April 1, 2025
ಲೇಖನ

ಭಾರತ – ಚೀನಾ 62 ರ ಯುದ್ಧದನೆನಪುಗಳ ಅರುಣಾಚಲಕ್ಕೊಂದು ಸುತ್ತು

ಭಾರತ – ಚೀನಾ 62 ರ ಯುದ್ಧದ ನೆನಪುಗಳ ಅರುಣಾಚಲಕ್ಕೊಂದು ಸುತ್ತು

ಚಿತ್ರಲೇಖನ : ಶ್ರೀನಿವಾಸ ಜೋಕಟ್ಟೆ


ಅರುಣಾಚಲ ಪ್ರದೇಶ ಭಾರತದಲ್ಲಿ ಮೊದಲಿಗೆ ಸೂರ್ಯೋದಯವಾಗುವ ರಾಜ್ಯ. ಈ ರಾಜ್ಯದ 60 ಶೇಕಡಾ ಭೂಮಿಯಲ್ಲಿ ಅರಣ್ಯವಿದೆ. ನದಿಗಳು, ಜಲಪಾತಗಳು, ಎತ್ತರದ ಪರ್ವತಗಳು, ವನ್ಯ ಪ್ರಾಣಿಗಳು, ಅಪರೂಪದ ವನೌಷಧಿಗಳು, ಬೌದ್ಧ ಮಠ ಪ್ರವಾಸಿಗರನ್ನು ಮತ್ತೆ ಮತ್ತೆ ಕರೆಯುತ್ತವೆ. ಇಲ್ಲಿನ ಜನರು ಪ್ರಾಕೃತಿಕ ಶಕ್ತಿಗಳಲ್ಲಿ ವಿಶೇಷ ಶ್ರದ್ಧೆ ಇರಿಸಿದ್ದಾರೆ. 25ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ಇಲ್ಲಿ ಕಾಣಸಿಗುತ್ತಾರೆ. ಪ್ರವಾಸಿಗರ ಮುಖ್ಯ ಪರ್ಯಟನ ಸ್ಥಳವೇ ತವಾಂಗ್. 16 ಆಡಳಿತಾತ್ಮಕ ಜಿಲ್ಲೆಗಳಲ್ಲಿ ತವಾಂಗ್ ಚಿಕ್ಕದು. ಆದರೆ ಬೌದ್ಧಗುರು 14 ನೇ ದಲಾಯಿಲಾಮಾ ಟಿಬೇಟ್‌ನಿಂದ ತಪ್ಪಿಸಿಕೊಂಡು ಭಾರತಕ್ಕೆ ಆ ದಿನಗಳಲ್ಲಿ ಓಡಿಬಂದದ್ದು ಮೊದಲಿಗೆ ತವಾಂಗ್‌ಗೆ. ಇಲ್ಲಿನ ಹವೆಯೂ ತಣ್ಣಗಿದೆ. ದಿರಾಂಗ್, ಬೊಮ್‌ಡಿಲಾ, ಟಿಪಿ, ಭಾಲುಕ್‌ಪೊಂಗ್, ರಾಜಧಾನಿ ಇಟಾನಗರ, ದಾಪೊರಿಜೋ, ಪಾಸೀ ಘಾಟ್, ಜೀರೋ…..ಇವೆಲ್ಲ ಅರುಣಾಚಲದ ಅನ್ಯ ಪ್ರವಾಸಿ ಸ್ಥಳಗಳು. ನಮ್ಮ ದೇಶದ ಪರ್ಯಟಕರಿಗೂ ಅರುಣಾಚಲ ಪ್ರದೇಶಕ್ಕೆ ಬರಬೇಕಾದರೆ ‘ಇನ್ನರ್ ಲೈನ್’ ಪರ್ಮಿಟ್ ಪಡೆಯಬೇಕಾಗುತ್ತದೆ. ಚೀನಾ ಜೊತೆಗಿನ 1962 ರ ಯುದ್ಧದ ನೆನಪುಗಳನ್ನು ಮತ್ತೆ ಕೆದಕುವಂತಹ ಪರಿಸ್ಥಿತಿಯ ಅರುಣಾಚಲದಲ್ಲಿ ಇಂದಿಗೂ ಪ್ರವಾಸಿಗರು ಅಂದಿನ ಸೈನಿಕರ ಸಾಹಸದ ಕತೆಗಳನ್ನು ನೋಡಬಹುದಾದ ತವಾಂಗ್ ವಾರ್ ಮೆಮೋರಿಯಲ್, ಸೆಲ್ಲಾಪಾಸ್‌ನ ಜಸ್‌ವಂತ್ ಘರ್…..ಇವೆಲ್ಲವನ್ನು ವೀಕ್ಷಿಸುವಾಗ ಚೀನಾದ ವಿರುದ್ಧ ಸಹಜವಾಗಿಯೇ ರೋಷಗೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.
ಅಸ್ಸಾಂನ ಗುವಾಹಟಿಯಿಂದ ಮೇಘಾಲಯ ರಾಜ್ಯದ ಪ್ರಮುಖ ಸ್ಥಳಗಳನ್ನು ಸುತ್ತಾಡಿ ನಮ್ಮ ಇನೋವಾ ಕಾರು ಅರುಣಾಚಲವನ್ನು ಪ್ರವೇಶಿಸಿತು. ಟಿಪಿ, ವೆಸ್ಟ್ ಕಮೆಂಗ್, ದಾಟಿ ಬೊಮ್‌ಡಿಲಾಕ್ಕೆ ಬರುವಾಗ ಕತ್ತಲಾಯಿತು. ಅಲ್ಲಿ ಒಂದು ರಾತ್ರಿ ಉಳಿಯಲೇ ಬೇಕು. ಮರುದಿನ ಬೆಳಿಗ್ಗೆ ನಮ್ಮ ಪಯಣ ತವಾಂಗ್ ಕಡೆ ಹೊರಟಿತು. ಬೆಳಿಗ್ಗೆ ಹೊರಟರೆ ತವಾಂಗ್‌ಗೆ ರಾತ್ರಿ ತಲುಪುವುದು ಎಂದು ಮೊದಲೇ ಡ್ರೆöÊವರ್ ಹೇಳಿದ್ದ. ಬೊಮ್‌ಡಿಲಾದಲ್ಲಿ ಬೇಗನೆ ಎದ್ದು ಒಂದಿಷ್ಟು ತಿರುಗಾಡಿ ನಮ್ಮ ಕಾರು ತವಾಂಗ್‌ನತ್ತ ಹೊರಟಿತು.
ದಾರಿಯಲ್ಲಿ ದಿರಂಗ್‌ನ ಪ್ರೇಕ್ಷಣೀಯ ತಾಣಗಳನ್ನು, ಕಿವಿ ಗಾರ್ಡನ್‌ಗಳನ್ನು (ಅರುಣಾಚಲದಲ್ಲಿ ಬೆಳೆಯುವ ಒಂದು ವಿಶೇಷವಾದ ಹಣ್ಣಿನ ಉದ್ಯಾನ) ವೀಕ್ಷಿಸಿ ಮುಂದೆ ಹೋಗುವಾಗ ಭಾರತ – ಚೀನಾ ನಡುವೆ 1962 ರ ಯುದ್ಧದ ನೆನಪುಗಳನ್ನು ಬಿಚ್ಚಿಡುವ ಮೀರಯೋಧರ ಸಾಹಸದ ಕತೆಗಳೂ ಎದುರಾಗತೊಡಗಿತು.
ಯಾವಾಗಿನಿಂದ ದಲಾಯಿಲಾಮಾ ಭಾರತಕ್ಕೆ ತವಾಂಗ್ ಮೂಲಕ ಒಳ ಬಂದರೋ ಅಂದಿನಿAದ ಚೀನಾ ದೇಶಕ್ಕೆ ಭಾರತದ ಮೇಲೆ ದಲಾಯಿಲಾಮಾರಿಗೆ ಆಶ್ರಯ ನೀಡಿದ್ದಕ್ಕೆ ಸಿಟ್ಟಿದೆ. ಅರುಣಾಚಲವನ್ನು ತನ್ನ ದೇಶದ ಭಾಗ ಎಂದು ಚೀನಾ ಆಗಾಗ ನಕ್ಷೆಯ ಮೂಲಕ ಆಟವಾಡುತ್ತಾ ಬಂದಿದೆ. ಇದೀಗ 2017 ರಲ್ಲಿ ಮತ್ತೆ ಚೀನಾ – ಭಾರತ ನಡುವಿನ ಗಡಿ ವಿವಾದ ಜೋರಾಗಿದೆ.

-2-
{ಇನ್ನೊಂದೆಡೆ ಸಿಕ್ಕಿಮ್‌ನಲ್ಲಿರುವ ಡೋಕಲಾಮ್‌ನ ಕ್ಷೇತ್ರ ಭಾರತ – ಚೀನಾ – ಭೂತಾನ್ ನಡುವೆ ವಿವಾದಕ್ಕೆ ಕಾರಣವಾಗಿದೆ.} ಒಂದೊಮ್ಮೆ ತವಾಂಗ್ ಟಿಬೇಟ್ ಆಡಳಿತಕ್ಕೆ (ಲ್ಹಾಸಾ) ಒಳಪಟ್ಟಿದ್ದರೆ ಬ್ರಿಟಿಷರು ಅದನ್ನು ಭಾರತಕ್ಕೆ ಸೇರಿಸಿದ್ದರು. ಆವಾಗ ಟಿಬೇಟ್‌ನ್ನು ಚೀನಾ ಆಕ್ರಮಿಸಿರಲಿಲ್ಲ. ಟಿಬೇಟ್‌ನ್ನು ಚೀನಾ ಆಕ್ರಮಿಸಿಕೊಂಡ ನಂತರ, ಹದಿನಾಲ್ಕನೆಯ ದಲಾಯಿಲಾಮಾ 1959 ರಲ್ಲಿ ಭಾರತದ ತವಾಂಗ್ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಒಳಬಂದ ಘಟನೆಯ ನಂತರ ಭಾರತದ ಮೇಲೆ ಸಿಟ್ಟುಗೊಂಡ ಚೀನಾಕ್ಕೆ ಅರುಣಾಚಲದ ತವಾಂಗ್ ಮೇಲೆ ಅದರ ಕೆಂಗಣ್ಣು ಬಿದ್ದಿದೆ. 1962 ರಲ್ಲಿ ಚೀನಾ ಸೇನೆ ಅರುಣಾಚಲದ ಗಡಿ ಪ್ರದೇಶದಿಂದ ಒಳಬಂದದ್ದು ಮಾತ್ರವಲ್ಲ, ಅಸ್ಸಾಮ್ ತನಕವೂ ನುಗ್ಗಿತ್ತು. ಆ ದಿನಗಳ ನಮ್ಮ ಹೋರಾಟವನ್ನು ಬೊಮ್‌ಡಿಲಾದಿಂದ ತವಾಂಗ್‌ಗೆ ಹೋಗುವ ದಾರಿಯಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅದುವೇ ಸೆಲ್ಲಾಪಾಸ್ ಬಳಿಯ ‘ಜಸ್ವಂತ್ ಗೃಹ’.
ಸೆಲ್ಲಾಪಾಸ್ ಬಳಿ ‘ಜಸ್ವಂತ್ ಸಿಂಗ್ ಯುದ್ಧ ಸ್ಮಾರಕ’ ಇದ್ದರೆ, ಅದೇ ರೀತಿ ತÀವಾಂಗ್ ಪಟ್ಟಣದಲ್ಲಿ ‘ತವಾಂಗ್ ವಾರ್ ಮೆಮೋರಿಯಲ್’ ಕೂಡಾ ಇದೆ. ಇವೆರಡೂ 1962 ರ ಭಾರತ – ಚೀನಾ ಯುದ್ಧದ ಅಂದಿನ ದೃಶ್ಯಗಳನ್ನು ನೆನಪಿಸುವುದು. ಅರುಣಾಚಲ ಪ್ರದೇಶಕ್ಕೆ ತೆರಳುವ ಪ್ರವಾಸಿಗರು ಈ ಯುದ್ಧ ಸ್ಮಾರಕಗಳನ್ನು ನೋಡದೆ ಮುಂದೆ ಹೋಗಲಾರರು.
ಅರುಣಾಚಲದ ತವಾಂಗ್‌ನಿAದ ನೂರು ಕಿ.ಮೀ. ಮೊದಲಿಗೆ ನ್ಯೂಕಮಾಡೊಂಗ್‌ನಲ್ಲಿ 1962 ರಲ್ಲಿ ನಡೆದ ಚೀನಾ – ಭಾರತ ಯುದ್ಧದಲ್ಲಿ [18 ನವಂಬರ್ 1962 ರಂದು] ಬ್ರಿಗೇಡಿಯರ್ ಹೋಶಿಯಾರ್ ಸಿಂಗ್ ನೇತೃತ್ವ ವಹಿಸಿದ್ದರು. ಈ ಯುದ್ಧದಲ್ಲಿ ನಮ್ಮ 862 ಸೈನಿಕರು ಶಹೀದ್‌ಗಳಾದರು.
ಇವರ ಸ್ಮರಣಾರ್ಥ ನ್ಯೂಕಮಾಡೊಂಗ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಗುವಾಹಟಿಯಿಂದ ಬೊಮ್‌ಡಿಲಾ ಮೂಲಕ ತವಾಂಗ್‌ಗೆ ತೆರಳುವ ರಸ್ತೆಯಲ್ಲಿ ಸುಮಾರು ಹನ್ನೆರಡು ಸಾವಿರ ಅಡಿ ಎತ್ತರದಲ್ಲಿ ‘ಜಸ್‌ವಂತ್ ಯುದ್ಧ ಸ್ಮಾರಕ’ ಭಾರತ ಮತ್ತು ಚೀನಾದ ನಡುವಿನ ಅಂದಿನ ಯುದ್ಧದ ನೆನಪುಗಳನ್ನು ಹೇಳುತ್ತದೆ.


