
ದಹಿಸರ್ ಡಿ 25, ದಹಿಸರ್ ಪೂರ್ವದ ಶ್ರೀ ವಿಠೋಬಾ ರುಕುಮಾಯಿ ಮಂದಿರ ಕಾಶೀ ಮಠವು ವಷ೯ಂಪ್ರತಿ ನಡೆಯುವ ಬ್ರಹ್ಮ ರಥೋತ್ಸವದ ಪೂವ೯ಭಾವಿಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶ್ರೀಮದ್ ಸುದೀಂದ್ರತೀಥ೯ ಸ್ವಾಮೀಜಿಯವರ ಶುಭಾಶೀವಾ೯ದದಿಂದ ಶ್ರೀಮದ್ ಶ್ರೀ ಶ್ರೀ ಸಮ್ಯಮೇಂದ್ರ ಸ್ವಾಮೀಜಿ ಯವರ ಕ್ರಪೆಯಿಂದ ‘ಪಾಪಣ್ಣ ವಿಜಯ – ಗುಣ ಸುಂದರಿ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಕೊಂಕಣಿ ಭಾಷೆಯಲ್ಲಿ ಗುರುಕ್ರಪಾ ಕಲಾರಂಗದ ಕಲಾವಿದರಿಂದ ಕುಕ್ಕೆಹಳ್ಳಿ ವಿಠಲ ಪ್ರಭುರವರ ನಿದೇ೯ಶನದಲ್ಲಿ ಆಡಿತೋರಿಸಲಾಯಿತು.
ಯಕ್ಷಗಾನದ ಮಧ್ಯಂತರದಲ್ಲಿ ಯಕ್ಷಗಾನ ಕಲಾವಿದ ಹಾಗೂ ನಾಟಕಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದ ಹಿರಿಯ ಕಲಾವಿದರಾದ ತೋನ್ಸೆ ವೆಂಕಟೇಶ ಶೈಣೈ ಹಾಗೂ ಕಲಾವಿದೆ ಅಕ್ಷತಾ ಕಾಮತ್ ರವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಕಾಶೀಮಠದ ಕಾಯಾ೯ಧ್ಯಕ್ಷ ಮೋಹನದಾಸ ಮಲ್ಯರವರು ಮಾತನಾಡುತ್ತಾ ವಷ೯ಂಪ್ರತಿ ನಾವು ಸಾಂಸ್ಕೃತಿಕ ಅಂಗವಾಗಿ ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ, ಭಜನಾದಿ ದಾಮಿ೯ಕ ಕಾಯ೯ಕ್ರಮಗಳನ್ಮು ಹಮ್ಮಿಕೊಂಡು ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಮುಂಬಯಿಯಲ್ಲಿ ಎಲ್ಲೂ ಕಾಣಸಿಗದ ರಥೋತ್ಸವ ಶ್ರೀಮದ್ ಶ್ರೀ ಶ್ರೀ ಸುಧೀಂದ್ರ ತೀಥ೯ ಸ್ವಾಮೀಜಿ ಹಾಗೂ ಶ್ರೀಮದ್ ಶ್ರೀ ಶ್ರೀ ಸಮ್ಯಮೇಂದ್ರ ಸ್ವಾಮೀಜಿಯವರ ಕ್ರಪಕಟಾಕ್ಷದಿಂದ ಯಶಸ್ವಿಯಾಗಿಯೂ ವಿಜ್ರಂಭಣೆಯಿಂದಲೂ ನಡೆಸುತ್ತಾ ಬಂದಿದ್ದೇವೆ.
ಪರಮ ಪಾವನವಾದ ಈ ರಥೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವಿಠೋಬಾ ರುಕುಮಾಯಿಯ ಕ್ರಪೆಗೆ ಪಾತ್ರರಾಗಬೇಕೆಂದು ಶ್ರೀಯುತ ಮಲ್ಯರವರು ವಿನಂತಿಸಿದರು. ವೇದಿಕೆಯಲ್ಲಿ ಉಮೇಶ್ ಕಾಮತ್, ಸುಧೀರ್ ನಾಯಕ್, ಕುಕ್ಕೆಹಳ್ಳಿ ವಿಠಲ ಪ್ರಭು, ಪ್ರಶಾಂತ್ ಭಂಡಾರ್ಕರ್, ಡಾ ಚಂದ್ರಶೇಖರ್ ಶೈಣೈ, ಉದಯ ಮಲ್ಯ ಉಪಸ್ಥಿತರಿದ್ದರು.
ಯಕ್ಷಗಾನದಲ್ಲಿ ಭಾಗವತರಾಗಿ ಹರೀಶ್ ಶೆಟ್ಟಿ ಕಟೀಲು ಹಾಗೂ ವಿಠಲ್ ಎನ್. ಪ್ರಭು, ಮದ್ದಳೆಗಾರರಾಗಿ ಆಶೀಸ್ ಶೆಟ್ಟಿ, ಚೆಂಡೆಯಲ್ಲಿ ಮದುಸೂದನ್ ಪಾಲನ್, ಚಕ್ರತಾಳದಲ್ಲಿ ಕೀರ್ತಿ ಮೂಲ್ಯ ಸಹಕರಿಸಿದರು. ಮುಮ್ಮೇಳದಲ್ಲಿ ಟಿ. ವಿ. ಶೈಣೈ, ವಾಸುದೇವ ಶೈಣೈ, ಪ್ರಮೋದ್ ಮಲ್ಯ ಜಯಂತ್ ಮೂಡಬಿದ್ರಿ, ವಿಕ್ರಮ್ ಕಾಮತ್, ಗುರುಪ್ರಸಾದ್ ಪೈ. ಅಕ್ಷತಾ ಕಾಮತ್, ತ್ರಷಾ ಕಾಮತ್, ಪ್ರತೀಕ್ಷಾ ನಾಯಕ್, ಪ್ರತೀಕ್ಷಾ ಭಟ್, ಆರತಿ ಪೈ, ಚಿನ್ಮಯ ಕಿಣಿ, ಹೇಮಂತ್ ಕಿಣಿ, ವಿದ್ಯಾ ವೆಂಕಟರಮಣ ಭಟ್ಟ್ ಭಾಗವಹಿಸಿದ್ದರು. ಉದಯ ಮಲ್ಯ ಹಾಗೂ ವಿಠಲ್ ಎನ್ ಪ್ರಭು ಕಾಯ೯ಕ್ರಮ ನಿರೂಪಣೆ ಗೈದರು. ಕೊನೆಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.