
ಅಪ್ಪಾಜಿ ಬೀಡು ಬಂದಾಗ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಅನುಭವ ಆಗುತ್ತದೆ – ಶಿವರಾಮ್ ಶೆಟ್ಟಿ ಕರಿಯನ ಗುತ್ತು
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ : ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಕಳೆದ 29 ವರ್ಷಗಳಿಂದ ನಡೆಯುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಯಲ್ಲಿ ವಿಶೇಷತೆಯಿದೆ. ಅಯ್ಯಪ್ಪ ಸ್ವಾಮಿಯನ್ನು ಭಕ್ತಿ ಶ್ರದ್ದೆಯಿಂದ ಪೂಜಿಸಲ್ಪಡುತ್ತಿರುವ ಅಪ್ಪಾಜಿ ಬೀಡು ಈ ಜಾಗದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಬಾಗ್ಯ ನಮಗೆ ಒದಗಿ ಬರುತ್ತಿದೆ. ಇಲ್ಲಿ ಅಯ್ಯಪ್ಪ ಸ್ವಾಮಿಯ ಕಲೆಯಿದೆ ಎಂದು ಬಂಟರ ಸಂಘ ಮುಂಬಯಿಯ ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ್ ಶೆಟ್ಟಿ ಕರಿಯನ ಗುತ್ತು ನುಡಿದರು.
ಪಡುಬಿದ್ರೆ, ಬೆಂಗ್ರೆ ರಮೇಶ ಗುರುಸ್ವಾಮಿ ಯವರು ಅಪ್ಪಾಜಿ ಬೀಡು, ಮಧುಸೂಧನ ಮಿಲ್ ಕಾಂಪೋಂಡ್ ಪಿ. ಬಿ. ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ಸ್ಥಾಪಿಸಿದ ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಮಧುಸೂಧನ ಮಿಲ್ ಕಾಂಪೋಂಡ್, ಪಿ. ಬಿ. ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ಡಿ. 24 ರಂದು ಬೆಳಿಗ್ಗೆ 5 ಗಂಟೆಯಿಂದ ತಡ ರಾತ್ರಿ ತನಕ ನಡೆದಿದ್ದು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಲ್ಲಿ ಮಾಲೆ ಹಾಕಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವವರು ನಿಜವಾಗಿಯೂ ಬಾಗ್ಯವಂತರು ಎನ್ನಬಹುದು. ಈ ಸಮಿತಿಗೆ ನಿಷ್ಟಾವಂತ ಅಧ್ಯಕ್ಷರು ದೊರೆತದ್ದು ನಿಮ್ಮೆಲ್ಲರ ಭಾಗ್ಯ ಎಂದರು.




ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿಯವರು ಇಲ್ಲಿ ಅನ್ನದಾನಕ್ಕೆ ಪ್ರಾಧಾನ್ಯತೆಯನ್ನು ಕೊಡಲಾಗುತ್ತಿದೆ. ಅನ್ನದಾನಕ್ಕೆ ಪ್ರಾಮುಖ್ಯತೆಯನ್ನು ಕೊಡುವ ಯಾವುದೇ ಸ್ಥಳ ಯಾ ಕ್ಷೇತ್ರದಲ್ಲಿ ಯಾವುದಕ್ಕೂ ಕೊರತೆ ಬರಲಾರದು ಎಂಬುದು ನನ್ನ ಅಭಿಪ್ರಾಯ. ಇಂತಹ ಪ್ರಸಿದ್ ಕ್ಷೇತ್ರದ ಜವಾಬ್ಧಾರಿಯನ್ನು ನನಗೆ ನೀಡಲಾಗಿದೆ. ನನ್ನೊಂದಿಗಿರುವ ಎಲ್ಲರೂ ತುಂಬಾ ಸಹಕಾರವನ್ನು ನೀಡಿದ್ದು ಇಂದಿನ ಕಾರ್ಯಕ್ರಮದ ಯಸ್ಸಸ್ಸಿಗೆ ಕಾರಣವಾಗಿದೆ ಎನ್ನುತ್ತಾ ಅಪ್ಪಾಜಿ ಬೀಡಲ್ಲಿ ನೆಲೆನಿಂತ ಪರಿವಾರ ದೇವರು ಎಲ್ಲರನ್ನು ಹರಸಲಿ ಎಂದರು.