1962 ರಲ್ಲಿ ನಡೆದ ಯುದ್ಧದಲ್ಲಿ ಶಹೀದ್ ಆಗಿರುವ ‘ಮಹಾವೀರ ಚಕ್ರ’ ವಿಜೇತ ಸುಬೇದಾರ್ ಜಸ್ವಂತ್ ಸಿಂಗ್ ರಾವತ್‌ರ ಶೌರ್ಯ ಮತ್ತು ಬಲಿದಾನದ ಯಶೋಗಾಥೆ ಇಲ್ಲಿದೆ. ತವಾಂಗ್‌ಗೆ ತೆರಳುವ ಪ್ರವಾಸಿಗರು ಈ ‘ಜಸ್ವಂತ್ ಯುದ್ಧ ಸ್ಮಾರಕ’ಕ್ಕೂ ಭೇಟಿ ನೀಡಲು ಮರೆಯುವುದಿಲ್ಲ.
1962 ರ ಯುದ್ಧದಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿದ ಜಸ್ವಂತ್ ಸಿಂಗ್‌ರ ಕಾರ್ಯದ ಕುರಿತಂತೆ ಅನೇಕರಿಗೆ ಹೆಚ್ಚು ತಿಳಿದಿಲ್ಲ. ಆದರೆ ಅವರೊಬ್ಬರೇ 72 ಗಂಟೆಗಳ ಕಾಲ ಚೀನಾ ಸೈನಿಕರ ವಿರುದ್ಧ ಹೋರಾಡಿದ್ದರು. ವಿಭಿನ್ನ ಚೌಕಿಗಳಲ್ಲಿ ಆಡಗಿ ಕುಳಿತು ಚೀನೀ ಸೈನಿಕರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದರು. ಈ ಘಟನೆ 17 ನವಂಬರ್ 1962 ರದ್ದು. ಚೀನೀ ಸೈನಿಕರು ತವಾಂಗ್‌ನಿAದ ಮುಂದೆ ನೂರಾನಾಂಗ್ ತಲುಪಿದರು. ಅದೇ ದಿನ ನೂರಾನಾಂಗ್‌ನಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಯುದ್ಧ ಜೋರಾಗಿತ್ತು. ಆ ತನಕ ಪರಮವೀರ ಚಕ್ರ ವಿಜೇತ ಜೋಗಿಂದರ್ ಸಿಂಗ್, ಲಾನ್ಸ್ ನಾಯಕ


