September 6, 2026
Mumbai News Kannada
ಸುದ್ದಿ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ






ಟ್ರಸ್ಟ್ ನ ಕಾರ್ಯ ಅಭಿನಂದನೀಯ – ನವಾಜ್ ಕಲ್ಲರಕೋಡಿ

” ಮೂಲತ್ವ ನಾನೇ ನೀನು ನೀನೇ ನಾನು” ಎಂಬ ತತ್ವದಡಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆ ಪದವು, ಉಳ್ಳಾಲ ತಾಲೂಕ್ ಇಲ್ಲಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿ “ಸಾಂತ್ವನ” ಇದರ ಲೋಕಾರ್ಪಣೆ ಕಾರ್ಯಕ್ರಮವು ಎಪ್ರಿಲ್ 27ರಂದು ಬೆಳಿಗ್ಗೆ 10 ಗಂಟೆಗೆ ಜರಗಿತು


ನರಿಂಗಾನ ಗ್ರಾಮ ಪಂಚಾಂಯತ್ ನ ಅಧ್ಯಕ್ಷ ನವಾಜ್ ಕಲ್ಲರಕೋಡಿ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನೆ ಭಾಷಣದಲ್ಲಿ ಟ್ರಸ್ಟಿನ ಕೆಲಸ ಕೆಲಸಕ್ಕೆ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ವಾಸ್ತವಿಕ ಭಾಷಣವನ್ನು ಮಾಡಿದರು.ಪದವಿ ಪೂರ್ವ ಕಾಲೇಜು ವಿಭಾಗ ಮೊಂಟುಗೋಳಿ ಇದರ ಕಾರ್ಯಧ್ಯಕ್ಷ ಅಬ್ದುಲ್ ಜಲೀಲ್, ಕೆಪಿಎಸ್ ಹೈಸ್ಕೂಲ್ ಮೊಂಟೆಪದವು ಇದರ ಕಾರ್ಯಾಧ್ಯಕ್ಷ ಮುರುಳಿಧರ್ ಶೆಟ್ಟಿ ಮೋರ್ಲ, ಪ್ರಾಥಮಿಕ ಶಾಲಾ ವಿಭಾಗದ ಕಾರ್ಯಧ್ಯಕ್ಷ ಮೊಹಮ್ಮದ್ ಹನೀಫ್ ಚಂದಹಿತ್ಲು, ಉಪಸ್ಥಿತರಿದ್ದರು.


ಕೆ. ಪಿ. ಎಸ್. ಮೊಂಟೆಪದವು ಇದರ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಎಸ್ ಡಿ ಎಂ ಸಿ ಸದಸ್ಯರು, ಹಾಗೂ ಅಧ್ಯಾಪಕ ವೃಂದದವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಶ್ರೀಮತಿ ಕಲ್ಪನ ಕೋಟ್ಯಾನ್, ಶ್ರೀಮತಿ ಶೈನಿ, ಲಕ್ಷ್ಮೀಶ ಕೋಟಿಯನ್, ಶ್ರೀಮತಿ ಅಕ್ಷತ ಕದ್ರಿ, ಪ್ರಶಾಂತ್ ರೈ, ಮಹೇಶ್ ಅಮೀನ್, ಜಯಶ್ರೀ, ರಾಮ್ ಪ್ರಸಾದ್, ಪ್ರೇಮ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಉಪ ಪ್ರಾಂಶುಪಾಲರಾದ ಡಾಕ್ಟರ್ ಮಂಜುಳಾ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು.



Related posts

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

Mumbai News Desk

ಬೆಂಗಳೂರು : ಭಾರತ್ ಬ್ಯಾಂಕ್ ಅಧಿಕಾರಿ ಹೇಮಾ ಭಾಸ್ಕರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

Mumbai News Desk

ರೇಣುಕಾ ಸ್ವಾಮಿ ಪ್ರಕರಣ – ದರ್ಶನ್ ಸೇರಿ ಏಳು ಆರೋಪಿಗಳಿಗೆ ಜಾಮೀನು

Mumbai News Desk

ಜೀವನ್ ಸೇವಾ ಬ್ರಿಗೇಡ್‌ ಪಡುಬಿದ್ರಿ: ವೈದ್ಯಕೀಯ ಆರ್ಥಿಕ ನೆರವು ವಿತರಣೆ

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  

Mumbai News Desk