



ಭಾಯಂದರ್ ಪೂರ್ವ ಗೋಡ್ ದೇವ್ ಫಾಟಕ್ ರೋಡ್ ಹನುಮಾನ್ ನಗರದ ಶ್ರೀ ಹನುಮಾನ್ ಭಜನಾ ಮಂಡಳಿ(ಶ್ರೀ ಮಣಿಕಂಠ ಸೇವಾ ಸಂಘದ ಸದಸ್ಯ) ,ಇದರ 26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಸಪೂಜೆ ಡಿ.29 ರಿಂದ ಡಿ.31ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಅರುಣ್ ತಂತ್ರಿ, ವೇದ ಮೂರ್ತಿ ಗಣೇಶ್ ಸರಳಾಯ ಉಡುಪಿ ,ಸಂತೋಷ್ ಗುರುಸ್ವಾಮಿ ಮೂಡುಮಾರ್ನಾಡ್ ಇವರ ಮಾರ್ಗದರ್ಶನದಲ್ಲಿ ಜರಗಲಿದೆ.
ಮಹಾಪೂಜೆಯ ನಿಮಿತ್ತ ತಾ.29, ಶುಕ್ರವಾರ ಬೆಳ್ಳಿಗ್ಗೆ 5.30 ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ,ದ್ವಾದಶ ನಾರಿಕೇಳ ಮಹಾಗಣಪತಿ ಯಾಗ,ಚಂಡಿಕಾ ಯಾಗ ,ದೇವರಿಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ವಿವಿಧ ಆಹ್ವಾನಿತ ಭಜನಾ ಮಂಡಲಿಯವರಿಂದ ಭಜನೆ.
ಸಂಜೆ 6.30ಕ್ಕೆ ದುರ್ಗನಮಸ್ಕಾರ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ.
ತಾ.30 ರಂದು ಶನಿವಾರ ಬೆಳ್ಳಿಗ್ಗೆ 6 ಗಂಟೆಗೆ ಸ್ವಸ್ತಿ ಪುಣ್ಯಾವಾಚನ, ಮಹಾವಿಷ್ಣು ಯಾಗ,ಪ್ರಧಾನ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಾಶಾಭಿಷೇಕ, ಲಕ್ಷ ತುಳಸಿ ಆರ್ಚನೆ, ಭಜನೆ, ಪ್ರಸನ್ನ ಪೂಜೆ, ಪಡಿಪೂಜೆ, ಮಹಾ ಪೂಜೆ, ಪಲ್ಲಾಪೂಜೆ, ತೀರ್ಥ ಪ್ರಸಾದ ವಿತರಣೆ.
ಮದ್ಯಾಹ್ನ 1 ರಿಂದ 3.30ರ ವರೆಗೆ ಮಹಾ ಅನ್ನಸಂತರ್ಪಣೆ.
ಸಾಯಂಕಾಲ ಸಂಜೆ 6 ಗಂಟೆಗೆ ಮಹಾ ದೀಪಾಲಂಕಾರ ಸೇವೆ, ಪಡಿಪೂಜೆ, ರಂಗಪೂಜೆ, ತೀರ್ಥ ಪ್ರಸಾದ ವಿತರಣೆ.
7.30 ರಿಂದ ಮಹಿಳಾ ವಿಭಾಗ ಹಾಗೂ ಯುವ ವಿಭಾಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಆ ಬಳಿಕ ಮಂಡಳಿಯ ಅಧ್ಯಕ್ಷ ಜಯರಾಮ್ ಎಂ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರಗಲಿದೆ.
ಮಾಜಿ ಶಾಸಕ ನರೇಂದ್ರ ಮೆಹ್ತಾ, ಸಾಯಿಬಾಬಾ ಹಾಸ್ಪಿಟಲ್ ನ ಡಾ.ಅಂಬರೀಷ್ ಹೆಗ್ಡೆ, ಸೈನ್ಟ್ ಆಗ್ನೇಸ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಡಾ.ಅರುಣೋದಯ ರೈ, ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ,ಉದ್ಯಮಿ ಶಶಿದರ್ ಶೆಟ್ಟಿ, ಸೆವೆನ್ ಸ್ಕ್ವಾರ್ ಅಕಾಡೆಮಿಯ ಪ್ರಾಂಶುಪಾಲೆ ಕವಿತಾ ಹೆಗ್ಡೆ , ಗೌರವ ಅತಿಥಿಗಳಾಗಿರುವರು.
ರಾತ್ರಿ ಘಂಟೆ 10ಕ್ಕೆ ಬೇಬಿ ಆನಂದ ಶೆಟ್ಟಿ ದಂಪತಿಯ ಪ್ರಯೋಜಕತ್ವದಲ್ಲಿ , ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ತುಳುನಾಡ ಸಿರಿ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ.31 ಕ್ಕೆ ಪ್ರಾತಃಕಾಲ 5 30ಕ್ಕೆ ಮಂಗಳ ಗಣಯಾಗ, ಸಂಪ್ರೋಕ್ಷಣೆ, ದೇವರಿಗೆ ಮಹಾ ಮಂಗಳಾರತಿ.
26ನೇ ವಾರ್ಷಿಕ ಮಹಾಪೂಜೆಯ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಇಷ್ಟ-ಮಿತ್ರ ಬಂಧು-ಭಾಂದವರೊಂದಿಗೆ ಪಾಲ್ಗೊಂಡು ತನು-ಮನ-ಧನದಿಂದ ಸಹಕರಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸುವಂತ್ತೆ,
ಸಂತೋಷ್ ಗುರುಸ್ವಾಮಿ, ಗೌರವ ಅಧ್ಯಕ್ಷ ಅರವಿಂದ ಶೆಟ್ಟಿ(ಮಾಜಿ ನಗರ ಸೇವಕ), ಅಧ್ಯಕ್ಷ ಜಯರಾಮ್ ಎಂ.ಶೆಟ್ಟಿ, ಗೌರವ ಕಾರ್ಯದರ್ಶಿ ಅಶೋಕ್ ಕೆ ಕೋಟ್ಯಾನ್, ಗೌರವ ಕೋಶಾಧಿಕಾರಿ ಸುಕುಮಾರ ಎಂ ಶೆಟ್ಟಿ, ಉಪಾಧ್ಯಕ್ಷರುಗಳಾದ ಚಂದ್ರಮೋಹನ ಆರ್ ಅಮೀನ್, ಸುರೇಶ್ ಶೆಟ್ಟಿ ಕಳತ್ತೂರು, ಜತೆ ಕಾರ್ಯದರ್ಶಿ ಶೇಖರ್ ಎ ಬಂಗೇರ, ಆನಿಲ್ ವಿ ಕುಕ್ಯಾನ್, ಜತೆ ಕೋಶಾಧಿಕಾರಿ ಅಶೋಕ್ ಆರ್ ಅಮೀನ್, ದಯಾನಂದ ಜಿ ಕರ್ಕೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುನಿತ ಎಸ್.ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಿ ಎಸ್ ಸುವರ್ಣ ,ಭುವಾಜಿ ದಯಾನಂದ ವಿ ಮೆಂಡನ್, ಯುವ ವಿಭಾಗದ ಅಧ್ಯಕ್ಷ ದೀಪಕ್ ಕೆ ಕೋಟ್ಯಾನ್, ಕಾರ್ಯದರ್ಶಿ ನಿಖಿಲ್ ಎಸ್ ಬಂಗೇರ, ಹಾಗೂ ಶ್ರೀ ಮಣಿಕಂಠ ಭಜನಾ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ,ಸಮಿತಿಯ ಸ್ವಾಮಿಗಳು ವಿನಂತಿಸಿದ್ದಾರೆ.