
ಮನಮನದಲ್ಲಿ ಕನ್ನಡ ಅರಳಿದರೆ ಮನೆಮನೆಯಲ್ಲಿ ಕನ್ನಡ ಬೆಳಗುತ್ತದೆ - ಭಾಸ್ಕರ್ ಶೆಟ್ಟಿ. ಪದ್ಮ
ಕರ್ನಾಟಕ ಸಂಘ ಪನ್ವೇಲ್ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಆಚರಿಸುತ್ತಾ ಬಂದಿದ್ದು ಈ ಬಾರಿ ನವಂಬರ್ 26ರಂದು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪದ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು
.
ಈ ಪ್ರಯುಕ್ತ ಅದೇ ದಿನ ಬೆಳಿಗ್ಗೆ ಯಿಂದ ಮಧ್ಯಾಹ್ನ . ವರೆಗೆ ರಕ್ತದಾನ ಶಿಬಿರವು ನೆರವೇರಲಿರುವುದು.
ಸಂಜೆ ಕರ್ನಾಟಕ ರಾಜ್ಯೋತ್ಸವ ದಿನದ ಆಚರಣೆ ಕಾರ್ಯಕ್ರಮವು , ಸದಸ್ಯರಿಂದ ಹಾಗೂ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ ನಡೆಯತ್.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೇವಲ್ಕುಂದ ಭಾಸ್ಕರ್ ಶೆಟ್ಟಿಯ ವರು ಕನ್ನಡ ನಾಡು ನುಡಿ ಬಗ್ಗೆ ವಿವರಿಸುತ್ತಾ ಮನ:ಮನದಲ್ಲಿ ಕನ್ನಡ ಅರಳಿದರೆ ಸ್ವಯಂ ಆಗಿ ಮನೆ ಮನೆಯಲ್ಲಿಯೂ ಕನ್ನಡ ಬೆಳಗುತ್ತದೆ .ಸಂಘದ ರಾಜ್ಯೋತ್ಸವ ಆಚರಣೆಯ ಶಿಸ್ತುಭದ್ಧವಾಗಿ ಬಹಳ ಅರ್ಥಪೂರ್ಣವಾಗಿ ಮನದಟ್ಟು ಮಾಡುವಲ್ಲಿ ಸಂಘದ ಪದಾಧಿಕಾರಿಗಳ ಪ್ರಯತ್ನ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ .ಯಕ್ಷಗಾನದ ಮೂಲಕವೂ ಕನ್ನಡ ಭಾಷೆ ಉಳಿಸಲು ಸಾಧ್ಯವೆಂದು ತಮ್ಮ ಶಿಷ್ಯರು ಕನ್ನಡ ಕಲಿತ ಬಗ್ಗೆ ಮೆಚ್ಚುಗೆಯ ಮಾತನಾಡಿದರು .
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾಸ್ಕರ್ ಶೆಟ್ಟಿ ಪದ್ಮ ಅವರು ಕನ್ನಡ ಭಾಷೆ ನಾಡು ನುಡಿಯನ್ನು ಹೊರನಾಡಿನಲ್ಲಿ ನಮ್ಮಂತಹ ಸಂಘ ಸಂಸ್ಥೆಗಳೇ ಬೆಳೆಸಿ ಕನ್ನಡಾಂಬೆಯ ಸೇವೆಯನ್ನು ನಾವೆಲ್ಲರು ಮಾಡುವ ಎಂದು ಕಿವಿಮಾತು ಹೇಳಿದರು .