-3-
ತ್ರಿಲೋಕಿ ಸಿಂಗ್ ನೇಗಿ ಮತ್ತು ರೈಫಲ್ ಮ್ಯಾನ್ ಗೋಪಾಲ ಸಿಂಗ್ ಗೊಸಾಯಿ ಸಹಿತ ನೂರಾರು ಸೈನಿಕರು ಶಹೀದ್‌ಗಳಾಗಿದ್ದರು. ಗಢ್‌ವಾಲ ರೈಫಲ್‌ನ ನಾಲ್ಕನೇ ಬಟಾಲಿಯನಲ್ಲಿದ್ದ ಜಸ್ವಂತ್ ಸಿಂಗ್ ರಾವತ್ ಏಕಾಂಗಿಯಾಗಿ ನೂರಾನಾಂಗ್‌ನ ಜವಾಬ್ದಾರಿ ವಹಿಸಿದ್ದರು. ಮೂರು ದಿನಗಳ ಕಾಲ ಬೇರೆ ಬೇರೆ ಬಂಕರ್‌ಗಳಿಗೆ ತೆರಳಿ ಅವರೊಬ್ಬರೇ ಗುಂಡು ಹಾರಾಟ ನಡೆಸಿದರು. ಇದನ್ನು ಕಂಡ ಚೀನೀ ಸೈನಿಕರು ಹೆದರಿದರು. ಭಾರತೀಯ ಸೇನೆಯಲ್ಲಿ ತುಂಬಾ ಸೈನಿಕರಿದ್ದಾರೆಂದು ಭ್ರಮೆ ಪಟ್ಟರು. ನಂತರ ಚೀನೀ ಸೈನಿಕರು ತಮ್ಮ ರಣನೀತಿ ಬದಲಿಸಿದರು. ಆ ಸೆಕ್ಟರ್‌ನ್ನು ನಾಲ್ಕೂ ದಿಕ್ಕಿನಿಂದ ಸುತ್ತುವರಿದರು. ಆವಾಗ ಜಸ್ವಂತ್ ಸಿಂಗ್ ಚೀನೀ ಸೈನಿಕರಿಗೆ ಸೆರೆ ಸಿಕ್ಕರು, ಶಹೀದ್ ಆದರು.
ಸೆಲಾಪಾಸ್‌ನ ‘ಜಸ್ವಂತ್ ಘರ್’
ತವಾಂಗ್ – ವೆಸ್ಟ್ ಕಾಮೆಂಗ್ ಜಿಲ್ಲೆಗಳ ಮಧ್ಯೆ ಇರುವ 4170 ಮೀಟರ್ (13,700 ಅಡಿ) ಎತ್ತರದಲ್ಲಿರುವ ‘ಸೆಲಾಪಾಸ್’ ಭಾರತ – ಚೀನಾ 1962ರ ಯುದ್ಧಕ್ಕೆ ಸಾಕ್ಷಿಯಾದ ಒಂದು ಸ್ಥಳ. ಇದು ಬೊಮ್‌ಡಿಲಾ – ದಿರಾಂಗ್‌ನ್ನೂ ಸಂಪರ್ಕಿಸುತ್ತಿದೆ. ಇಲ್ಲೇ ಸೆಲಾ ಸರೋವರವೂ ಇದೆ. ಬೋರ್ಡರ್ ರೋಡ್ಸ್ ಆರ್ಗನೈಸೇಷನ್ಸ್ ಇಲ್ಲಿನ ರಸ್ತೆ ನೋಡಿಕೊಳ್ಳುತ್ತದೆ. ಇಲ್ಲೇ ಸಮೀಪ ತವಾಂಗ್ ನದಿಯ ಉಪನದಿಯಾದ ನುರಾನಂಗ್ ನದಿಯೂ ಹರಿಯುತ್ತದೆ.
ಸೆಲಾಪಾಸ್‌ನಲ್ಲಿ 1962 ರ ಚೀನಾ ಯುದ್ಧದಲ್ಲಿ ಧೈರ್ಯದಿಂದ 72 ಗಂಟೆ ಹೋರಾಡಿದ ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕöÈತ ಜಸ್ವಂತ್ ಸಿಂಗ್ ರಾವತ್ ಅವರ ಸ್ಮರಣಾರ್ಥ ‘ಜಸ್ವಂತ್ ಘರ್’ ಯುದ್ಧ ಸ್ಮಾರಕವಿದೆ. ಆಗಿನ ಯುದ್ಧದಲ್ಲಿ ಅವರು ಏಕಾಂಗಿ ಹೋರಾಡಿದ್ದಾಗ ಸೆಲಾ ಎಂಬ ಬುಡಕಟ್ಟು ಮಹಿಳೆ ಅವರಿಗೆ ಆಹಾರ – ನೀರು ಒದಗಿಸಿದ್ದಳಂತೆ. ಇದು ನುರಾನಾಂಗ್‌ಗೆ ಸಮೀಪವಿದೆ. ಗಡ್ವಾಲ್ ರೈಫಲ್ಸ್ನ ಸೈನಿಕರು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಪ್ರಯಾಣಿಕರ ಯೋಗಕ್ಷೇಮದ ಜೊತೆ ಅತಿ ಕಡಿಮೆ ಬೆಲೆಗೆ ಚಹಾ – ತಿಂಡಿಯನ್ನು ಕೂಡಾ ಇಲ್ಲಿಯ ಮಿಲಿಟರಿ ಕ್ಯಾಂಟೀನ್ ಪ್ರವಾಸಿಗರಿಗೆ ನೀಡುತ್ತದೆ. ‘ಜಸ್ವಂತ್ ಘರ್; ವೀಕ್ಷಿಸಿದ ನಂತರ ಚಹಾ – ತಿಂಡಿ ತಿನ್ನದೇ ಯಾವ ಪ್ರವಾಸಿಗರೂ ಹೊರಡುವುದಿಲ್ಲ. ಅಂದು ಜಸ್ವಂತ್ ಸಿಂಗ್ ಯುದ್ಧದ ಸಮಯ ಅಡಗಿ ಕುಳಿತ ಬಂಕರ್‌ಗಳನ್ನೂ ಕಾಣಬಹುದು. ಒಳಗಡೆ ಜಸ್ವಂತ್‌ರ ಕಂಚಿನ ಪ್ರತಿಮೆಯೂ ಇದೆ. ಅವರ ಯುದ್ಧ ಸಾಮಗ್ರಿ, ವಸ್ತç, ಬೆಲ್ಟ್, ಕ್ಯಾಪ್…. ಎಲ್ಲವನ್ನೂ ಅಲ್ಲಿ ಕಾಣಬಹುದು.
ಇಂದು ಚೀನಾದಿಂದ ಬರುತ್ತಿರುವ ಮತ್ತೆ ಗಡಿ ಕಲಹವನ್ನು ಮುಂದಿಟ್ಟು ಭಾರತಕ್ಕೆ ಅರುಣಾಚಲ ಪ್ರದೇಶದಲ್ಲಿ ‘ಬ್ರಹ್ಮೋಸ್ ಮಿಸೈಲ್’ ಇರಿಸಬೇಕಾಗಿ ಬಂತು. ಇದು ಭಾರತದ ರಣನೀತಿಯಾಗಿದೆ. 290 ಕಿ.ಮೀ. ದೂರದ ಗುರಿ ಇರಿಸುವ ಬ್ರಹ್ಮೋಸ್‌ನ್ನು ಟಿಬೇಟ್ ಕ್ಷೇತ್ರದ ಗಡಿಯಲ್ಲಿ ಇರಿಸಿರುವ ಭಾರತವು ಚೀನೀ ಮಿಸೈಲ್‌ನ್ನು ಎದುರಿಸಲು ನಮ್ಮ ಸೇನೆ ಕೂಡಾ ಸಿದ್ಧಗೊಂಡು ನಿಂತಿದೆ.
1962 ಯುದ್ಧದ ಬಗ್ಗೆ ಅನೇಕ ಪುಸ್ತಕಗಳು ಬಂದಿವೆ. ಅರುಣಾಚಲದ ತವಾಂಗ್‌ಗೆ ಪ್ರವಾಸಗೈದ ಸಂದರ್ಭದಲ್ಲಿ ಮತ್ತೊಂದು ‘ತವಾಂಗ್ ವಾರ್ ಮೆಮೋರಿಯಲ್’ನಲ್ಲಿ ಸೇನಾ ನಾಯಕರು 1962 ರ ಯುದ್ಧದ ಕೆಲವು ದೃಶ್ಯಗಳನ್ನು ತೋರಿಸಿ ,ಭಾರತದ ಸೋಲಿಗೆ ಕಾರಣವನ್ನು ವಿವರಿಸಿದ್ದರು. (ಒಳಗಡೆ ಫೋಟೋ ತೆಗೆಯುವುದು ನಿಷಿದ್ಧ ಎಂದಿದ್ದರು.)


