October 12, 2026
Mumbai News Kannada
ಲೇಖನ

ನಿಷ್ಠಾವಂತ ಸಮಾಜ ಸೇವಕರಾದ ಮಾಧವ ಆರ್. ಪೂಜಾರಿ ಡೊಂಬಿವಲಿ ಇವರಿಗೆ ಜನಸೇವಾ ಪುರಸ್ಕಾರ



ಗೋರೆಗಾಂವ್ ಪೂರ್ವದ ಜಯಲೀಲಾ ಬಾಂಕ್ವೇಟ್ ಸಭಾಗೃಹದಲ್ಲಿ ಸೆಪ್ಟೆಂಬರ್ 7ರಂದು ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು.

ಅಂದು ಪ್ರತಿಭಾ ಪುರಸ್ಕಾರ, ಜಯ ಸಿ. ಸುವರ್ಣ ಸಂಸ್ಮರಣೆಯಲ್ಲಿ ಶಿವಗಿರಿ ಸಮ್ಮಾನ್ ಪ್ರಶಸ್ತಿ ಮತ್ತು ಸಮಾಜಕ್ಕಾಗಿ ಸೇವೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಳೆದ 35 ವರ್ಷಗಳಿಂದ ಡೊಂಬಿವಲಿ ಪರಿಸರದಲ್ಲಿ ನೆಲೆಸಿ, ಧಾರ್ಮಿಕ ಮತ್ತು ಸಮಾಜ ಸೇವಾ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿರುವ ಮಾಧವ ಆರ್ ಪೂಜಾರಿಯವರಿಗೆ ಜನಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ನಿಷ್ಠಾವಂತ ಸಮಾಜ ಸೇವಕರಾದ ಮಾಧವ ಆರ್ ಪೂಜಾರಿಯವರು ೧೯೫೨ ರಲ್ಲಿ ಜನಿಸಿದರು. ಹುಟ್ಟೂರಿನಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಉದ್ಯೋಗವನ್ನರಸಿಕೊಂಡು ಮುಂಬಯಿಗೆ ಬಂದವರು. ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ನ್ಯೂ ಇಂಡಿಯಾ ಇನ್ಸೂರೆನ್ಸ್ ಕ್ಯಾಂಟೀನ್, ಕೊಹಿನೂರು ಮಿಲ್ ನಂತರ ಟಾಟಾ ದ ನ್ಯಾಷನಲ್ ಟೆಕ್ಸ್ಟ್ ಟೈಲ್ ಕಾರ್ಪೊರೇಷನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ೨೦೧೬ರಲ್ಲಿ ನಿವೃತ್ತಿಯನ್ನು ಹೊಂದಿದರು. 

ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ಉತ್ತಮ ಫುಟ್ ಬಾಲ್ ಆಟಗಾರರೂ ಹೌದು. ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಮಾತ್ರವಲ್ಲದೆ ೬೦ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಸರಸ್ವತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇವರು ಆಟವಾಡುತ್ತಿದ್ದರು. ಪ್ರಸ್ತುತ  ಈ ತಂಡವನ್ನು ಮುನ್ನಡೆಸುವವರಲ್ಲಿ ಇವರೂ ಒಬ್ಬರು.

