
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ (ರಿ.) ಡೊಂಬಿವಲಿ (ಪಶ್ಚಿಮ) ಇದರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 32ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಯು ಇದೇ ಬರುವ ದಿನಾಂಕ 06-01-2024 ನೇ ಶನಿವಾರ, ರೇತಿಭವನ, 3ನೇ ಮಹಡಿ, ರೈಲ್ವೇ ನಿಲ್ದಾಣದ ಬಳಿ, ಡೊಂಬಿವಲಿ (ಪ.) ಇಲ್ಲಿ ಜರಗಲಿರುವುದು. ಶ್ರೀ ಸುರೇಶ್ ಅಂಚನ್ ಕಲಶ ಪ್ರತಿಷ್ಠಾಪನೆ ಮಾಡಲಿರುವರು.
ಭಕ್ತಾಭಿಮಾನಿಗಳಾದ ತಾವು ನಮ್ಮಿ ಪೂಜಾ ಕಾರ್ಯಕ್ರಮಕ್ಕೆ ಬ೦ಧು-ಮಿತ್ರರಿಂದೊಡಗೂಡಿ ಚಿತ್ರಸಿ ಶ್ರೀ ಶನಿದೇವರ ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ನಿತ್ಯಾನಂದ ಜತ್ತನ್ (ಅಧ್ಯಕ್ಷರು), ಶ್ರೀ ಬ್ರಹ್ಮಾನಂದ ಶೆಟ್ಟಿಗಾರ್ (ಉಪಾಧ್ಯಕ್ಷರು), ಶ್ರೀ ಸುನೀಲ್ ಸಂಜೀವ ಶೆಟ್ಟಿ (ಕಾರ್ಯದರ್ಶಿ), ಶ್ರೀ ಜಯಪ್ರಸನ್ನ ಶೆಟ್ಟಿ (ಕೋಶಾಧಿಕಾರಿ), ಶ್ರೀ ನಾರಾಯಣ ಮೈಂದನ್ (ಜೊತೆ ಕಾರ್ಯದರ್ಶಿ), ಶ್ರೀ ನಾರಾಯಣ ಭಂಡಾರಿ (ಜೊತೆ ಕೋಶಾಧಿಕಾರಿ), ಧರ್ಮದರ್ಶಿ ಶ್ರೀ ಅಶೋಕ್ ದಾಸು ಶೆಟ್ಟಿ (ಪ್ರಧಾನ ಅರ್ಚಕರು), ಶ್ರೀ ಶನೀಶ್ವರ ಪೂಜಾ ಸಮಿತಿ, ಮಹಿಳಾ ಮಂಡಳಿ, ಯುವ ವಿಭಾಗ ಹಾಗೂ ಮಂಡಳಿಯ ಸರ್ವ ಸದಸ್ಯರು, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಡೊಂಬಿವಲಿ (ಪ.) ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಭಕ್ತರು ರೂ. 301/- ಕೊಟ್ಟು ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಮಾಡಿಸಬಹುದು ಹಾಗೂ ಶ್ರೀ ದೇವರಿಗೆ ಇನ್ನಿತರ ಸೇವೆಯನ್ನು ಭಕ್ತರಿಂದ ಸ್ವೀಕರಿಸಲಾಗುವುದು.
ಅಭಿನಂದನೆ :
ಕಳೆದ ವರ್ಷದ ಸಾಮೂಹಿಕ ಶ್ರೀ ಶನೀಪೂಜೆಗೆ ಅನ್ನದಾನ, ಅಲೋಪಹಾರ, ಎಣ್ಣೆ ಸೇವೆ, ಪ್ರಸಾದ ಸೇವೆ, ಪ್ರಸಾದ ಬ್ಯಾಗ್ ಸೇವೆ, ಪಂಚಗಚ್ಚಾಯ ಸೇವೆ, ಹಿಂಗಾರ ಸೇವೆ ಹಾಗೂ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯನ್ನು ಕೊಟ್ಟು ಸಹಕರಿಸಿದ ಎಲ್ಲಾ ಭಕ್ತರಿಗೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸಲೆಂದು ಪ್ರಾರ್ಥನೆ.

.
.