33.1 C
Karnataka
April 1, 2025
ಮುಂಬಯಿ

ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ.

ಮುಂಬಯಿ : ಖ್ಯಾತ ನೃತ್ಯ ಕಲಾವಿದೆ ವಿದೂಶಿ ಗೀತಾ ಸಾಲ್ಯಾನ್ ಅವರ ನಟನಾ ನೃತ್ಯ ಅಕಾಡೆಮಿ  ಪೊವಾಯಿಯ 11ನೇ ವಾರ್ಷಿಕೋತ್ಸವ ಸಮಾರಂಭವು ಡಿ. 17ರಂದು ಮಧ್ಯಾಹ್ನ ೨ ರಿಂದ ಗೋಕುಲ ಶ್ರೀಕೃಷ್ಣ ಕ್ಷೇತ್ರದ ಸಭಾಗೃಹ ಸಾಯನ್ ಇಲ್ಲಿ ನಡೆಯಿತು .  ಉದಯೋನ್ಮುಖ ಎಳೆಯ ಕಲಾವಿದರು ವಿವಿಧ ನೃತ್ಯಗಳಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ವಿದುಷಿ ಗೀತಾ ವೇದ್ ಪ್ರಾರಂಭದಲ್ಲಿ ಸ್ವಾಗತಿಸಿ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

. ನೃತ್ಯ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಗೆ ಎಲ್ಲರಿಗೂ ವಿಶೇಷವಾದ ಯ ಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ  ಕುಲಾಲ ಸಂಘದ ಅಧ್ಯಕ್ಷ ರಘುಮೂಲ್ಯ. ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ್ ಮುಲ್ಯ ಬಿ ಎಸ್ ಕೆ ಪಿ ಅಸೋಸಿಯೇಷನ್ ಉಪಾಧ್ಯಕ್ಷ ವಾಮನ ಹೊಳ್ಳ. ಮತ್ತು ವೇದ ಅವರು ಉಪಸ್ಥರಿದ್ದರು.

ಗೀತಾ ವೇದ್ ಸ್ಥಾಪಿಸಿದ ನಟನಾ ನೃತ್ಯ ಅಕಾಡೆಮಿ ಪೊವೈ, ಮರೋಲ್ ಮತ್ತು ನಹರ್‌ನಲ್ಲಿ ತನ್ನ ತರಗತಿಗಳನ್ನು ಹೊಂದಿದೆ. ಇವರು ಮುಂಬೈನ ನಳಂದ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತನಾಟ್ಯದಲ್ಲಿ ಲಲಿತಕಲೆಗಳ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಪವಾರ್ ಪಬ್ಲಿಕ್ ಸ್ಕೂಲ್ ಭಾಂಡಪ್‌ನಲ್ಲಿ ಕಾರ್ಯನಿರತರಾಗಿದ್ದಾರೆ. 17ನೇ ಡಿಸೆಂಬರ್ 2023 ರಂದು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದಾರೆ.

ಮುಂಬಯಿಯ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತ ನಾಟ್ಯವನ್ನು ಅಭ್ಯಾಸಮಾಡಿ ಇದೀಗ ಪವಾರ್ ಪಬ್ಲಿಕ್ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ದುಡಿಯುತ್ತಿದ್ದಾರೆ. ದೇಶದ ವಿವಿದೆಡೆ ನೃತ್ಯವನ್ನು ಪ್ರದರ್ಶಿಸಿ ಜನಪ್ರಿಯರಾದ  ಗೀತಾ ಸಾಲ್ಯಾನರು ಪುಣೆ ವಿಶ್ವವಿದ್ಯಾಲಯದ ಎಂ.ಎ.  ವಿದ್ಯಾರ್ಥಿನಿ.  ಗೀತಾ ಸಾಲ್ಯಾನ್ ಅವರು ನೂರಾರು ಮಕ್ಕಳನ್ನು ನೃತ್ಯಕಲಾವಿದರನ್ನಾಗಿ ಮಾಡಿರುವರು

———- 

Related posts

ಮೀರಾರೋಡ್ ಬ್ರಹ್ಮ ಮಂದಿರದಲ್ಲಿ ಬಾಲ ಭಜನೆ, ಶಾರದಾ ಪೂಜೆ.

Mumbai News Desk

ನವಿಮುಂಬಯಿಯ ಪನ್ವೆಲ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಮಾಲೋಚನೆ ಸಭೆ,

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಭಕ್ತಿ ಸಡಗರದ  ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ. ಸಂಪನ್ನ

Mumbai News Desk

ಬಿಲ್ಲವರ ಅಸೋಸಿಯೇಶನ್ , ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ : 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ

Mumbai News Desk

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ

Mumbai News Desk