April 2, 2025
ಮುಂಬಯಿ

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

ಚಿತ್ರ : ಸತೀಶ್ ಶೆಟ್ಟಿ, ವರದಿ : ರವಿ ಬಿ ಅಂಚನ್ ಪಡುಬಿದ್ರಿ

ಅಧ್ಯಕ್ಷರ ಮಾತು:
ಕರ್ನಾಟಕ ಸಂಘ ಡೊಂಬಿವಲಿ ನಾಡು- ನುಡಿಯ ಸೇವೆಯನ್ನು ಮಾಡುತ್ತಾ ಶೈಕ್ಷಣಿಕವಾಗಿ ಅಪಾರ ಕೊಡುಗೆಯನ್ನು ಕರ್ಮ ಭೂಮಿಗೆ ನೀಡಿದೆ. ನಮ್ಮ ಹಿರಿಯರು ಸ್ಥಾಪಿಸಿದ ಈ ಸಂಘದ ಮೂಲಕ ಸರ್ವ ಕನ್ನಡಿಗರನ್ನು ಒಗ್ಗೂಡಿಸಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅಚ್ಚು ಕಟ್ಟಾಗಿ ಅಚರಿಸುತ್ತಿದ್ದು ಸುಮಾರು 300 ಕನ್ನಡಿಗ ವಿದ್ಯಾರ್ಥಿಗಳಿಗೆ ಸಮ ವಸ್ರದೊಂದಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಪುರಂದರ ದಾಸರ ಅರಾಧನೋತ್ಸವವನ್ನು ಅಚರಿಸುತ್ತಿರುವ ಸಂದರ್ಭದಲ್ಲಿ ಅಂಗ್ಲ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಮತ್ತು ಹಿರಿಯ ಕನ್ನಡಿಗರು ಸುಮಾರು 20 ತಂಡಗಳು ಪುರಂದರ ದಾಸರ ಭಜನೆಗಳನ್ನು ಹಾಡಿ ಶೈಕ್ಷಣಿಕ ದೇಗುಲವನ್ನು ಪಾವನ ಗೊಳಿಸಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಇಂದು ಈ ವೇದಿಕೆಯಲ್ಲಿ 11 ತಂಡಗಳು ಅತ್ಯುತ್ತಮ ಸ್ಪರ್ಧೆ ನೀಡಿ ಉತ್ತಮ ದೇಶ ಭಕ್ತಿ ಗೀತೆಗಳನ್ನು ಹಾಡಿ ವೇದಿಕೆಗೆ ಮೆರಗು ನೀಡಿದ್ದಾರೆ. ಸಂಘ ಸಂಚಾಲಿತ ಮಂಜುನಾಥ ಮಹಾ ವಿದ್ಯಾಲಯದ ರಜತ ವರ್ಷವು ಅರಂಭವಾಗಿದ್ದು ಒಂದು ವರ್ಷದಲ್ಲಿ ಇನ್ನೂ ಹಲವಾರು ಕಾರ್ಯಕ್ರಮ ಅಯೋಜಿಸುವ ಯೋಜನೆ, ಯೋಚನೆಯಿದೆ ಈ ಎಲ್ಲಾ ಕಾರ್ಯಕ್ರಮ ಗಳಿಗೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ –ಸುಕುಮಾರ್ ಶೆಟ್ಟಿ

ಸಂಘ ಸಂಸ್ಥೆಗಳು ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಬೇಳೆಸುವ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆ ಯನ್ನು ನೀಡಿದೆ– ಡಾ. ಎ. ಸುಬ್ಬಣ್ಣ ರೈ .


