October 12, 2026
Mumbai News Kannada
ಮುಂಬಯಿ

ಲಾಲ್ ಬಾಗ್ ಚಾ ರಾಜ ಪಂಡಲ್ ನಲ್ಲಿ ವಿಐಪಿ ದರ್ಶನ ಪಕ್ಷಪಾತವನ್ನು ಖಂಡಿಸಿ, ನೋಟಿಸ್ ಜಾರಿ ಮಾಡಿದ ಮಾನವ ಹಕ್ಕುಗಳ ಆಯೋಗ



ಲಾಲ್ ಬಾಗ್ ಚಾ ರಾಜ ಪಂಡಲ್ ನಲ್ಲಿ ವಿಐಪಿ ಅಲ್ಲದ ಭಕ್ತರ ಮೇಲೆ ತಾರತಮ್ಯ ಮತ್ತು ದೌರ್ಜನ್ಯ ಎಸೆಗಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ದೂರಿನ ಮೇರೆಗೆ ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ ಲಾಲ್ ಬಾಗ್ಚ ರಾಜ ಸಾರ್ವಜನಿಕ ಗಣೇಶ ಮಂಡಲದ ಕಾರ್ಯದರ್ಶಿ, ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ, ಬಿ ಎಂ ಸಿ ಆಯುಕ್ತ ಮತ್ತು ಮುಂಬೈ ಪೊಲೀಸ್ ಆಯುಕ್ತರು ಸೇರಿದಂತೆ ಉನ್ನತ ರಾಜ್ಯ ಮತ್ತು ನಾಗರಿಕ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕಾರ್ಯಕರ್ತರದ ಆಶೀಶ್ ರೈ ಮತ್ತು ಪಂಕಜ್ ಕುಮಾರ್ ಮಿಶ್ರಾ ಅವರು ಸಲ್ಲಿಸಿದ ದೂರನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಪ್ರತಿಕ್ರಿಯೆಗಳನ್ನು ಕೋರಿದೆ ಮತ್ತು ಗಣೇಶೋತ್ಸವದ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಪರ್ಯಾಯ ಜನಸಂದಣಿ ನಿರ್ವಹಣಾ ಕ್ರಮಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಿ ಐ ಪಿ ಗಳಿಗೆ ದರ್ಶನಕ್ಕೆ ವಿಶೇಷ ಪ್ರವೇಶ ನೀಡಲಾಗಿದ್ದರೂ, ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಾಮಾನ್ಯ ಭಕ್ತರು ಕಿರುಕುಳ ಮತ್ತು ನಿರ್ಲಕ್ಷಕ್ಕೆ ಒಳಗಾಗುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಐಪಿ ದರ್ಶನದ ಕಾರಣದಿಂದಾಗಿ ತಾರತಮ್ಯವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ, ವ್ಯಕ್ತಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆರೋಪದೊಂದಿಗೆ ದೂರು ಪರಿಗಣನೆಗೆ ಅರ್ಹವಾಗಿದೆ ಎಂದು ಎಂ ಎಸ್ ಎಚ್ ಆರ್ ಸಿ (ಮಾನವ ಹಕ್ಕುಗಳ ಆಯೋಗ )ತನ್ನ ಆದೇಶದಲ್ಲಿ ತಿಳಿಸಿದೆ.
ತಮ್ಮ ಮೇಲೆ ನಡೆದ ದೌರ್ಜನ ಮತ್ತು ಅವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಹಲವು ವರದಿಗಳು ಬಂದಿದ್ದರೂ ಪೊಲೀಸರು ಅಥವಾ ರಾಜ್ಯ ಆಡಳಿತವು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇದರಿಂದಾಗಿ ಮಾನವ ಹಕ್ಕುಗಳ ಸಂಸ್ಥೆಯನ್ನು ಸಂಪರ್ಕಿಸಬೇಕಾಯಿತು ಎಂದು ದೂರುದಾರರು ಆರೋಪಿಸಿದ್ದಾರೆ. ಹಬ್ಬದ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಿತವಾಗಿ ಗೊಂದಲದ ದೃಶ್ಯಗಳು ಕಾಣಿಸಿಕೊಳ್ಳುತ್ತದೆ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಮಂಡಲದಿಂದ ನಿಯೋಜಿಸಲಾದ ಸ್ವಯಂಸೇವಕರು ಮತ್ತು ಖಾಸಗಿ ಸಿಬ್ಬಂದಿಗಳು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ತೋರಿಸುವ ದೃಶ್ಯಗಳನ್ನು ಆಯೋಗವು ಗಮನಿಸಿದೆ.ನಿಯಂತ್ರಿಸಲಾಗದ ಜನಸಂದಣಿ ಸಾಮಾನ್ಯ ಸಮಸ್ಯೆಯಾಗಿದ್ದು ಭಕ್ತರು ಮೂರ್ಚೆ ಹೋಗುವುದು , ಹಲ್ಲೆ ನಡೆಸುವುದು ಮತ್ತು ಮಂಡಲ ಸ್ವಯಂಸೇವಕರು ಅವರ ಬಟ್ಟೆಗಳನ್ನು ಹರಿದು ಹಾಕುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಎಂ ಎಸ್ ಎಚ್ ಆರ್ ಟಿ ಹೇಳಿದೆ.
ಆಯೋಗವು ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಪ್ರತಿಕ್ರಿಯಿಸಿ, ಅವರ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಭಕ್ತರ ಘನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯುವ ಕ್ರಮಗಳನ್ನು ಪರಿಗಣಿಸುವಂತೆ ಕೇಳಿದೆ.



Related posts

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ 16ನೇ ವರ್ಧಂತಿ ಗುರುಮೂರ್ತಿ ಪ್ರತಿಷ್ಠಾಪನೆ.

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ಶರನ್ನವರಾತ್ರಿ ಮಹೋತ್ಸವ ಶ್ರದ್ಧೆ ಭಕ್ತಿಯಿಂದ ಸಂಪನ್ನ

Mumbai News Desk

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಪ್ರವೇಶ ದ್ವಾರದಲ್ಲಿ ವಾಲ್ ಅಫ್ ಹೇಪಿನೆಸ್ ಉದ್ಘಾಟನೆ.

Mumbai News Desk

ಬೊರಿವಲಿ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, 52 ನೇ ವಾರ್ಷಿಕ ಮಹಾಸಭೆ

Mumbai News Desk

ನವೋದಯ ಕನ್ನಡ ಸೇವಾ ಸಂಘ (ರಿ), ಥಾಣೆ ಇದರ ಆಯೋಜನೆಯಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ

Mumbai News Desk