-4-
ಆ ದಿನಗಳಲ್ಲಿ ಸೇನೆಯ ಎಲ್ಲಾ ಜವಾಬ್ದಾರಿ ಪ್ರಧಾನಿ ನೆಹರೂ ಮತ್ತು ಅವರ ರಕ್ಷಣಾ ಮಂತ್ರಿ ವಿ.ಕೆ. ಕೃಷ್ಣ ಮೆನನ್‌ಗೆ ಬಿಟ್ಟುಬಿಡಲಾಗಿತ್ತು. 1962 ರ ಮೇ – ಜೂನ್ ತಿಂಗಳಲ್ಲಿ ಅನಿರೀಕ್ಷಿತ ಗಡಿ ಪ್ರದೇಶದಲ್ಲಿ ಗುಂಡು ಹಾರಾಟ ನಡೆಯಿತು. ಚೀನೀ ಸೇನೆಯ ತುಕಡಿಗಳು ಭಾರತದ ಗಡಿಯೊಳಗೆ ಪ್ರವೇಶಿಸಿದವು. ಈ ಚೀನೀ ಸೈನಿಕರನ್ನು ಎದುರಿಸಲು ನಮ್ಮ ಬಳಿ ಸರಿಯಾದ ಶಸ್ತçಗಳೂ ಇರಲಿಲ್ಲ. ಸೈನಿಕರೂ ಇರಲಿಲ್ಲ. ಭಾರತೀಯ ಸೇನೆಗೆ ತಯಾರಿ ನಡೆಸಲು ಸಮಯವೇ ಸಿಗಲಿಲ್ಲ. ಹಿಮಕ್ಷೇತ್ರದಲ್ಲಿ ಇರಲು ಟ್ರೆöÊನಿಂಗ್ ಕೂಡಾ ಸಿಗಲಿಲ್ಲ. 1962 ರ ಯುದ್ಧದಲ್ಲಿ ಭಾರತದ ರಾಜಕೀಯ ರಂಗಕ್ಕೆ ಇದರ ನೇತೃತ್ವ ಸಿಕ್ಕಿದ್ದರಿಂದಲೂ ಮತ್ತು ಅನೇಕ ಜನರಲ್‌ಗಳು ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸದಿರುವುದರಿಂದಲೂ ಸೋಲು ಬಂತು. ನೆಹರೂ ಮತ್ತು ಮೆನನ್ ಅವರಿಗೆ ರಾಜಕೀಯ ಮಾತುಕತೆಯಲ್ಲಿ ಹೆಚ್ಚಿನ ಭರವಸೆ ಇತ್ತು. ಆದರೆ ಯುದ್ಧ ನಿಲ್ಲಲಿಲ್ಲ. ಯುದ್ಧದ ನಡುವೆಯೇ ಜನರಲ್ ಬಿ.ಎಂ.ಕೌಲ್ ಅಸೌಖ್ಯದಿಂದ ಗಡಿಕ್ಷೇತ್ರ ತ್ಯಜಿಸಿ ದೆಹಲಿಗೆ ಬಂದರು. ಅನಂತರ ಯಾರೇ ಸರಿಯಾದ ನಾಯಕರಿಲ್ಲದ ಭಾರತೀಯ ಸೇನಾ ಜವಾನರು ಐದು ದಿನಗಳ ಕಾಲ ಯುದ್ಧ ಮಾಡುತ್ತಲೇ ಇದ್ದರು. ಈ ನಡುವೆ ‘ನೆಫಾ’ (ಈಗಿನ ಅರುಣಾಚಲ)ದ ತವಾಂಗ್‌ನಲ್ಲೂ ಚೀನಾ ಸೇನೆ ಒಳಬಂದಿತು.
ಇತ್ತ ರಕ್ಷಣಾ ಮಂತ್ರಿ ಮೆನನ್‌ರನ್ನು ಮಂತ್ರಿ ಮಂಡಲದಿAದ ಹೊರ ಹಾಕಲಾಯಿತು. ಭಾರತ ಅಮೇರಿಕದ ಸಹಾಯ ಬೇಡಿತು. ಯುದ್ಧದಲ್ಲಿ ಗೆಲ್ಲುತ್ತಲೇ ಬಂದ ಚೀನಾ ಸೇನೆ ‘ನೋರ್ಥ್ ಈಸ್ಟರ್ನ್ ಫ್ರಂಟಿಯರ್ ಏಜನ್ಸಿ (ನೆಫಾ) ಅರುಣಾಚಲ ಪ್ರದೇಶ ದಾಟಿ ಅಸ್ಸಾಮ್‌ನತ್ತ ಒಳನುಗ್ಗಿತು. ಒಂದು ವೇಳೆ ಭಾರತ ಈ ಸಂದರ್ಭದಲ್ಲಿ ವಾಯುಸೇನೆಯನ್ನು ಬಳಸಿಕೊಂಡಿದ್ದರೆ ಯುದ್ಧದ ಪರಿಣಾಮ ಬೇರೆಯಾಗುವ ಸಾಧ್ಯತೆಗಳಿದ್ದುವು. ಯಾಕೆಂದರೆ ಚೀನಾದ ಬಳಿ ಆ ಸಮಯ ಅದನ್ನು ಎದುರಿಸುವ ಸರಿಯಾದ ವ್ಯವಸ್ಥೆ ಇರಲಿಲ್ಲ ಎನ್ನುತ್ತಾರೆ ರಕ್ಷಣಾ ತಜ್ಞರು.
ಅಂತೂ ನವಂಬರ್ 22, 1962 ರಂದು ಚೀನಾ ಅನಿರೀಕ್ಷಿತವಾಗಿ ಯುದ್ಧ ವಿರಾಮ ಘೋಷಿಸಿತು. ಹಾಗೂ ಚೀನೀ ಸೇನೆ ಹಿಂತಿರುಗಲು ಮುಂದಾಯಿತು. ಇದೀಗ 2017 ರಲ್ಲಿ ಮತ್ತೆ ಚೀನಾದ ಗಡಿವಿವಾದ ಜೋರಾಗುತ್ತಿದೆ. ಈ ಕಾರಣ ನಮ್ಮ ದೇಶದಲ್ಲಿಂದು ಚೀನಾ ಮಾಲುಗಳ ನಿಷೇಧಕ್ಕೆ ಕರೆ ನೀಡಲಾಗಿದೆ.
ಚೀನಾ 1949ರಲ್ಲಿ ಸ್ಥಾಪನೆಗೊಂಡಿತ್ತು. ಚೀನಾದ ರಕ್ಷಣಾ ಬಜೆಟ್ ಭಾರತಕ್ಕಿಂತ ಮೂರು ಪಟ್ಟು ಹೆಚ್ಚಿಗಿದೆ. 2017 ರಲ್ಲಿ ಚೀನಾ ತನ್ನ ರಕ್ಷಣಾ ಬಜೆಟ್‌ನಲ್ಲಿ 152 ಬಿಲಿಯನ್ ಡಾಲರ್‌ನ ಪ್ರಸ್ತಾವ ಇರಿಸಿತ್ತು. ಭಾರತದ ರಕ್ಷಣಾ ಬಜೆಟ್ 53.5 ಬಿಲಿಯನ್ ಡಾಲರ್ ಆಗಿದೆ.
ಚೀನಾ ಒಂದು ವಾರದಲ್ಲಿ ಆರು ಡಿವಿಜನ್ ಅರ್ಥಾತ್ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಗಡಿ ಕ್ಷೇತ್ರಗಳಿಗೆ ಕಳುಹಿಸಲು ಸಮರ್ಥವಿದೆ. ಭಾರತದ ಬಳಿ ಇಷ್ಟೊಂದು ಸಾಮರ್ಥ್ಯವಿಲ್ಲ. ಭಾರತದ ಒಳಗಡೆ ಗಡಿ ಭಾಗದಲ್ಲಿ ರಸ್ತೆಗಳೂ ಕಡಿಮೆ ಇವೆ. ಎಲ್.ಎ.ಸಿ. (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಕ್ಷೇತ್ರದಲ್ಲಿ ಟಿಬೇಟ್ ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳು ಚೀನಾದ ಪರ ಹೆಚ್ಚಿಗಿವೆ. 1962 ರ ನಂತರ 1967 ರಲ್ಲಿ ಸಿಕ್ಕಿಮ್‌ನ ನಾಥುಲಾ ಪಾಸ್ ಬಳಿ ಭಾರತ ಮತ್ತು ಚೀನಾದ ನಡುವೆ ಮಿನಿಯುದ್ಧ ನಡೆಯಿತು. ಆದರೆ ಭಾರತ ಸಶಕ್ತ ಉತ್ತರ ನೀಡಿದ್ದರಿಂದ ಚೀನಾ ಹಿಂದೆ ಸರಿಯಿತು. 1962 ರಲ್ಲಿ ನಾವು ವಾಯುಸೇನೆಯನ್ನು ಬಳಸಿರಲಿಲ್ಲ. ಆದರೆ ಈಗ ಎಲ್ಲಾ ಶಕ್ತಿಗಳು ನಮ್ಮಲ್ಲಿವೆ. “ಬಾಯಲ್ಲಿ ಸಿಹಿ ಮಾತುಗಳು,

