September 6, 2026
Mumbai News Kannada
ಪ್ರಕಟಣೆ

ಸೆ.7 ರಂದು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರಧಾನ ಸಮಾರಂಭ





ಜಯ ಸಿ. ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸೆಪ್ಟೆಂಬರ್ 7, 2025 ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಮಹೋತ್ಸವವು ಗೋರೆಗಾಂವ್ ಪೂರ್ವದ ಜಯಲೀಲಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜರುಗಲಿದ್ದು, “ಶಿವಗಿರಿ ಸಮ್ಮಾನ್ ಪ್ರಶಸ್ತಿ” ಹಾಗೂ ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ವಹಿಸಲಿದ್ದಾರೆ. ಈ ಬಾರಿ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ಯನ್ನು ವರ್ಲ್ಡ್ ಬಂಟ್ಸ್ ಫೆಡರೇಶನ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿಯನ್ನು ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್‌ನ ರವಿ ಸಿ. ಶೆಟ್ಟಿ ಹಸ್ತಾಂತರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಏಷ್ಯಾಟಿಕ್ ಕ್ರೇನ್ಸ್ ಪ್ರೈ. ಲಿ.ನ ಎಂಡಿ ಶ್ರೀ ಗಣೇಶ್ ಆರ್. ಪೂಜಾರಿ ಹಾಗೂ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಎಸ್. ಎನ್. ಉಡುಪ ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ದಿವ್ಯಾ ಶಿಪ್ಪಿಂಗ್ ಎಂಡಿ ವೇದ್ ಪ್ರಕಾಶ್ ಶ್ರೀಯಾನ್, ಉದ್ಯಮಿ ಶುಭಾಕರ್ ಡಿ. ಕೋಟ್ಯಾನ್, ಪಂಚಮಿ ಪ್ಯೂರ್ ವೆಜ್‌ನ ಶ್ರ ಪುರಂದರ್ ಪೂಜಾರಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕ್ ನ ಎಂಡಿ ಮತ್ತು ಸಿಇಒ ವಿದ್ಯಾನಂದ ಎಸ್. ಕಾರ್ಕೆರಾ, ಹೆಗ್ಗಡೆ ಸಂಘ ಅಧ್ಯಕ್ಷ ಮನೋಜ್ ಹೆಗ್ಡೆ ಮತ್ತು ಕನ್ನಡ ಸಂಘ ಸಯಾನ್ ನ ಸಂಸ್ಥಾಪಕ ಹ್ಯಾರಿ ಸಿಕ್ವೆರಾ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮವು ಬೆಳಗ್ಗೆ 8:00 ಗಂಟೆಗೆ ಭಜನೆಯೊಂದಿಗೆ ಪ್ರಾರಂಭಗೊಂಡು, ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಾಗಲಿದೆ. ಮಧ್ಯಾಹ್ನ 12:00 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಧನಂಜಯ ಶಾಂತಿ ಅವರು ನಾರಾಯಣ ಗುರುಗಳ ತತ್ವಶಾಸ್ತ್ರದ ಕುರಿತು ಉಪನ್ಯಾಸ ನೀಡಲಿದ್ದು, ಧಾರ್ಮಿಕ ವಿಧಿಗಳನ್ನು ಶ್ರೀ ರವೀಂದ್ರ ಶಾಂತಿ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 1:00 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಸಮಾಜ ಸೇವೆಗಾಗಿ ವಿಶೇಷ ಮಾನ್ಯತೆ ಪಡೆದ ಶ್ರೀಮತಿ ಜಲಜಾ ಸೂರು ಪೂಜಾರಿ (ವಡಾಲ) ಹಾಗೂ ಅಡ್ವೊಕೇಟ್ ಜಿ. ಸಿ. ಪೂಜಾರಿ (ಹೈ ಕೋರ್ಟ್) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಜೊತೆಗೆ ಹಲವು ಗಣ್ಯರನ್ನು ಗೌರವಿಸಲಾಗುತ್ತಿದ್ದು, ಅವರ ಪಟ್ಟಿ ಹೀಗಿದೆ:

ಚೆಂಬೂರು: ರಂಜನ್ ಅಮಿನ್

ಭಾಂಡುಪ್: ಕರುಣಾಕರ್ ಪೂಜಾರಿ ಮತ್ತು ಶ್ರೀಮತಿ ಹರಿನಾಕ್ಷಿ ಎಂ. ಚಿರಥ್

ಡೊಂಬಿವಿಲಿ: ಮಾಧವ್ ಆರ್. ಪೂಜಾರಿ

ಭಿವಂಡಿ : ಮೋಹನ್ದಾಸ್ ಪೂಜಾರಿ

ಥಾಣೆ: ಸಂಜೀವ ಎಸ್. ಪೂಜಾರಿ

ಭಾಯಂದರ್: ಶಿವಾನಂದ ಬಂಗೇರಾ

ವಸಯಿ : ಜಯರಾಮ್ ಪೂಜಾರಿ ಮತ್ತು ಡಾ. ಶೋಭಾ ಎಂ. ಕೋಟ್ಯಾn

ನವಿ ಮುಂಬೈ: ವಿ. ಕೆ. ಸುವರ್ಣ

ಬೋರಿವಲಿ-ದಹಿಸರ್: ಶೇಖರ್ ಇಂದು ಸಾಲ್ಯಾನ್ ಮತ್ತು ಶ್ರೀಮತಿ ಲಲಿತಾ ಈಶ್ವರ್ ಹೆಜ್ಮಾಡಿ

ಕಲ್ವಾ: ಕೆ. ಆರ್. ಪೂಜಾರಿ

ಘಾಟ್ಕೋಪರ್: ಶ್ರೀಮತಿ ಲೀಲಾವತಿ ದೇಜು ಪೂಜಾರಿ

ಮೀರಾ ರೋಡ್: ದಿನೇಶ್ ಸಾಲ್ಯನ್

ಲೋನಾವಲಾ: ಶ್ರೀಧರ್ ಪೂಜಾರಿ

ನಾಲಾಸೋಪಾರ: ದಯಾನಂದ ಬೋಂಟ್ರಾ

ಮಲಾಡ್: ಕೃಷ್ಣ ಪೂಜಾರಿ

ಅಂಧೇರಿ: ಬಾಬು ಪೂಜಾರಿ

ಗೋರೆಗಾಂವ್: ಜೆ. ವಿ. ಕೋಟಿಯಾನ್

ಮುಲುಂಡ್: ವಿಠ್ಠಲ್ ಅಮಿನ್

ಕಾಂದಿವಲಿ: ರಮೇಶ್ ಬಂಗೇರಾ

ವಿಖ್ರೋಲಿ: ರಾಘವ ಕುಂದರ್

ಜೋಗೇಶ್ವರಿ: ಮುದ್ದು ಸಿ ಸುವರ್ಣ

ಪೊವಯಿ : ಧರ್ಮೇಶ್ ಸಾಲ್ಯಾನ್

ಬಾಂದ್ರಾ: ಶ್ರೀಮತಿ ಭವಾನಿ ಕೋಟ್ಯಾನ್

ಸೇವಾದಳ: ಸುನಿಲ್ ಎಸ್. ಕರ್ಕೆರ ಮತ್ತು ಕುಟುಂಬ, ಹಾಗೂ ಶ್ರೀನಾಥ್ ಪಿ. ಸಾಲ್ಯಾನ್ ಮತ್ತು ಕುಟುಂಬ.

ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : 9892821404 /7738796667/9820285177 ಸಂಪರ್ಕ ಮಾಡಬಹುದು.



Related posts

ಎ.14 : ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್. ಜು.10, ಗುರು ಪೂರ್ಣಿಮೆ ಆಚರಣೆ

Mumbai News Desk

ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕೋಟೆ , ನಾಲಸೋಪರ ಜೂನ್ 19ಕ್ಕೆ ಶ್ರೀ ನಾಗದೇವರ ಪ್ರತಿಷ್ಟಾಪನ ದಿನಾಚರಣೆ

Mumbai News Desk

ಡಿ.17 ರಂದು ಡೊಂಬಿವಲಿ ಜನ ಗಣ ಮನ ಶಾಲಾ ವಠಾರದಲ್ಲಿ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಯುವ ಮಿತ್ರ ಮಂಡಳಿ ಮೀರಾ ರೋಡ್ 28ನೇ ವರ್ಷದ ಗಣೇಶ ಉತ್ಸವ ಸಂಭ್ರಮ.

Mumbai News Desk