ಸಮಾಜ ಮುಖಿ ಸೇವೆಗಳಿಂದ ಪರಿಸರದಲ್ಲಿ ಜನನುರಾಗಿರುವ ಶ್ರೀಯುತ ಇನ್ನಂಜೆ ಹರೀಶ್ ಪೂಜಾರಿ ಯವರು ಅಂತರರಾಷ್ಟ್ರೀಯ ಸಂಸ್ಥೆಯಾದ ಜೆಸಿಐ ಇದರ ಘಟಕವಾದ ಶಂಕರಪುರ ಜಾಸ್ಮಿನ್ ಜೆಸಿಐ ಗೆ 2024 ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರ ಪದಗ್ರಹಣ ಸಮಾರಂಭವು ದಿನಾಂಕ 15/12/2023 ರಂದು ಶುಕ್ರವಾರ ಸಂಜೆ 7.00 ಗಂಟೆಗೆ ಸರಿಯಾಗಿ ಜೆಸಿ ಭವನ ಶಂಕರಪುರದಲ್ಲಿ ಜರಗಲಿದೆ.

ಹರೀಶ್ ಪೂಜಾರಿ ಇವರು ಮೂಲತಃ ಉಡುಪಿ ಜಿಲ್ಲೆ, ಕಾಪು ತಾಲೂಕಿನ ಇನ್ನಂಜೆ ಆಡ್ಕ ಮಜಲು ಗೋಪಾಲ ಪೂಜಾರಿ ಹಾಗೂ ಗುಲಾಬಿ ಪೂಜಾರ್ತಿ ದಂಪತಿಯ 6 ನೇ ಪುತ್ರನಾಗಿ 1984 ರ ಜನವರಿ10 ರಲ್ಲಿ ಜನಿಸಿದ ಇವರು ಪ್ರಾರ್ಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆ ಎಸ್ ವಿ ಎಚ್ ಪದವಿ ಪೂರ್ವ ಕಾಲೇಜು ಇನ್ನoಜೆ ಇಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇಲ್ಲಿ ಪಡೆದು, ಎಂಕಾಂ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ಪೂರೈಸಿ, 2008 ರಲ್ಲಿ ಕಾಪು ತಾಲೂಕು ಇನ್ನoಜೆ ಗ್ರಾಮ ಪಂಚಾಯತ್ ಇಲ್ಲಿ ಸೇವೆಗೆ ಸೇರಿ 15 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನರಸೇವೆ ಸಲ್ಲಿಸುತ್ತಾ ಬಂದಿದ್ದು. ಯುವಕ ಮಂಡಲ ಇನ್ನಂಜೆ ಇದರ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಹಾಗೂ ಬಿಲ್ಲವ ಸೇವಾ ಸಂಘ ಇನ್ನoಜೆ ಇದರ ಕಾರ್ಯದರ್ಶಿಯಾಗಿ ,ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಇನ್ನoಜೆ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರೊಬ್ಬಬ್ಬ ಕಲಾವಿದ ಕೊಡ, ಹಲವಾರು ತುಳು ನಾಟಕಗಳಲ್ಲಿ ರಂಗ ಕಲಾವಿದರಾಗಿ ಕಲಾ ಸೇವೆಯನ್ನು ಸಲ್ಲಿಸಿರುವ ಇವರು 2014 ರಲ್ಲಿ ಜೆ ಸಿ ಐ ಶಂಕರಪುರ ಜಾಸ್ಮಿನ್ ಘಟಕಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡು, 2021 ರಲ್ಲಿ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ, 2020 ರಲ್ಲಿ ಪದ್ಮಿನಿ ಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ಮಗಳು ನವನ್ಯ ಪೂಜಾರಿ ಇವರೊಂದಿಗೆ ಸುಖ ಸಂಸಾರ ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ, ನಿಮ್ಮೆಲ್ಲರ ನೆಲ್ಮೆಯ ಒಲುಮೆಯು ಇವರ ಮೇಲಿರಲಿ ಎಂಬ ಆಶಯ ನಮ್ಮದು.