ದೇವರಲ್ಲಿ ಅಪಾರ ಶ್ರದ್ಧೆಯನ್ನು ಹೊಂದಿರುವ ಮಾಧವ ಪೂಜಾರಿಯವರು ಸುಮಾರು ೫೫ವರ್ಷಗಳಿಂದ ರಾಧಾಕೃಷ್ಣ ಭಜನಾ ಮಂಡಳಿಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪೂಜಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಡೊಂಬಿವಲಿ ಪರಿಸರದಲ್ಲಿ ಬಹಳಷ್ಟು ಸಮಾಜ ಸೇವೆಯನ್ನು ಮಾಡಿದ್ದಾರೆ. ಕರಾವಳಿಯ ಯಕ್ಷಗಾನ ತಾಳಮದ್ದಲೆಯನ್ನು ಶನಿಗ್ರಂಥ ಪಾರಾಯಣದ ಮೂಲಕ ಭಕ್ತಾದಿಗಳಿಗೆ ಹಾಗೂ ಕಲಾ ಪ್ರೇಮಿಗಳಿಗೆ ಪಸರಿಸಬೇಕೆಂಬ ಹಂಬಲದಿಂದ ಯಕ್ಷಕಲಾ ಸಂಸ್ಥೆಯನ್ನು ಇವರ ಮುಂದಾಳುತನದಲ್ಲಿ ಹುಟ್ಟುಹಾಕಿ ಅವರ ಮನೆಯಲ್ಲಿಯೇ ಪ್ರತಿ ಭಾನುವಾರ ತರಗತಿಯನ್ನು ನಡೆಸಲಾಗುತ್ತಿತ್ತು. ಈ ಯಕ್ಷಕಲಾ ಸಂಸ್ಥೆಯ ಮೂಲಕವೇ ಜಗದಂಬಾ ಮಂದಿರದ ಸ್ಥಾಪನೆಯಾಯಿತು. ಡೊಂಬಿವಲಿಯಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿರುವ ಜಗದಂಬಾ ಮಂದಿರದ ಹುಟ್ಟಿಗೆ ಮಾಧವ ಪೂಜಾರಿಯವರು ಮುಖ್ಯ ಕಾರಣಕರ್ತರಾಗಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ಶನಿಕತೆ ಪಾರಾಯಣವನ್ನೂ ಮಾಡುತ್ತಾರೆ. ಇವರ ಪತ್ನಿ ವಿಜಯ ಮಾಧವ ಪೂಜಾರಿ ಮಾತಾ ಅಮೃತಾನಂದಮಯಿ ವತಿಯಿಂದ ನಡೆಸಲ್ಪಡುವ ಸುಧಾ ನರ್ಸರಿಯಲ್ಲಿ ೧೮ ವರ್ಷಗಳ ಕಾಲ ಉಚಿತವಾಗಿ ಕಲಿಸುತ್ತಿದ್ದರು. ಸಮಾಜ ಮತ್ತು ಧಾರ್ಮಿಕ  ಸೇವೆಯಲ್ಲಿ ತಮ್ಮನ್ನು ಮೀಸಲಿರಿಸಿಕೊಂಡಿರುವ ಮಾಧವ ಆರ್ ಪೂಜಾರಿ ದಂಪತಿಯಿಂದ ಇನ್ನಷ್ಟು ಸಮಾಜ ಸೇವಾ ಕಾರ್ಯಗಳು ನಡೆಯುತ್ತಿರಲಿ.



Related posts

ದೇಶದೆಲ್ಲಿಡೆ ಜನರನ್ನು ಕಾಡುತ್ತಿರುವ ‘ಗ್ಯಾಸ್ ಟ್ರಬಲ್’ : ಕಾರಣಗಳು ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು

Mumbai News Desk

ತುಳುವರ ‘ತುಡರ ಪರ್ಬ’: ಬಲಿ ಚಕ್ರವರ್ತಿ ಮತ್ತು ಕೃಷಿ ಸಂಸ್ಕೃತಿಯ ಸಂಗಮ

Mumbai News Desk

ಕರಾವಳಿಯ ಬಹುನಿರೀಕ್ಷಿತ ಕಾಮಿಡಿ-ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜನವರಿ 15ಕ್ಕೆ ತೆರೆಗೆ: ‘ಬಿರುವ ಫಿಲಂಸ್’ನಿಂದ ಮನರಂಜನೆಯ ಮಹಾಪೂರ!

Mumbai News Desk

ಉಡುಪಿ ಜಿಲ್ಲೆಯಲ್ಲಿದೆ ಮಹಿಷಾಸುರ ದೇವಾಲಯ,ಮಹಿಷನಿಗೆ ನಡೆಯುತ್ತಿದೆ ಪೂಜೆ

Mumbai News Desk

ಸುನಿತಾ ವಿಲಿಯಮ್ಸ್ ಗೂ ಭಾರತಕ್ಕೂ ಇರುವ ಸಂಬಂಧ

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk