
ಚಿತ್ರ ವರದಿ : ದಿನೇಶ್ ಕುಲಾಲ್
ನವಿ ಮುಂಬಯಿ : ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ಕಲಾವಿದರಾದ ಶ್ಲೋಕಾ ಸಂತೋಷ್ ಶೆಟ್ಟಿ.ಸಂಸ್ಕೃತಿ ನಿನದ್ ಚವಾಣ್ , ವರ್ಷಿತ ವಿಶ್ವನಾಥನ್ ಯವರು ಭರತನಾಟ್ಯ ಆರಂಗೇಟ್ರಂ ರಂಗ ಪ್ರವೇಶವು ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯಿತು.





ಈ ತಂಡದಲ್ಲಿ ನ್ಯೂ ಪನ್ವೆಲ್ ನಗರ ಸೇವಕ. ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ಆರಂಗೇಟ್ರಂ ಮಾಡಿದರು.

ಕಾರ್ಯಕ್ರಮಕ್ಕೆ ಪನ್ವೆಲ್ ನ ಶಾಸಕ ಪ್ರಶಾಂತ್. ರಾಮ್ ಸೇಟ್ ಠಾಕೂರ್ . ಮಾಜಿ ಸಂಸದ ರಾಮ್ ಸೇಟ್ ಠಾಕೂರ್ . ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್ . ಪನ್ವಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ( ಪದ್ಮ) ಪಾಲ್ಗೊಂಡು ಶುಭ ಹಾರೈಸಿದರು

1989ರಲ್ಲಿ ಪ್ರಾರಂಭಗೊಂಡ ಗುರು ಪದ್ಮಶ್ರೀ ಲಕ್ಷ್ಮೀನಾರಾಯಣನ್ ಇವರ ನೃತ್ಯ ಕಲಾ ಮಂದಿರದ ಕಲಾವಿದರು ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ನೃತ್ಯ ಕಲಾಮಂದಿರದ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದು ಇವರ ಸಾಧನೆಯು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಇವರ ತಂಡದಲ್ಲಿ ಮಧುರ ಗಾನ ತಿಲಕ್ಕಂ ಪಿ ಎಚ್ ರಮಣಿ , ಪ್ರಜೇಶ್ ಸಿ ನಾಯರ್, ರಜನಿ ಅಯ್ಯರ್, ಅನಿರುದ್ಧ ಮೆನನ್, ರಂಗನಾಥನ್, ಅನುರಾಧ ದೊಡ್ಕೆ, ಸಹಕರಿಸಿದರು
ಶ್ವೇತಾ ಸಂತೋಷ್ ಶೆಟ್ಟಿ.ಆರತಿ, ನೇಹ ಮತ್ತು ಮೊದಲಾದವರು . ಅತಿಥಿ ಅತಿಥಿ ಗಣ್ಯರನ್ನುಗೌರವಿಸಿದರು. ಕಾರ್ಯಕ್ರಮಕ್ಕೆಪನ್ವಲ್ ಕರ್ನಾಟಕ ಸಂಘದ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.