
ಚಿತ್ರ ವರದಿ : ದಿನೇಶ್ ಕುಲಾಲ್
——————————
ಮುಂಬೈ: ಬಂಟರ ಸಂಘ ಮುಂಬೈ ಯ ಸಂಚಾಲಿತ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಗೌರವ ಕಾರ್ಯದರ್ಶಿಯಗಿ ಕಾರ್ಯನಿರ್ವಹಿಸಿಕೊಂಡಿರುವ ಪ್ರವೀಣ್ ಬೋಜ ಶೆಟ್ಟಿ ಅವರು ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು .ಅವರನ್ನು ನವಂಬರ್ 27ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕಿರಣದಲ್ಲಿರುವಮಾತೃಭೂಮಿಯ ಕಚೇರಿಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಸೊಸೈಟಿ ಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಯವರು ಮತ್ತು ಆಡಳಿತ ಪದಾಧಿಕಾರಿಗಳು ಗೌರವಿಸಿದರು.
ಗೌರವವನ್ನು ಸ್ವೀಕರಿಸಿದ ಪ್ರವೀಣ್ ಬೋಜ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಧ್ಯಕ್ಷನಾಗಿ ಪ್ರಥಮ ಗೌರವ ಇದಾಗಿದೆ . ಈ ಗೌರವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಲ್ಲುತ್ತದೆ. ನನ್ನ ಮುಂದಿನ ಸೇವ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸಬೇಕು ಎಂದು ನುಡಿದರು.

ಸೊಸೈಟಿ ಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಯವರು ಪ್ರವೀಣ್ ಭೋಜ ಶೆಟ್ಟಿ ಅವರು ಮಾತೃಭೂಮಿಗೆ ನೀಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡು ಬಂಟರ ಸಂಘದ ಮೂಲಕ ಸಮಾಜದ ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪ ಕಾರ್ಯ ಧ್ಯಕ್ಷ ಡಾ. ಆರ್ ಕೆ ಶೆಟ್ಟಿ. ಕೋಶಧಿಕಾರಿ ಸಿ ಎ ಹರೀಶ್ ಡಿ ಶೆಟ್ಟಿ. ನಿರ್ದೇಶಕರುಗಳಾದ ಮಹೇಶ್ ಎಸ್ ಶೆಟ್ಟಿ .ಶಶಿಧರ್ ಕೆ ಶೆಟ್ಟಿ ಇನ್ನಂಜೆ .ಸಿಎ ಜಗದೀಶ್ ಬಿ ಶೆಟ್ಟಿ .ಕಿಶೋರ್ ಕುಮಾರ್ ಕುತ್ಯಾರ್. ಸುನಂದ ಡಿ ಶೆಟ್ಟಿ. ಸಿಎ ರಾಜಶ್ರೀ ಜಿ ಶೆಟ್ಟಿ. ಹಿರಿಯ ಪ್ರಬಂಧಕಿ ಮಲ್ಲಿಕಾ ಪಿ ಶೆಟ್ಟಿ. ಪ್ರಬಂಧಕಿ ಶಶಿಕಲಾ ಎಸ್ ಶೆಟ್ಟಿ .ಮ್ಯಾನೇಜರ್ ಅಡ್ಮಿನ್ ಮಹೇಂದ್ರ ಸಕ್ಪಾಲ್ ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥರಿದ್ದರು