
ಮಂದಿರ, ಸಂಘದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ – ರಾಜು ಎಸ್ ಪೂಜಾರಿ.
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಡಿ 15. ಚಿತ್ರಾಪು ಬಿಲ್ಲವರ ಸಂಘ ಮುಂಬಯಿ ಇದರ 78ನೇ ವಾರ್ಷಿಕ ಮಹಾಸಭೆ ಡಿ.10 , ರಂದು ,ಬೆಳ್ಳಿಗ್ಗೆ ,ಸಾಂತಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ ಜರಗಿತು.
ಸಂಘದ ಪದಾಧಿಕಾರಿಗಳು ಶ್ರೀ ವಿಠೋಬ ರುಕುಮಾಯಿ ದೇವರ ಭಾವಚಿತ್ರಕ್ಕೆ ದೀಪ ಬೆಳಗಿ ಮಹಾಸಭೆಗೆ ಚಾಲನೆ ನೀಡಿದರು.
ವರದಿ ವರ್ಷದಲ್ಲಿ ನಿಧನರಾದ ಸಂಘದ ಅಧ್ಯಕ್ಷ ಜಿ.ಟಿ.ಪೂಜಾರಿ, ಹಾಗೂ ಸಕ್ರಿಯ ಕಾರ್ಯಕರ್ತ ಪದ್ಮನಾಬ ಜೆ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ರಾಜು ಎಸ್ ಪೂಜಾರಿ ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ಉಮೇಶ್ ಜಿ ಕೋಟ್ಯಾನ್ ಗತವರ್ಷದ ವರದಿ ವಾಚಿಸಿದರೆ, ಗೌರವ ಕೋಶಾಧಿಕಾರಿ ಸೋಮನಾಥ್ ಪಿ.ಪೂಜಾರಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.

ಜಿ.ಟಿ.ಪೂಜಾರಿ ಅವರು ನಿಧನರಾದ ಕಾರಣ ಉಪಾಧ್ಯಕ್ಷರಾದ ರಾಜು ಎಸ್.ಪೂಜಾರಿ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ನಿಯುಕ್ತಿ ಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಆಡಳಿತ ಸಮಿತಿಯ ಸದಸ್ಯ ರಮೇಶ್ ಕೆ ಕುಂದರ್ ಹಾಗೂ ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರಾದ ನಿರಂಜನ ಎಲ್.ಪೂಜಾರಿ ಅವರನ್ನು ಸನ್ಮಾನಿಸಲಾಯಿತು.


ಸನ್ಮಾನಿತರು ತಮ್ಮ ಅನಿಸಿಕೆ ತಿಳಿಸಿದರು.
ಎಸ್.ಎಸ್.ಸಿ ಯಲ್ಲಿ ಉತ್ತಮ ಸಾಧನೆಗೈದ VRITTEE Navin Amin, ಹಾಗೂ ಎಚ್.ಎಸ್.ಸಿ ಯ ಕೌಶಿಕ್ ಮೇಘನಾಥ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಭಾಸ್ಕರ ಕೋಟ್ಯಾನ್, ಶೇಖರ ಅಂಚನ್, ಪುಷ್ಪ ಎಸ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಆಂತರಿಕ ಲೆಕ್ಕ ಪರಿಶೋಧಕ ಶೇಖರ್ ಚಿತ್ರಾಪು, ಶ್ರೀಧರ್ ಅಮೀನ್, ಭಾಸ್ಕರ್ ಕೋಟ್ಯಾನ್, ಶೇಖರ ಅಂಚನ್ ಸದಸ್ಯರ ಪರವಾಗಿ ಮಾತನಾಡಿದರು.
ಜಿ.ಟಿ.ಪೂಜಾರಿ ಅವರ ಪುತ್ರಿ ಲೀನಾ ಪೂಜಾರಿ ಅವರನ್ನು ಗೌರವಿಸಲಾಯಿತು. ಹಾಗೂ ಸಂಘದ ಚಟುವಟಿಕೆಗಳಿಗೆ ಅಧಿಕ ಧನ ಸಂಗ್ರಹ ಮಾಡಿದವರನ್ನು ಅಭಿನಂದಿಸಲಾಯಿತು.
