30.9 C
Mumbai
June 8, 2026
Mumbai News Kannada
ಸುದ್ದಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ,





 

ಮುಂಬಯಿ . ಫೆ.15-  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) , ವಿಶ್ವಕರ್ಮ ಸಹಕಾರ ಬ್ಯಾಂಕ್ ಉಡುಪಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ.) ದೊಡ್ಡಣ್ಣಗುಡ್ಡೆ ವಿಷ್ಣುಮೂರ್ತಿ ಮಹಿಳಾ ಘಟಕ, ದೊಡ್ಡಣ್ಣಗುಡ್ಡೆ ನಾಥ ಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ (ರಿ.) ಉಡುಪಿ ಜಿಲ್ಲೆ ಇವರುಗಳ ಸಹಯೋಗದಲ್ಲಿ “ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ” 

 08-02-2026 ರಂದು ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇವರ ಕಚೇರಿಯ ಬಳಿ ಇರುವ ಸಾರ್ವಜನಿಕ ಆಟದ ಮೈದಾನದ ವಠಾರದಲ್ಲಿ  ಇಂದು ಉದ್ಘಾಟನೆ ಗೊಂಡಿತು. 

ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀಯುತ ರಘುಪತಿ ಭಟ್ ಮಾಜಿ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ,ಜೆ.ಪಿ. ಜಗದೀಶ್ ಅಧಿಕಾರಿ , ಸಮಿತಿಯ ರಾಜ್ಯ ಸಂಯೋಜಕರು , ಶ್ರೀಯುತ ಹರೀಶ್ ಕುಮಾರ್ ಎಂ ಶೆಟ್ಟಿ ಸಮಿತಿಯ ಜಿಲ್ಲಾಧ್ಯಕ್ಷರು, ಶ್ರೀಯುತ ಅರುಣ್ ಪ್ರಕಾಶ್ ಶೆಟ್ಟಿ, ಸಮಿತಿಯ ಜಿಲ್ಲಾ ಉಪಾಧ್ಯಕ್ಷರು,  ಶ್ರೀಯುತ ಜಗದೀಶ್ ಆಚಾರ್ಯ ವಿಶ್ವಕರ್ಮ ಸಹಕಾರಿ ಬ್ಯಾಂಕ್ ನಿರ್ದೇಶಕರು,  ಶ್ರೀಮತಿ ಅನುಪಮಾ ಎಂ ಜೋಗಿ ಅಧ್ಯಕ್ಷರು ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆ,  ಜೋಗಿ ಸಮಾಜ ಸೇವಾ ಸಮಿತಿ ಗೌರವಾಧ್ಯಕ್ಷರು ಶ್ರೀಯುತ ಹರಿಶ್ಚಂದ್ರ ಜೋಗಿ,  ಕುಂದಾಪುರ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷರು ಶ್ರೀಯುತ ರಮೇಶ್ ಎಚ್ ಎಸ್, ಸಿದ್ದ ಕಣ್ಣಿನ ಹನಿ ಕಾರ್ಯಕ್ರಮದ ನಿರ್ವಾಹಕರಾದ ಶ್ರೀಯುತ ಶಿವಕುಮಾರ್ ಮತ್ತು ಶ್ರೀಯುತ ನವೀನ್ ಕುಮಾರ್, ಶ್ರೀಯುತ ರಾಧಾಕೃಷ್ಣನ್ ಅಧ್ಯಕ್ಷರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಷ್ಣುಮೂರ್ತಿ ಫ್ರೆಂಡ್ಸ್  ಇವರೆಲ್ಲರೂ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರು  ಕೆ. ರಘುಪತಿ ಭಟ್ ರವರು ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಂತಹ ವಿಷ್ಣುಮೂರ್ತಿ ಫ್ರೆಂಡ್ಸ್ ಸಂಘವನ್ನು ಮತ್ತು ಅವರ ಕಾರ್ಯ ಚಟುವಟಿಕೆಯನ್ನು ಪ್ರಶಂಸಿಸಿದರು. ಸಂಘದ 20ನೇ ವರ್ಷದ ಕಾರ್ಯಘಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಸಾರ್ವಜನಿಕರಿಗೂ ಸಾಮಾಜಿಕವಾಗಿ ಸೇವೆಗಳನ್ನು ನೀಡುತ್ತಾ ಬಂದಿರುವಿರಿ .ಅದೇ ರೀತಿ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮವು ಪ್ರಥಮತಹವಾಗಿ ಉಡುಪಿಯಲ್ಲಿ ನಡೆದಿರುವುದರಿಂದ ಕಾರ್ಯಕ್ರಮದ ನಿರ್ವಾಹಕರಿಗೂ ಪ್ರೋತ್ಸಾಹಿಸಿದರು. ಸಿದ್ಧ ಕಣ್ಣಿನ ಹನಿಯ ಉಪಯೋಗವನ್ನು ಪಡೆದುಕೊಂಡು ಕಣ್ಣಿನ ತೊಂದರೆಗಳನ್ನು ದೂರ ಮಾಡಿಕೊಳ್ಳಿ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ಎಲ್ಲಾ ನಿಮ್ಮಕಾರ್ಯ ಗಳಲ್ಲಿ ಸಫಲತೆ ಸಿಗಲಿ ಎಂದು ಶುಭ ಹಾರೈಸಿದರು. 