ಉಪಾಧ್ಯಕ್ಷರಾದ ಗುರು ಶೆಟ್ಟಿಯವರು ಕರ್ನಾಟಕದಲ್ಲಿಯೇ ಕನ್ನಡದ ಅಳಿವು ಉಳುವಿನಂಚಿಗೆ ಬಂದಂತಹ ಈ ಕಾಲಘಟ್ಟದಲ್ಲಿ ಹೊರನಾಡ ಕನ್ನಡಿಗರು ಕನ್ನಡದ ಭಾಷಾ ಪ್ರೇಮ ನಾಡು ನುಡಿಯ ಬಗ್ಗೆ ಇನ್ನಷ್ಟು ಪ್ರೇಮ ಹಾಗು ಅಭಿಮಾನ ತೋರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ನಾಡ ಸೇವೆಯನ್ನು ಮಾಡುತ್ತಿರುವದು ತಾಯಿ ಭುವನೇಶ್ವರಿಯ ಕೃಪಾಕಟಾಕ್ಷವೇ ಸರಿ. ಇಂತಹ ಸಮಾಜಮುಖಿ ಕೆಲಸಗಳಲ್ಲಿ ನಮ್ಮ ಕರ್ನಾಟಕ ಸಂಘವು ಪರಿಸರದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಹಿಳಾ ವಿಭಾಗದ ಅಧ್ಯಕ್ಷರು ಶಶಿಕಲ ದಾಬ್ಕೆ ಯವರು ಮಾತನಾಡುತ್ತಾ ಕರ್ನಾಟಕ ಸಂಘ ಮಹಿಳಾ ವಿಭಾಗದ ವತಿಯಿಂದ ನಡೆಸಿಕೊಂಡು ಬರುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಘದ ವತಿಯಿಂದ ನಡೆಸುಕೊಂಡು ಬರುತ್ತಿರುವ ಎಲ್ಲಾ ಸಾಮಾಜಿಕ ಕಾರ್ಯಗಳ ಬಗ್ಗೆ ತಿಳಿಸಿಕೊಟ್ಟರು ಮತ್ತು ಕನ್ನಡದ ಗತಕಾಲದ ವೈಭವ ಹಾಗೂ ನಮ್ಮ ಕನ್ನಡ ಪ್ರೇಮವು ಅನುದಿನವೂ ನಮ್ಮಲ್ಲಿ ಮೂಡುವಂತಾಗಲಿ ಎಂದು ಆಶಿಸಿದರು.
ಸಂಘದ ಗೌರವ ಕಾರ್ಯದರ್ಶಿ ಸತೀಶ ಶೆಟ್ಟಿ ಕುತ್ಯಾರು ಸಭೆಯನ್ನು ಉದ್ದೇಶಿಸಿ ನಮ್ಮ ರಾಜಮನೆತನಗಳು ಕರ್ನಾಟಕದ ವೈಭವವನ್ನು ಜಗತ್ತಿನಾದ್ಯಂತ ಪಸರಿಸಿದರೆ ನಮ್ಮ ಸಾಹಿತಿಗಳು ಕನ್ನಡ ಭಾಷೆಯನ್ನು ಪ್ರಪಂಚದಲ್ಲಿ ಉತ್ಕೃಷ್ಟ ಶ್ರೇಷ್ಠ ಭಾಷೆ ಎಂದು ಮನದಟ್ಟು ಮಾಡಿರುವರು .ಸಾಹಿತಿಗಳ ಕವಿಗಳ ಯೋಗದಾನ ಕನ್ನಡದ ಕಂಪನ್ನು ಜಗದಲ್ಲೆಡೆ ಪಸರಿಸುವುದರ ಮೂಲಕ ಕನ್ನಡ ನಾಡು ನುಡಿ ಭಾಷೆ ಔಚಿತ್ಯವನ್ನು ಮನದಟ್ಟು ಮಾಡುತ್ತಾ ನಮ್ಮ ಕರ್ನಾಟಕ ಸಂಘವು ಈ ನಿಟ್ಟಿನಲ್ಲಿ ಕರ್ನಾಟಕ ನಾಡು ನುಡಿಯ ಉಳಿವಿಗಾಗಿ ಅಳಿಲು ಸೇವೆಯನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.


. ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ಅವರು ಸಂಘದ ಎಲ್ಲಾ ಈ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಚಿಂತನೆಗಳನ್ನು
ಮಾಡಿ ಆ ಮೂಲಕ ಅರ್ಹರಿಗೆ ಸಂಘದಿಂದ ಹೆಚ್ಚು ಹೆಚ್ಚು ಸಹಾಯ ಪ್ರೊತ್ಸಾಹ ನೀಡಿದರೆ ನಮ್ಮ ಸಮಾಜಮುಖಿ ಕಾರ್ಯಗಳಿಗೆ ಸಂಘದ ಕೊಡುಗೆಯು ಮೌಲ್ಯಾಧಾರಿತವಾಗಿ ನಮ್ಮ ಸಂಘವು ಮಾದರಿ ಸಂಘವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದರು .
ಕರ್ನಾಟಕದ ಸಂಘ ಪನ್ವೇಲ್ ನಲ್ಲಿ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಅದೇ ದಿನ ಬೆಳಗ್ಗೆ ಯಿಂದ M G M HOSPITAL ಕಾಮೋಟ್ಟೆ ವೈದ್ಯರ ತಂಡದ ಮುತುವರ್ಜಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಾರದಾ ಅಂಚನರವರ ತಂಡವು ಸಂಪೂರ್ಣ ಸಹಕರಿಸಿ ಸಂಘದ ಸದಸ್ಯರು ಪರಿಸರದ ಕನ್ನಡ ಪ್ರೇಮಿಗಳು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಮ್ಮ ರಕ್ತದಾನ ಮಾಡಿದರು .ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮಹಿಳಾ ವಿಭಾಗದ ಸದಸ್ಯರ ದಿವ್ಯ ಸಂಯೋಜನೆಯಲ್ಲಿ ಜರುಗಿತು .ಸಂಘದ ಮಹಿಳಾ ಸದಸ್ಯರು ಮತ್ತು ಮಕ್ಕಳು ಉತ್ಕೃಷ್ಟ ಮಟ್ಟದ ಕಾರ್ಯಕ್ರಮವನ್ನು ಕೊಟ್ಟು ಅತಿಥಿಗಳ ಹಾಗೂ ಪ್ರೇಕ್ಷಕರ ಹೊಗಳಿಕೆಗೆ ಪಾತ್ರರಾದರು .ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ವಿಭಾಗದ ಅಧ್ಯಕ್ಷ ಶಶಿಕಲಾ ದಾಬಕೆ ಅವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಮಧ್ಯ ಇತ್ತೀಚೆಗೆ ಹುತಾತ್ಮರಾದ ದಕ್ಷಿಣ ಕನ್ನಡದ ಸೂರತ್ಕಲ್ ಮೂಲದ ಯೋಧ 29 ವರ್ಷದ ಪ್ರಾಂಜಲ್ರವರಿಗೆ ಹಾಗೂ 26. 11 ರಂದು ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಸಂಘದ ಪ್ರತಿಭಾ ಪುರಸ್ಕಾರವನ್ನು ಸಂಘದಲ್ಲಿ ಸುಮಾರು 12 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಾಹಿತಿ, ಸಂಗೀತ ಪ್ರೇಮಿ ಸೇನಾನಿ ವಿಜ್ಞಾನಿ ಸುರೇಶ್ ರಾವ್ ಹಾಗೂ ದಂಪತಿಗಳನ್ನು ಸನ್ಮಾನಿಸಿ ನೀಡಲಾಯಿತು .
ಇನ್ನೋರ್ವ ಸಂಘದ ಸದಸ್ಯರ ಪುತ್ರ ಸಿದ್ದಾರ್ಥ್ ಆನಂದ್ ಶೆಟ್ಟಿ ಅವರನ್ನು ಅವರ ಕ್ರೀಡಾಸಕ್ತಿಯನ್ನು ಗುರುತಿಸಿ ಅವರ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಶಸ್ತಿ ಅವರನ್ನು ಸನ್ಮಾನಿಸಲಾಯಿತು .
ಸನ್ಮಾನಿತರ ಪತ್ರವನ್ನು ಶ್ವೇತಾ ಸಂತೋಷ ಶೆಟ್ಟಿ ಅವರು ಹಾಗೂ ಅಂಜಲಿ ಜೋಶಿಯವರು ವಾಚಿಸಿದರು .
