
ಶ್ರೀ ಅಯ್ಯಪ್ಪ ಸೇವಾ ಸಮಿತಿ,ಕಿಸಾನ್ ನಗರ ಥಾಣೆ ಇವರ ಇರುಮುಡಿ ಪೂಜೆಯು 07.01.2024 ರಂದು ರವಿವಾರ ಕಿಸಾನ್ ನಗರದ ಓಧವ ಭಾಗ ಮೈದಾನದಲ್ಲಿ ವಿಜೃಂಭಣೆಯಿಂದ ಜರಗಿತು. ಉದಯ ಗುರುಸ್ವಾಮಿ ಯವರ ಮಾರ್ಗದಶನದಲ್ಲಿ ಬೆಳಿಗ್ಯೆ 10.00 ಗಂಟೆಗೆ ಪ್ರಾರಂಭ ಗೊಂಡು ಮದ್ಯಾಹ್ನ 1.30 ಗಂಟೆಗೆ ಭವ್ಯ ಪುಷ್ಪಾಲಂಕಾರ ಗೊಂಡ ಅಯ್ಯಪ್ಪ ಸ್ವಾಮಿಗೆ ಮಂಗಳಾರತಿ ನಡೆದು ಬಳಿಕ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ಅನ್ನ ದಾನ ನಡೆಯಿತು. ಸುಮಾರು 800 ಜನ ಭಕ್ತಾದಿಗಳು ಭಾಗವಹಿಸಿದ್ದರು.


48 ದಿನಗಳಿಂದಲೂ ಹೆಚ್ಚಿನ ವ್ರತಾಚಣೆಯ ಸಮಯದಲ್ಲಿ ಅತೀ ಹೆಚ್ಚಿನ ಸೇವೆಗೈದ ಪ್ರಭಾಕರ ಶೆಟ್ಟಿ ಸ್ವಾಮಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ ಯವರ ನೇತ್ರತ್ವದಲ್ಲಿ ಉಪಾಧ್ಯಕ್ಷ ರಾಜೇಶ್ ರೈ,ಕಾರ್ಯದರ್ಶಿ ರಮೇಶ್ ಕೋಟ್ಯಾನ್,ಕೋಶಾಧಿಕಾರಿ ನರೇಶ್ ಪೂಜಾರಿ,ಸಲಹೆಗಾರ ರಾಜು ಸಫಲಿಗ, ಉಪ ಕಾರ್ಯದರ್ಶಿ ವಿನಯ್ ಸನಿಲ್, ಉಪ ಕೋಶಾಧಿಕಾರಿ ಪ್ರಶಾಂತ ಶೆಟ್ಟಿ, ಸಮಿತಿಯ ಸದಸ್ಯರು ಹರೀಶ್ ಸಾಲಿಯಾನ್,ರಮೇಶ್ ಶೆಟ್ಟಿ,ನವೀನ್ ಶೆಟ್ಟಿ, ವಾದಿರಾಜ ಮೂಲ್ಯ, ಧೀರಜ್ ಪಾಲನ್, ಭರತ್ ಕಾಟ್ಕರ್, ರಘುವೀರ್ ಹೆಗ್ಡೆ, ರಮೇಶ್ ಪಿಳ್ಳೈ, ಸಚಿತ್ ಕೋಟಿಯನ್, ಪೂಜಾ ಸಮಿತಿ ಸದಸ್ಯರಾದ ಉಮೇಶ್ ಶೆಟ್ಟಿ ,ಅನಿಲ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಯೋಗೇಶ್ ಪೂಜಾರಿ ಯುವ ವಿಭಾಗ ಮತ್ತು ಮಹಿಳಾ ವಿಭಾಗದ ಸದಸ್ಯರು ಹಾಗೂ ವೃತದಾರಿ ಸ್ವಾಮಿಗಳಾದ ಸುಂದರ ಸ್ವಾಮಿ , ಪ್ರಭಾಕರ ಶೆಟ್ಟಿ ಸ್ವಾಮಿ, ದಿನೇಶ ಸ್ವಾಮಿ, ಪ್ರಮೋದ್ ಸ್ವಾಮಿ, ಪ್ರಭಾಕರ ಭಂಡಾರಿ ಸ್ವಾಮಿ, ನರೇಂದ್ರ ಸ್ವಾಮಿ, ಸಂತೋಷ್ ಸ್ವಾಮಿ, ಶ್ರೀಧರ ಸ್ವಾಮಿ, ಸಂತೋಷ್ ಶೆಟ್ಟಿ ಸ್ವಾಮಿ, ಸೂರಜ್ ಸ್ವಾಮಿ , ಗಂಗಾಧರ ಸ್ವಾಮಿ, ವಿನೀತ ಸ್ವಾಮಿ, ರಾಜು ಸ್ವಾಮಿ ಮತ್ತು ವೀರ್ ಸ್ವಾಮಿ ಸಹಕರಿಸಿದರು..
.
.
.
.