
ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡ, ಭಾಂಡುಪ್ (ಪ).
(ದಿ| ಶ್ರೀರಾಮಸ್ವಾಮೀಜಿಯವರ ಸ್ಥಾಪನಾಮಂದಿರ)
ಶ್ರಿ ಶೋಭಕೃತ್ ನಾಮ ಸಂವತ್ಸರದ ಪೌಷ ಕೃಷ್ಣ ಪಕ್ಷ ಮಕರ ಮಾಸ ಗುರುವಾರ ತಾ. 01.02.2024 ರಿಂದ ತಾ. 03.02.2024 ರ ಶನಿವಾರದ ವರೆಗೆ ಮಂದಿರದಲ್ಲಿ 40ನೇ ವಾರ್ಷಿಕ ಮಹಾಪೂಜೆ ಯು ಶ್ರೀ ವೇದಮೂರ್ತಿ ಗುರುಪ್ರಸಾದ್ ಭಟ್ (ಪ್ರಾದಾನ ಅರ್ಚಕರು ಶ್ರಿ ಮೂಕಾಂಬಿಕ ಮಂದಿರ ಘನ್ಫೋಲಿ) ಇವರ ದಿವ್ಯ ಹಸ್ತದಿಂದ ಶಾಸ್ರೋಕ್ತವಾಗಿ ಜರಗಲಿರುವದು. ಈ ಕಾರ್ಯಕ್ರಮಗಳಲ್ಲಿ ತಾವುಗಳೆಲ್ಲ ಬಂಧು ಮಿತ್ರರೊಡಗೂಡಿ ಆಗಮಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರಿ ಶನಿದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಪರವಾಗಿ ಅದ್ಯಕ್ಷರಾದ ದಯಾನಂದ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಸದಾನಂದ ಅಮೀನ್ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಕಾರ್ಯಕ್ರಮಗಳು :
ತಾ. 01.02.2024 ಗುರುವಾರ ಸಂಜೆ 6.00 ಕ್ಕೆ ಸರಿಯಾಗಿ ಸಾಮೂಹಿಕ ಪ್ರಾರ್ಥನೆ ಸ್ವಸ್ತಿ ಪುಣ್ಯಾಹವಾಚನ, ವಾಸ್ತು ಹೋಮ, ಬಲಿ, ರಾಜೋಘ್ನ ಹೋಮ
ತಾ. 02.02.2024 ಶುಕ್ರವಾರ ಬೆಳಗ್ಗೆ ಗಂಟೆ 7.30ಕ್ಕೆ ನವಗ್ರಹ ಶಾಂತಿ, ಶನಿ ಶಾಂತಿ, ಸಾಯಂ, ಗಂಟೆ 3.00 ರಿಂದ 6.00 ತನಕ ಭಜನೆ ಕಾರ್ಯಕ್ರಮ (ಶ್ರೀ ನಾರಾಯಣ ಗುರು ಭಜನಾ ಮಂಡಲಿ ಮತ್ತು ಸ್ವಾಮಿ ನಿತ್ಯಾನಂದ ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿ) ಇವರಿಂದ. ಸಂಜೆ 6.00 ರಿಂದ ದುರ್ಗಾ ನಮಸ್ಕಾರ ಪೂಜೆ.
ತಾ. 03.02.2024 ನೇ ಶನಿವಾರ ಸ್ವಸ್ತಿ ಪುಣ್ಯಾಹವಾಚನ, ಪ್ರಧಾನ ಹೋಮ, 10.00 ರಿಂದ ಶ್ರೀ ಸತ್ಯನಾರಾಯಣ ಮಹಾ ಪೂಜೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ, ಮದ್ಯಾಹ್ನ 12.00 ರಿಂದ ಶನಿ ಗ್ರಂಥ ಪಾರಾಯಣ, ದೀಪ ಪ್ರಜ್ವಲನೆ ಶ್ರೀ ಜಯಂತ್ ಪೂಜಾರಿಯವರಿಂದ ( ಶ್ರೀ ಮಾಹಾಕಾಲಿ ಕ್ಷೇತ್ರ, ಕಿಂಡಿ ಪಾಡ, ಅಮರ್ ನಗರ್, ಮುಲುಂಡ್)
ತಾ. 10.02.2024 ನೇ ಶನಿವಾರ ಸಾಯಂಕಾಲ ಘಂಟೆ 6.00 ರಿಂದ 7.00ರ ತನಕ ರಂಗ ಪೂಜೆ.

ವಿಜ್ಞಾಪನೆ :
ಅನ್ನದಾನಕ್ಕೆ ಹೊರೆ ಕಾಣಿಕೆ ಕೊಡಲಿಚ್ಛಿಸುವವರು ಹಾಗೂ ಯಾವುದೇ ಪೂಜೆ ಕೊಡುವವರು ಒಂದು ವಾರದ ಮೊದಲು ಕಾರ್ಯಕಾರಿ ಸಮಿತಿಯವರಿಗೆ ತಿಳಿಸಿ, ಮುಂಚಿತವಾಗಿ ರಶೀದಿಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
40ನೇ ವರ್ಷದ ಸಂಭ್ರಮ 2024
ಸನ್ಮಾನ್ಯ ಭಕ್ತಾಭಿಮಾನಿಗಳೇ,
ನಮ್ಮ ಶ್ರೀ ಶನೀಶ್ವರ ಮಂದಿರದ 40ನೇ ವಾರ್ಷಿಕ ದಿನವನ್ನು ಸಡಗರದಿಂದ ಆಚಲಿಸುವರೇ ಸಂಚಾಲಕ ಮಂಡಳಿ ನಿರ್ದರಿಸಿದೆ. ಆ ಪ್ರಯಕ್ತ 2024 ವರ್ಷದಲ್ಲಿ ಪ್ರತೀ ತಿಂಗಳ 2ನೇ ವಾರದ ಶನಿವಾರದಂದು ದೇವಾಲಯದ ಚಾವಡಿಯಲ್ಲಿ ಮುಂಜಾನೆ 9ಕ್ಕೆ ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಭಜನೆ, ಮಂಗಳಾರತಿ, ಅನ್ನಸಂತರ್ಷಣೆ, ಮದ್ಯಾಹ್ನ 2.00ರಿಂದ ರಾತ್ರಿ 8.00ರ ತನಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಪೂಜೆಯು ಜರಗಲಿರುವುದು. ಈ ಪೂಜೆಯನ್ನು ಸಲ್ಲಿಸುವವರು ೨೦೨೪ ರ ವರ್ಷದ ಯಾವುದೇ ತಿಂಗಳಲ್ಲಿ (ತಮ್ಮ ಹುಟ್ಟು ಹಬ್ಬದ, ಮದುವೆ ದಿನದ, ಇನ್ನಿತರ ಯಾವುದೇ ವಿಶೇಷ ದಿನದ ಬಗ್ಗೆ ಪೂಜೆಯನ್ನು ಬರೆಸಿ ರಶೀದಿಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ಶ್ರೀ ಸತ್ಯನಾರಾಯಣ ಮಹಾಪೂಜೆ ರೂ. 2501.00
ಶ್ರೀ ಶನೀಶ್ವರ ಗ್ರಂಥ ಪಾರಾಯಣ ರೂ. 2501.00