ವೇದಿಕೆಯಲ್ಲಿ ಗೊರೆಗಾವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ ಕನ್ನಡ ಭವನ ಎಜುಕೇಶನ್ ಸೊಸೈಟಿಯ ಶಾಲೆಯ ಮುಖ್ಯೋಪಾದಾಯಿನಿ ಅಮೃತ ಶೆಟ್ಟಿ . ಗೌರವಾಧ್ಯಕ್ಷ ಸಂತೋಷ್ ಜಿ ಶೆಟ್ಟಿ ,ಉಪಾಧ್ಯಕ್ಷ ಗುರು ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸತೀಶ ಕುತ್ಯಾರು ,ಮಹಿಳಾ ಅಧ್ಯಕ್ಷ ಶಶಿಕಲಾ ದಾಬ್ಕೆ ಅವರು ಉಪಸ್ಥಿತರಿದ್ದರು. ನಾಗಮಣಿ ಹಲ್ಕುಡೆ ಯವರು ಸಾಗತಿಸಿ ,ಕಾರ್ಯಕ್ರಮವನ್ನು ಶಬುನ ಶೆಟ್ಟಿ ಯವರು ನಿರೂಪಿಸಿದರು . ಪ್ರಮೀಳಾ ಶೆಟ್ಟಿಯವರು ವಂದನಾರ್ಪಣೆ ಮಾಡಿದರು .ಕಾರ್ಯಕ್ರಮ ಪ್ರೀತಿ ಭೋಜನ ಹಾಗೂ ದೀಪಾವಳಿ ಹಬ್ಬದ ಆಚರಣೆಯೊಂದಿಗೆ ಸಂಪನ್ನಗೊಂಡಿತು .
———
ಹೊರನಾಡಿನಲ್ಲಿ ಕನ್ನಡ ಶ್ರೀಮಂತ ಗೊಂಡಿದೆ: ಅಮೃತ ಶೆಟ್ಟಿ .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಭವನ ಎಜುಕೇಶನ್ ಸೊಸೈಟಿಯ ಶಾಲೆಯ ಮುಖ್ಯೋಪಾದಾಯಿನಿ ಅಮೃತ ಶೆಟ್ಟಿ ಮಾತನಾಡುತ್ತಾ
ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಂತಹ ಕನ್ನಡದ ಶ್ರೇಷ್ಠತೆಯನ್ನು ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಉಳಿಸಿಕೊಳ್ಳಬೇಕಾಗಿದೆ ಕನ್ನಡದ ಜನ್ಮಭೂಮಿಯಾದ ಕರ್ನಾಟಕದಲ್ಲಿ ಕನ್ನಡ ನಶಿಸುತ್ತಿರುವಂತಹ ಸಂದರ್ಭದಲ್ಲಿ ಹೊರನಾಡನಲ್ಲಿದ್ದುಕೊಂಡು, ಕನ್ನಡವನ್ನು ಉಳಿಸುವ ಕಾಯಕವನ್ನು ಕೈಗೆತ್ತಿಕೊಂಡ ಹೊರನಾಡ ಕನ್ನಡಿಗರು ನಿಜವಾಗಿಯೂ ತಾಯಿ ಭುವನೇಶ್ವರಿಯ ಹೆಮ್ಮೆಯ ಮಕ್ಕಳು. ಇನ್ನು ಮುಂದಕ್ಕೂ ಕನ್ನಡವನ್ನು ಉಳಿಸಿಕೊಳ್ಳುತ್ತಾ, ಯಾವ ಕಾರಣಕ್ಕೂ ಕನ್ನಡವನ್ನು ಜಗ್ಗಲು, ಬಗ್ಗಲು, ಕುಗ್ಗಲು ಬಿಡದೆ ಕನ್ನಡತನವನ್ನಾಗಿ ಎಲ್ಲೆಲ್ಲಿಯೂ ನಿಸ್ವಾರ್ಥಿಗಳಾಗಿ ಬೆಳೆಸುತ್ತೇವೆ ಅನ್ನುವ ಪ್ರತಿಜ್ಞೆ ತೊಡಬೇಕು. ಪನ್ವೇಲ್ ಕರ್ನಾಟಕ ಸಂಘದಲ್ಲಿ ಕನ್ನಡಾಂಬೆಯ ಮಕ್ಕಳ ಪ್ರತಿಭೆಯ ಖಜಾನೆ ತುಂಬಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನು ಕನ್ನಡಿಗಳೆಂಬ ಹೆಮ್ಮೆ ದ್ವಿಗುಣಗೊಂಡಿದೆ.
-+—–
ಸನ್ಮಾನಿತರು
ವಿಜ್ಞಾನಿ ಸುರೇಶ್ ರಾವ್ ದಂಪತಿಗಳನ್ನು ಸನ್ಮಾನಿಸಿದಾಗ .
ಸಂಘದ ಸದಸ್ಯರ ಪುತ್ರ ಸಿದ್ದಾರ್ಥ್ ಆನಂದ್ ಶೆಟ್ಟಿ ಗೌರವಿಸಿದಾಗ