
ಯಕ್ಷಗಾನದ ಕಲೆ ನಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದೆ– ಪಾಂಡು ಶೆಟ್ಟಿ
ಚಿತ್ರ ವರದಿ : ರವಿ. ಬಿ. ಅಂಚನ್ ಪಡುಬಿದ್ರಿ
ವಸಯಿ ನ.27: ಯಕ್ಷಗಾನದ ಕಲೆ ಉಳಿದು ಬೆಳೆಯ ಬೇಕು ಎಂಬ ಉದ್ದೇಶದಿಂದ ಕರ್ನಿರೆ ಶ್ರೀಧರ್ ಶೆಟ್ಟಿಯವರ ಮುಂದಾಳುತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಈಗ ಎಳರ ಹರೆಯ ಪರಿಸರದ ದಾನಿಗಳ ಸಹಾಯದಿಂದ ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರ ಮುಂದಾಳುತ್ವದಲ್ಲಿ ಮಕ್ಕಳು ಯಕ್ಷಗಾನದ ಕಲೆಯನ್ನು ಉತ್ತಮವಾಗಿ ಕಲಿತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಯಕ್ಷಗಾನದ ಕಲೆಯು ನಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುತ್ತಿರುವುದರೊಂದಿಗೆ ಮಕ್ಕಳಿಗೆ ಪುರಾಣದ ಕಥೆಗಳಾದ ರಾಮಾಯಣ, ಮಹಾಭಾರತ, ದೇವಿ ಮಹಾತ್ಮೆ ಕಥೆಯ ಸಾರಾಂಶವನ್ನು ತಿಳಿಸುತ್ತದೆ ಯಕ್ಷಗಾನವನ್ನು ಕಲಿಯಲು ತಮ್ಮ ಮಕ್ಕಳನ್ನು ಕಳಿಸುತ್ತಿರುವ ಮಾತ- ಪಿತರು ನಿಜವಾಗಿಯೂ ಧನ್ಯರು ಇಂದು ಕಟೀಲು ಯಕ್ಷಕಲಾ ವೇದಿಕೆಯ ಪಂಚಮ ವಾರ್ಷಿಕೋತ್ಸವವನ್ನು ಅಚರಿಸಲು ಸಹಾಯ, ಸಹಕಾರ ನೀಡಿದ ದಾನಿಗಳಿಗೆ ಹೃದಯ ತುಂಬಿದ ದನ್ಯವಾದಗಳು ತಾವೆಲ್ಲರೂ ಯಕ್ಷಗಾನಕ್ಕೆ ಇದೇ ರೀತಿ ಸಹಕಾರ ನೀಡಿದರೆ ವಸಯಿ ಪರಿಸರದ ಮಕ್ಕಳನ್ನು ಶ್ರೇಷ್ಠ ಕಲಾವಿದರನ್ನಾಗಿ ಮಾಡುತ್ತೇವೆ ಎಂದು ವಸಯಿ ಕರ್ನಾಟಕ ಸಂಘದ ಅಂಗ ಸಂಸ್ಥೆಯಾದ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪಾಂಡು ಶೆಟ್ಟಿ ನುಡಿದರು.
ಅವರು ನವೆಂಬರ್ 26 ರ ರವಿವಾರ ವಸಯಿ ಪಶ್ಚಿಮದ ದತ್ತಾನಿ ಮಾಲ್ ನ ಅರ್ನ ಸ್ವರ್ಣ ಸಭಾಗ್ರಹದಲ್ಲಿ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ವಿನೀತ್ ಕೆಮಿಕಲ್ಸ್ ವೇದಿಕೆಯಲ್ಲಿ ಯಕ್ಷ ಸಂಭ್ರಮ 2023 ಹಾಗೂ ಸಂಸ್ಥೆಯ 5ನೇ ವಾರ್ಷಿಕೋತ್ಸವ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.




ಮುಖ್ಯ ಅತಿಥಿಯಾದ ಅರಣ್ಯ ಬ್ರಹ್ಮ ಆರ್.ಕೆ.ನಾಯರ್ ಮಾತನಾಡುತ್ತಾ ನನ್ನ ಜನ್ಮ ದೇವರ ನಾಡು ಕೇರಳದಲ್ಲಿ ನನಗೆ ಅನ್ನ ನೀಡಿ ಸಾಕಿದ್ದು ವಿಶ್ವದ ಶ್ರೇಷ್ಠ ನಾಡು ತುಳುನಾಡು ತುಳುನಾಡಿನ ಜನರು ಹೊಟ್ಟೆ ಪಾಡಿಗಾಗಿ ಮಹಾನಗರಕ್ಕೆ ಅಗಮಿಸಿ ಕೆಲಸ ಮಾಡುತ್ತಾ ಇನ್ನೊಬ್ಬರಿಗೆ ಕೆಲಸ ಕೊಡುವಷ್ಠರ ಮಟ್ಟಿಗೆ ಬೆಳೆದಿದ್ದಾರೆ. ನಾವು ತುಳು ನಾಡಿನಿಂದ ಮಹಾನಗರಕ್ಕೆ ಬಂದಾಗ ತುಳು ನಾಡಿನ ಶಕ್ತಿಯು ಬಂದಿದೆ ಅದುದರಿಮನದ ಮಹಾನಗರದಲ್ಲಿ ದೈವಸ್ಥಾನ, ಮಂದಿರ, ಮಠ ನಿರ್ಮಾಣವಾಗಿದೆ. ತುಳುನಾಡಿನ ಜನರು ತಾನು ಸಂಪಾದಿಸಿದ ಹಣದ ಹೆಚ್ಚಿನ ಅಂಶವನ್ನು ತಾಯ್ನಾಡಿಗೆ ಹಾಗೂ ಕರ್ಮಭೂಮಿಯ ಅಭಿವೃದ್ಧಿಗೆ ನೀಡುತ್ತಿದ್ದಾರೆ. ತುಳುನಾಡಿಗೆ, ತುಳು ಸಂಸ್ಕೃತಿಗೆ ವಿಶ್ವದಲ್ಲೇ ಮಾನ್ಯತೆ ಇದೆ ನಮ್ಮ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರು ಮಾಡುತ್ತಿದ್ದಾರೆ ಗುಜರಾತ್ ನ ಕಚ್ಚ್ ನಲ್ಲಿ ನಡೆದ ಯಕ್ಷಗಾನವನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೈವ್ ವಿಕ್ಷೀಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ ಸದ್ಯದಲ್ಲೇ ಕಟೀಲು ಸದಾನಂದ ಶೆಟ್ಟಿಯವರು ಗುಜರಾತಿ ಮಕ್ಕಳಿಗೆ ಗುಜರಾತಿಯಲ್ಲಿ ಯಕ್ಷಗಾನದ ಕಲೆಯನ್ನು ಕಲಿಸಲಿದ್ದಾರೆ ಕಲಾವಿದರಿಗೆ, ಕಲೆಗೆ ನಾವು ಸದಾ ಸಹಕಾರ ನೀಡೋಣಾ ಇಂತಹ ಉತ್ತಮ ಕಾರ್ಯಗಳನ್ನು ಮಾಡಿದಾಗ ನಾವು ನಂಬಿದ ದೈವ ದೇವರು ನಮಗೆ ಸದಾ ಆಶೀರ್ವಾದ ನೀಡುತ್ತಾರೆ ಕಟೀಲು ಸದಾನಂದ ಶೆಟ್ಟಿಯವರು ಯಕ್ಷಗಾನದ ಕಲೆಯನ್ನು ಕಲಿಸಿ ಧನ್ಯರಾಗಿದ್ದಾರೆ ಅವರಿಗೆ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹ ಸದಾ ಇರಲಿ ಎಂದರು.




ಯಕ್ಷಕಲಾ ವೇದಿಕೆಯ ಗೌರವ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಿರೆ ಶ್ರೀಧರ ಶೆಟ್ಟಿಯವರ ಸ್ಮರಣಾರ್ಥ ಅವರ ಪತ್ನಿ ಉಷಾ ಶ್ರೀಧರ ಶೆಟ್ಟಿ ಮತ್ತು ಪುತ್ರ ಪೃಥ್ವಿರಾಜ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಕಟೀಲು ಮೇಳದ ಖ್ಯಾತ ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ ಅವರಿಗೆ ನೀಡಿ ಸನ್ಮಾನಿಸಿದರೆ ಯಕ್ಷಕಲಾ ಪೋಷಕ ಪ್ರಶಸ್ತಿಯನ್ನು ವಸಯಿ ಕರ್ನಾಟಕ ಸಂಘಭಾರತೀಯ ಭಾರತೀಯದಿಂದ ಮಾಜಿ ಅಧ್ಯಕ್ಷ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ಸಲಹೆಗಾರರಾದ ಓ.ಪಿ.ಪೂಜಾರಿ ದಂಪತಿಗೆ ನೀಡಿ ಸನ್ಮಾನಿಸಲಾಯಿತು. ಹಾಗೂ ಸಂಸ್ಥೆಯ ಪ್ರತಿಭಾವಂತ ಬಾಲ ಕಲಾವಿದರಾದ ರೋಹನ್ ಎಚ್. ಶೆಟ್ಟಿ, ತ್ರಿಶಾನ್ ಎಚ್. ಶೆಟ್ಟಿ, ಲಾಸ್ಯ ಎಚ್.ಶೆಟ್ಟಿ, ವೈಷ್ಣವಿ ಎಸ್. ಶೆಟ್ಟಿ, ಲಿಖಿತ ಪಿ. ಶೆಟ್ಟಿ ಇವರಿಗೆ ಯಕ್ಷಕಲಾ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು, ಶ್ರೀ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಯಕ್ಷ ಗುರು ಕಟೀಲು ಸದಾನಂದ ಶೆಟ್ಟಿಯವರನ್ನು ಗುರು ದಕ್ಷಿಣೆ ನೀಡಿ ಸನ್ಮಾನಿಸಲಾಯಿತು.
ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ , ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಅಧ್ಯಕ್ಷ ಶೇಖರ ಪೂಜಾರಿ, ಅನಿತಾ ಬುನ್ನನ್, ಭಾರತಿ ಶೆಟ್ಟಿ, ಕುಸುಮ ಸುವರ್ಣ, ಹರೀಶ್ ಶೆಟ್ಟಿ, ಹರಿ ಪ್ರಸಾದ್ ಶೆಟ್ಟಿ, ಕುಸುಮ ಶೆಟ್ಟಿ ಇವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ದಾನಿಗಳನ್ನು ಭಾಸ್ಕರ ಶೆಟ್ಟಿ, ರವಿ ನಾಯ್ಕ್, ಶಂಕರ ಅಳ್ವ, ದಯಾನಂದ ಪೂಜಾರಿ, ಜಗನ್ನಾಥ ಶೆಟ್ಟಿ, ಕರುಣಾಕರ ಅಮೀನ್, ಭಾಸ್ಕರ ಮೂಲ್ಯ, ರಮೇಶ್ ಉದ್ಯಾವರ, ಕಣಾಂಜಾರ್ ಪ್ರವೀಣ್ ಶೆಟ್ಟಿ, ಕರುಣಾಕರ ಶೆಟ್ಟಿ, ಹಾಗೂ ದಾನಿಗಳನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಕಲೆಯ
ಸನ್ಮಾನ ಪತ್ರವನ್ನು ಸುರೇಖಾ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಒದಿದರು, ದಾನಿಗಳ ಯಾದಿಯನ್ನು ಕುಸುಮ ಸುವರ್ಣ ಒದಿದರು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಅನಿತಾ ಬುನ್ನನ್ ವಂದಿಸಿದರು.
ಸನ್ಮಾನಿತರ ಮಾತು
ಕರ್ನಿರೆ ದಿ. ಶ್ರೀಧರ ಶೆಟ್ಟಿಯವರ ಪ್ರೇರಣೆಯಿಂದಾಗಿ ನಾನು ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಪದವನ್ನು ಸ್ವೀಕರಿಸಿರುವೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯಕ್ಕಾಗಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯನ್ನು ಸ್ಥಾಪಿಸಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಮಕ್ಕಳನ್ನು ಯಕ್ಷಗಾನ ಕಲಾವಿದರನ್ನಾಗಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ ನಮ್ಮ ಸಂಸ್ಥೆಯ ಮಕ್ಕಳು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ತಾಯ್ನಾಡಿನಲ್ಲಿ ಯಕ್ಷಗಾನದ ಪ್ರದರ್ಶನವನ್ನು ನೀಡಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವರು. ಇಂದು ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಮೂಲಕ ಕರ್ನಿರೆ ಶ್ರೀಧರ ಶೆಟ್ಟಿಯವರ ಹೆಸರಿನಲ್ಲಿ ನೀಡಿದ ಈ ಪ್ರಶಸ್ತಿ ನನಗೆ ಅಸ್ಮರಣೀಯ ಶ್ರೀಧರ್ ಶೆಟ್ಟಿಯವರ ಹೆಸರಿನಲ್ಲಿ ಅವರ ಪತ್ನಿ ಉಷಾ ಶೆಟ್ಟಿಯವರಿಗೆ ಇನ್ನಷ್ಟು ಪ್ರಶಸ್ತಿಗಳನ್ನು ನೀಡುವ ಸೌಭಾಗ್ಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಕರುಣಿಸಲಿ — ಯಕ್ಷಕಲಾ ಪೋಷಕ ಪ್ರಶಸ್ತಿ ವಿಜೇತ ( ಓ.ಪಿ.ಪೂಜಾರಿ )
ಮಹಾನಗರದಲ್ಲಿ ನನ್ನನ್ನು ಪ್ರಥಮವಾಗಿ ಗುರುತಿಸಿ ಸನ್ಮಾನಿಸಿದ ಈ ಸಂಸ್ಥೆಗೆ ನಾನು ಚಿರ ಋಣಿ, ಕಲೆಯನ್ನು ಅರಾಧಿಸಿ ಕಲೆಗೆ ಪ್ರೋತ್ಸಾಹ ನೀಡುವ ಮುಂಬಯಿ ಕಲಾ ಪೋಷಕರು ಮಳೆಗಾಲದ ಸಂದರ್ಭದಲ್ಲಿ ಹೊಟ್ಟೆಗೆ ಅನ್ನ ನೀಡುವವರು ಈ ಸನ್ಮಾನ ನನಗೆ ಮುಂದಿನ ಜೀವನಕ್ಕೆ ದಾರಿ ದೀಪವಾಗಲಿ – ಯಕ್ಷರತ್ನ ಕಲಾ ಪ್ರಶಸ್ತಿ ವಿಜೇತ ದೇವಿಪ್ರಸಾದ್ ಅಳ್ವ ತಲಪಾಡಿ