ಕೆ ಪಿ ಜಗದೀಶ್ ಅಧಿಕಾರಿ ರಾಜ್ಯಾಧ್ಯಕ್ಷರು ಕಾರ್ಯಕ್ರಮವನ್ನು ಶ್ಲಾಘಿಸಿ ಪ್ರೋತ್ಸಾಹದ ಹಿತನುಡಿಗಳನ್ನು ತಿಳಿಸಿದರು. 

 ಹರೀಶ್ ಕುಮಾರ್ ಶೆಟ್ಟಿ ಇವರು ಸಿದ್ದ ಕಣ್ಣಿನ ಹನಿಯ ಉಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವನ್ನು ವೃದ್ಧಿಸಿ ಎಂದು ತಿಳಿಹೇಳಿದರು. 

ನಮ್ಮ ಸಮಿತಿ ಹಲವರು ಜನಪರ ಯೋಜನೆಗಳನ್ನು ಮಾಡುತ್ತಲೇ ಇದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಕೂಡ ಮಾಡುವ ಇಚ್ಛೆ ಇದೆ ಹಾಗು ನಮ್ಮ ಸಹಕಾರ ಇದೆ ಎಂದು ಭರವಸೆಯ ಮಾತಾಡಿದರು.. 

 ರಮೇಶ್ ಎಚ್ ಎಸ್ ಅಧ್ಯಕ್ಷರು ಜೋಗಿ ಸಮಾಜ ಈ ಈ ಕಾರ್ಯಕ್ರಮವು ವಿಶೇಷತೆಯನ್ನು ಹೊಂದಿಕೊಂಡಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷರಾಗಿರುವ  ರಾಧಾಕೃಷ್ಣನ್ ಅವರು ಸಿದ್ಧ ಕಣ್ಣಿನ ಹನಿಯನ್ನು ಪ್ರತಿ ತಿಂಗಳಿನ ಎರಡನೇ ಭಾನುವಾರ ನಮ್ಮ ಈ ಕಚೇರಿಯಲ್ಲಿ ನಡೆಯಲಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶುಭ ಹಾರೈಸಿದರು . ಸುಮಾರು 350  ಕಿಂತಲು ಹೆಚ್ಚು ನಾಗರಿಕರು ಇವತ್ತಿನ ಕಾರ್ಯಕ್ರಮದ ಸದುಪಯೋಗ ಪಡೆದರು..

ಈ ಕಾರ್ಯಕ್ರಮವನ್ನು ಶ್ರೀಮತಿ ಅನುಪಮಾ ಎಂಜೋಗಿ ನಿರೂಪಿಸಿ ವಂದಿಸಿದರು.



Related posts

ಕರ್ನಾಟಕ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಹರಿಪ್ರಸಾದ್ ನಂದಳಿಕೆ ಅವರಿಗೆ   ಪ್ರಶಸ್ತಿ.

Mumbai News Desk

ಮುಂಬೈ: ದಿಶಾ ಸಾಲ್ಯಾನ್ ಸಾವು ಪ್ರಕರಣ- ಆದಿತ್ಯ ಠಾಕ್ರೆ, ಬಾಲಿವುಡ್ ನಟರು, ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಹೊಸ ದೂರು

Mumbai News Desk

ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಪತ್ನಿ ವಿಜಯಲಕ್ಷ್ಮೀ ರಾವ್ ನಿಧನ

Mumbai News Desk

ಉಡುಪಿ : ತೋನ್ಸೆ ಗರೋಡಿ ಜೀರ್ಣೋದ್ಧಾರಕ್ಕೆ ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷ ಸೂರ್ಯಕಾಂತ್ ಸುವರ್ಣ ಅವರಿಗೆ ಮನವಿ ಸಲ್ಲಿಕೆ

Mumbai News Desk

ರಂಗ ಸುದರ್ಶನ (ರಿ) ಸಸಿಹಿತ್ಲು ಇವರಿಂದ, ದೈವ ನಡೆ -ಚಿಂತನ ಮಂಥನ, ರಂಗ ಸ್ನೇಹ ಸಂಗಮ – ಡಾ.ಸುರೇಂದ್ರ ಕುಮಾರ್ ಹೆಗ್ಡೆ “ರಂಗ ಭೀಷ್ಮ” ಬಿರುದು ಪ್ರಧಾನ

Mumbai News Desk

ವಸಾಯಿ : ಹರಿಶ್ಚಂದ್ರ ಜಿ. ಕುಂದರ್ ಅವರ ಅಕಾಲಿಕ ಮರಣ

Mumbai News Desk