
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 63ನೇ ವಾರ್ಷಿಕ ದಿನಾಚರಣೆಯು ಜನೇವರಿ 13, ಶನಿವಾರ 2024 ರಂದು ಸಂಜೆ 5 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿ
ರುವ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ನಡೆಯಲಿದೆ.
ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಲಹೆಗಾರ,ಸರಕಾರಿ ಹಿರಿಯ ಪ್ರಾಥಮಿಕ
ಶಾಲೆ ,ಕಲ್ಯಾ ಇದರ ಅಧ್ಯಕ್ಷ ಮನೋಹರ ಎನ್. ಶೆಟ್ಟಿ , ಗೌರವ ಅತಿಥಿಗಳಾಗಿ ಬಾಂಬೆ ಕನ್ನಡ ಸಂಘ,
ಮಾಟುಂಗಾ (ಪೂರ್ವ) ಇದರ ಕೋಶಾಧಿಕಾರಿ
ರಾಜೇಂದ್ರ ರಾಮಕೃಷ್ಣ ಗಡಿಯಾರ, ಚಾರ್ಟೆಡ್ ಅಕೌಂಟೆಂಟ್ ಸಿಎ ಪ್ರಕಾಶ್ ಶೆಟ್ಟಿ ಉಪಸ್ಥಿತ
ರಿರುವರು.
ವಿದ್ಯಾರ್ಥಿಗಳಿಗೆ ಪಾರಿತೋಷಕ ಪ್ರತಿಭಾ
ಪುರಸ್ಕಾರ ವಿತರಿಸಲಾಗುವುದು. ಬಳಿಕ ವಿದ್ಯಾರ್ಥಿ
ಗಳಿಂದ, ಹಳೇ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಕೊನೆಯಲ್ಲಿ
ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಹಳೇ ವಿದ್ಯಾರ್ಥಿಗಳು, ಪೋಷಕರು, ಹಿತ ಚಿಂತಕರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು,ಕಾರ್ಯಕ್ರಮ
ವನ್ನು ಯಶಸ್ವಿಗೊಳಿಸುವಂತೆ ಬಿಲ್ಲವರ
ಅಸೋಸಿಯೇಶನ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್,ಗೌರವ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಶಾಲಾ ಉಪ ಸಮಿತಿಯ ಕಾರ್ಯಧ್ಯಕ್ಷ ಜಯ.ವಿ. ಪೂಜಾರಿ, ಸಲಹೆಗಾರ ಬಿ.ರವೀಂದ್ರ. ಅಮೀನ್, ಮುಖ್ಯೋಪಾಧ್ಯಾಯ ಎಂ.ಐ. ಬಡಿಗೇರ,ವಿದ್ಯಾರ್ಥಿ
ಪ್ರತಿನಿಧಿ ಮೀನಾಕ್ಷಿ.ಹೆಚ್. ಪೂಜಾರಿ ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ.