April 1, 2025
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮವು ನವೆಂಬರ್ 25 ರ ಶನಿವಾರ ಬೆಳಗ್ಗೆ 6:30 ಕ್ಕೆ ಆರಂಭವಾಗಿ ನವೆಂಬರ್ 26 ರ ರವಿವಾರ ಬೆಳಿಗ್ಗೆ 6.30 ರ ತನಕ ಸ್ಥಳೀಯ ಭಜನಾ ಮಂದಿರದ ಒಟ್ಟಿಗೆ ಒಟ್ಟು 25 ಮಂಡಳಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಯಾಗಲು ಸಹಕರಿಸಿದರು. ಪ್ರಾರಂಭದಲ್ಲಿ ಅರ್ಚಕರಾದ ಶ್ರೀ ಹರೀಶ್ ಪದ್ಮಶಾಲಿರವರು ಶ್ರೀ ಮಹಾವಿಷ್ಣು ದೇವರಿಗೆ ಪೂಜೆ ಸಲ್ಲಿಸಿ, ಕಳಸ ಪ್ರತಿಷ್ಠೆ ಮಾಡಿದರು. ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆಗೆ ಅತಿಥಿ ಗಣ್ಯರಾಗಿ ಶ್ರೀಧರ್ ಅಮೀನ್ (ಉಪ ಕಾರ್ಯಾಧ್ಯಎಕ್ಷರು , ಬಿಲ್ಲವರ ಅಸೋಸಿಯೇಷನ್ ಮುಂಬೈ , ಡೊಂಬಿವಲಿ ಸ್ಥಳೀಯ ಸಮಿತಿ ) , ಶ್ರೀ ಕುಸಲ್ ಕೋಟ್ಯಾನ್ ( ಸಮಾಜ ಸೇವಕರು) ಭಾಗವಹಿಸಿದರು ಅವರೊಂದಿಗೆ ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್ , ಮಂದಿರದ ಕೋಶಾಧಿಕಾರಿ ಪ್ರವೀಣ್ ಶೆಟ್ಟಿ , ಮಂದಿರದ ಭುವಾಜಿ ಶ್ರೀ ಅರವಿಂದ್ ಪದ್ಮಶಾಲಿ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಅತಿಥಿ ಗಣ್ಯರುಗಳಿಗೆ ಪುಷ್ಪ ಹಾಗು ಸಾಲು ಹಾಕಿ ಪ್ರಸಾದ ನೀಡಿ ಗೌರವಿಸಲಾಯಿತು.

ಏಕಾಹ ಭಜನಾ ಕಾರ್ಯಕ್ರಮದಲ್ಲಿ ಸ್ಥಳೀಯ ಮಂಡಳಿಯೊಂದಿಗೆ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಲಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ, ತುಳು ವೆಲ್ಫೇರ್ ಅಸೋಸಿಯೇಶನ್ ಸಂಚಾಲಕತ್ವದ ಶ್ರೀ ಲಕ್ಷ್ಮಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಐರೋಲಿ, ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ ಮೀರಾರೋಡ್, ಬಿಲ್ಲವರ ಅಸ್ಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿ, ಶ್ರೀ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಶ್ರೀ ದುರ್ಗಾಪರಮೇಶ್ವರಿ ಮಂದಿರ ನವಿ ಮುಂಬೈ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್, ಶ್ರೀ ಕಲ್ಕಿ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಭ್ರಮರಾಂಬಿಕಾ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್, ಶ್ರೀ ಶನೀಶ್ವರ ದೇವಸ್ಥಾನ ನೆರೋಲ್ , ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಯಶಸ್ವಿ ಭಜನಾ ಮಂಡಳಿ , ಡೊಂಬಿವಲಿ, ಅಮೃತಾನಂದಮಯಿ ಭಜನಾ ಮಂಡಳಿ, ಡೊಂಬಿವಲಿ , ಅಯ್ಯಪ ಭಕ್ತ ಭಜನಾ ಮಂಡಳಿ, ಡೊಂಬಿವಲಿ , ಶಬರಿ ಭಜನಾ ಮಂಡಳಿ , ಡೊಂಬಿವಲಿ, ಸದ್ಗುರು ಕೃಷ್ಣ ಭಜನಾ ಮಂಡಳಿ, ವಿಲೇ ಪಾರ್ಲೆ, ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕಾ ಮುಂತಾದ ಭಜನಾ ಮಂಡಳಿಗಳು ಭಜನಾ ಸೇವೆಯನ್ನು ನೀಡಿ ಸಹಕರಿಸಿದರು.

ಭಜನಾ ಮಂಗಲೋತ್ಸವಕ್ಕೆ ಧನ ಹಾಗೂ ವಸ್ತು ರೂಪದಲ್ಲಿ ಸಹಕರಿಸಿದವರಿಗೆ ಶಾಲು ಹಾಗು ಪ್ರಸಾದ ನೀಡಿ ಗೌರವಿಸಲಾಯಿತು, ಮಧ್ಯಾಹ್ನ ಹಾಗು ರಾತ್ರಿ ಅನ್ನದಾನ ಸೇವೆಯು ನೆರವೇರಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಯಾ ಪದಾಧಿಕಾರಿಗಳು , ಗಣ್ಯರು, ಭಕ್ತಾದಿಗಳು ಹಾಗು ಮಂದಿರದ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ರವಿವಾರ ಬೆಳಿಗ್ಗೆ ಕಾರ್ಯಕ್ರಮದ ಕೊನೆಯಲ್ಲಿ ದೇವರಿಗೆ ಮಹಾ ಮಂಗಳಾರತಿ ನೆರವೇರಿತು ಹಾಗು ಏಕಾಹ ಭಜನೆಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಧನ್ಯವಾದ ಸಮರ್ಪಿಸಿದರು.

.

.

.

.

Related posts

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ವಿವಿಧ ಶನಿಮಂದಿರದವರಿಂದ ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

ಮೀರಾ -ದಹಣು ಬಂಟ್ಸ್ ವತಿಯಿಂದ ಆಟಿದ ಕೂಟ -2024 ಕಾರ್ಯಕ್ರಮ

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆ ಸಂಪನ್ನ

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಕುಲಾಲ ಸಂಘ ಮುಂಬಯಿ ಇದರ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಮೀರಾರೋಡ್ ಪೂರ್ವದ ಶ್ರೀ ರಾಧಾ ಕೃಷ್ಣ ವೃದ್ಧಾಶ್ರಮಕ್ಕೆ ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗ ಭೇಟಿ

Mumbai News Desk