ವಸಾಯಿ, ಡಿ. 21: ವಸಾಯಿ ತಾಲೂಕು ಮೊಗವೀರ ಸಂಘದ ವತಿ ಯಿಂದ ತುಳು-ಕನ್ನಡಿಗರ ಆಹ್ವಾನಿತ ತಂಡಗಳಿಗಾಗಿ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಪ್ರೋಬಾಲ್ ಪಂದ್ಯಾಟವು ಜ. 21ರಂದು ಬೆಳಗ್ಗೆ 8ರಿಂದ ವಸಾಯಿ ಪಶ್ಚಿಮದ ಸನ್‌ಸಿಟಿ ಗೌಂಡ್‌ನಲ್ಲಿ ನಡೆಯಲಿದೆ.
ಪುರುಷರವಾಲಿಬಾಲ್‌ನಲ್ಲಿ ಪ್ರಥಮ 25,555 ರೂ., ದ್ವಿತೀಯ15,555 ರೂ. ನಗದು ಹಾಗೂ ಮಹಿಳೆಯರ ತೊ ಬಾಲ್‌ನಲ್ಲಿ ಪ್ರಥಮ 15,555 ರೂ., ದ್ವಿತೀಯ 7,777 ರೂ. ನಗದು ಬಹು ಮಾನನೀಡಲಾಗುವುದು.ವಾಲಿಬಾಲ್. ತಂಡದಲ್ಲಿ ಅತ್ಯುತ್ತಮ ಆಟಗಾರ, ಅತ್ಯು ತಮ ಆಲ್-ರೌಂಡರ್ ಮತ್ತು ಪ್ರೋ ಬಾಲ್ ತಂಡದಲ್ಲಿ ಅತ್ಯುತ್ತಮ ಆಟ ಗಾರ್ತಿ ಮತ್ತು ಅತ್ಯುತ್ತಮ ಆಲ್ ರೌಂಡರ್ ವಿಶೇಷ ಬಹುಮಾನ ನೀಡ ಲಾಗುವುದು. ಪ್ರವೇಶ ಶುಲ್ಕ ಪುರುಷರ ವಾಲಿಬಾಲ್ ತಂಡಕ್ಕೆ 2,000 ರೂ., ಮಹಿಳೆಯರ ತ್ರೋಬಾಲ್ ತಂಡಕ್ಕೆ 1,000 ರೂ. ನಿಗದಿಪಡಿಸಲಾಗಿದೆ.
ಆಟಗಾರರು ಮುಂಬಯಿ ಕನ್ನಡಿಗ ರಾಗಿರಬೇಕು. ಆಟಗಾರರು ಮಾನ್ಯ ಗುರುತುಪತ್ರವನ್ನು ಹೊಂದಿರಬೇಕು. ન ತಂಡಗಳು ಜ. 7ರೊಳಗೆ ನೋಂದಣಿ ಶುಲ್ಕ ಪಾವತಿಸುವ ಮೂಲಕ ತಂಡದ ಹೆಸರನ್ನು ದೃಢಪಡಿಸಬೇಕು.
ತಂಡಗಳು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು,
ಪಂದ್ಯವನ್ನು, ನಾಕೌಟ್ ಮಾದರಿಯಲ್ಲಿ ನಡೆಸಲಾಗುವುದು,
ಅಂಪಾಯರ್ ಮತ್ತು ನಿರ್ವಾಹಕರ ನಿರ್ಧಾರವೇ ಅಂತಿಮವಾಗಿದ್ದು,
ಆಟಗಾರರಿಗೆ ಜೆರ್ಸಿ ಕಡ್ಡಾಯವಾಗಿರುತ್ತದೆ.
ತೋಬಾಲ್ ಆಟವನ್ನು,7+2 ಆಟಗಾರರ ಮಾದರಿಯಲ್ಲಿ ನಡೆಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ
ನವೀನ್ ಪುತ್ರನ್ (9611494124)
ಮತ್ತು ತಿಲಕ್ ಸಾಲ್ಯಾನ್ (9833459927)
ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.