
ಮುಂಬಯಿಯ ತುಳು ಕನ್ನಡಿಗರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಳಲ್ಲಿ ಒಂದಾದ ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿ ಯಲ್ಲಿ ತಾರೀಕು 7.1 2024 ನೇ ಆದಿತ್ಯವಾರ ಬೆಳಿಗ್ಗೆ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ನಿರಂತರ ವಾಗಿ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಹಾಗೂ ಭಕ್ತ ಸಮೂಹದ ಸಹಕಾರ ದಿಂದ ಅಯೋಧ್ಯಯ ಶ್ರೀ ರಾಮ ಮಂದಿರದ ಪ್ರತಿಷ್ಟಾಪನೆಯ ಪ್ರಯುಕ್ತ ಶ್ರೀ ರಾಮ ನಾಮ ಜಪ ಯಜ್ಞ ಯಶಸ್ವಿಯಾಗಿ ನೆರವೇರಿತು.

ಪ್ರಧಾನ ಅರ್ಚಕರಾದ ಎಸ್ ಎನ್ ಉಡುಪ, ಭೂವಾಜಿ ರವೀಂದ್ರ ಶಾಂತಿ, ಪ್ರವೀಣ್ ಮಾಬಿಯನ್, ಶೇಖರ ಶೆಟ್ಟಿ, ಹಾಗೂ ಗೀತಾ ಶೆಟ್ಟಿ ದೀಪಾ ಪ್ರಜ್ವಲಿಸಿ ಜಪ ಯಜ್ಞಕ್ಕೆ ಚಾಲನೆ ನೀಡಿದರು.
ದಿನವಿಡಿ ರಾಮ ನಾಮ ಜಪಯಜ್ಞ ನಡೆದು ಸಂಜೆ ಮಂಗಲೋತ್ಸವ ದೊಂದಿಗೆ ಮುಕ್ತಾಯಗೊಂಡು, ಪ್ರಧಾನ ಅರ್ಚಕರಾದ ಎಸ್ ಎನ್ ಉಡುಪರವರು ಅಯೋಧ್ಯಯ ಶ್ರೀ ರಾಮ ಮಂದಿರದ ಪ್ರತಿಷ್ಟಾಪನೆ ಕುರಿತು ಹಾಗೂ ಜಪ ಯಜ್ಞದ ಮಹತ್ವವನ್ನು ಭಕ್ತರಿಗೆ ಸಂಕಿಪ್ತವಾಗಿ ವಿವರಿಸಿದರು, ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.

ಈ ಪುಣ್ಯ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರುವಲ್ಲಿ
ಮಂದಿರದ ಟ್ರಸ್ಟಿಗಳಾದ ಶ್ರೀಮತಿ ಲಲಿತಾ ಬಿ ಕೆ ಸೀನ, ಹಾಗೂ ಪರಿವಾರ ಮತ್ತು ಅರ್ಚಕರಾದ ರಾಜೇಶ್ ಭಟ್ ಹಾಗೂ ಅರ್ಚಕ ವೃಂದದವರು ಸಂಪೂರ್ಣ ಸಹಕಾರ ನೀಡಿದರು.