
ಮುಂಬಯಿ : ಮಹಾನಗರದ ಜನಪ್ರಿಯ ಧಾರ್ಮಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಇದರ 26ನೇ ವಾರ್ಷಿಕ ಸಂಭ್ರಮ ಡಿ. 24ರಂದು (ರವಿವಾರ) ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆ 6ಗಂಟೆಯಿಂದ ಶ್ರೀ ಅದಮಾರು ಮಠ, ಫೈಯರ್ ಬ್ರಿಗೇಡ್ ನ ಹತ್ತಿರ, ಅಂದೇರಿ ಪಶ್ಚಿಮ ಇಲ್ಲಿ ನಡೆಯಲಿದೆ.
ವಾರ್ಷಿಕ ಉತ್ಸವ ಸಂಭ್ರಮದ ಅಂಗವಾಗಿ ಅಷ್ಟೋತ್ತರ ಶತ ನಲಿಕೇರ ಸಹಿತ ಅಷ್ಟೋತ್ತರ ಸಹಸ್ರ ಮೋದಕ ಮಹಾಗಣಪತಿ ಯಾಗ, ಸನವಗ್ರಹ ಶನೈಶ್ವರ ಶಾಂತಿ ಹವನ ನಡೆಯಲಿದೆ.
ಬೆಳಿಗ್ಗೆ 6 ರಿಂದ ದೇವತಾ ಪ್ರಾರ್ಥನೆ, ಪುಣ್ಯ ಹವಚನ, ಅಗ್ನಿ ಜನನ, 8 ರಿಂದ ವಿಷ್ಣು ಸಹಸ್ರನಾಮ ಪಾರಾಯಣ ವೇದ ಘೋಷ ಭಜನೆ (ವಿವಿಧ ಭಜನ ತಂಡಗಳಿಂದ) ನಾದಸ್ವರ ವಾದನ, 9 ರಿಂದ ಮಹಾಸಂಕಲ್ಪ, ಪ್ರಧಾನ-ಆವುತಿ , ಶನಿ ಶಾಂತಿ,11ರಿಂದ ಮಹಾಮಂಗಳಾರತಿ, ಅಷ್ಟವದನ ಸೇವೆ, (ಪ್ರಿಯಾಂಜಲಿ ರಾವ್ ಇವರಿಂದ ನೃತ್ಯ), 11.30ಕ್ಕೆ ಪೂರ್ಣಾಹುತಿ ಕೃಷ್ಣಾರ್ಪಣ, ಮಧ್ಯಾಹ್ನ 12 ಕ್ಕೆ ತೀರ್ಥ ಪ್ರಸಾದ ವಿತರಣೆ, ನಂತರ ಬೋಜನ ಪ್ರಸಾದ, ಮಧ್ಯಾಹ್ನ 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾದಸ್ವರ ವಾದ್ಯ ಕಲಾ ರತ್ನ ಹರೀಶ್ ಪೂಜಾರಿ ಮತ್ತು ಬಳಗದವರಿಂದ, ವಿಖ್ಯಾತ್ ಭಟ್ ಇವರಿಂದ ಸಂಗೀತ ನಾದ ಆರಾದನ, ಭಕ್ತಿ ಗಾನ ಸೇವೆ (ಕು. ನವ್ಯ ಉದಯಶಂಕರ್ ರಾವ್, ಶ್ರೀನಿಧಿ ಮತ್ತುಶ್ರೀವಸ್ತ ಭಟ್ ಇವರಿಂದ) 3ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 4 ರಿಂದ ಶ್ರೀ ಸಂಪೂರ್ಣ ರಾಮಾಯಣ ದರ್ಶನಂ (ನಾಟ್ಯ ರೂಪಕ) ನಡೆಯಲಿದೆ.
ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ ಭಟ್ ಇವರ ಆಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅಂಧೇರಿ ಪಶ್ಚಿಮದ ಶಾಸಕ ಅಮಿತ್ ಸಾಟಂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಬಿಲ್ಲವರ ಅಸೋಶಿಯೆಶನ್ ನ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಏರ್ ಇಂಡಿಯಾ ಸಿ.ಎಫ಼್.ಓ. ವಿನೋದ್ ಹೆಜ್ಮಾಡಿ, ಉದ್ಯಮಿ ಇನ್ನ ಜಯರಾಮ ಶೆಟ್ಟಿ, ನಿತ್ಯಾನಂದ ಸೇವಾ ಸಂಘದ ಅಧ್ಯಕ್ಷರಾದ ಸಿಬಿಡಿ ಭಾಸ್ಕರ ಶೆಟ್ಟಿ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಎನ್ ಐ ಎಸ್ ಡಿ ಗವರ್ನಿಂಗ್ ಕೌನ್ಸಿಲ್ ನ ಸದಸ್ಯರಾದ ಡಾ. ಹರೀಶ್ ಬಿ ಶೆಟ್ಟಿ, ಉದ್ಯಮಿ ಅರವಿಂದ್ ಎ. ಶೆಟ್ಟಿ, ಕಲಾವಿದ, ಉದ್ಯಮಿ ವಿಶ್ವನಾಥ ಶೆಟ್ಟಿ ಕಾಪು, ಕಲಾವಿದ ಕಮಲಾಕ್ಷ ಸರಾಫ್, ಹೋಟೆಲ್ ಉದ್ಯಮಿ ಬೈಲೂರು ಪ್ರಸಾದ್ ಪೂಜಾರಿ, ಉದ್ಯಮಿ ನಾಗರಾಜ್ ಜಿ ಪಡುಕೋಣೆ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಎ. ಮೂಲ್ಯ, ನೆರೂಳ್ ಅಯ್ಯಪ್ಪ ಟೆಂಪಲ್ ಅಧ್ಯಕ್ಷರಾದ ದಾಮೋದರ್ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ದೇವಾಡಿಗ ಸಂಘದ ಅಧ್ಯಕ್ಷರಾದ ಪ್ರವೀಣ್ ದೇವಾಡಿಗ, ಜವಾಬ್ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಜಯಲಕ್ಷ್ಮಿ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ರಂಗಪ್ಪ ಸಿ ಗೌಡ, ಕಲ್ಯ ಸ್ಕೂಲ್ ಶಾಂತಮ್ಮನ ಸಮಿತಿ ಅಧ್ಯಕ್ಷರಾದ ಸಂತೋಷ್ ಹೆಚ್ ಶೆಟ್ಟಿ ಗುರ್ಮೆದ ಬೈಲು, ಕನ್ನಡ ಸಂಘ ಸಂತಾಕ್ರೂಸ್ ಅಧ್ಯಕ್ಷರಾದ ಸುಜಾತ ಶೆಟ್ಟಿ, ದೀಪ್ತಿ ಯೋಗೇಶ್ ಸುವರ್ಣ, ಹೋಟೆಲ್ ಉದ್ಯಮಿ ಯೋಗೀಶ್ ಶೆಟ್ಟಿ ಮತ್ತು ಮೃದುಲ ಅರುಣ್ ಕೋಟ್ಯಾನ್ ಉಪಸ್ಥಿತರುರುವರು.
ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಇದರ 2023 ರ ಪ್ರಶಸ್ತಿಯನ್ನು ಕೆ ಕೃಷ್ಣರಾಜ ತಂತ್ರಿ (ಧಾರ್ಮಿಕ) ಡಾ. ಕೆ ಆರ್ ನಾಯರ್ (ಪರಿಸರ) ಮತ್ತು ಡಾ. ಸುಮನ್ ರಾವ್ (ವೈದ್ಯ ಕುಲ ರತ್ನ) ಇವರಿಗೆ ಪ್ರಧಾನಿಸಲಾಗುತ್ತಿದೆ.
ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಪರವಾಗಿ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ ಭಟ್, ಸುಮಾ ವಿ. ಭಟ್, ವಿರಾರ್ ಶಂಕರ ಬಿ. ಶೆಟ್ಟಿ, ಅವಿನಾಶ್ ಸಾಸ್ತ್ರಿ, (ಕೋಶಾಧಿಕಾರಿ), ಗೋಪಾಲ್ ಎಸ್ ಪುತ್ರನ್, ಅಶೋಕ್ ಕುಮಾರ್ ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಕಳತ್ತೂರು ವಿಶ್ವನಾಥ ಜೆ. ಶೆಟ್ಟಿ, ರಮೇಶ್ ಡಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನವೀನ್ ಪಡು ಇನ್ನ, ಶ್ಯಾಮ್ ಸುಂದರ್ ಸಾಲ್ಯಾನ್, ದಿನೇಶ್ ಕರ್ಕೇರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಕಾರ್ಯದರ್ಶಿ ಶ್ಯಾಮಲಾ ಶಾಸ್ತ್ರಿ ಜೊತೆ ಕಾರ್ಯದರ್ಶಿ ಸುಚಿತ್ರ ಶೆಟ್ಟಿ ಹಾಗೂ ಎಲ್ಲಾ ಸದಸ್ಯರುಗಳು ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಬಯಸಿದ್ದಾರೆ.