30 C
Mumbai
September 27, 2026
Mumbai News Kannada
ಸುದ್ದಿ

ಖ್ಯಾತ ಬಾಲಿವುಡ್ ನಟ ಮತ್ತು ನಿರ್ದೇಶಕ ಮನೋಜ್ ಕುಮಾರ್ ನಿಧನ



ಬಾಲಿವುಡ್ ನ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಾ ಇದ್ದರು. ಅವರು ರಾಷ್ಟ್ರ ಪ್ರೇಮದ ಸಿನಿಮಾಗಳನ್ನು ಮಾಡಿ ಹೆಸರು ವಾಸಿ ಆಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾತರತ್ ಕುಮಾರ್’ ಎಂಬ ಹೆಸರನ್ನೂ ಇಡಲಾಗಿತ್ತು. ಅವರ ಸಾವಿಗೆ ಬಾಲಿವುಡ್​ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.

ಮನೋಜ್ ಕುಮಾರ್ ಅವರಿಗೆ ಹಲವು ವಯೋ ಸಹಜ ಕಾಯಿಲೆಗಳು ಇದ್ದವು. ಅವರನ್ನು ಕೆಲ ವಾರಗಳ ಹಿಂದೆ ಮುಂಬೈನ ಕೊಕಿಲಾಬೇನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು (ಏಪ್ರಿಲ್ 4) ಮುಂಜಾನೆ 3.30ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ. ಅವರ ಸಾವಿನ ವಿಚಾರವನ್ನು ಚಿತ್ರರಂಗದವರು ಖಚಿತಪಡಿಸಿದ್ದಾರೆ.

ಚಿತ್ರರಂಗಕ್ಕೆ ಮನೋಜ್ ಕುಮಾರ್ ಅವರ ಕೊಡುಗೆ ಅಪರಾವಾದದ್ದು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಸರ್ಕಾರದ ಕಡೆಯಿಂದ ಅವರಿಗೆ ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ (2015) ನೀಡಿ ಗೌರವಿಸಲಾಗಿದೆ.

ಮನೋಜ್ ಕುಮಾರ್ ಅವರು ಪಂಜಾಬಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 1937ರಲ್ಲಿ ಇವರ ಜನನ ಆಯಿತು. ಅವರ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ ಎಂದು. ಅವರು 10ನೇ ವಯಸ್ಸಿಗೆ ಬಂದಾಗ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರ ಆಯಿತು. 1957ರ ಸಮಯದಲ್ಲಿ ನಟನಾಗಿ ಮನೋಜ್ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.

1967ರಲ್ಲಿ ‘ಉಪ್ಕಾರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ಮೊದಲ ಚಿತ್ರದಲ್ಲೇ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ‘ಕ್ರಾಂತಿ’, ‘ಶೋರ್’, ‘ಕ್ಲರ್ಕ್’, ‘ಜೈ ಹಿಂದ್’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಈ ಸಿನಿಮಾ 199ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರು ಚಿತ್ರರಂಗ ತೊರೆದರು. ಇನ್ನು ಕೆಲವು ಸಿನಿಮಾಗಳಿಗೆ ಸಂಕಲನಾಕರರಾಗಿ, ಕೆಲವು ಹಾಡುಗಳಿಗೆ ಸಾಹಿತ್ಯವನ್ನು ಅವರು ಬರೆದಿದ್ದಾರೆ ಅನ್ನೋದು ವಿಶೇಷ.



Related posts

ಮೂರು ದಿನಗಳ ಬ್ಯಾಂಕ್‌ ಮುಷ್ಕರ: ಸೆ. 27ರ ಭಾನುವಾರವೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಾರ್ಯನಿರ್ವಹಣೆ

Mumbai News Desk

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಕುಲಾಲ ಸಂಘ ಮುಂಬೈ: ಚರ್ಚ್‌ಗೇಟ್–ದಹಿಸರ್ ಸಮಿತಿಯಿಂದ ಮಂತ್ರಾಲಯ ಪುಣ್ಯಕ್ಷೇತ್ರ ದರ್ಶನ

Mumbai News Desk

ಪಂಚರಾಜ್ಯ ವಿಧಾನಸಭಾ ಚುನಾವಣೆ 2026: ಐತಿಹಾಸಿಕ ಫಲಿತಾಂಶ ಮತ್ತು ರಾಜಕೀಯ ವಿಶ್ಲೇಷಣೆ

Mumbai News Desk

ದುಬೈನಲ್ಲಿ 21 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ತೀಯಾ ಸಮಾಜ ಫ್ಯಾಮಿಲಿ.

Mumbai News Desk

ಕನ್ಯಾನ ಸದಾಶಿವ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ವಿವಾದಕ್ಕೆ ತೆರೆ:ಸಮಾಜದ ಉನ್ನತಿಗೆ, ಒಗ್ಗಟ್ಟಿನ ಬದ್ಧತೆಗೆ ನಿರ್ಧಾರ.

Mumbai News Desk