
ಸನಾತನ ಧರ್ಮವನ್ನು ನಮ್ಮ ಮಕ್ಕಳಿಗೆ ತಿಳಿ ಹೇಳಿ, ಉಳಿಸಿ ಬೆಳೆಸುವ ಕಾರ್ಯವನ್ನು ನಾವು ಮಾಡೋಣ: ರವೀಶ್ ಜಿ ಶೆಟ್ಟಿ
ನವಿ ಮುಂಬಯಿ ಜ14. ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ ಇದರ 34 ನೆ ವಾರ್ಷಿಕ ಮಹಾಪೂಜೆ ಜ 3 ರಂದು ಮಧ್ಯಾಹ್ನ ನ್ಯೂ ಸುಧಗಡ್ ಸ್ಕೂಲ್ ಕಲಂಬೋಲಿ ಸೆಕ್ಟರ್ 1 ಇಲ್ಲಿ ಗುರುಸ್ವಾಮಿ ವಿಠ್ಠಲ್ ಕೆ ಬಂಗೇರ ಇವರ ದಿವ್ಯಸ್ತದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಂಸ್ಥೆಯ ಸದಸ್ಯರಿಂದ ಭಜನ ಕಾರ್ಯಕ್ರಮ ಜೊತೆಯಲ್ಲಿ ಚಂದ್ರಹಾಸ್ ರೈ ಪುತ್ತೂರು ಇವರ ಸುಮಧುರವಾದ ಕಂಠದಿಂದ ಭಕ್ತಿಗೀತೆಯನ್ನು ಹಾಡಿದರು ಜೊತೆಯಲ್ಲಿ ಪರಿಸರದ ಮಕ್ಕಳಿಂದ ಕುಣಿಕೆ ಭಜನೆ ಕೂಡ ಬಹಳ ಸುಂದರವಾಗಿ ಮೂಡಿ ಬಂತು ,
ಗಣ್ಯರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಮೆರಗು ನೀಡಿತು ಸಾಂಸ್ಕೃತಿಕ ಕಾರ್ಯಕ್ರಮ ಸಂಸ್ಥೆಯ ಸದಸ್ಯರು ಹಾಗೂ ಪುಟಾಣಿ ಮಕ್ಕಳಿಂದ ವೈವಿಧ್ಯಮಯ ನೃತ್ಯ ಸಭಿಕರ ಮನಸೂರೆಗೊಂಡಿದೆ .




ತದನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ರವೀಶ್ ಜಿ ಶೆಟ್ಟಿ ಯವರು ವಹಿಸಿದ್ದರು ವೇದಿಕೆಯಲ್ಲಿ ಸಂಸ್ಥೆಯ ಹಿರಿಯರು ಗುರುಸ್ವಾಮಿ ವಿಠ್ಠಲ್ ಬಂಗೇರ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷ ರೇವತಿ ಬಿ ಪೂಜಾರಿ ಕೋಶಾಧಿಕಾರಿ ಗಂಗಾಧರ್ ರೈ ನೆರೆದಿದ್ದರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು ಪ್ರತಿ ವರ್ಷ ಶ್ರೀ ಸ್ವಾಮಿ ಅಯ್ಯಪ್ಪ ಸ್ವಾಮಿಯ ಸೇವೆಯು ವಿಜೃಂಭಣೆಯಿಂದ ಜರುಗಲು ದೊಡ್ಡ ಪ್ರಮಾಣದಲ್ಲಿ ಸಹಕರಿಸುವ ಪ್ರತಿ ವರ್ಷ ಅನ್ನದಾನ ಸೇವೆಯನ್ನು ಮಾಡುವ ಕಾಂದೇಶ್ ಭಾಸ್ಕರ್ ವೈ ಶೆಟ್ಟಿ ಹಾಗೂ ಸಂಸ್ಥೆಯ ಗೌರವ ಅಧ್ಯಕ್ಷರಾ ಸದಾನಂದ ಡಿ ಶೆಟ್ಟಿ ಅವರ ಪರವಾಗಿ ಅವರ ಶ್ರೀಮತಿಯನ್ನು ಗೌರವಿಸಲಾಯಿತು, ಪ್ರತಿ ವರ್ಷ ಫಲವಸ್ತು ದಾನ ಮಾಡುವ ಮಾಜಿ ಅಧ್ಯಕ್ಷರು ಭರತ್ ರೈ ಅವರನ್ನು ಗೌರವಿಸಲಾಯಿತು ಪ್ರತಿ ವರ್ಷ ದೇವರ ಅಲಂಕಾರ ಮಾಡಲು ಹೂವಿನ ಸೇವೆ ಮಾಡುವ ಬಾಲಚಂದ್ರ ಎಸ್ ರೈ ಗೌರವಾರ್ಪಣೆಯನ್ನು ಮಾಡಲಾಯಿತು ರಾತ್ರಿ ಊಟದ ವ್ಯವಸ್ಥೆ ಮಾಡಿದಂತಹ ಗಣೇಶ್ ಬೇಲಾಡಿ ಶ್ರೀ ಸ್ವಾಮಿಗೆ ತಾಮ್ರದ ಪಡಿ ಅರ್ಪಿಸಿದಂತಹ ರಾಜುಗೌಡ ಅವರಿಗೆ ಯಕ್ಷಗಾನ ಕಲಾವಿದರಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಭವಿತ್ ಕೋಟ್ಯಾನ್ ನವರಿಗೆ ಪ್ರತಿ ವರ್ಷ ದೇವರಿಗೆ ಚಂಡೇಯ ಸೇವೆಯನ್ನು ಮಾಡುವ ಅಜಯ್ ಶೆಟ್ಟಿ ಅವರಿಗೆ ಜಗನ್ನಾಥ್ ಶೆಟ್ಟಿ ಅವರಿಗೆ ಗಂಗಾಧರ್ ರೈ ಅವರಿಗೆ ಪ್ರತಿ ವರ್ಷವೂ ಯಕ್ಷಗಾನದ ವೀಳ್ಯ ಕೊಡುವ ದಿನೇಶ್ ಹೆಗಡೆ ಮತ್ತು ಸುಧಾಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು, ವಿಶ್ವನಾಥ್ ಶೆಟ್ಟಿ ಅವರಿಗೆ, ಯಕ್ಷಗಾನ ಮೇಳದ ವ್ಯವಸ್ಥಾಪಕರು ಸದಾನಂದ ಶೆಟ್ಟಿಯವರಿಗೆ, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರಿಗೆ, ಹಾಗೂ ನೆರೆ ಹೊರೆಯ ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಕರೆದು ಗೌರವಿಸಲಾಯಿತು .

ಸಭಾಧ್ಯಕ್ಷತೆಯನ್ನು ವಹಿಸಿಕೊಂಡ ಅಧ್ಯಕ್ಷರು ರವೀಶ್ ಜಿ ಶೆಟ್ಟಿ ಅವರು ಕಲಂಬೋಲಿ ಅಯ್ಯಪ್ಪ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಹೆಮ್ಮೆಯಾಗುತ್ತಿದೆ ನಿಮ್ಮೆಲ್ಲರ ಸಹಕಾರದಿಂದ ಪೂಜಾ ಯಶಸ್ವಿಯಾಗಿ ವಿಜ್ರಂಭಣೆಯಿಂದ ಮೂಡಿ ಬಂತು. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ನಾನು ಬಯಸುತ್ತೇನೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ . ಸಂಸ್ಥೆಯ ಸದಸ್ಯರು ಸ್ವಾಮಿಗಳು ಮಾಜಿ ಪದಾಧಿಕಾರಿಗಳು ಮಹಿಳಾ ಸದಸ್ಯರುಗಳು ಯುವ ವಿಭಾಗ ಎಲ್ಲರೂ ಬಹಳ ಒಳ್ಳೆಯ ರೀತಿಯಲ್ಲಿ ಸಹಕರಿಸಿದ್ದಾರೆ ತಮ್ಮೆಲ್ಲರ ಸಹಕಾರ ಮುಂದೆ ಹೀಗೆ ಇರಲಿ . ಸನಾತನ ಧರ್ಮವನ್ನು ನಮ್ಮ ಮಕ್ಕಳಿಗೆ ತಿಳಿ ಹೇಳಿ, ಉಳಿಸಿ ಬೆಳೆಸುವ ಕಾರ್ಯವನ್ನು ನಾವು ಮಾಡೋಣ ಎಂದು ತಿಳಿಸಿದರು .
.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಜಿತ್( ಲಕ್ಷ್ಮೀಶ) ವಿ ಪೂಜಾರಿ ಮಾಡಿ .ಕೊನೆಗೆ ಧನ್ಯವಾದವನ್ನು ಅರ್ಪಿಸಿದರು.
ಸಂಜೆ ಯಕ್ಷಗಾನ ಬಯಲಾಟ ಶ್ರೀ ಬ್ರಾಮರೀ ಯಕ್ಷ ನೃತ್ಯ ನಿಲಯ ಮುಂಬೈ ಇವರಿಂದ ಮಹಿಷ ಮರ್ದಿನಿ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟ ರೂಪದಲ್ಲಿ ಆಡಿ ತೋರಿಸಿದರು.
ಕಿಕ್ಕೇರಿದ ಜನ ಸಮೂಹದೊಂದಿಗೆ ಯಕ್ಷಗಾನವು ವಿಭಿನ್ನವಾಗಿ ಮೂಡಿ ಬಂತು ಪರಿಸರದ ಮಕ್ಕಳು ಬಹಳ ಒಳ್ಳೆಯ ಪಾತ್ರಗಳನ್ನು ಜನರ ಮನಸೂರೆಗೊಂಡಿದ್ದಾರೆ ಅಬ್ಬರದ ಮಹಿಶಾಸುರನ ಪಾತ್ರ ಹಾಗೆ ದೇವಿಯ ಪಾತ್ರದಲ್ಲಿ ಅಲ್ಲದೆ ಪುಟಾಣಿ ಮಕ್ಕಳು ಕೂಡ ಯಕ್ಷಗಾನದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.