April 2, 2025
ಮುಂಬಯಿ

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

ಎಲ್ಲರ ಸಹಕಾರ ದಿಂದ ಶೀಘ್ರದಲ್ಲೇ ಮಂದಿರ ನಿರ್ಮಾಣದ ಕನಸು ನನಸಗಲಿ – ಜಯರಾಮ್ ಪೂಜಾರಿ.

ಚಿತ್ರ : ಹರಿ ಪಿಲ್ಲೈ

ಮುಂಬಯಿ ಉಪನಗರ ಥಾಣೆ ಪಶ್ಚಿಮದ ಕಿಸನ್ ನಗರ, ಒಧವ್ ಬಾಗ್ ಸಮೀಪ ಕಳೆದ 23 ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಆರಾದಿಸಿಕೊಂಡು ಬರುತ್ತಿರುವ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆಯು ಡಿಸೆಂಬರ್ 16 ಮತ್ತು 17 ರಂದು ಕಿಸನ್ ನಗರದ ಒಧವ್ ಬಾಗ್ ಮೈದಾನದಲ್ಲಿ ಜರುಗಿತು.

ಡಿಸೆಂಬರ್ 16 ರ ಶನಿವಾರ ಬೆಳಿಗ್ಗೆ ಗಣಹೋಮ ನಡೆದು ಸಂಜೆ ಪುರೋಹಿತರಾದ ಶ್ರೀಧರ್ ಭಟ್ ಅವರ ಪೌರೋಹಿತ್ಯದಲ್ಲಿ, ಪದ್ಮಾವತಿ ಪ್ರಿಂಟ್ಸ್ ನ ಮಾಲಕರಾದ ಪುಷ್ಪರಾಜ್ ದಂಪತಿಗಳ ಸಂಕಲ್ಪದಲ್ಲಿ
ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು.
ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ತೀರ್ಥ್ ಪ್ರಸಾದ ಸ್ವೀಕರಿಸಿ, ಮಹಾಪ್ರಸಾದ ಸ್ವೀಕರಿಸಿದರು.

ನಂತರ ಸಮಿತಿಯ ಆದ್ಯಕ್ಷರಾದ ಜಯರಾಮ್ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಿರು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಅತಿಥಿಗಣ್ಯರ ಜೊತೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಸಮಿತಿಯ ರಘುವೀರ್ ಹೆಗ್ಡೆ ಸ್ವಾಗತಿಸಿದರೆ, ಕೋಶಾಧಿಕಾರಿ ನರೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರೋಹಿತರಾದ ಶ್ರೀಧರ್ ಭಟ್ ಆಶೀರ್ವಚನ ನೀಡಿದರು.

ನಂತರ ಪರಿಸರದ ಹಾಗೂ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಸಮಿತಿಯ ಹಿರಿಯ ಮಹಿಳಾ ಕಾರ್ಯಕರ್ತರಾದ ಶ್ರೀಮತಿ
ಸುಶೀಲ ನಾರಾಯಣ ಶೆಟ್ಟಿ, ಪದ್ಮಾವತಿ ಶಿವರಾಮ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಶಿಶು ತಜ್ಞರಾದ Dr. ಸತ್ಯಪ್ರಕಾಶ್ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ, ಉದ್ಯಮಿಗಳಾದ ಗಣೇಶ್ ಪೂಜಾರಿ, ನವೋದಯ ಕನ್ನಡ ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಏಳತ್ತೂರ್ ಗುತ್ತು, ಮಾತನಾಡುತ್ತ ಸಮಿತಿಯು ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.

ಆ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ನಾರಾಯಣ ಸುವರ್ಣ, ಮಾಜಿ MLC ರವೀಂದ್ರ ಪಾಠಕ್, ಮಾಜಿನಗರ ಸೇವಕಿ ಸುಖದ ಸಂಜಯ್ ಮೋರೆ, ಮಾಜಿನಗರ ಸೇವಕ ದೀಪಕ್ ವಿಟ್ಕರ್, ಹಾಗೂ ಡಾಕ್ಟರ್ ಅಭಿಜಿತ್ ಪಂಚಾಲ್ ಮತ್ತು ಮತ್ತಿತರ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಗಳನ್ನು ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಅಧ್ಯಕ್ಷೀಯ ಭಾಷಣಗೈಯುತ್ತ ಆದಷ್ಟು ಬೇಗನೆ ಉತ್ತಮವಾದ ಮಂದಿರದ ನಿರ್ಮಾಣ ನಮ್ಮ ಕನಸಾಗಿದೆ, ಅದನ್ನು ನನಸಾಗಿಸುವಲ್ಲಿ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು.

