
ಅಯೋದ್ಯ ಶ್ರೀರಾಮ ಮಂಟಪದಲ್ಲಿ ಪ್ರಥಮ ದೀಪ ಜ್ವಲನ ವಾಗಿದೆ – ವಿದ್ಯಾನ್ ಕೈರಬೆಟ್ಟು ವಿಶ್ವನಾಥ ಭಟ್
ವರದಿ : ಈಶ್ವರ ಎಂ. ಐಲ್, ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ನಮ್ಮ ಧಾರ್ಮಿಕ ಕಾರ್ಯಕ್ರಮದ ಇಂದಿನ ವೇದಿಕೆಗೆ ಅಯೋದ್ಯ ಶ್ರೀರಾಮ ಮಂಟಪ ಎಂದು ಹೆಸರಿಸಲಾಗಿದ್ದು ಅಯೋದ್ಯ ಶ್ರೀರಾಮ ಮಂಟಪದಲ್ಲಿ ದೀಪ ಪ್ರಜ್ವಲಿಸಿ ಇಂದಿನ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದು ಅಯೋದ್ಯ ರಾಮ ಮಂದಿರದ ಮುಂಬಯಿಯ ಪ್ರಥಮ ದೀಪ ಜ್ವಲನ ವಾಗಿದೆ ಎಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ ಭಟ್ ಅವರು ಅಭಿಪ್ರಾಯಪಟ್ಟರು.
ಡಿ. 24ರಂದು ಅಂದೇರಿ ಪಶ್ಚಿಮ ಶ್ರೀ ಅದಮಾರು ಮಠ, ದಲ್ಲಿ ನಡೆದ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜ. 22 ರ ನಂತರ 48 ದಿನಗಳ ಕಾಲ ನಮ್ಮ ಗುರುಗಳಾದ ಪೇಜಾವರ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಅಯೋದ್ಯಯಲ್ಲಿ 48 ಮಹಾ ಯಾಗ ನಡೆಯಲಿದೆ. ಅದರಲ್ಲಿ ನಾವೂ ಪಾಲ್ಗೊಳ್ಳಲಿರುವೆವು. 22 ರಂದು ನಡೆಯಲಿರುವ ಭ್ರಹ್ಮ ಕಲಶದಲ್ಲಿ ಕರ್ನಾಟಕದ ಪುರೋಹಿತರು ನಮ್ಮ ಗುರುಗಳ ಸನ್ನಿದಾನದಲ್ಲಿ ಪರಮಪೂಜ್ಯ ಪೇಜಾವರ ಶ್ರೀ ಪಾದರು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನಿರ್ದೇಶನದಲ್ಲಿ ಈ ಕಾರ್ಯ ನಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಕಳೆದ 26 ವರ್ಷಗಳಿಂದ ಈ ವೇದಿಕೆಯಲ್ಲಿ 172 ಮಂದಿ ಅರ್ಹರಿಗೆ ಪ್ರಶಸ್ತಿ ನೀಡಿ ನಿಸಲಾಗಿದೆ ಎನ್ನುತ್ತಾ ಪ್ರಕೃತಿಯೇ ದೇವರು ಎಂದಿನೆಸಿದ ಆರ್ ಕೆ ನಾಯರ್ ಸೇರಿ ಪ್ರಶಸ್ತಿಯನ್ನು ಸ್ವೀಕರಿಸಿದ ಎಲ್ಲರಿಗೂ ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೆ ಅಭಿನಂದನೆ ಸಲ್ಲಿಸಿ ಬಾರತ ವರ್ಷದಲ್ಲಿ ಜಗತ್ತಿಗೆ ಕಲ್ಯಾಣವಾಗಲಿ ಎಂದು ಶುಭ ಹಾರೈಸಿದರು.




ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪದ್ಮನಾಭ ಸಸಿಹಿತ್ತ್ಲು ಪ್ರಾರ್ಥನೆಗೈದರು.
ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಇದರ 2023 ರ ಪ್ರಶಸ್ತಿಗಳಾದ ಧರ್ಮ ಸಮಾಜ ಭೂಷಣ ಪ್ರಶಸ್ತಿಯನ್ನು ಕೆ ಕೃಷ್ಣರಾಜ ತಂತ್ರಿ ಯವರಿಗೆ, ಪಕೃತಿ ಪರ್ಯಾವರಣ ಮಿತ್ರ ಪ್ರಶಸ್ತಿಯನ್ನು ಡಾ. ಕೆ ಆರ್ ನಾಯರ್ ಯವರಿಗೆ ಮತ್ತು ವೈದ್ಯ ಕುಲ ರತ್ನ ಪ್ರಶಸ್ತಿಯನ್ನು ಡಾ. ಸುಮನ್ ರಾವ್ ಇವರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಪ್ರಧಾನಿಸಿ ಅಭಿನಂದಿಸಿದರು. ವಿದ್ಯಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರನ್ನು ಸುಮಾ ವಿ. ಭಟ್ ಮತ್ತು ಅವರ ಮಕ್ಕಳೊಂದಿಗೆ ಸನ್ಮಾನಿಸಲಾಯಿತು.
ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಏರ್ ಇಂಡಿಯಾ ಸಿ.ಎಫ಼್.ಓ. ವಿನೋದ್ ಹೆಜ್ಮಾಡಿ, ಉದ್ಯಮಿ ಇನ್ನ ಜಯರಾಮ ಶೆಟ್ಟಿ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉದ್ಯಮಿ ವಿಶ್ವನಾಥ ಶೆಟ್ಟಿ ಕಾಪು, ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಎ. ಮೂಲ್ಯ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ದೀಪ್ತಿ ಯೋಗೇಶ್ ಸುವರ್ಣ, ಹೋಟೆಲ್ ಉದ್ಯಮಿ ಯೋಗೀಶ್ ಶೆಟ್ಟಿ, ಮೃದುಲ ಅರುಣ್ ಕೋಟ್ಯಾನ್, ಟ್ರಷ್ಟಿಗಳಾದ ಸುಮಾ ವಿ. ಭಟ್, ಅವಿನಾಶ್ ಸಾಸ್ತ್ರಿ, (ಕೋಶಾಧಿಕಾರಿ), ಕಳತ್ತೂರು ವಿಶ್ವನಾಥ ಜೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಕಾರ್ಯದರ್ಶಿ ಶ್ಯಾಮಲಾ ಶಾಸ್ತ್ರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,




ಬೆಳಿಗ್ಗೆ ಅಷ್ಟೋತ್ತರ ಶತ ನಲಿಕೇರ ಸಹಿತ ಅಷ್ಟೋತ್ತರ ಸಹಸ್ರ ಮೋದಕ ಮಹಾಗಣಪತಿ ಯಾಗ, ಸನವಗ್ರಹ ಶನೈಶ್ವರ ಶಾಂತಿ ಹವನ ನಡೆಯಿತು. ದೇವತಾ ಪ್ರಾರ್ಥನೆ, ಪುಣ್ಯ ಹವಚನ, ಅಗ್ನಿ ಜನನ, ವಿಷ್ಣು ಸಹಸ್ರನಾಮ ಪಾರಾಯಣ ವೇದ ಘೋಷ ಭಜನೆ ನಾದಸ್ವರ ವಾದನ, ನಂತರ ಮಹಾಸಂಕಲ್ಪ, ಪ್ರಧಾನ-ಆವುತಿ , ಶನಿ ಶಾಂತಿ, ಮಹಾಮಂಗಳಾರತಿ, ಅಷ್ಟವದನ ಸೇವೆ, ಪ್ರಿಯಾಂಜಲಿ ರಾವ್ ಇವರಿಂದ ನೃತ್ಯ, ಪೂರ್ಣಾಹುತಿ ಕೃಷ್ಣಾರ್ಪಣ, ನಡೆಯಿತು. ನಂತರ ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ, ಬೋಜನ ಪ್ರಸಾದ ನಡೆಯಿತು, ಕಲಾ ರತ್ನ ಹರೀಶ್ ಪೂಜಾರಿ ಮತ್ತು ಬಳಗದವರಿಂದ, ನಾದಸ್ವರ ವಾದ್ಯ, ವಿಖ್ಯಾತ್ ಭಟ್ ಇವರಿಂದ ಸಂಗೀತ ನಾದ ಆರಾದನ ನಡೆಯಿತು, ಕು. ನವ್ಯ ಉದಯಶಂಕರ್ ರಾವ್ ಮತ್ತು ಶ್ರೀನಿಧಿ ಮತ್ತು ಶ್ರೀವಸ್ತ ಭಟ್ ಇವರಿಂದ ಭಕ್ತಿ ಗಾನ ಸೇವೆ ನಡೆಯಿತು. ಶ್ರೀ ಸಂಪೂರ್ಣ ರಾಮಾಯಣ ದರ್ಶನಂ (ನಾಟ್ಯ ರೂಪಕ) ಪ್ರಸ್ತುತಪಡಿಸಲಾಯಿತು.




