
ಉಳ್ಲಾಲ, ಜ 6: ಕನ್ನಡ ಮತ್ತು ತುಳು ಭಾಷೆಯ ಹಿರಿಯ ಸಾಹಿತಿ ಅಮೃತ ಸೋಮೇಶ್ವರ (88) ಅವರು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. 1935ರ ಸೆಪ್ಟೆಂಬರ್27ರಂದು ಮಂಗಳೂರು ತಾಲೂಕಿನ ಅಡ್ಕ ದಲ್ಲಿ ಜನಿಸಿದ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಹಲವಾರು ಕೃತಿ ಗಳನ್ನು ಹೊರ ತಂದರಲ್ಲದೆ ,ಜಾನಪದ ಮತ್ತು ಭೂತಾರಾಧನೆಯ ಬಗ್ಗೆ ಸಂಶೋಧನಾ ಬರಹಗಳು,ಕೃತಿ ಗಳನ್ನು ಪ್ರಕಟಿಸಿದ್ದರು. ಉಳ್ಲಾಲ ಸಮೀಪದ ಸೋಮೇಶ್ವರದಲ್ಲಿ ನೆಲಸಿದ ಅಮೃತ ಸೋಮೇಶ್ವರ ಅವರು ತಮ್ಮ ಕೃತಿ ಗಳು ಮತ್ತು ಸಂಶೋಧನಾ ಗ್ರಂಥ ಗಳಿಗೆ ಹಲವಾರು ಪ್ರಶಸ್ತಿ- ಪುರಸ್ಕಾರ ಗಳನ್ನು ಪಡೆದಿದ್ದರು. ಯಕ್ಷಗಾನದ ಕ್ಷೇತ್ರದಲ್ಲಿ ಸದಾಭಿರುಚಿ ಹೊಂದಿದ್ದ ಅವರು ರಾಜಕೀಯೆತರ ನಿಲುವನ್ನು ಹೊಂದಿದ್ದರು.
.
.
.
.
.
.
.
.