
ಮುಂಬಯಿ; ನವೆಂಬರ್ 27. ತೀಯಾ ಸಮಾಜ ಮುಂಬಯಿ ಸಂಸ್ಥೆಯ 79ನೇಯ ವಾರ್ಷಿಕ ಮಹಾಸಭೆ ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣ ಕಾರ್ಯಕ್ರಮವು ನವೆಂಬರ್ 26 ರಂದು 10 ಘಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ಕೃಷ್ಣ ಎನ್. ಉಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ಎಸ್.ಎನ್.ಡಿ.ಟಿ. ಸಭಾಗೃಹ ಘಾಟ್ಕೊಪರ್ ಪಶ್ಚಿಮ, ಮುಂಬಯಿ ಇಲ್ಲಿ ಜರಗಿತು.

ವೇದಿಕೆಯಲ್ಲಿ ವಿಶ್ವಸ್ಥ ಕಾರ್ಯಾಧ್ಯಕ್ಷರಾದ ಡಾ. ದಯಾನಂದ ಕುಂಬ್ಳ, ಸದಸ್ಯರಾದ ಶಂಕರ್ ಸಾಲ್ಯಾನ್, ಬಾಬು ಟಿ. ಬಂಗೇರ, ಜಯಾ ಆನಂದ್ ಸುವರ್ಣ,ಅಧ್ಯಕ್ಷರಾದ ಕೃಷ್ಣ .ಎನ್ ಉಚ್ಚಿಲ್, ಉಪಾಧ್ಯಕ್ಷರಾದ ರಾಜೆಂದ್ರಕುಮಾರ್, ಗೌ.ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಡ, ಗೌ. ಕೋಶಾಧಿಕಾರಿ ಅಶ್ವಿನ್ ಬಂಗೇರ, ಮುಖವಾಣಿ ಸಂಪಾದಕ ವಿವೇಕ್ ಚಂದ್ರಶೇಖರ್, ಆರೋಗ್ಯ ನಿಧಿ ಕಾರ್ಯಾಧ್ಯಕ್ಷ ಕೇಶವ ಸುವರ್ಣ ಹಾಗೂ ಮಹಿಳಾ ಕಾರ್ಯಾಧ್ಯಕ್ಷೆ ಶಶಿಪ್ರಭಾ ಬಂಗೇರ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮಹಿಳಾ ಸದಸ್ಯೆಯರು ಪ್ರಾರ್ಥನೆ ನೆರವೇರಿಸಿದರು.






2023-2025ರ ಅವದಿಗೆ ಕೃಷ್ಣ ಎನ್. ಉಚ್ಚಿಲ್ ಅವರು ಅವಿರೊಧವಾಗಿ ಆಯ್ಕೆ ಆದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜೆಂದ್ರಕುಮಾರ್, ಅಶ್ವಿನ್ ಬಂಗೇರ,ವ್ರಂದಾದಿನೇಶ್ ಬೆಳ್ಚಡ, ಕೇಶವ ಸುವರ್ಣ, ವಿವೇಕ್ ಚಂದ್ರಶೇಖರ್, ಜಗ್ದೀಶ್ ಸಾಲ್ಯಾನ್, ಕೆ.ಟಿ. ರವೀಂದ್ರನ್, ಶ್ರೀದರ್ ಸುವರ್ಣ, ಸ್ಮಿತಾ ಸುಧಾಕರ್, ಪದ್ಮನಾಭ ಪಜ್ವ, ಅಡ್ವಕೆಟ್ ನಾರಾಯಣ ಸುವರ್ಣ, ಪುರುಷೋತ್ತಮ ಕೋಟೆಕ್ಕಾರ್, ಪದ್ಮಿನಿ ಕೋಟೆಕ್ಕಾರ್, ಶಶಿಪ್ರಭಾ ಬಂಗೇರ, ಯತೀಶ್ ಸುವರ್ಣ ಹಾಗೂ ಬಾಬು ಬೆಳ್ಚಡ ಅವಿರೋಧವಾಗಿ ಆಯ್ಕೆಯಾದರು.
ವರದಿ ವರ್ಷದ ಮಾಹಾಸಭೆಯ ವರದಿ, ಲೆಕ್ಕಪತ್ರ ಮಂಡಣೆ ಮತ್ತು ಮಂಜೂರು ಮಾಡಲಾಯಿತು. ಆಂತರಿಕ ಲೆಕ್ಕಪರಿಶೋಧಕರಾಗಿ ಗಂಗಾಧರ್ ಕುಂಬ್ಳ ಹಾಗೂ ಲೆಕ್ಕ ಪರಿಶೋಧಕರಾಗಿ ಸಿಎ.ರಾವ್ ಆ್ಯಂಡ್ ಅಶೋಕ್ ಅವರನ್ನು ಪುನರ್ ನೇಮಕ ಮಾಡಲಾಯಿತು.
ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ನಿಧಿ ನಾಗೇಶ್ ಬೊಳಾರ್ ಸಹಿತ ಪ್ರತಿಭಾ ಪುರಸ್ಕಾರಕ್ಕೆ ಅಪೇಕ್ಷಿತ ಎಲ್ಲಾ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಪುಷ್ಪ ಗುಚ್ಚ, ಸ್ಮರಣಿಕೆ, ಸರ್ಟಿಫಿಕೇಟ್ ಹಾಗೂ ಗೌರವ ಧನ ನೀಡಿ ವೆದಿಕೆ ಗಣ್ಯರು ಸಭೆಯಲ್ಲಿ ಉಪಸ್ಥಿತ ಗಣ್ಯರು ಸೇರಿ ಗೌರವಿಸಿದರು. ಅಧ್ಯಕ್ಷರಾಗಿ ಪುನರಾಯ್ಕೆಯಾದ ಕೃಷ್ಣ ಉಚ್ಚಿಲ್ ಅವರನ್ನು ವೇದಿಕೆಯ ಗಣ್ಯರು, ಚಂದ್ರಶೇಖರ್ ಬೆಳ್ಚಡ, ಸುಂದರ ಬಂಗೇರ, ಹಾಗೂ ತಿಪ್ಪಪ್ಪ ಬಂಗೇರ
ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಸಭಿಕರ ಪರವಾಗಿ ಚಂದ್ರಶೇಖರ್ ಬೆಳ್ಚಡ, ಉಮೇಶ್ ಮಂಜೇಶ್ವರ್, ಸುಂದರ್ ಬಂಗೇರ, ಸ್ಮಿತಾ ಸುಧಾಕರ್, ಗಾಯತ್ರಿ ಮಂಜೇಶ್ವರ, ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಡ ಅಭಾರ ಮನ್ನಣೆ ಮಾಡಿದರು. ಪ್ರೀತಿ ಭೋಜನದೊಂದಿಗೆ ಸಭೆಯು ಮುಕ್ತಾಯವಾಯಿತು. ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕ- ಕೃಷ್ಣ ಎನ್ .ಉಚ್ಚಿಲ್
ಕೃಷ್ಣ ಉಚ್ಚಿಲ್ ರವರು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳ ಮುಖೇನ ಸಮಾಜದಲ್ಲಿ ಗುರುತಿಸಿಕೊಂಡವರು. ಇವರು ಮೂಲತಃ ಸೋಮೇಶ್ವರದ ಉಚ್ಚಿಲದವರು. ತೀಯಾ ಸಮಾಜದ ಕೋರಿಕ್ಕಾರ್ ತರವಾಡಿಗೆ ಸೇರಿದವರು. ತನ್ನ ಹೈಸ್ಕೂಲು ಶಿಕ್ಷಣವನ್ನು ಸೊಮೇಶ್ವರದ ಆನಂದ್ ಆಶ್ರಮ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಮಂಗಳೂರಿನ ಸೈಂಟ್ ಅಲೋಶಿಸ್ ಕಾಲೇಜಿನಲ್ಲಿ ಪೂರೈಸಿದ ಬಳಿಕ 1980 ರಲ್ಲಿ ಹೊಟ್ಟೆಪಾಡಿಗಾಗಿ ಕರ್ಮಭೂಮಿ ಮುಂಬೈ ಸೇರಿದರು. ಇವರ ಆರಂಭದ ಜೀವನ ಕಷ್ಟಕರವಾಗಿತ್ತು. ದಿನ ಕೆಲಸಕ್ಕೆ ಸೇರಿದ ಕೃಷ್ಣ ಉಚ್ಚಿಲ್ ಕ್ರಮೇಣ ಕ್ಯಾಂಟೀನ್ ನಲ್ಲಿ ದುಡಿಯಲಾರಂಭಿಸಿದರು.1982 ರಲ್ಲಿ ಜಿನ ಎಲೊಯ್ ಸ್ಟೀಲ್ ಪ್ರೊಸೆಸರ್ ಕಂಪನಿಯಲ್ಲಿ ಉದ್ಯೋಗ ಒದಗಿತು. ಕಠಿಣ ಪರಿಶ್ರಮಿ ಆಗಿರುವ ಕೃಷ್ಣ ಉಚ್ಚಿಲ್ ರವರು ಹಂತ ಹಂತವಾಗಿ ಮೇಲೇರಿ ಉನ್ನತ ಹುದ್ದೆಯನ್ನು ಅಲಂಕರಿಸಿಕೊಂಡರು. ಕ್ರಮೇಣ ಉಪಾಧ್ಯಕ್ಷರಾಗಿ ಬಡ್ತಿ ಹೊಂದಿದರು.1995 ರಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸುವ ಸಾಹಸಕ್ಕೆ ಮುಂದಾದರು. ನಿರಂತರ ದುಡಿಮೆಯಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದ ಕೃಷ್ಣ ಉಚ್ಚಿಲ್ ಅವರಿಂದ ಹೀಟ್ ಟ್ರೀಟ್ಮೆಂಟ್ ಬ್ರೈಟ್ ಬಾಕ್ಸ್ ಕಂಪನಿ ಶುಭಾರಂಭಗೊಂಡಿತು. ಪ್ರಸ್ತುತ ಶಿಲ್ಪಿಕಾ ಗ್ರೈಂಡಿಂಗ್ ವರ್ಕ್ಸ್, ಶ್ರೀ ಕೃಷ್ಣ ಸ್ಟೀಲ್ ಪ್ರೊಸೆಸರ್, ಗಜಾನನ್ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಮೊದಲಾದ ಕಂಪನಿಯನ್ನು ಕೃಷ್ಣ ಉಚ್ಚಿಲ್ ಹೊಂದಿದ್ದಾರೆ. 300ಕ್ಕೂ ಮಿಕ್ಕಿ ಮಂದಿಗೆ ಉದ್ಯೋಗದಾತರಾಗಿದ್ದಾರೆ. ಪ್ರಸ್ತುತ ತೀಯಾ ಸಮಾಜದ ಓರ್ವ ಯಶಸ್ವಿ ಉದ್ಯಮಿ, ಕೊಡುಗೈ ದಾನಿ ಹಾಗೂ ಶ್ರೇಷ್ಠ ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಕ್ಕೆ ಮಾನ್ಯತೆಯನ್ನು ನೀಡಿ ಸಾಮಾಜಿಕ ಶೈಕ್ಷಣಿಕ ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿರುವರು. ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ನೀಡುತ್ತಿದ್ದಾರೆ. ಅಲ್ಲದೆ ವಿಧವೆ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಸಹಾಯ ನೀಡುತ್ತಾ ಬರುತ್ತಿದ್ದಾರೆ. ಕೋವಿಡ್ 19ರ ಸಂದರ್ಭದಲ್ಲಿ ಹುಟ್ಟೂರಿನ ಅನೇಕ ಮಂದಿಗೆ ಜಾತಿ ಭೇದವಿಲ್ಲದೆ ದವಸ ಧಾನ್ಯಗಳನ್ನು ಅಲ್ಲದೆ ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ. ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು 2012 ರಲ್ಲಿ ಬಹಳ ಅರ್ಥಪೂರ್ಣವಾಗಿ ಕೊಂಡೆವೂರು ಆಶ್ರಮದಲ್ಲಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ 14 ಜೋಡಿಗೆ ಲಕ್ಷಾಂತರ ರೂಪಾಯಿ ಖರ್ಚು ವೆಚ್ಚದಲ್ಲಿ ವಿವಾಹವನ್ನು ನಡೆಸಿಕೊಟ್ಟು ಆದರ್ಶವನ್ನು ಮೆರೆದಿದ್ದಾರೆ. ಈ ಕಾರ್ಯಕ್ರಮದಿಂದ ಪ್ರೇರಿತರಾದ ಕೃಷ್ಣ ಉಚ್ಚಿಲ್ ಮುಂದೆಯೂ 8 ಜೋಡಿ 2013ರಲ್ಲಿ 6ಜೋಡಿಗೆ ಮಾಂಗಲ್ಯ ಸೌಭಾಗ್ಯವನ್ನು 33 ಲಕ್ಷ ರೂಪಾಯಿ ವೆಚ್ಚದಲ್ಲಿ ನೆರವೇರಿಸಿದ್ದಾರೆ. ಸಂಸ್ಕೃತಿ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿರುವ ಕೃಷ್ಣ ಉಚ್ಚಿಲ್ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸಲು, ಅವರೆಲ್ಲ ಸಂಸ್ಕಾರವಂತರಾಗಿ ಬಾಳುವ ಸದುದ್ದೇಶದಿಂದ ಸಾಮೂಹಿಕವಾಗಿ ಮೂಗು ಚುಚ್ಚುವ ಕಾರ್ಯಕ್ರಮವನ್ನು ಆಯೋಜಿಸಿ ಸುಮಾರು 157 ಮಂದಿಗೆ ಬಂಗಾರದ ಮೂಗುಬೊಟ್ಟು ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಧಾರ್ಮಿಕ ಚಿಂತಕರಾಗಿರುವ ಕೃಷ್ಣ ಉಚ್ಚಿಲ್ ರವರು ಪ್ರಸ್ತುತ ಬೊಳ್ನಾಡು ಶ್ರೀ ಭಗವತಿ ಕ್ಷೇತ್ರ ಪುನರ್ ನಿರ್ಮಾಣದ ಕೈಂಕಾರಿಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರದ ಪುನರ್ ನಿರ್ಮಾಣದ ಕಾರ್ಯಕ್ಕೆ ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ಕೃಷ್ಣ ಉಚ್ಚಿಲ್ ರವರು ದಾನ ರೂಪದಲ್ಲಿ ನೀಡಿದ್ದಾರೆ. ಮುಂದಿನ ವರ್ಷದಲ್ಲಿ ಶ್ರೀ ಭಗವತೀ ಭವ್ಯ ದೇವಸ್ಥಾನ ವು ಬ್ರಹ್ಮ ಕಲಶದೊಂದಿಗೆ ಲೋಕಾರ್ಪಣೆಯಾಗಲಿದೆ. ಉದ್ಯಮದೊಂದಿಗೆ ಸಾಮಾಜಿಕ ಧಾರ್ಮಿಕ ಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೃಷ್ಣ ಉಚ್ಚಿಲ್ ರವರು ಕಳೆದೆರಡು ವರ್ಷಗಳಿಂದ ತೀಯಾ ಸಮಾಜ ಮುಂಬಯಿ ಇದರ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿ ಸಮಾಜ ಬಾಂಧವರ ಪ್ರೀತಿ ಗೌರವವನ್ನು ಸಂಪಾದಿಸಿಕೊಂಡಿರುವರು. ಪ್ರಸ್ತುತ ನಡೆದ 79 ನೇ ವಾರ್ಷಿಕ ಮಹಾಸಭೆಯಲ್ಲಿ ಕೃಷ್ಣ ಎನ್ ಉಚ್ಚಿಲ್ ರವರನ್ನು ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.