
ಸಮಸ್ತ ಕನ್ನಡ ಮನಸ್ಸು ಗಳನ್ನು ಒಗ್ಗೂಡಿಸುವದೆ ಡೊಂಬಿವಲಿ ಕರ್ನಾಟಕ ಸಂಘದ ಮಹದಾಸೆ. – ಸುಕುಮಾರ ಎನ್ ಶೆಟ್ಟಿ.
ಚಿತ್ರ, ವರದಿ : ರವಿ ಬಿ ಅಂಚನ್ ಪಡುಬಿದ್ರಿ
ಡೊಂಬಿವಲಿ 3- ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕ್ರೀಡೆ ಗಳ ಮುಖಾಂತರ ಸಮಸ್ತ ಕನ್ನಡ ಮನಸ್ಸು ಗಳನ್ನು ಒಗ್ಗೂಡಿಸುವ ಮಹದಾಸೆ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆ ಗೆ ಪಾತ್ರವಾದ ಡೊಂಬಿವಲಿ ಕರ್ನಾಟಕ ಸಂಘದ್ದಾಗಿದೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ ಹೇಳಿದ್ದಾರೆ, ಅವರು ಡಿಸೆಂಬರ್ 3ರಂದು ಬೆಳಿಗ್ಗೆ ಡೊಂಬಿವಲಿ ಪೂರ್ವದ ಮಂಜುನಾಥ್ ವಿಧ್ಯಾಲಯದ ಸಭಾಗೃಹದಲ್ಲಿ ಸಂಘದ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಹಾಗೂ ಚೇಸ್ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಜ್ಯೋತಿ ಬೆಳಗುವದರ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.

ಅನೇಕ ವರ್ಷಗಳ ಹಿಂದೆ ನಮ್ಮ ಸಂಘದ ವತಿಯಿಂದಾ ಪ್ರಾರಂಭವಾದ ವಾರ್ಷಿಕ ಕೇರಮ್ ಹಾಗೂ ಚೇಸ್ ಸ್ಪರ್ದೆಯ ಪ್ರಾರಂಭದಲ್ಲಿ ನಾಲ್ವತ್ತ ರಿಂದ ಐವತ್ತು ಸ್ಪರ್ದಾಳುಗಳು ಭಾಗವಹಿಸುತ್ತಿದ್ದರು ಆದರೆ ಇಂದು 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ವಿಶೇಷವಾಗಿ ಯುವ ಸಮುದಾಯ ಭಾಗವಹಿಸಿದ್ದು ಸಂತಸ ತಂದಿದೆ ಅಷ್ಟೇ ಅಲ್ಲಾ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವದರ ಡೊಂಬಿವಲಿ ಕರ್ನಾಟಕ ಸಂಘದ ಭವಿಷ್ಯದ ಸಾರಥಿಗಳಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದ ಸುಕುಮಾರ ಎನ್ ಶೆಟ್ಟಿ ಅವರು ಕೇರಮ್ ಹಾಗೂ ಚೇಸ್ ಕ್ರೀಡೆಗಳಲ್ಲಿ ನಮ್ಮ ಮೆದುಳಿನ ಕಾರ್ಯ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಇಂತಹ ಕ್ರೀಡೆಗಳ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು ಎಂದು ಕರೆ ನೀಡಿದ ಸುಕುಮಾರ ಎನ್ ಶೆಟ್ಟಿ 2023- 2026 ನೇ ಸಾಲಿನ ಅವಧಿಗಾಗಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರನ್ನಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸರ್ವರಿಗೂ ಹೃದಯಾಂತರಾಳದ ಕೃತಜ್ಞತೆ, ಹಾಗೂ ಒಡೆಯ ಶ್ರೀ ಮಂಜುನಾಥ ಸ್ವಾಮಿ ಯ ಶ್ರೀರಕ್ಷೆ ಹಾಗೂ ನಿಮ್ಮೆಲ್ಲರ ಸಹಕಾರ ದಿಂದಾ ಸಂಘವನ್ನು ಬಾನೆತ್ತರಕ್ಕೆ ಬೇಳೆಸುವ ನಿಟ್ಟಿನಲ್ಲಿ ಯಶಸ್ವಿಯಾಗುವದಾಗಿ ಹೇಳಿ, ಇಂದು ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್ ಶೆಟ್ಟಿ ಹಾಗೂ ಕಾರ್ಯದರ್ಶಿ ರವಿ ಸನಿಲ್ ಅವರ ಅವಿರತ ಪರಿಶ್ರಮ ದಿಂದಾ ಕ್ರೀಡಾ ಕೂಟ ಯಶಸ್ವಿಯಾಗಿ ನಡೆದಿದೆ, ಕರ್ನಾಟಕ ಸಂಘ ನಮ್ಮ ಒಂದು ಪರಿವಾರ ಇದ್ದಂತೆ ಆದ್ದರಿಂದ ಈ ಸ್ಪರ್ಧೆಯನ್ನು ಒಂದು ಪಾರಿವಾರಿಕ ಸ್ಪರ್ದೆ ಎಂದು ಭಾವಿಸ ಬೇಕು ಎಂದು ಕರೆ ನೀಡಿ ಶುಭಕೋರಿದರು.

ಕ್ರೀಡಾ ಸ್ಪರ್ದೆಯನ್ನು ಉದ್ದೇಸಿಸಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು- ಸಂಘದ ನೂತನ ಕಾರ್ಯಕಾರಿ ಮಂಡಳಿ ಬಂದ ನಂತರ ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್ ಶೆಟ್ಟಿ ಹಾಗೂ ಕಾರ್ಯದರ್ಶಿ ರವಿ ಸನಿಲ್ ಅವರ ಸಾರಥ್ಯದ ಇಂದು ಮೂದಲ್ ಕ್ರೀಡಾ ಸ್ಪರ್ಧೆ, ನೂತನ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲರೂ ಈ ಹಿಂದೆ ವಿವಿಧ ವಿಭಾಗಗಳಲ್ಲಿ ಅಪ್ರತಿಮವಾಗಿ ಕಾರ್ಯ ನಿರ್ವಹಿಸಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಕಾರ್ಯ ನಿರ್ವಹಿಸುವ ವಿಶ್ವಾಸ ನನಗಿದ್ದು ಒಡೆಯ ಶ್ರೀ ಮಂಜುನಾಥ ಸ್ವಾಮಿ ಯ ಶ್ರೀರಕ್ಷೆ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಅಮೂಲ್ಯ ಸಹಾಯ ಸಹಕಾರ ದಿಂದಾ ಸಂಘದ ಎಲ್ಲ ಯೋಚನೆಗಳು ಯೋಜನೆಗಳಾಗಿ ಪರಿವರ್ತನೆ ಹೊಂದಿ ಯಶಸ್ವಿಯಾಗುವ ವಿಶ್ವಾಸ ತಮಗಿದೆ ಎಂದು ಹೇಳಿ ಶುಭಕೋರಿದರು.

ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್ ಶೆಟ್ಟಿ ಅವರು- ಡೊಂಬಿವಲಿ-ಠಾಕುರ್ಲಿ ಪರಿಸರದ ಸಮಸ್ತ ಕನ್ನಡ ಮನಸ್ಸು ಗಳ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಕ್ರೀಡಾ ವಿಭಾಗ ಕೇರಮ್ ಹಾಗೂ ಚೇಸ್ ಸ್ಪರ್ದೆಯನ್ನು ಎರ್ಪಡಿಸಿದ್ದು ಇದಕ್ಕೆ ಸಂಘದ ಆಡಳಿತ ಮಂಡಳಿಯ ಸಹಾಯ ಸಹಕಾರ ಹಾಗೂ ಮಾರ್ಗದರ್ಶನವೇ ಕಾರಣವಾಗಿದ್ದು, ಇಂದಿನ ಈ ಸ್ಪರ್ದೆಗಳ ಫಲಿತಾಂಶವನ್ನು ಡಿಸೆಂಬರ್ 10 ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆಯಲಿರುವ ಸಂಘದ ನಾಡಹಬ್ಬ ಸಮಾರಂಭದಲ್ಲಿ ಘೋಸಿಸಿ, ವಿಜೇತರಿಗೆ ಪಾರಿತೋಷಕ ನೀಡಿ ಗೌರವಿಸಲಾಗುವದು ಎಂದು ಹೇಳಿ ಪ್ರತಿಯೋಬ್ಬರೂ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು, ಸೋಲೇ ಗೆಲುವಿನ ಸೋಪಾನ ಎಂಬುದನ್ನು ಮರೆಯಬಾರದು ಎಂದು ಹೇಳಿ ಶುಭಕೋರಿದರು.

ಈ ಸ್ಪರ್ದೆಗಳಿಗೆ ತೀರ್ಪುಗಾರರಾಗಿ ಅರುಣ ಮಹಾಜನ್ ಹಾಗೂ ಅಶೋಕ ಜಗತಾಪ ಕಾರ್ಯ ನಿರ್ವಹಿಸಿ ದರು. ವೇದಿಕೆಯ ಮೇಲೆ ಗಣ್ಯರಾದ ಸುಕುಮಾರ ಎನ್ ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ, ಲೋಕನಾಥ ಎ ಶೆಟ್ಟಿ, ದಿನೇಶ್ ಕುಡ್ವ, ತಾರಾನಾಥ ಅಮೀನ್, ಪ್ರಭಾಕರ ಆರ್ ಶೆಟ್ಟಿ ಉಪಸ್ತಿತರಿದ್ದರು. ಕ್ರೀಡಾ ವಿಭಾಗದ ಕಾರ್ಯದರ್ಶಿ ರವಿ ಸನಿಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆನಂದ ಡಿ ಶೆಟ್ಟಿ ಎಕ್ಕಾರು, ವಸಂತ ಸುವರ್ಣ, ರಮೇಶ ಎ ಶೆಟ್ಟಿ, ಡಾ ದಿಲೀಪ್ ಕೊಪರ್ಡೆ,ಜಗನ್ನಾಥ ಶೆಟ್ಟಿ, ಯೋಗಿನಿ ಶೆಟ್ಟಿ ಮುಂತಾದವರು ಉಪಸ್ತಿತರಿದ್ದರು. ಜಗಜ್ಯೋತಿ ಕಲಾವೃಂದದ ಸಂತೋಷ ಶೆಟ್ಟಿ, ಚಂದ್ರ ನಾಯಕ,ಸಂಘದ ಮುಖ್ಯಾಲಯದ ಸಿಬ್ಬಂದಿ ರಮೇಶ ಸುವರ್ಣ ಮುಂತಾದವರು ಕ್ರೀಡಾ ಸ್ಪರ್ದೆಯ ಯಶಸ್ಸಿಗೆ ಸಹಕರಿಸಿದರು.