ವೇದಿಕೆಯಲ್ಲಿ ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ, , ಸಂಸ್ಥಾಪಕರಾದ ರಮೇಶ್ ಗುರುಸ್ವಾಮಿ, ಅಯ್ಯಪ್ಪ ಸ್ವಾಮಿ ಭಕ್ತವೃಂದ ರೇರೋಡ್ ನ ಸತೀಶ್ ಗುರುಸ್ವಾಮಿ , ಗೌರವ ಅತಿಥಿಗಳಾದ , ಭಾರತ್ ಕೋ-ಆಪರೇಟಿವ್ ಬ್ಯಾಂಕ್, ಮುಂಬಯಿ ಲಿ. ಕಾರ್ಯಾಧ್ಯಕ್ಷ, ಸೂರ್ಯಕಾಂತ್ ಜೆ. ಸುವರ್ಣ, ಶಾರದಾ ರೆಸಿಡೆನ್ಸಿ ದಾದರ್ ನ ಅನಿತಾ ಅಶೋಕ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ್ ಶೆಟ್ಟಿ, ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಟ್ರಷ್ಟಿಗಳಾದ ಶ್ರೀಮತಿ ಶಾಂಭವಿ ಆರ್. ಶೆಟ್ಟಿ, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಕವಿತಾ ಜಿ. ಶೆಟ್ಟಿ, ಹಿರಿಯ ಟ್ರಷ್ಟಿ ರತ್ನಾಕರ ಜಿ. ಶೆಟ್ಟಿ ಉಪಸ್ಥಿತರಿದ್ದರು.




ವೇದಿಕೆ ಗಣ್ಯರೆಲ್ಲರೂ ಸೇರಿ ಶ್ರೀ ಅಯ್ಯಪ್ಪ ಭಕ್ತವೃಂದ ಭಾಯಂದರ್ ನ ಹರೀಶ್ ಗುರುಸ್ವಾಮಿ ಮತ್ತು ವರ್ಲಿ ಅಪ್ಪಾಜಿ ಬೀಡು ಅಶೋಕ್ ಗುಜ್ಜೆಟ್ಟಿ ಇವರಿಗೆ ಗುರು ವಂದನೆ ನಡೆಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ವಿವಿಧ ಗಣ್ಯರನ್ನು ಹಾಗೂ ಅಪ್ಪಾಜಿ ಬೀಡು ಫೌಂಡೇಶನ್ ನ ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ವಿಭಾಗದ ಮಾಜಿ ಪದಾಧಿಕಾರಿಗಳನ್ನು ಗೌರವಿಸಲಾಯಿತು
ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಟ್ರಷ್ಟಿ ರಘುನಾಥ ಎನ್. ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ರಂಗ ಕಲಾವಿದ ಮನೋಹರ ಶೆಟ್ಟಿ ನಂದಳಿಕೆ ಸಹಕರಿಸಿದರು.