ಭಜನಾ ಕಾರ್ಯಕ್ರಮದಲ್ಲಿ ಮಾಧವೇಶ ಭಜನಾ ಮಂಡಳಿ ಪೇಜಾವರ ಮಠ, ಸಂತಾಕ್ರೂಸ್ , ಕೃಷ್ಣ ವಿಠಲ ಭಜನಾ ಮಂಡಳಿ , ಗೋಪಾಲಕೃಷ್ಣ ಭಜನಾ ಮಂಡಳಿ ಅದಮಾರು ಮಠ ಅಂದೇರಿ, ವಾಗ್ದೇವಿ ಭಜನಾ ಮಂಡಳಿ ಬೋರಿವಲಿ, ವಿಠ್ಠಲ ಭಜನಾ ಮಂಡಳಿ ಮೀರಾರೋಡ್, ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ, ನಿತ್ಯಾನಂದ ಮಹಿಳಾ ಭಜನಾ ಮಂಡಳಿ, ಭಾಂಡೂಪ್ ತಂಡಗಳು ಬಾಗವಹಿಸಿದರು.
ಸಭಾ ಕಾರ್ಯಕ್ರಮವನ್ನು ಅಶೋಕ ಪಕ್ಕಳ, ಕರ್ನೂರು ಮೋಹನ್ ರೈ, ಸುಶೀಲ ದೇವಾಡಿಗ, ಪದ್ಮನಾಭ ಸಸಿಹಿತ್ತ್ಲು, ನಿರೂಪಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ. ಕೃಪ ರೈ ಮತ್ತು ಶ್ಯಾಮಲಾ ಶಾಸ್ತ್ರಿ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳ ಮಾಹಿತಿಯಿತ್ತರು.
ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈ ಯ ಪರವಾಗಿ ಸಂಸ್ಥಾಪಕರೂ ಹಾಗೂ ಅಧ್ಯಕ್ಷರಾದ ಕೈರಬೆಟ್ಟು ವಿಶ್ವನಾಥ ಭಟ್, ಸುಮಾ ವಿ. ಭಟ್, ವಿರಾರ್ ಶಂಕರ ಬಿ. ಶೆಟ್ಟಿ, ಅವಿನಾಶ್ ಸಾಸ್ತ್ರಿ, (ಕೋಶಾಧಿಕಾರಿ), ಗೋಪಾಲ್ ಎಸ್ ಪುತ್ರನ್, ಅಶೋಕ್ ಕುಮಾರ್ ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಕಳತ್ತೂರು ವಿಶ್ವನಾಥ ಜೆ. ಶೆಟ್ಟಿ, ರಮೇಶ್ ಡಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಸುಶೀಲಾ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನವೀನ್ ಪಡು ಇನ್ನ, ಶ್ಯಾಮ್ ಸುಂದರ್ ಸಾಲ್ಯಾನ್, ದಿನೇಶ್ ಕರ್ಕೇರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಕಾರ್ಯದರ್ಶಿ ಶ್ಯಾಮಲಾ ಶಾಸ್ತ್ರಿ ಜೊತೆ ಕಾರ್ಯದರ್ಶಿ ಸುಚಿತ್ರ ಶೆಟ್ಟಿ ಸದಸ್ಯರುಗಳಾದ ಯು ಗುರುಮೂರ್ತಿ, ಜಗನ್ನಾಥ ಪುತ್ರನ್, ಪೂವಪ್ಪ ಪೂಜಾರಿ, ಜಗನ್ನಾಥ್ ಕಾಂಚನ್, ರವೀಂದ್ರ ಕರ್ಕೇರ, ಶಶಿಧರ್ ಶೆಟ್ಟಿ, ಕೆ. ಸದಾನಂದ ಶೆಟ್ಟಿ, ಸುರೇಶ್ ಶೇಟ್, ಶಂಕರ್ ಕೆ ಪೂಜಾರಿ, ವಿಶ್ವನಾಥ್ ಸಿ ಶೆಟ್ಟಿ, ಸುಧಾಕರ್ ಶೆಟ್ಟಿ, ಗೋಪಾಲ್ ನಾಯಕ್, ಹ್ಯಾರಿ ಸಿಕ್ವೇರಾ, ವಸಂತ್ ಕುಂದರ್, ಪ್ರಭಾಕರ್ ಬೆಳುವಾಯಿ, ಸುಧೀರ್ ಅಮೀನ್, ಭರತ್ ಶೆಟ್ಟಿ, ವಾದಿರಾಜ ಕುಬೇರ್, ಮಾದವ ಕೋಟ್ಯಾನ್, ಸತೀಶ್ ಪೂಜಾರಿ, ಸುದೀರ್ ಶೆಟ್ಟಿ, ಸುರೇಶ್ ಗಿಡ್ ಬಿಡಿ, ಶೇಖರ್ ಸಸಿಹಿತ್ತ್ಲು, ಪ್ರಹ್ಲಾದ ಅಹುಜಾ, ಪ್ರಶಾಂತ್ ಜತ್ತನ್, ಚಿದಾನಂದ ರೈ, ಸುರೇಶ್ ಹೆಗ್ಡೆ, ಮೋಹನ್ ಶೆಟ್ಟಿ, ಭೀಮ್ ಡಿ, ಸಿಂಧೆ, ಮಹಿಳಾ ವಿಭಾಗದ ಸದಸ್ಯರಾದ ಜಯರಾವ್, ಲೀಲಾ ಪೂಜಾರಿ, (ಕುಂಟಡಿ), ಜಯಂತಿ ಉಳ್ಳಾಳ್, ನಿರ್ಮಲ ಶಿವತ್ತಾಯ, ಶಶಿಕಲಾ ವಿ ಶೆಟ್ಟಿ ಮತ್ತು ಶೋಭಾ ಬಂಗೇರ ಸಹಕರಿಸಿದರು.
ಇಂದು ಪ್ರಶಸ್ತಿ ಪಡೆದ ಮೂವರು ಗಣ್ಯರು ನಿಜಕ್ಕೂ ಪ್ರಶಸ್ತಿಗೆ ಅರ್ಹರು. ಇಲ್ಲಿ ಧರ್ಮ ಸಂಸ್ಕೃತಿಯನ್ನು ಉಳಿಸುದರೊಂದಿಗೆ ಹಿಂದುತ್ವ ಉಳಿಸುತ್ತಿರುವುದು ಅಭಿನಂದನೀಯ. ಮಾನವನಿಗೆ ಯಾವುದೂ ಸ್ವಂತ ಎಂಬುದಿಲ್ಲ. ಮಾನವ ಅಹಂಕಾರವನ್ನು ತೊರೆದು ಇಂತಹ ಉತ್ತಮ ಕಾರ್ಯ ಮಾಡಿದಲ್ಲಿ ಬೇರೆ ಯೋಚನೆ ಮಾಡುವ ಅಗತ್ಯವಿಲ್ಲ. ಸನ್ಮಾನಕ್ಕೆ ನಾನು ಅಬಾರಿಯಾಗಿರುವೆನು.
– ಪ್ರವೀಣ್ ಭೋಜ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ, ಮುಂಬಯಿ.
ಕಳೆದ 26 ವರ್ಷಗಳ ದೀರ್ಘಾವಧಿಯಲ್ಲಿ ಸತತವಾಗಿ ಯಜ್ಞ ಯಾಗದಿಗಳನ್ನು ಅದರೊಂದಿಗೆ ಧಾರ್ಮಿಕ ವೇದಿಕೆಯನ್ನು ಮಾಡಿಕೊಂಡು ಬಂದಂತಹ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ ಜನರಿಗೆ ಬಹಳಷ್ಠನ್ನು ನೀಡುತ್ತದೆ. ಧಾರ್ಮಿಕ ರುಚಿ ಸುಚಿ ಇಲ್ಲದ ಜೀವನ ಶೂನ್ಯ. ವಿವಿಧ ಕ್ಷೇತ್ರದಲ್ಲಿನ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಈ ಒಂದು ವಿಶೇಷ ಧಾರ್ಮಿಕ ವೇದಿಕೆಯಲ್ಲಿ ಸನ್ಮಾನ ಮಾಡುತ್ತಾ ಮುಂಬೈ ಮಹಾನಗರದಲ್ಲಿ ಮಾಡುತ್ತಿರುವ ಕಾರ್ಯ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿದೆ. ಇಂತಹ ಧಾರ್ಮಿಕ ಕಾರ್ಯಕ್ರಮದಿಂದ ನಮ್ಮ ಜೀವನ ಪಾವನವಾಗಲಿ. ಅದರ ಪುಣ್ಯದ ಪಾಲ ನಮಗೂ ಸಿಗುವಂತಾಗಲಿ.
–ಶ್ರೀನಿವಾಸ ಸಾಫಲ್ಯ ಅಧ್ಯಕ್ಷರು, ಸಾಫಲ್ಯ ಸೇವಾ ಸಂಘ ಮುಂಬಯಿ.
ಕಳೆದ ಸಲ ಇಲ್ಲಿಗೆ ಬಂದು ಪ್ರಶಸ್ತಿಯನ್ನು ಪಡೆಯಲು ಅಸಾಧ್ಯವಾದರೂ ಕೈರಬೆಟ್ಟು ವಿಶ್ವನಾಥ ಭಟ್ ದಂಪತಿ ಬೆಂಗಳೂರಿಗೆ ಬಂದು ನನ್ನ ಕಚೇರಿಯಲ್ಲಿ ನನಗೆ ಗೌರವಿಸಿದ್ದು ಶ್ರೀ ಕೃಷ್ಣನ ಆಶೀರ್ವಾದ ಪಡೆದಂತಾಯಿತು. ಇಂದು ಅವರ ಮಕ್ಕಳ ಪ್ರತಿಭೆ ನೋಡಿ ಸಂತೋಷವಾಯಿತು. ನಾವು ಮಾಡಿದ ಉತ್ತಮ ಕಾರ್ಯ ನಮ್ಮ ಹಿಂದೆ ಬರುತ್ತದೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡದಲ್ಲಿ ಅದು ಆಶೀರ್ವಾದದ ರೂಪದಲ್ಲಿ ನಮಗೆ ಸಿಗುತ್ತದೆ. ನಾನು ಪ್ರತೀ ವರ್ಷ ಬಡವರಿಗೆ ಕೆಲವು ಮನೆ ನಿರ್ಮಿಸಿ ಕೊಡುತ್ತಿದ್ದು ಮುಂದೆ ಒಂದು ಮನೆಯನ್ನಾದರೂ ಕೈರಬೆಟ್ಟು ವಿಶ್ವನಾಥ ಭಟ್ ಇವರಿಂದ ಉದ್ಘಾಟಿಸಬೇಕಾಗಿದೆ.
– ಗೋವಿಂದ ಬಾಬು ಪೂಜಾರಿ, ಉದ್ಯಮಿ
ಪ್ರಪಂಚ ಒಳ್ಳೆಯದಾಗಲಿ ಅಂತ ವಿಶ್ವನಾಥ ಭಟ್ ಯಾಗ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಸಮುದಾಯದವರನ್ನು ಸೇರಿಸಿ ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಿರುವ ಇವರು ಮುಂಬಯಿ ಯಲ್ಲಿ ಒರ್ವ ನಾಯಕನಂತೆ. ಅವರಿಂದ ಇಂತಹ ಉತ್ತಮ ಕೆಲಸಗಳು ನಡೆಯುತ್ತಿರಲಿ.
– ಉದ್ಯಮಿ ಇನ್ನ ಜಯರಾಮ ಶೆಟ್ಟಿ
ಸನಾತನ ಧರ್ಮ ಹಾಗೂ ಹಿಂದೂ ಧರ್ಮದ ಉಳಿವಿಗೆ ಕೈರಬೆಟ್ಟು ವಿಶ್ವನಾಥ ಭಟ್ ರಂತವರಿಂದ ಇಂತಹ ದಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕಾಗಿದೆ. ಅವರ ಕೆಲಸವು ದೇಶಕ್ಕೆ ಮಾದರಿ.
–ತೋನ್ಸೆ ಜಯಕೃಷ್ಣ ಎ ಶೆಟ್ಟಿ , ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರು
ಅಯೋದ್ಯಯ ಕಾರ್ಯಕ್ರಮದಲ್ಲಿ ಏರ್ ಇಂಡಿಯಾ ಕೂಡಾ ಬಾಗಿಯಾಗಿದ್ದು ಅಯೋದ್ಯೆಗೆ ದೆಹಲಿಯಿಂದ ವಿಮಾನದ ಪ್ರಾರಂಭವಾಗಲಿದೆ. ವಿಶ್ವನಾಥ ಭಟ್ ಅವರ ಮಕ್ಕಳು ಇಂದು ಉತ್ತಮವಾದ ಕಾರ್ಯಕ್ರಮವನ್ನು ನೀಡಿದ್ದು ಅಭಿನಂದನೀಯ.
– ವಿನೋದ್ ಹೆಜ್ಮಾಡಿ, ಏರ್ ಇಂಡಿಯಾ ಸಿ.ಎಫ಼್.ಓ.
ವಿಶ್ವನಾಥ ಭಟ್ ಅವರ ಪ್ರೀತಿಯಿಂದ ಇಂದು ನಾನು ಈ ಧಾರ್ಮಿಕ ಕಾರ್ಯದಲ್ಲಿ ಕುಲಾಲ ಸಮಾಜವನ್ನು ಪ್ರತಿನಿದೀಕರಿಸುತ್ತಿರುವೆನು. ಇಂತಹ ಧಾರ್ಮಿಕ ಕಾರ್ಯವನ್ನು ಮಾಡಿ ನಮ್ಮೆಲ್ಲರಿಗೂ ಒಳ್ಳೆಯದಾಗುವಂತೆ ಮಡುತ್ತಿರುವ ವಿಶ್ವನಾಥ ಭಟ್ ಅವರಿಗೆ ಅಭಿನಂದನೆಗಳು. ಇಂದು ನನಗೆ ನೀಡಿದ ಗೌರವ ಕುಲಾಲ ಸಮುದಾಯಕ್ಕೆ ನೀಡಿದ ಗೌರವ.
– ರಘು ಎ. ಮೂಲ್ಯ, ಅಧ್ಯಕ್ಷರು, ಕುಲಾಲ ಸಂಘ ಮುಂಬಯಿ
ಇವತ್ತಿನ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರುವುದು ನನ್ನ ಸೌಭಾಗ್ಯ. ಈ ಸಂಸ್ಥೆಯಿಂದ ಇಂತಹ ಧಾರ್ಮಿಕ ಕಾರ್ಯಗಳು ನಡೆಯುತ್ತಾ ಇರಲಿ.
– ದೀಪ್ತಿ ಯೋಗೇಶ್ ಸುವರ್ಣ
ಜನವರಿ 22 ರ ಅಯೋದ್ಯಯ ಕಾರ್ಯಕ್ರಮದೊಂದಿಗೆ ಈ ಸಲ ನಾವು ಎರಡು ದೀಪಾವಳಿಯನ್ನು ಆಚರಿಸುವಂತಾಗಿದೆ. ಆ ಅನುಭವ ಇಲ್ಲಿಯೂ ಆಗುತ್ತಿದೆ. ಅವಕಾಶ ನೀಡಿದಕ್ಕೆ ವಂದನೆಗಳು.
–ಮೃದುಲ ಅರುಣ್ ಕೋಟ್ಯಾನ್
ವಿಶ್ವನಾಥ ಭಟ್ ಅವರ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಅವರಿಗೆ ದೇವರು ಇನ್ನಷ್ಟು ಶಕ್ತಿ ಸಾಮರ್ಥ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ.
–ವಿಶ್ವನಾಥ ಶೆಟ್ಟಿ ಕಾಪು, ಉದ್ಯಮಿ