ಸಮಿತಿಯ ಉಪಾಧ್ಯಕ್ಷರಾದ ರಾಜೇಶ್ ರೈ, ಗುರುಸ್ವಾಮಿಯವರಾದ ಉದಯ ಗುರುಸ್ವಾಮಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘಟಕ, ಸಮಾಜ ಸೇವಕ ರಘುವೀರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ವಿತ್ತರೆ,
ಮಾಸ್ಟರ್ ಧಕ್ಷ್ ಯು ಶೆಟ್ಟಿ, ಮಾಸ್ಟರ್ ಸೂಚಿತ್ ಶೆಟ್ಟಿ, ಕುಮಾರಿ ಮೇಘ ಭಾಸ್ಕರ್ ಬಂಗೇರ ಅತಿಥಿಗಳನ್ನು ಪರಿಚಯಿಸಿದರು.

ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಹರೀಶ್ ಸಾಲ್ಯಾನ್, ವಿನಯ್ ಸನಿಲ್, ಪ್ರಶಾಂತ್ ಶೆಟ್ಟಿ ಮತ್ತು ಎಲ್ಲಾ ಸದಸ್ಯರು ಸಹಕರಿಸಿದರು.

ಡಿ.17 ಆದಿತ್ಯವಾರ ಬೆಳ್ಳಿಗ್ಗೆ ನಿತ್ಯ ಶರಣು ಘೋಷದ ನಂತರ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಪಂಚ್ ಪರಮೇಶ್ವರ ದೇವಸ್ಥಾನದಿಂದ ಡಿಸೋಜ ನಗರ ಮುಖೇನ ಶಿವಾಜಿ ನಗರ , ಅಲ್ಲಿಂದ ಪೂಜೆ ನಡೆಯುವ ಮೈದಾನಕ್ಕೆ ಬಂದಿತು.

ದೀಪ ಹಿಡಿದ ಸುಮಂಗಳೆಯರು, ಚೆಂಡೆ ವಾದ್ಯ, ಹುಲಿ ವೇಷ , ಕುಣಿತ ಭಜನೆ, ಯಕ್ಷಗಾನ ವೇಷ ಭೂಷಣ ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು,

ಚೆಂಡೆಯಲ್ಲಿ ಅಶೋಕ್ ದೇವಾಡಿಗರ ದುರ್ಗಂಬಿಕ ಚೆಂಡೆ ಗ್ರೂಪ್, ಹುಲಿವೇಷ ದಲ್ಲಿ ದುರ್ಗಂಬಿಕ ಹುಲಿವೇಷ ಬಳಗ ಅಸಲ್ಪ, ಕುಣಿತ ಭಜನೆಯಲ್ಲಿ ನವೋದಯ ಶಾಲೆಯ ಮಕ್ಕಳು, ಯಕ್ಷಗಾನದಲ್ಲಿ ಮನೋಜ್ ಕುಮಾರ್ ಹೆಜಮಾಡಿಯವರ ನಂದಿನಿ ಆರ್ಟ್ಸ್, ಸೆಕ್ಷೋಫೋನ್ ವಾದನದಲ್ಲಿ ಸಂತೋಷ್ ಬಂಗೇರ ಸಹಕರಿಸಿದರು.

ನಂತರ ಸಹಸ್ರ ನಾಮಾರ್ಚನೆ, ಹೂವಿನ ಪೂಜೆ, ಕರ್ಪುರ ಆರತಿ ನಡೆದು, ಪಡಿ ಪೂಜೆ, ಮಹಾ ಆರತಿ. ನೆರವೇರಿತು.

ಈ ಸಂದರ್ಭದಲ್ಲಿ 18 ನೇ ವರ್ಷದ ಶಬರಿಮಲೆ ಯಾತ್ರೆಯಲ್ಲಿ ರುವ ಸ್ವಾಮಿಗಳನ್ನು ಗೌರವಿಸಲಾಯಿತು.

ಪರಿಸರದ ರಾಜಕೀಯ, ಧಾರ್ಮಿಕ ಮುಖಂಡರು, ಉದ್ಯಮಿಗಳು, ಸಮಾಜ ಸೇವಕರುಗಳು, ಹಾಗೂ ಸಾವಿರಾರು ಭಕ್ತರು ಪೂಜೆಯಲ್ಲಿ ಉಪಸ್ಥಿತರಿದ್ದು, ಪ್ರಸಾದ ಸ್ವೀಕಾರಿಸಿ , ಮಹಾ ಅನ್ನ ಸಂತರ್ಪಣೆ ಪಾಲ್ಗೊಂಡರು.