-5-
ಹಿಂಬದಿ ಚೂರಿ ಹಾಕುವ ನೀತಿ” ಚೀನಾ ಎಂದಿನಿAದಲೇ ಮಾಡಿಕೊಂಡು ಬಂದಿರುವ ದೇಶ. ಈ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ನೆಹರೂರನ್ನು ಆ ದಿನಗಳಲ್ಲೇ ಎಚ್ಚರಿಸಿದ್ದರು.
1962ರ ಯುದ್ಧ ಭೂಸೇನೆ ಮಾಡಿತ್ತು. 2017 ರ ಈ ಸಮಯ ಯುದ್ಧ ಸಂಭವಿಸಿದರೆ ಸಮುದ್ರ ರಸ್ತೆಯಲ್ಲೂ ಚೀನಾಕ್ಕೆ ಅನೇಕ ಸವಾಲು ಎದುರಿಸಬೇಕಾಗಿ ಬರಲಿದೆ. ಹಿಂದೂ ಮಹಾಸಾಗರದಲ್ಲಿ ಭಾರತದ ಸ್ಥಿತಿಯೂ ಚೆನ್ನಾಗಿದೆ. ಭಾರತೀಯ ನೌಕಾಸೇನೆ ಬಹು ಸುಲಭವಾಗಿ ಯುರೋಪ್, ಮಧ್ಯಪೂರ್ವ ಮತ್ತು ಆಫ್ರಿಕಾದ ಜೊತೆ ಚೀನಾದ ರಸ್ತೆಯನ್ನು ತಡೆಹಿಡಿಯಬಹುದಾಗಿದೆ. ಚೀನಾ ತನ್ನ ಅವಶ್ಯಕತೆಯ 87 ಶೇಕಡಾ ಕಚ್ಛಾ ತೈಲ ಈ ರಸ್ತೆಯಿಂದಲೇ ಆಮದು ಮಾಡುತ್ತದೆ.
1979ರ ವಿಯೆಟ್ನಾಮ್ ಯುದ್ಧದ ನಂತರ ಚೀನಾ ಈ ತನಕ ಯಾವುದೇ ಯುದ್ಧ ಮಾಡಿಲ್ಲ. ಆದರೆ ಯುದ್ಧದ ಭೀತಿ ಹುಟ್ಟಿಸುತ್ತಲೇ ಇರುವುದು ಅದಕ್ಕೊಂದು ‘ಶೋಕಿ’ ಎಂಬAತಾಗಿದೆ. ಚೀನಾ ವಸ್ತುಗಳಿಗೆ ಭಾರತವೂ ಬಹುದೊಡ್ಡ ಮಾರ್ಕೆಟ್ ಆಗಿರುವ ಕಾರಣ ಇದೀಗ ಚೀನೀ ವಸ್ತುಗಳಿಗೆ ನಮ್ಮ ದೇಶದಲ್ಲಿಂದು ಬಹಿಷ್ಕಾರ ಹಾಕುವ ಮೂಲಕ ಚೀನಾಕ್ಕೆ ಬುದ್ದಿ ಕಲಿಸಲು ಕರೆ ನೀಡಲಾಗಿದೆ.


ಮೆಕ್ ಮೋಹನ್ ರೇಖೆ
24 ಮಾರ್ಚ್ 1914 ರಂದು ಟಿಬೇಟ್ ಮತ್ತು ಬ್ರಿಟಿಷ್ ಪ್ರತಿನಿಧಿಗಳ ನಡುವೆ ಮೆಕ್‌ಮೋಹನ್ ರೇಖೆಯ ನಕ್ಷೆಗೆ ಹಸ್ತಾಕ್ಷರ ಮಾಡಲಾಗಿತ್ತು. ಆವಾಗ ಟಿಬೇಟ್ ಸ್ವತಂತ್ರ ದೇಶವಿತ್ತು. ಚೀನಾ ಆಕ್ರಮಣ ಮಾಡಿರಲಿಲ್ಲ. ಆದರೆ ಚೀನಾ ಹೇಳುತ್ತಿದೆ= ‘ಮೆಕ್ ಮೋಹನ್ ರೇಖೆಯ ಒಪ್ಪಂದದ ಸಂದರ್ಭದಲ್ಲಿ ತನ್ನ ಪ್ರತಿನಿಧಿತ್ವ ಇರಲಿಲ್ಲ. ಹಾಗಾಗಿ ಅದನ್ನು ತಾನು ಒಪುö್ಪವುದಿಲ್ಲ ಎಂದು. 1937 ರಲ್ಲಿ ‘ಸರ್ವೆ ಆಫ್ ಇಂಡಿಯಾ’ ಪ್ರಕಟಿಸಿದಾಗ ಮೆಕ್ ಮೋಹನ್ ರೇಖೆಯನ್ನು ಭಾರತದ ಅಧಿಕೃತ ಸೀಮೆ ಎಂದು ಹೇಳಲಾಯಿತು. 1938 ರಲ್ಲಿ ತವಾಂಗ್‌ನ ಬೌದ್ಧ ಮಠಕ್ಕೆ ಬ್ರಿಟಿಷರು ಒಂದು ಸೂಚನೆ ಕಳುಹಿಸಿ ‘ತವಾಂಗ್ ಭಾರತದ ಭಾಗವಾಗಿದೆ’ ಎಂದು ತಿಳಿಸಿತು. ಆದರೆ ಟಿಬೇಟ್‌ನ ಆಗಿನ ಆಡಳಿತ ಇದನ್ನು ವಿರೋಧಿಸಿತು. ಯಾಕೆಂದರೆ ತವಾಂಗ್ ಆವಾಗ ಟಿಬೇಟ್‌ನ ‘ಲ್ಹಾಸಾ’ದಿಂದ ಆಳಲ್ಪಡುತ್ತಿತ್ತು. ಮೆಕ್‌ಮೋಹನ್ ರೇಖೆಯ ಬಗ್ಗೆ ಟಿಬೇಟ್‌ಗೆ ವಿರೋಧವಿಲ್ಲವಾದರೂ ತವಾಂಗ್ ವಿಷಯದಲ್ಲಿ ವಿವಾದವಿತ್ತು. ಇಂದಿಗೂ ಚೀನಾ ಅದನ್ನು ಒಪುö್ಪತ್ತಿಲ್ಲ.

  • ಭಾರತ – ಚೀನಾ ನಡುವೆ 3,500 ಕಿ.ಮೀ. (2,174 ಮೈಲು) ಉದ್ದದ ಗಡಿ ಪ್ರದೇಶವಿದೆ.
  • ಆದರೆ ಎರಡೂ ದೇಶಗಳ ನಡುವೆ ವಿವಾದಿತ ಕ್ಷೇತ್ರ 4,000 ಕಿ.ಮೀ. ಇದೆ. ಹೀಗಿದ್ದರೂ ಚೀನಾ ಪ್ರಕಾರ ಗಡಿ ವಿವಾದದ ಕ್ಷೇತ್ರ ಕೇವಲ 2 ಸಾವಿರ ಕಿ.ಮೀ ಮಾತ.್ರ ಕಳೆದ ಜೂನ್ 2016 ರಲ್ಲಿ ಚೀನಾದ ಸೈನಿಕರು ಮೂರು ಬಾರಿ ಭಾರತದ ಗಡಿ ಪ್ರದೇಶಕ್ಕೆ ಬಂದಿದ್ದರು.
  • ಅದೇ ರೀತಿ ಅರುಣಾಚಲ ಪ್ರದೇಶದಲ್ಲೂ (ತವಾಂಗ್) ಪೀಪಲ್ಸ್ ಲಿಬರೇಶನ್ ಆರ್ಮಿ (ಪಿ.ಎಲ್.ಎ) ಆಫ್ ಚೈನಾದ 50 ರಷ್ಟು ಸೈನಿಕರು ಮೂರು ಗ್ರೂಪ್‌ಗಳಲ್ಲಿ ಭಾರತದ ಗಡಿಯೊಳಗೆ ನುಗ್ಗಿದ್ದಾರೆ.

-6-

  • ಜಮ್ಮು ಕಾಶ್ಮೀರದ ಲಡ್ಡಾಖ್‌ನಲ್ಲಿ ‘ಐಟಿಬಿಟಿ’ಯ (ಭಾರತದ) ಜವಾನರು ಪಾಂಗೋಗತ್ಸೊ ಸರೋವರದ ಬಳಿ ಅಂತರ್‌ರಾಷ್ಟೀಯ ಯೋಗ ಡೇ ಸಂದರ್ಭದಲ್ಲಿ ಯೋಗ ಮಾಡುತ್ತಿರುವಾಗ ಚೀನೀ ಸೈನಿಕರು ಗಡಿಯಲ್ಲಿ ಒಳನುಗ್ಗಿದ್ದರು.
  • ಚೀನಾ ಭಾರತದ ಬಹುದೊಡ್ಡ ವ್ಯಾಪಾರಿಕ ಸಹಯೋಗಿಗಳಲ್ಲಿ ಒಂದು. ಆದರೆ ಎರಡೂ ದೇಶಗಳಲ್ಲಿ ಗಡಿ ವಿವಾದ ಇನ್ನೂ ಬಗೆ ಹರಿದಿಲ್ಲ.
    ಹಾಗಿದ್ದೂ ವಿಶೇಷವೆಂದರೆ ಎರಡೂ ದೇಶಗಳ ಸೇನೆಗಳ ನಡುವೆ ಕಳೆದ 30 ವರ್ಷದಿಂದ ಹಿಂಸೆಯ ದೃಶ್ಯ ನಡೆದಿಲ್ಲ. ದಕ್ಷಿಣ ಏಶ್ಯದಲ್ಲಿ ಭಾರತ ಮಹಾಶಕ್ತಿಯಾಗಿ ರೂಪುಗೊಳ್ಳುವುದು ಚೀನಾಕ್ಕೆ ಭಯ ಕಾಡುತ್ತಿದೆ. ಈ ಕಾರಣದಿಂದ ಅದು ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾ ದೇಶದಲ್ಲಿ ತನ್ನ ಪ್ರಭುತ್ವ ಸ್ಥಾಪಿಸಲು ಮುಂದಾಗುತ್ತಿದೆ. ಇತ್ತ ಮಾನಸ ಸರೋವರಕ್ಕೆ ನಾಥುಲಾ ದಾರಿಯನ್ನು ಚೀನಾ ಮುಚ್ಚಿದೆ.
    ದಲಾಯಿಲಾಮಾ ವಿರುದ್ಧ ಸಿಟ್ಟು
    ಬೌದ್ಧಗುರು ದಲಾಯಿಲಾಮಾ ಅರುಣಾಚಲದ ತವಾಂಗ್‌ಗೆ ಬರುತ್ತಾರೆಂದರೆ ಚೀನಾ ಏನಾದರೂ ಕಿರಿಕಿರಿ ಮಾಡುತ್ತದೆ. “ಭಾರತವು ಚೀನಾದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಿದರೆ ಚೀನಾ ಕೂಡಾ ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಲು ಹಿಂಜರಿಯದು” ಎನ್ನುತ್ತಾ ಚೀನಾ ಸರಕಾರಿ ಮೀಡಿಯಾ ಹೇಳಿಕೊಂಡು ಬಂದಿದೆ. “ಭಾರತವು ದಲಾಯಿಲಾಮಾರಿಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ನೀಡುವ ಮೂಲಕ ಚೀನಾದ ಹಿತಕ್ಕೆ ನಷ್ಟ ಉಂಟು ಮಾಡುತ್ತಿದೆ” ಎಂದು ಚೀನಾ ಸದಾ ಆಕ್ಷೇಪಿಸುತ್ತಾ ಬಂದಿದೆ.
    ಚೀನಾದ ಸರಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಹೇಳುತ್ತದೆ. – “ಭಾರತವು ದಲಾಯಿಲಾಮಾರನ್ನು ಚೀನಾದ ವಿರುದ್ಧ ಒಂದು ರಣನೀತಿಯ ರೂಪದಲ್ಲಿ ಬಳಸಿಕೊಳ್ಳುತ್ತಿದೆ” ಎಂದು ಟೀಕಿಸುತ್ತಾ ಇದೆ. ಅತ್ತ ‘ಚೈನಾ ಡೈಲಿ’ಯ ಸಂಪಾದಕೀಯದಲ್ಲಿ ಬರೆಯುತ್ತಾ “ಒಂದೆಡೆ ಭಾರತ ನಮ್ಮ ಕ್ಷೇತ್ರ ಅರುಣಾಚಲವನ್ನು ಅನಧಿಕೃತವಾಗಿ ಒಳ ಹಾಕಿದೆ. ಅದಲ್ಲದೆ ದಲಾಯಿಲಾಮಾರಿಗೆ ಅಲ್ಲಿಗೆ ಬರಲು ಅನುಮತಿ ನೀಡಿದೆ. ಇದು ಚೀನಾಕ್ಕೆ ಭಾರತದಿಂದ ಎರಡೆರಡು ರೀತಿಯ ಅವಮಾನ. ಚೀನಾಕ್ಕೆ ಇದಕ್ಕೆ ಉತ್ತರ ನೀಡಲು ಸಂಕೋಚ ಇರಬಾರದು”.

Related posts

ಮೊಗವೀರ ವ್ಯವಸ್ಥಾಪಕ ಮಂಡಳಿ 123ನೇ ವರ್ಷಕ್ಕೆ ಪಾದಾರ್ಪಣೆ

Mumbai News Desk

ತುಳು-ಕನ್ನಡಿಗರ ಮನ ಸೆಳೆದ ಅಭಿನಯ ಮಂಟಪ ಮುಂಬೈಯ ತುಳು ಜಾನಪದ ಐತಿಹಾಸಿಕ ನಾಟಕ – ಕಲ್ಕುಡ-ಕಲ್ಲುರ್ಟಿ, 

Mumbai News Desk

ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜೆರಿಮರಿ – ತಿರುಪತಿಯಲ್ಲಿ ಹತ್ತು ವರ್ಷಗಳಿಂದ ನಿರಂತರ ಭಜನಾ ಸೇವೆ.

Mumbai News Desk

ಸುನಿತಾ ವಿಲಿಯಮ್ಸ್ ಗೂ ಭಾರತಕ್ಕೂ ಇರುವ ಸಂಬಂಧ

Mumbai News Desk

ಬಡತನದ ಬೇಗೆಯಲ್ಲಿ ಹೂವಾಗಿ ಅರಳಿದ ಸುನೀಲ ದಂಗಾಪೂರ

Mumbai News Desk

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas