ಥಾಣೆ ಮಹಾನಗರಪಾಲಿಕೆಯ ಆದೇಶದಂತ್ತೆ ಜನವರಿ 19 ಮತ್ತು ಜನವರಿ 20ರಂದು ತುರ್ತು ದುರಸ್ತಿ, ಹಾಗೂ ನಿರ್ವಹಣೆ ಕಾಮಗಾರಿಗಾಗಿ 24 ಗಂಟೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಥಾಣೆಯ ಘೋಡ್ ಬಂದರ್ ರೋಡ್, ಲೋಕಮಾನ್ಯ ನಗರ್, ವರ್ತಕ್ ನಗರ್, ಸಾಕೆತ್, ರೀಟು ಪಾರ್ಕ್, ಗಾಂಧಿ ನಗರ್, ರುಸ್ತಮಜಿ, ಸಿದ್ಧಚಾಲ್, ಇಂದಿರಾ ನಗರ್, ರೂಪಾದೇವಿ, ಶ್ರೀನಗರ್, ಸಾಮಂತನಗರ್, ಸಿದ್ದೇಶ್ವರ, ಜಾನ್ಸನ್, ಮುಂಬ್ರ ಹಾಗೂ ಕಲ್ವಾದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ದುರಸ್ತಿಯ ಬಳಿಕ 1-2 ದಿನ ಕಡಿಮೆ ಒತ್ತಡದಿಂದ ನೀರು ಸರಬರಾಜು ಆಗುವ ಸಂಭವ ಇರುವುದರಿಂದ, ಮೇಲೆ ನಮೂದಿಸಿದ ಪ್ರದೇಶದ ಜನರು, ನೀರು ಸಂಗ್ರಹಣೆ ಮಾಡುವಂತ್ತೆ ಹಾಗೂ ಪೋಲಾಗದಂತ್ತೆ ಎಚ್ಚರವಹಿಸುವಂತ್ತೆ ಥಾಣೆ ಮಹಾನಗರ ಪಾಲಿಕೆ ಪ್ರಕಟಣೆ ಮೂಲಕ ತಿಳಿಸಿದೆ.