ತವರಿನಿಂದ ಪೂಜೆಗಾಗಿ ಆಗಮಿಸಿದ ಜಯ ಪೂಜಾರಿ, ಕಾಪು ಅವರು ನಿರ್ಮಿಸಿದ ಮಂಟಪ ಭಕ್ತಾದಿಗಳ ಕಣ್ಮನ ಸೆಳೆಯಿತು.

ಮಹಾಪೂಜೆಯ ಬಳಿಕ ಮುಂಬಯಿಯ ಪ್ರಸಿದ್ಧ ಗಾಯಕ ಚಂದ್ರಹಾಸ್ ರೈ ಪುತ್ತೂರು ಬಳಗದವರಿಂದ ಭಜನೆ ನಡೆಯಿತು.

ಸಂಘಟಕ, ಸಮಾಜ ಸೇವಕ , ಸಮಿತಿಯ ಸದಸ್ಯರಾದ ರಘುವೀರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

ಅಧ್ಯಕ್ಷರಾದ ಜಯರಾಮ ಎಸ್.ಪೂಜಾರಿಯವರ ನೇತೃತ್ವದಲ್ಲಿ ಉಪಾಧ್ಯಕ್ಷ ರಾಜೇಶ್ ರೈ, ಕಾರ್ಯದರ್ಶಿ ರಮೇಶ್ ಎಸ್.ಕೋಟ್ಯಾನ್, ಜತೆ ಕಾರ್ಯದರ್ಶಿ ವಿನಯ ಪಿ.ಸನಿಲ್, ಕೋಶಾಧಿಕಾರಿ ನರೇಶ್ ಬಿ.ಪೂಜಾರಿ, ಜತೆ ಕೋಶಾಧಿಕಾರಿ ಪ್ರಶಾಂತ್ ಕೆ.ಶೆಟ್ಟಿ, ಸಲಹೆಗಾರರಾದ ರಾಜು ಸಫಲಿಗ, ಉತ್ತಮ್ ಎ. ಗಾಂವ್ಕರ್ , ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರು, ಶಿಬಿರದ ಸ್ವಾಮಿಗಳ, ಹಾಗೂ ಧಾನಿಗಳ ಭಕ್ತರ ಸಹಕಾರ ದಿಂದ 23ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ಅಯ್ಯಪ್ಪ ಸೇವಾ ಸಮಿತಿಯು ಪ್ರತಿ ವರ್ಷ ಶ್ರೀ ಅಯ್ಯಪ್ಪ ಮಹಾಪೂಜೆ, ಶ್ರೀ ಶನಿಮಹಾಪೂಜೆಯನ್ನು ಅದ್ದೂರಿಯಾಗಿ ನಡೆಸುತ್ತಿದ್ದು, ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿರದೆ, ಪರಿಸರದ ಬಡವರಿಗೆ ಆರ್ಥಿಕ, ಶೈಕ್ಷಣಿಕ ನೆರವು, ವೈದ್ಯಕೀಯ ಸಹಾಯ, ರಕ್ತದಾನ ಶಿಬಿರ ,ಹೀಗೆ ಸಮಾಜಿಕ ಕಾರ್ಯಗಳಲ್ಲೂ ತೋಡಿಗಿಕೊಂಡಿದ್ದು ಜಯರಾಮ ಪೂಜಾರಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಇದೀಗ ಸಮಿತಿಯು ಭವ್ಯ ಮಂದಿರ ನಿರ್ಮಿಸಲು ಯೋಜನೆ ರೂಪಿಸಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ,ಪರಿವಾರ ದೇವರ ಹಾಗೂ ಶ್ರೀ ಶನೀಶ್ವರನ ಕೃಪೆಯಿಂದ ಸಮಿತಿಯ ಇಚ್ಚೆ ಈಡೇರುವಂತಾಗಲಿ..

Related posts

ಕರ್ನಾಟಕ ಸಂಘ ಡೊಂಬಿವಲಿ: ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ವತಿಯಿಂದ ನಾಡ ಹಬ್ಬ ಅಚರಣೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಕಚೇರಿ, ಶಾರದಾ ಪೂಜೆ ಆಚರಣೆ.

Chandrahas

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ವಿಜೃಂಭಣೆಯಿಂದ ಜರಗಿದ 94 ನೇ ವರ್ಷದ ಗಣೇಶೋತ್ಸವ

Mumbai News Desk

ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದಿಂದ” ನಾರಿ ಉತ್ಸವ “

Mumbai News Desk

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk