23.5 C
Karnataka
April 4, 2025
ಪ್ರಕಟಣೆ

ಡಿ. 17ರಂದು  ಪೊವಾಯಿ  ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ



ಮುಂಬಯಿ : ಖ್ಯಾತ ನೃತ್ಯ ಕಲಾವಿದೆ ವಿದೂಶಿ ಗೀತಾ ಸಾಲ್ಯಾನ್ ಅವರ ನಟನಾ ನೃತ್ಯ ಅಕಾಡೆಮಿ  ಪೊವಾಯಿಯ 11ನೇ ವಾರ್ಷಿಕೋತ್ಸವ ಸಮಾರಂಭವು ಡಿ. 17ರಂದು ಮಧ್ಯಾಹ್ನ ೨ ರಿಂದ ಗೋಕುಲ ಶ್ರೀಕೃಷ್ಣ ಕ್ಷೇತ್ರದ ಸಭಾಗೃಹ ಸಾಯನ್ ಇಲ್ಲಿ ನಡೆಯಲಿದೆ .  ಉದಯೋನ್ಮುಖ ಎಳೆಯ ಕಲಾವಿದರು ವಿವಿಧ ನೃತ್ಯಗಳಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಸಲಿದ್ದಾರೆ. 

ಗೀತಾ ವೇದ್ ಸ್ಥಾಪಿಸಿದ ನಟನಾ ನೃತ್ಯ ಅಕಾಡೆಮಿ ಪೊವೈ, ಮರೋಲ್ ಮತ್ತು ನಹರ್‌ನಲ್ಲಿ ತನ್ನ ತರಗತಿಗಳನ್ನು ಹೊಂದಿದೆ. ಇವರು ಮುಂಬೈನ ನಳಂದ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತನಾಟ್ಯದಲ್ಲಿ ಲಲಿತಕಲೆಗಳ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಪವಾರ್ ಪಬ್ಲಿಕ್ ಸ್ಕೂಲ್ ಭಾಂಡಪ್‌ನಲ್ಲಿ ಕಾರ್ಯನಿರತರಾಗಿದ್ದಾರೆ. 17ನೇ ಡಿಸೆಂಬರ್ 2023 ರಂದು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ.

ಮುಂಬಯಿಯ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತ ನಾಟ್ಯವನ್ನು ಅಭ್ಯಾಸಮಾಡಿ ಇದೀಗ ಪವಾರ್ ಪಬ್ಲಿಕ್ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ದುಡಿಯುತ್ತಿದ್ದಾರೆ. ದೇಶದ ವಿವಿದೆಡೆ ನೃತ್ಯವನ್ನು ಪ್ರದರ್ಶಿಸಿ ಜನಪ್ರಿಯರಾದ  ಗೀತಾ ಸಾಲ್ಯಾನರು ಪುಣೆ ವಿಶ್ವವಿದ್ಯಾಲಯದ ಎಂ.ಎ.  ವಿದ್ಯಾರ್ಥಿನಿ. ಇತ್ತೀಚೆಗೆ ಮುಂಬಯಿಯಲ್ಲಿ ಜರಗಿದ ಕುಲಾಲ ನೃತ್ಯ ಪರ್ವ ದಲ್ಲಿ ತೀರ್ಪುಗಾರರಾಗಿ ಸಹಕರಿಸಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗೀತಾ ಸಾಲ್ಯಾನ್ ಅವರು ನೂರಾರು ಮಕ್ಕಳನ್ನು ನೃತ್ಯಕಲಾವಿದರನ್ನಾಗಿ ಮಾಡಿರುವರು

Related posts

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ಕರ್ನಾಟಕ ಸಮಾಜ ಸೂರತ್ : ನ. 24ರಂದು ಕರ್ನಾಟಕ ರಾಜ್ಯೋತ್ಸವ

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk