ಇತ್ತೀಚೆಗೆ ಕಾರ್ಯನಿರತ ಪತ್ರಕರ್ತರ ಹೆಸರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕ ಎಂಬ ಹೆಸರಿನ ಸಂಘಟನೆ ಒಂದನ್ನು ಸ್ಥಾಪಿಸಿ, ಮುಂಬೈಯಲ್ಲಿ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಕಡೆಗೆಣಿಸಿ ಹೋಟೆಲ್ ಉದ್ಯಮಿಗಳಿಗೂ ಮುನ್ಸಿಪಾಲಿಟಿ ಶಾಲೆಯ ಉದ್ಯೋಗಿಗಳಿಗೂ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ನಿರ್ವಹಿಸುತ್ತಿರುವವರನ್ನು ಸದಸ್ಯರನ್ನಾಗ ಮಾಡಿರುವುದು. ಕೆಲವು ಸ್ವಯಂ ಘೋಷಿತ ಪತ್ರಕರ್ತರು ತಮ್ಮ ಸ್ವಂತ ಲಾಭಕ್ಕಾಗಿ ಮಾಡಿದ ಸಂಸ್ಥೆಯಾಗಿದೆ ಇದರಲ್ಲಿ ಪತ್ರಕರ್ತರು ಯಾರು ಇಲ್ಲ ಎಂಬುದು ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಅಭಿಪ್ರಾಯ.
ಕೆಲವು ವರ್ಷಗಳ ಹಿಂದೆ ಮುಂಬೈಯ ಕನ್ನಡ ಪತ್ರಕರ್ತರ ಸಂಘ ದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ನಿಜವಾದ ಪತ್ರಕರ್ತರು ಅದರಿಂದ ದೂರ ಉಳಿತಿದ್ದರು. ಇತ್ತೀಚೆಗೆ ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ಪತ್ರಿಕಾರಂಗದಲ್ಲಿ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳನ್ನು ಸೇರಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕ ಎಂದು ಮಾಡಿರುವುದು ಮುಂಬೈಯ ಪತ್ರಿಕ ರಂಗದಲ್ಲಿ ದುಡಿಯುತ್ತಿರುವ ಪತ್ರಕರ್ತರು ಕೆರಳುವಂತೆ ಮಾಡಿದ್ದಾರೆ. ಮುಂಬೈಯಲ್ಲಿ ಪತ್ರಕರ್ತರ ಹೆಸರಲ್ಲಿ ನಡೆಸುವ ಸಂಘಟನೆ ಕೇವಲ ಹಣ ಮಾಡುವ ಉದ್ದೇಶದಿಂದ ಕೆಲವು ಸ್ವಯಂಘೋಷಿತ ಪತ್ರಕರ್ತರ ಕಪಿಮುಷ್ಠಿಯಲ್ಲಿದೆ ಎಂಬುದು ಮುಂಬೈಯಲ್ಲಿ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಮುಂಬೈಯಲ್ಲಿ ಹೊಟ್ಟೆಪಾಡಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಾಮಾಣಿಕ ಪತ್ರಕರ್ತರ ಸಮಸ್ಯೆಯನ್ನು ನಿವಾರಿಸುವಲು ಯಾವುದೇ ಸಂಘಟನೆಯೂ ಮುಂದೆ ಬರುವುದಿಲ್ಲ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಕೆಲವು ಗಣ್ಯರು ಪತ್ರಕರ್ತರ ಸಂಘದ ಸದಸ್ಯತ್ವವನ್ನು ಪಡೆಯುತ್ತಾರೆ .ಇನ್ನು ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ಉದ್ಯಮಿಗಳಿಗೂ ಇನ್ನಿತರ ಕ್ಷೇತ್ರಗಳಲ್ಲಿ ದುಡಿಯೋ ಗಣ್ಯಮಾನ್ಯರಿಗೂ ಸದಸ್ಯತ್ವವನ್ನು ನೀಡಿ ತಮ್ಮ ಬೇಳೆಯನ್ನು ಬೇಯಿಸುತ್ತಿದ್ದಾರೆ. ಈಗ ಬಗ್ಗೆ ಕರ್ನಾಟಕದ ಪತ್ರಕರ್ತರ ಸಂಘವು ಗಮನ ಹರಿಸಬೇಕು.
.
.
.
.
.