
ಮೀರಾ ರೋಡ್ ಜ5, ಮೀರಾ ರೋಡ್ ನಿಂದ ದಾಹಣು ತನಕದ ಬಂಟ ಭಾಂದವರ ಅಶೋತ್ತರಗಲ್ಲಿಗೆ ಸ್ಪಂದಿಸಲು 2009 ರಲ್ಲಿ ಸ್ಥಾಪನೆಯದ ಮೀರಾ ದಾಹಣು ಬಂಟ್ಸ್ (ರಿ ) ಇದರ ಕ್ರೀಡೋತ್ಸವ 2024. ಫೆಭ್ರವರಿ 10/02/2024 ರಂದು ಹಳೆ ವಿವಾ ಕಾಲೇಜು ಗ್ರೌಂಡ್ ವಿರಾರ್ ಪಶ್ಚಿಮ ಇಲ್ಲಿ ಅದ್ದೂರಿಯಾಗಿ ನಡೆಯಲಿದೆ ,
ಈ ಕ್ರೀಡಾಕೂಟ ದಲ್ಲಿ ಮೀರಾ ರೋಡ್ ನಿಂದ ದಹನು ತನಕ ಎಲ್ಲಾ ಬಂಟ ಭಾಂದವರಿಗೆ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ಕ್ರೀಡಾ ಕೂಟ ವನ್ನು ಎಲ್ಲಾ ಕ್ರೀಡಾಳು ಗಳಿಗೆ ಆಗಮಿಸಲು ಸುಲಭವಾಗಲು ವಿರಾರ್ ರೈಲ್ವೆ ಸ್ಟೇಷನ್ ನಿಂದ ಬಹಳ ಹತ್ತಿರದಲ್ಲಿ ಇರುವ ವಿಶಾಲವಾದ ಆಟದ ಮೈದಾನ ಹೊಂದಿರುವ ಹಳೆ ವಿವಾ ಕಾಲೇಜು ಸಂಸ್ಥೆಯ ಮೈದಾನ ದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಮ್ಮಿಕೊಳ್ಳಲು ನಿರ್ಧರಿಸಿರುತ್ತಾರೆ
.ಈ ಕ್ರೀಡಾ ಕೂಟವು ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಯವರ ಅದ್ಯಕ್ಷತೆಯಲ್ಲಿ.ಗೌರವಧ್ಯಕ್ಷರಾದ ವಿರಾರ್ ಶಂಕರ ಬಿ ಶೆಟ್ಟಿ ಯವರ ಉಪಸ್ಥಿತಿಯಲ್ಲಿ. ಮುಂಬೈ ಮತ್ತು ಸ್ಥಳೀಯ ಗೌರನ್ವಿತ ಅತಿಥಿಗಳ ಉಪಸ್ಥಿತಿ ಯಲ್ಲಿ ಬೆಳ್ಳಿಗೆ 8 ಕ್ಕೆ ಪ್ರಾರಂಭ ಗೊಂಡು ಸಂಜೆ 6 ಗಂಟೆ ಗೆ ಸಮಾರೋಪ ಸಮಾರಂಭ ದೋದ್ದಿಗೆ ಕ್ರೀಡಾ ಕೂಟ ಮುಕ್ತಾಯಗೊಳ್ಳಲಿದೆ
, ಸಮಾರೋಪ ಸಮಾರಂಭದಲ್ಲಿ ಬಂಟ ಸಮುದಾಯದ ನಾಯಕರು ಸ್ಥಳೀಯ ರಾಜಕೀಯ ನೇತಾರರು. ಉದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತಿ ಗೊಳ್ಳಲಿದ್ದಾರೆ
ಕ್ರೀಡೋತ್ಸವ ಕ್ಕೆ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೀರಾ ದಹನು ಬಂಟ್ಸ್ ಕ್ರೀಡೋತ್ಸವ- 2024. ರನ್ನು ಯಶಸ್ವಿ ಗೊಳಿಸಬೇಕಾಗಿ ಸಂಸ್ಥೆ ಯ ಪರವಾಗಿ. ಗೌರವಧ್ಯಕ್ಷರು ಅಧ್ಯಕ್ಷರು. ಉಪಾಧ್ಯಕ್ಷರು.ಸಂಚಾಲಕರು.ಕ್ರೀಡಾ ವಿಭಾಗದ ಅಧ್ಯಕ್ಷರು
ಟ್ರಷ್ಟಿ ಯವರು. ಜೊತೆ ಕಾರ್ಯದರ್ಶಿ. ಖಜಾಂಚಿ. ಜೊತೆ ಖಜಾಂಚಿ. ಮಹಿಳಾ ವಿಭಾಗದ ಅಧ್ಯಕ್ಷೆ. ಮಹಿಳಾ ವಿಭಾಗದ ಪದಾಧಿಕಾರಿಗಳು. ವಲಯದ ಅಧ್ಯಕ್ಷರು. ವಲಯದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ವಿನಂತಿಸಿರತ್ತಾರೆ. ಪ್ರಕಟಣೆ ಯಲ್ಲಿ ಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಸುಕೇಶ್ ವಿ ರೈ ವಿನಂತಿಸಿಕೊಂಡಿದ್ದಾರೆ
.
.
.