇಶಕ. ಒಕ್ಕೂಟಕ್ಕೆಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ ನಿರ್ಮಾಣ ಮಾಡುವಲ್ಲಿ ದಾನ ನೀಡಿದ ದಾನಿ ಪ್ರವೀಣ್ ಬೋಜ ಶೆಟ್ಟಿ ಅವರು ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಐಕಳ ಹರೀಶ್ ಶೆಟ್ಟಿ ಗೌರವಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಾಮಾಜಿಕ ಕಳಕಳಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ಪ್ರವೀಣ್ ಬೋಜ ಶೆಟ್ಟಿ ಅವರು ಮುಂಬೈಬಂಟರ ಸಂಘದಲ್ಲಿ ಸುದೀರ್ಘಕಾಲದಿಂದ ವಿವಿಧ ಪದವಿಗಳನ್ನು ಅಲಂಕರಿಸಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಿಕೊಂಡವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸೇವಾ ಕಾರ್ಯಗಳನ್ನು ಮೆಚ್ಚಿಕೊಂಡು ಮಹಾ ನಿರ್ದೇಶಕರಾಗಿ ಮುಲ್ಕಿ ಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕಿರಣದಲ್ಲಿ ಪ್ರವೀಣ್ ಬೋಜ ಶೆಟ್ಟಿ ಆಡಳಿತ ಕಚೇರಿಗೆ ದೇಣಿಗೆಯನ್ನು ನೀಡಿ ಒಕ್ಕೂಟ ವನ್ನು ಬಲಿಷ್ಠ ಗೊಳಿಸುವಲ್ಲಿ ಸಹಕರ ಯನ್ನು ನೀಡಿದ್ದಾರೆ. ಎಂದು ತಿಳಿಸಿದರು.
*ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, , ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಉಪಸ್ಥಿತರಿದ್ದರು.*