ಟ್ರಷ್ಟಿಗಳಾದ ಸುರೇಶ್ ಎಸ್. ಶೆಟ್ಟಿ ಕೇದಗೆ, ರಘುನಾಥ ಎನ್. ಶೆಟ್ಟಿ, ಬಿ. ದಿನೇಶ್ ಕುಲಾಲ್, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ವಸಂತ್ ಪೂಜಾರಿ, ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ, ಗೌ. ಕೋಶಾಧಿಕಾರಿ, ಪ್ರಸಾದ್ ಶೆಟ್ಟಿ ಅರುವ, ಸಂಚಾಲಕ ಹಾಗೂ ಟ್ರಸ್ಟಿ ಸಂತೋಷ್ ವಿ ಶೆಟ್ಟಿ, ಉಪಾಧ್ಯಕ್ಷ ಉದಯ್ ಶೆಟ್ಟಿ, ಜೊತೆ ಕಾರ್ಯದರ್ಶಿ ವಿಜಯ್ ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸತ್ಯನಾರಾಯಣ ಕುಚನ್, ಸಲಹೆಗಾರರಾದ ಅರುಣ್ ಆಳ್ವ ಕಾಂತಡಿಗುತ್ತು, ಭೋಜ ಎಸ್ ಶೆಟ್ಟಿ ಕೇದಗೆ, ಅರುಣ್ ಶೆಟ್ಟಿ, ಪಡಿ ಪೂಜಾ ಸಮಿತಿಯ ಕಾರ್ಯದಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶೇಖರ ಶೆಟ್ಟಿ ವರ್ಲಿ, ಭರತ್ ಶೆಟ್ಟಿ ಅತ್ತೂರು, ಸಮಿತಿಯ ಸದಸ್ಯರಾದ , ಅರವಿಂದ್ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಗಣೇಶ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಪ್ರಕಾಶ್ ಜಾದವ್, ಸತೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಲೋಕೇಶ್ ತೋಳಾರ್, ಸಂತೋಶ್ ನಾಯಕ್, ಶ್ರೀಕಾಂತ್ ಶೆಟ್ಟಿ, ಚಂದ್ರಕಾಂತ್ ಭಂಡಾರಿ, ದಿಲೀಪ್ ಮೊಗವೀರ, ಅಜಯ್ ಶೆಟ್ಟಿ, ಸಂತೋಷ್ ಸಾಲ್ಯಾನ್, ಹರೀಶ್ ಶೆಟ್ಟಿ, ಸತೀಷ್ ಪೂಜಾರಿ, ಪಾರ್ಥಸಾರತಿ ಆರ್ ಶೆಟ್ಟಿ, ಜಯಕರ್ ಶೆಟ್ಟಿ, ಸಚಿನ್ ಶೆಟ್ಟಿ, ಶ್ರೀ ಅನ್ನಪೂರ್ಣೇಶ್ವರಿ , ಕಾರ್ಯದರ್ಶಿ ರೋಹಿಣಿ ಎಸ್ ಪೂಜಾರಿ, ಕೋಶಾಧಿಕಾರಿ ಶೋಭಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಶೆ ದಿವ್ಯ ಪಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜಾತ ಎನ್. ಪುತ್ರನ್, ಜೊತೆ ಕೋಶಾಧಿಕಾರಿ ನಿರ್ಮಲ ಕೆ. ಶೆಟ್ಟಿ, ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ವಿಜಯಶ್ರೀ ಎಸ್ ಶೆಟ್ಟಿ, ರಮ್ಯ ಎಸ್. ಶೆಟ್ಟಿ, ರಾಣಿ ಆರ್. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಸುಮಿತ್ರ ಪಿ. ಶೆಟ್ಟಿ, ನಿಮಾ ಆರ್ ಶೆಟ್ಟಿ, ಸಂಗೀತ ಪಿ. ಶೆಟ್ಟಿ, ಶರ್ಮಿಳಾ ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ವೀಣಾ ಎಂ ಹೆಗ್ಡೆ, ಶೈಲ ಎಲ್ ಶೆಟ್ಟಿ, ಯಶಸ್ವಿ ಆರ್ ಶೆಟ್ಟಿ, ಸುಪ್ರಿತ ಎ. ಶೆಟ್ಟಿ, ಸಲಹೆಗಾರಗಾದ ಉಶಾ ಬಿ. ಶೆಟ್ಟಿ, ಯಶೋಧಾ ಎಸ್. ಶೆಟ್ಟಿ, ವಿನೋದಾ ಜೆ. ಶೆಟ್, ಪ್ರಮೀಳಾ ಜೆ. ಶೆಟ್ಟಿ ಹಾಗೂ ಅಪ್ಪಾಜಿ ಬೀಡು ಪೌಂಡೇಶನಿನ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 5 ರಿಂದ ಶರಣು ಘೋಷ, ಗಣಹೋಮ, ನಂತ್ರರ ಅಪ್ಪಾಜಿ ಬೀಡು ಮಹಿಳಾ ಸದಸ್ಯರಿಂದ ಭಜನೆ ನಡೆಯಿತು ಬಳಿಕೆ ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು, ಮಧ್ಯಾಹ್ನ ಶಿಬರೂರು ಸುರೇಶ್ ಎಲ್ ಶೆಟ್ಟಿ ಮಣಿಕಂಠ ಭಕ್ತವೃಂದ, ಪನ್ವೆಲ್ ಇವರಿಂದ, ಭಕ್ತಿ ಗಾನ ಸುಧೆ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ (1118 ತುಪ್ಪದ ದೀಪಗಳಿಂದ ಭವ್ಯ ಮಂಟಪವನ್ನು ಅಲಂಕರಿಸಿ), ಬ್ರಾಮರಿ ಕಲಾ ತಂಡ ಕುಡ್ಲ ಇವರಿಂದ, ಭಕ್ತಿ ರಸಮಂಜರಿ, ರಾತ್ರಿ ಮಂಗಳಾರತಿ ಹರಿವರಾಸನಂ ನಡೆಯಿತು.
===
ಶಿಷ್ಯರು ಜೀವನವಿಡೀ ಶಿಸ್ತುಭದ್ದ ಜೀವನ ನಡೆಸಿದರೆ ನನಗೆ ನೀಡುತ್ತಿರುವ ಗುರುದಕ್ಷಿಣೆ,: ಪಡುಬಿದ್ರೆ, ಬೆಂಗ್ರೆ ರಮೇಶ ಗುರುಸ್ವಾಮಿ .
ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಸ್ಥಾಪಕರಾದ ಪಡುಬಿದ್ರೆ, ಬೆಂಗ್ರೆ ರಮೇಶ ಗುರುಸ್ವಾಮಿ ಆಶೀರ್ವಚನ ನೀಡುತ್ತಾ
ಪ್ರತಿಯೊಬ್ಬರೂ ಪೂಜೆ ಪುರಸ್ಕಾರ ಸೇರಿ ಎಲ್ಲಾ ಕಾರ್ಯ ದಲ್ಲಿ ಬಾಗಿಯಾಗಿ ಶಿಸ್ತುಬದ್ದವಾಗಿ ಎಲ್ಲಾ ಕೆಲಸಗಳನ್ನು ನಡೆಸಿಕೊಡುತ್ತಿದ್ದು ಅವರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಗುರುವಿನ ಸ್ಥಾನದಲ್ಲಿದ್ದ ಶಿಷ್ಯರೆಲ್ಲರಿಗೂ ಸೂಕ್ತ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡಿ ಕಟ್ಟುನಿಟ್ಟಿನಲ್ಲಿ ಮಾಡುವುದಕ್ಕೆ ಆಶೀರ್ವದಿಸುತ್ತೇನೆ ನನ್ನಿಂದ ಸಾದ್ಯವಾದಷ್ಟು ಶಬರಿಮಲೆ ಯಾತ್ರೆ ಮಾಡುವ ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದು ಅವರು ಕೇವಲ ಮಾಲತಾರಣೀಯ ಸಂದರ್ಭದಲ್ಲಿ ಮಾತ್ರ ಶಿಸ್ತಿನಲ್ಲಿರುವುದಲ್ಲ ಜೀವನವಿಡೀ ಶಿಸ್ತುಭದ್ದ ಜೀವನ ನಡೆಸಿದಾಗ ಅದುವೇ ನನಗೆ ನೀಡುತ್ತಿರುವ ಗುರುದಕ್ಷಿಣೆ ಎಂದು ಬಾವಿಸುತ್ತೇನೆ.
===
ಮಾಲಾ ಧಾರಣೆಯಲ್ಲಿ ಮಾಡಿದವರಲ್ಲಿ ಪವಿತ್ರತೆ ಇರಲಿ: ಸೂರ್ಯಕಾಂತ್ ಜೆ. ಸುವರ್ಣ,
ಭಾರತ್ ಕೋ-ಆಪರೇಟಿವ್ ಬ್ಯಾಂಕ್, ಮುಂಬಯಿ ಕಾರ್ಯಾಧ್ಯಕ್ಷ, ಸೂರ್ಯಕಾಂತ್ ಜೆ. ಸುವರ್ಣ ಮಾತನಾಡಿಈ ಕ್ಷೇತ್ರದಲ್ಲಿ ಮಾಲೆ ಹಾಕಿ ಶಬರಿಮಲೆ ಯಾತ್ರೆ ಗೈಯ್ಯುವ ಎಲ್ಲಾ ಸ್ವಾಮಿಗಳ ಶಬರಿಮಲೆ ಯಾತ್ರೆಯು ಯಶಸ್ಸಿಯಾಗಿ ನಡೆಯಲಿ ಎಂದು ಶುಭ ಹಾರೈಸುತ್ತಿರುವೆನು.
