24.7 C
Karnataka
April 3, 2025
ಮುಂಬಯಿ

 ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ,



 

ಅಷ್ಟೋತ್ತರ ಶತ ನಲಿಕೇರ ಸಹಿತ ಅಷ್ಟೋತ್ತರ ಸಹಸ್ರ ಮೋದಕ ಮಹಾಗಣಪತಿ ಯಾಗ, ಸನವಗ್ರಹ ಶನೈಶ್ವರ ಶಾಂತಿ ಹವನ ಸಂಪನ್ನ.

 ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ :  ಮಹಾನಗರದ ಜನಪ್ರಿಯ ಧಾರ್ಮಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಇದರ ರಜತ ಮಹೋತ್ಸವ ಸಂಭ್ರಮ ಡಿ. 24ರಂದು (ರವಿವಾರ) ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆ 6ಗಂಟೆಯಿಂದ ಸಂಜೆಯ ತನಕ  ಶ್ರೀ ಅದಮಾರು ಮಠ, ಫೈಯರ್ ಬ್ರಿಗೇಡ್ ನ ಹತ್ತಿರ,  ಅಂದೇರಿ ಪಶ್ಚಿಮ ಇಲ್ಲಿ ನಡೆಯಿತು.

ವಾರ್ಷಿಕ ಉತ್ಸವ ಸಂಭ್ರಮದ ಅಂಗವಾಗಿ ಅಷ್ಟೋತ್ತರ ಶತ ನಲಿಕೇರ ಸಹಿತ ಅಷ್ಟೋತ್ತರ ಸಹಸ್ರ ಮೋದಕ ಮಹಾಗಣಪತಿ ಯಾಗ, ಸನವಗ್ರಹ ಶನೈಶ್ವರ ಶಾಂತಿ ಹವನ .ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ ಭಟ್ ಅವರು  ಯಜಮಾನಿಕೆಯಲ್ಲಿ ವಿಪ್ರ ವೃಂದದವರು ನಡೆಸಿದರು.

 ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯ ಹವಚನ, ಅಗ್ನಿ ಜನನ,  ವಿಷ್ಣು ಸಹಸ್ರನಾಮ ಪಾರಾಯಣ ವೇದ ಘೋಷ ಭಜನೆ (ವಿವಿಧ ಭಜನ ತಂಡಗಳಿಂದ)  ನಾದಸ್ವರ ವಾದನ,  , ಪ್ರಧಾನ-ಆವುತಿ , ಶನಿ  ಶಾಂತಿ, ಮಹಾಮಂಗಳಾರತಿ, ಅಷ್ಟವದನ ಸೇವೆ, (ಪ್ರಿಯಾಂಜಲಿ ರಾವ್ ಇವರಿಂದ ನೃತ್ಯ),   ಪೂರ್ಣಾಹುತಿ ಕೃಷ್ಣಾರ್ಪಣ,  ಮಧ್ಯಾಹ್ನ  ತೀರ್ಥ ಪ್ರಸಾದ ವಿತರಣೆ, ನಂತರ ಬೋಜನ ಪ್ರಸಾದ, 

 ಮಧ್ಯಾಹ್ನ   ಸಾಂಸ್ಕೃತಿಕ ಕಾರ್ಯಕ್ರಮ, ನಾದಸ್ವರ ವಾದ್ಯ ಕಲಾ ರತ್ನ ಹರೀಶ್ ಪೂಜಾರಿ ಮತ್ತು ಬಳಗದವರಿಂದ, ವಿಖ್ಯಾತ್ ಭಟ್ ಇವರಿಂದ ಸಂಗೀತ ನಾದ ಆರಾದನ, ಭಕ್ತಿ ಗಾನ ಸೇವೆ (ಕು. ನವ್ಯ ಉದಯಶಂಕರ್ ರಾವ್,  ಶ್ರೀನಿಧಿ  ಮತ್ತುಶ್ರೀವಸ್ತ ಭಟ್ ಇವರಿಂದ   ನಡೆಯಿತು 

ಭಜನಾ ಕಾರ್ಯಕ್ರಮದಲ್ಲಿ ಮಾಧವೇಶ ಭಜನಾ ಮಂಡಳಿ ಪೇಜಾವರ ಮಠ, ಸಂತಾಕ್ರೂಸ್ , ಕೃಷ್ಣ ವಿಠಲ ಭಜನಾ ಮಂಡಳಿ ,  ಗೋಪಾಲಕೃಷ್ಣ ಭಜನಾ ಮಂಡಳಿ ಅದಮಾರು ಮಠ ಅಂದೇರಿ,  ವಾಗ್ದೇವಿ ಭಜನಾ ಮಂಡಳಿ ಬೋರಿವಲಿ,  ವಿಠ್ಠಲ ಭಜನಾ ಮಂಡಳಿ ಮೀರಾರೋಡ್,  ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ, ನಿತ್ಯಾನಂದ ಮಹಿಳಾ ಭಜನಾ ಮಂಡಳಿ, ಭಾಂಡೂಪ್ ತಂಡಗಳು ಭಾಗವಹಿಸಿದರು.

ಈ ಧಾರ್ಮಿಕ ಕಾರ್ಯಕ್ರಮ  ಯಶಸ್ವಿಯಾಗುವಲ್ಲಿ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಪರವಾಗಿ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ  ಕೈರಬೆಟ್ಟು ವಿಶ್ವನಾಥ ಭಟ್, ಸುಮಾ ವಿ. ಭಟ್, ವಿರಾರ್ ಶಂಕರ ಬಿ. ಶೆಟ್ಟಿ, ಅವಿನಾಶ್ ಸಾಸ್ತ್ರಿ, (ಕೋಶಾಧಿಕಾರಿ), ಗೋಪಾಲ್ ಎಸ್ ಪುತ್ರನ್, ಅಶೋಕ್ ಕುಮಾರ್ ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಕಳತ್ತೂರು ವಿಶ್ವನಾಥ ಜೆ.  ಶೆಟ್ಟಿ,  ರಮೇಶ್ ಡಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನವೀನ್ ಪಡು ಇನ್ನ, ಶ್ಯಾಮ್ ಸುಂದರ್ ಸಾಲ್ಯಾನ್,  ದಿನೇಶ್ ಕರ್ಕೇರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಕಾರ್ಯದರ್ಶಿ  ಶ್ಯಾಮಲಾ ಶಾಸ್ತ್ರಿ ಜೊತೆ ಕಾರ್ಯದರ್ಶಿ ಸುಚಿತ್ರ ಶೆಟ್ಟಿ ಸದಸ್ಯರುಗಳಾದ ಬಾಲಚಂದ್ರ ಭಟ್. ಗುರುಮೂರ್ತಿ, ಜಗನ್ನಾಥ ಪುತ್ರನ್,  ಪೂವಪ್ಪ ಪೂಜಾರಿ, ಜಗನ್ನಾಥ್ ಕಾಂಚನ್, ರವೀಂದ್ರ ಕರ್ಕೇರ, ಶಶಿಧರ್ ಶೆಟ್ಟಿ, ಕೆ. ಸದಾನಂದ ಶೆಟ್ಟಿ,  ಸುರೇಶ್ ಶೇಟ್,  ಶಂಕರ್ ಕೆ ಪೂಜಾರಿ, ವಿಶ್ವನಾಥ್ ಸಿ ಶೆಟ್ಟಿ, ಸುಧಾಕರ್ ಶೆಟ್ಟಿ, ಗೋಪಾಲ್ ನಾಯಕ್, ಹ್ಯಾರಿ ಸಿಕ್ವೇರಾ,  ವಸಂತ್ ಕುಂದರ್,  ಪ್ರಭಾಕರ್ ಬೆಳುವಾಯಿ, ಸುಧೀರ್ ಅಮೀನ್,  ಭರತ್ ಶೆಟ್ಟಿ, ವಾದಿರಾಜ ಕುಬೇರ್,  ಮಾದವ ಕೋಟ್ಯಾನ್, ಸತೀಶ್ ಪೂಜಾರಿ,  ಸುದೀರ್ ಶೆಟ್ಟಿ,  ಸುರೇಶ್ ಗಿಡ್ ಬಿಡಿ, ಶೇಖರ್ ಸಸಿಹಿತ್ತ್ಲು,  ಪ್ರಹ್ಲಾದ ಅಹುಜಾ, ಪ್ರಶಾಂತ್ ಜತ್ತನ್, ಚಿದಾನಂದ ರೈ, ಸುರೇಶ್ ಹೆಗ್ಡೆ,  ಮೋಹನ್ ಶೆಟ್ಟಿ,  ಭೀಮ್ ಡಿ, ಸಿಂಧೆ,  ಮಹಿಳಾ ವಿಭಾಗದ ಸದಸ್ಯರಾದ ಜಯರಾವ್, ಲೀಲಾ ಪೂಜಾರಿ, (ಕುಂಟಡಿ), ಜಯಂತಿ ಉಳ್ಳಾಳ್, ನಿರ್ಮಲ ಶಿವತ್ತಾಯ, ಶಶಿಕಲಾ ವಿ ಶೆಟ್ಟಿ ಮತ್ತು ಶೋಭಾ ಬಂಗೇರ ಸಹಕರಿಸಿದರು.

Related posts

ಮೀರಾ -ದಹಣು ಬಂಟ್ಸ್ ವತಿಯಿಂದ ಆಟಿದ ಕೂಟ -2024 ಕಾರ್ಯಕ್ರಮ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಜೀವಿಕ ವಿಜಯಓದ್ಭಾವ ಶೆಟ್ಟಿ ಗೆ ಶೇ 94 ಅಂಕ.

Mumbai News Desk

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾಚಿ ಭಂಡಾರಿ ಗೆ ಶೇ 93.40 ಅಂಕ.

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ  ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ

Mumbai News Desk