ಗೌರವ ಕೋಶಾಧಿಕಾರಿ ಸೋಮನಾಥ ಪೂಜಾರಿ ತನ್ನ ಅನಿಸಿಕೆ ವ್ಯಕ್ತ ಪಡಿಸುತ್ತಾ “ಸಂಘದ ಅಧ್ಯಕ್ಷರಾಗಿದ್ದ ಜಿ.ಟಿ.ಪೂಜಾರಿ ಅವರು ಸಂಘಕ್ಕೆ ಮಾಡಿದ ಸೇವೆಯನ್ನು ಎಂದೂ ಮರೆಯುವಂತಿಲ್ಲ, ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಅವರು ಪರಿಹಾರ ಕಂಡುಕೊಳ್ಳುತ್ತಿದ್ದರು. ಹಾಗೆಯೇ ಸಂಘದ ಸಕ್ರಿಯ ಕಾರ್ಯಕರ್ತ ದಿ. ಪದ್ಮನಾಭ ಜೆ.ಪೂಜಾರಿ ಕೂಡಾ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು.ಸಂಘದ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ, ಸದಸ್ಯರು ತಮ್ಮಿಂದಾದ ದೇಣಿಗೆ ನೀಡಿ ಸಹಕರಿಸಬೇಕು ಎಂದರು. ಗೌರವ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ಮಾತನಾಡುತ್ತಾ “ಸಂಘದ ಸದಸ್ಯರು ಯಾವುದೇ ಬೇಸರ, ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬದಿಗಿಟ್ಟು ಮತ್ತೆ ಸಂಘದ ಜತೆ ಕೈಜೋಡಿಸಬೇಕು. ಸಂಘದ ಅಧ್ಯಕ್ಷರಾಗಿದ್ದ ಜಿ.ಟಿ.ಪೂಜಾರಿ ಅವರ ಅನುಪಸ್ಥಿತಿ ನಮಗೆಲ್ಲ ಮನವರಿಕೆಯಾಗುತ್ತಿದೆ . ಈಗ ಅಧ್ಯಕ್ಷರಾಗಿ ನಿಯುಕ್ತಿಗೊಂಡ ರಾಜು ಪೂಜಾರಿ ಅವರು ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಸಮರ್ಥರಾಗಿರುವರು.ಅವರಿಗೆ ನಾವೆಲ್ಲ ಸಹಕಾರ ನೀಡೋಣ ಎಂದರು. ಜತೆ ಕಾರ್ಯದರ್ಶಿ ಮದುಕರ ಕೋಟ್ಯಾನ್ ಮಾತನಾಡುತ್ತಾ “ಚಿತ್ರಾಪುವಿನ ನಮ್ಮ ಮಂದಿರವನ್ನು ನೋಂದಾಯಿಸಿದರೆ ,ಸರಕಾರದ ಸೌಲಭ್ಯ ಮಂದಿರಕ್ಕೆ ಸಿಗಬಹುದು.ಈ ಬಗ್ಗೆ ಕಾರ್ಯಕಾರಿ ಸಮಿತಿ ನಿರ್ಧಾರ ಕೈ ಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶೇಷ ಸಹಕಾರ ನೀಡುತ್ತಿರುವ ಸದಸ್ಯರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರಾಜು ಪೂಜಾರಿ ಅವರು ಮಾತನಾಡುತ್ತಾ ” ಕಳೆದ 78 ವರ್ಷದಿಂದ ಸಮಾಜ ಬಾಂಧವರನ್ನು ಒಟ್ಟುಗೂಡಿಸಿ, ಮುಂಬೈ ಮಹಾನಗರದಲ್ಲಿ ಸಾಮಾಜಿಕ, ಸಾಂಸ್ಕ್ರತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಕಾರ್ಯಕಾರಿ ಸಮಿತಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ನನಗೆ ಅಧ್ಯಕ್ಷ ಪದವಿ ನೀಡಿದ ಪದಾಧಿಕಾರಿಗಳಿಗೆ ,ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ವ ಸದಸ್ಯರು ತನು ,ಮನ ,ಧನವನ್ನಿತ್ತು, ಶ್ರೀ ವಿಠೋಭ ಮಂದಿರದ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಜತೆ ಕಾರ್ಯದರ್ಶಿಗಳಾದ ನಿಷಿತ್ ಎಸ್.ಕೋಟ್ಯಾನ್, ಮಧುಕರ ಕೋಟ್ಯಾನ್, ಜತೆ ಕೋಶಾಧಿಕಾರಿ ಕಿಶೋರ್ ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮೇಶ್ ಕೋಟ್ಯಾನ್ ಕೊನೆಯಲ್ಲಿ ವಂದಿಸಿದರು.
ದಿವಂಗತ ಜಿ.ಟಿ.ಪೂಜಾರಿ ಅವರ ಪತ್ನಿ ಹಾಗೂ ದಿವಂಗತ ಪದ್ಮನಾಭ ಪೂಜಾರಿ ಅವರ ಪತ್ನಿ , ಉಪಸ್ಥಿತರಿದ್ದರು.
ಶ್ರೀ ವಿಠೋಬ ಬಾಲಲೀಲ ಭಜನಾ ಮಂದಿರ ಚಿತ್ರಾಪು , ಇದರ ಸಂಚಾಲಕರಾದ ಚಿತ್ರಾಪು ಬಿಲ್ಲವರ ಸಂಘ, ಮುಂಬೈ ಮಹಾನಗರದಲ್ಲಿ, ಕಳೆದ 78 ವರ್ಷಗಳಿಂದ ಭಜನಾ ಮಂದಿರದ ಅಭಿವೃದ್ಧಿಗಾಗಿ ಹಾಗೂ ಸದಸ್ಯರ ,ಮತ್ತವರ ಪರಿವಾರದ ಕಷ್ಟ-ದುಃಖಗಳಿಗೆ ಸ್ಪಂದಿಸುತ್ತಾ ಬರುತಿದೆ.ಇದೀಗ ಸಂಘದ ಅಧ್ಯಕ್ಷರಾದ ರಾಜು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ,ಪದಾಧಿಕಾರಿಗಳ , ಸದಸ್ಯರ ಸಹಕಾರದಿಂದ ,ಸಂಘದ ಕಾರ್ಯ ಚಟುವಟಿಕೆಗಳು ಮತಷ್ಟು ವಿಸ್ತಾರಗೊಳ್ಳಲಿ.