–
—————————–
ಶ್ರದ್ದಾ ಭಕ್ತಿಯಿಂದ ಅಯ್ಯಪ್ಪ ದರ್ಶನ ಮಾಡಿದಲ್ಲಿ ಬದುಕು ಸಾರ್ಥಕತೆ : ಅನಿತಾ ಅಶೋಕ್ ಶೆಟ್ಟಿ,
ಶಾರದಾ ರೆಸಿಡೆನ್ಸಿ ದಾದರ್ ಅನಿತಾ ಅಶೋಕ್ ಶೆಟ್ಟಿಯವರ ಮಾತನಾಡಿ ಶ್ರದ್ದಾ ಭಕ್ತಿಯಿಂದ ಅಯ್ಯಪ್ಪ ದರ್ಶನ ಮಾಡಿದಲ್ಲಿ, ನಮ್ಮೆಲ್ಲ ಕಷ್ಟಗಳು ಪರಿಹಾರ ಆಗುತ್ತದೆ. ರೀತಿ ನಿಯಮವನ್ನು ಪಾಲಿಸಿ ಜೀವನ ನಡೆಸಿದಲ್ಲಿ ನಮ್ಮ ಜೀವನ ಉದ್ದಾರವಾಗುದರೊಂದಿಗೆ ಸಮಾಜಕ್ಕೂ ಪ್ರಯೋಜನ ವಾಗುವುದು ಇಂತಹ ದಾರ್ಮಿಕ ಕಾರ್ಯದಲ್ಲಿ ಬಾಗಿಯಾಗುದರೊಂದಿಗೆ ಜನ್ಮ ಸಾರ್ಥಕವಾಗುವುದು.
ಅನಿತಾ ಅಶೋಕ್ ಶೆಟ್ಟಿ, ಶಾರದಾ ರೆಸಿಡೆನ್ಸಿ ದಾದರ್
——————–
ಅಪ್ಪಾಜಿ ಬೀಡು ನ ಮಣ್ಣಿನಲ್ಲಿ ವಿಶೇಷತೆಯಿದೆ. :ಸತೀಶ್ ಗುರುಸ್ವಾಮಿ
ಅಯ್ಯಪ್ಪ ಸ್ವಾಮಿ ಭಕ್ತವೃಂದ ರೇರೋಡ್ ನ ಸತೀಶ್ ಗುರುಸ್ವಾಮಿ ಇವರು ನನ್ನ ಗುರು ಸ್ವಾಮಿಗಳ ಆಶೀರ್ವಾದಂತೆ ಈ ತನಕ ನಾನು ನಡೆದುಕೊಂಡು ಬಂದಿರುವೆನು. ಅಪ್ಪಾಜಿ ಯ ಈ ಮಣ್ಣಿನಲ್ಲಿ ವಿಶೇಷತೆಯಿದೆ. ಇದರ ಅನುಭವ ನನಗಾಗಿದೆ. ರೇರೋಡ್ ಮತ್ತು ಅಪ್ಪಾಜಿ ಮದ್ಯೆ ಸಂಪರ್ಕ ಕಲ್ಪಿಸಲು ಕಾರಣ ಮಾಜಿ ಅಧ್ಯಕ್ಷರಾದ ಸುರೇಶ್ ಕೇದಗೆಯವರು ಎನ್ನುತ್ತಾ ರೇರೋಡ್ ನಲ್ಲಿ ನಡೆಯಲಿರುವ ಅಯ್ಯಪ್ಪ ಪೂಜೆಗೆ ಎಲ್ಲರನ್ನು ಆಮಂತ್ರಿಸಿದರು.