ಡೊಂಬಿವಲಿ ಡಿ.11- ಕರ್ನಾಟಕ ಹಾಗೂ ಹೊರನಾಡಿನಲ್ಲಿ ನಾಡಹಬ್ಬ ಆಚರಣೆ ಸಮಸ್ತ ಕನ್ನಡಿಗರ ಅಸ್ಮೀತೆಯ ಪ್ರತೀಕವಾಗಿದ್ದು ಹೊರನಾಡಿನಲ್ಲಿ ವಿಶೇಷವಾಗಿ ಮುಂಬಯಿ ಮಹಾನಗರ ಹಾಗೂ ಉಪನಗರಗಳಲ್ಲಿ ಕನ್ನಡ ಭಾಷೆಯನ್ನು ಸಂಘಟನೆಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಸಿ ಬೇಳೆಸುವ ನಾವೆಲ್ಲರೂ ನೀಜವಾದ ಕನ್ನಡದ ರಾಯಭಾರಿಗಳಾಗಿದ್ದೇವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ ಎ. ಸುಬ್ಬಣ್ಣ ರೈ ಹೇಳಿದ್ದಾರೆ. ಅವರು ಡಿಸೆಂಬರ್ 10ರಂದು ಸಂಜೆ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಡೂಂಬಿವಲಿ ಕರ್ನಾಟಕ ಸಂಘದ ಲಲಿತ ಕಲಾ ಹಾಗೂ ಮಹಿಳಾ ವಿಭಾಗಗಳ ವತಿಯಿಂದಾ ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆದ ನಾಡಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಮುಂಬಯಿ ಮಹಾನಗರ ಹಾಗೂ ಉಪನಗರಗಳ ಜೋತೆಗೆ ನನ್ನ ಅವಿನೋಭಾವದ ಸಂಭಂದವಿದ್ದು 31 ವರ್ಷಗಳ ಹಿಂದೆ ನಾನು ಒಬ್ಬ ಮುಂಬಯಿ ಕನ್ನಡಿಗನಾಗಿದ್ದೆ ಎಂದು ಹೇಳಿದ ಡಾ ಎ ಸುಬ್ಬಣ್ಣ ರೈ-ಮುಂಬಯಿ ವಿಶ್ವ ವಿಧ್ಯಾಲಯದ ಕನ್ನಡ ವಿಭಾಗ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡಿದರೆ, ಮುಂಬಯಿ ಮಹಾನಗರ ಹಾಗೂ ಉಪನಗರಗಳ ಸಂಘ ಸಂಸ್ಥೆಗಳು ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಬೇಳೆಸುವ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆ ಯನ್ನು ನೀಡಿವೆ ಎಂದು ಹೇಳಿ, ನನ್ನ ಜೀವನದ ಸಾಧನೆಯಲ್ಲಿ ಮುಂಬಯಿ ಕರ್ನಾಟಕ ಸಂಘವೇ ಪ್ರೇರಣಾಶಕ್ತಿ ಯಾಗಿದೆ ಎಂದು ತಮ್ಮ ಮುಂಬಯಿ ಜೀವನದ ಅಂದಿನ ದಿನಗಳನ್ನು ಮೆಲುಕು ಹಾಕಿದರು. ನಮ್ಮ ಕನ್ನಡ ನಾಡು ನುಡಿಯ ಕುರಿತು ಮಾತನಾಡಿದ ಡಾ. ಎ ಸುಬ್ಬಣ್ಣ ರೈ ಅವರು-ಅಂದು ಕವಿರಾಜಮಾರ್ಗದಲ್ಲಿ ಹೇಳಿದಂತೆ ಕಾವೇರಿ ಯಿಂದ ಗೋದಾವರಿಯ ವರೆಗೆ ಕನ್ನಡ ನಾಡು ಇತ್ತು ಎಂದು ಹೇಳಿದ್ದಾರೆ ಆದರೆ ಅಲ್ಲಿ ಇಂದಿಗೂ ಕನ್ನಡ ಮನಸ್ಸು ಗಳು ಕನ್ನಡದ ಕೈಂಕರ್ಯಕ್ಕೆ ಬದ್ದವಾಗಿವೆ ಎಂಬುವದಕ್ಕೆ ಇಂದಿನ ಈ ನಾಡಹಬ್ಬ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಜನಸಾಗರವೇ ಸಾಕ್ಷಿ ಎಂದು ಹೇಳಿ, ಶಿವಶರಣ ಅಲ್ಲಮ ಪ್ರಭು ಹಾಗೂ ಬಸವಣ್ಣನವರ ವಚನಗಳು ನಮ್ಮ ಬದುಕಿನ ದಾರಿ ದೀವಿಗೆ ಯಾಗಿವೆ, ನುಡಿದರೆ ಸಾಲದು ನುಡಿದಂತೆ ನಡೆಯ ಬೇಕು, ಎಲ್ಲಿ ಯಾವ ರೀತಿ ಮಾತನಾಡ ಬೇಕು ಎಂಬುದನ್ನು ನಮ್ಮ ಕನ್ನಡ ಭಾಷೆಯಿಂದ ಕಲಿಯಬೇಕು ಎಂದು ಹೇಳಿ ಇಂದಿನ ಈ ವೈಶಿಷ್ಟ್ಯಪೂರ್ಣ ನಾಡಹಬ್ಬವನ್ನು ಕಂಡು ಹೃದಯ ತುಂಬಿ ಬಂದಿದೆ,ನಿಮ್ಮ ನಾಡನುಡಿಯ ಸೇವೆ ನಿರಂತರವಾಗಿರಲಿ ಎಂದು ಆಶಿಸಿ ಶುಭಕೋರಿದರು.

ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ಡಿ ಶೆಟ್ಟಿ ಅವರು- ಸುಮಾರು ಐದೂವರೆ ದಶಕಗಳ ಹಿಂದಿನ ಡೊಂಬಿವಲಿ ಕರ್ನಾಟಕ ಸಂಘ ಇವತ್ತು ಬಾನೆತ್ತರಕ್ಕೆ ಬೇಳೆಯಲು ಸಮಸ್ತ ಕನ್ನಡ ಮನಸ್ಸು ಗಳ ಅಮೂಲ್ಯ ಸಹಾಯ ಸಹಕಾರವೇ ಕಾರಣ, ಸಂಘದ ನಾಲ್ಕು ವಿಭಾಗಗಳು ಸಂಘದ ಆಡಳಿತ ಮಂಡಳಿ ಯ ಅಮೂಲ್ಯ ಸಹಕಾರ ದಿಂದಾ ಕನ್ನಡದ ಸೇವೆಯನ್ನು ನಿರಂತರವಾಗಿ ಮುನ್ನಡೆಸಿಕೂಂಡು ಬಂದಿದ್ದು ನಿಮ್ಮೆಲ್ಲರ ಆಶೀರ್ವಾದದ ಶ್ರೀರಕ್ಷೆ ಸದಾ ಸಂಘದ ಜೋತೆಗೆ ಇರಲಿ ಎಂದು ಆಶಿಸಿ ಶುಭಕೋರಿದರು.

ಸಮಾರಂಭಕ್ಕೆ ನಾಡದೇವಿಯ ಭಾವಚಿತ್ರಕ್ಕೆ ವಿಶೇಷ ಪೋಜೆ ಹಾಗೂ ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ- ನಾಡ ಹಬ್ಬ ಕನ್ನಡಿಗರ ಪಾಲಿನ ಅತ್ಯಂತ ಮಹತ್ವದ ಹಬ್ಬ ಅದರಲ್ಲೂ ಹೊರನಾಡಿನಲ್ಲಿ ಸಮಸ್ತ ಕನ್ನಡ ಮನಸ್ಸು ಗಳನ್ನು ಒಗ್ಗೂಡಿಸಿ ನಡೆಸುವ ನಾಡಹಬ್ಬದ ಮಹತ್ವ ಅನನ್ಯ. ನಮ್ಮ ಜನ್ಮಭೂಮಿ ಭೂಮಿ ಕನ್ನಡ, ನಮ್ಮ ಭಾಷೆ ಕನ್ನಡ ಹಾಗೂ ನಮ್ಮ ಉಸಿರು ಕನ್ನಡವಾಗಿದ್ದರೂ ಸಹಿತ ಮರಾಠಿಯ ಮಣ್ಣಿನಲ್ಲಿ ಇತರೆ ಭಾಷಿಕರೊಂದಿಗೆ ಉತ್ತಮ ಬಾಂದವ್ಯದ ಜೋತೆಗೆ ಸ್ನೇಹ ಸೌಹಾರ್ದತೆಯನ್ನು ಮೈಗೂಡಿಸಿಕೊಂಡಿರುವ ಕನ್ನಡಿಗರು ಇತರರಿಗೂ ಮಾದರಿಯಾಗಿದ್ದೇವೆ ಎಂದು ಹೇಳಿದ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಕಳೆದ ಐದೂವರೆ ದಶಕಗಳಿಂದಾ ಕನ್ನಡದ ಸೇವೆಗೆ ಬದ್ಧರಾಗಿದ್ದ ಡೊಂಬಿವಲಿ ಕರ್ನಾಟಕ ಸಂಘ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈಯುವ ಜೋತೆಗೆ ಮಕ್ಕಳ ಉತ್ತಮ ಶಿಕ್ಷಣದ ದಾರಿ ದೀವಿಗೆ ಯಾಗಿದೆ ಎಂದು ಹೇಳಿ ಕನ್ನಡದ ಕೈಂಕರ್ಯಕ್ಕೆ ಸದಾ ಬದ್ಧವಾದ ಡೊಂಬಿವಲಿ ಕರ್ನಾಟಕ ಸಂಘ ಬಾನೆತ್ತರಕ್ಕೆ ಬೇಳೆಯಲಿ ಎಂದು ಹಾರೈಸಿ ಶುಭಕೋರಿದರು.


ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿ ಡಾ ಎ ಸುಬ್ಬಣ್ಣ ರೈ ಹಾಗೂ ದೇಶ ಭಕ್ತಿ ಗೀತೆಗಳ ಸ್ಪರ್ದೆಗೆ ತೀರ್ಪುಗಾರರಾಗಿ ಆಗಮಿಸಿದ ಕೆ ಎನ್ ಸತೀಶ್, ಪ್ರಫುಲ್ಲ ಚಂದ್ರ ಶೇಯಾನ್ ಹಾಗೂ ಶ್ರೀಮತಿ ಸೀಮಾ ಹೆಗಡೆ ಅವರನ್ನು ಶಾಲು ಶ್ರೀಫಲ ಹಾಗೂ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ತಿರ್ಪುಗಾರರ ಪರವಾಗಿ ಕೆ ಎನ್ ಸತೀಶ್ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ನಾಡ ಹಬ್ಬ ನಿಮಿತ್ತ ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಿದ್ದ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆ ಹಾಗೂ ದೇಶ ಭಕ್ತಿ ಗೀತೆಗಳ ಸ್ಪರ್ದೆ ಹಾಗೂ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಕೆರಂ ಹಾಗೂ ಚೇಸ್ ಸ್ಪರ್ದೆ ವಿಜೇತರಿಗೆ ಗಣ್ಯರು ಪುರಸ್ಕಾರ ನೀಡಿ ಗೌರವಿಸಿದರು. ಇಂದು ನಡೆದ ದೇಶ ಭಕ್ತಿ ಗೀತೆಗಳ ಸ್ಪರ್ದೆಯಲ್ಲಿ ಒಟ್ಟು ಹನ್ನೊಂದು ತಂಡಗಳು ಭಾಗವಹಿಸಿದ್ದು ಅವುಗಳಲ್ಲಿ ನವೋದಯ ಕನ್ನಡ ಸೇವಾ ಸಂಘ ಠಾಣೆ (ಪ್ರಥಮ) ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪದಕ ,ವರದ ಸಿದ್ದಿ ವಿನಾಯಕ ಭಜನಾ ಮಂಡಳ ಭೋಫರ್ ರಸ್ತೆ ಡೊಂಬಿವಲಿ (ದ್ವಿತೀಯ) ಎಳು ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ, ವರದ ಸಿದ್ದಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ (ತೃತೀಯ)ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ಉಳಿದ ಎಂಟು ತಂಡಗಳಿಗೂ ಪುಷ್ಪಗುಚ್ಛ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು,

ರಮೇಶ ಎ ಶೆಟ್ಟಿ, ಮಧುರಿಕಾ ಬಂಗೆರಾ, ರವಿ ಸನಿಲ್, ದೇವದಾಸ್ ಕುಲಾಲ ಸ್ಪರ್ದಾ ವಿಜೇತರ ಹೆಸರಗಳನ್ನು ಘೋಸಿಸಿದರು. ,ಮಧುರಿಕಾ ಬಂಗೆರಾ, ಆಶಾ ಎಲ್ ಶೆಟ್ಟಿ ಗಣ್ಯರನ್ನು ಪರಿಚಯಿಸಿದರು. ವೇದಿಕೆಯ ಮೇಲೆ ಗಣ್ಯರಾದ ಸುಕುಮಾರ ಎನ್ ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ,ಅತಿಥಿ ಡಾ ಎ ಸುಬ್ಬಣ್ಣ ರೈ, ದೇವದಾಸ್ ಕುಲಾಲ, ಪ್ರೋ ಅಜೀತ ಉಮರಾಣಿ,ದಿನೇಶ್ ಕುಡ್ವ, ಲೋಕನಾಥ ಎ ಶೆಟ್ಟಿ, ತಾರಾನಾಥ ಅಮೀನ್, ರಮೇಶ ಎ ಶೆಟ್ಟಿ, ವಸಂತ ಸುವರ್ಣ, ಸುಷ್ಮಾ ಡಿ ಶೆಟ್ಟಿ, ಆಶಾ ಎಲ್ ಶೆಟ್ಟಿ, ವಿಮಲಾ ವಿ ಶೆಟ್ಟಿ ಉಪಸ್ತಿತರಿದ್ದರು. ಭಾವನಾ ಬೆಂಗೇರಿ, ಹೇಮಾ ಹೆಗಡೆ ಹಾಗೂ ಸುರೇಖಾ ಗುಬ್ಬಿ ಅವರ ಪ್ರಾರ್ಥನೆ ಯೊಂದಿಗೆ ಗಣ್ಯರು ಜ್ಯೋತಿ ಬೆಳಗಿ ನಾಡ ದೇವಿಗೆ ವಿಶೇಷ ಪೋಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk

ಮುಂಬಯಿಯ ಉದ್ಯಮಿ ಸುನೀಲ್ ಆರ್ ಸಾಲ್ಯಾನ್ ಅವರಿಂದ ವಿಶೇಷ ಚೇತನಾ ಮಕ್ಕಳ ಆಶ್ರಮದಲ್ಲಿ ಹೊಸ ವರ್ಷಾಚರಣೆ.

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

84 ವರ್ಷಗಳ ಇತಿಹಾಸವುಳ್ಳಹಿರಿಯ ಜಾತೀಯ ಸಂಸ್ಥೆ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆ.

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk