ಮುಂಬಯಿ : ಗೋರೆಗಾಂವ್ ಪೂರ್ವದ ಸಹಕಾರ್ ವಾಡಿ, ವಿರ್ವಾಣಿ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ನಿತ್ಯಾನಂದ ಆಶ್ರಮದ 59ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮ ಜ. 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ. 24ರಂದು ಬೆಳಿಗ್ಗೆ 7:15ಕ್ಕೆ ಏಕಹಾ ಭಜನೆ
ಉದ್ಘಾಟನೆ ಬಳಿಕ ದಿನಪೂರ್ತಿ ಮತ್ತು ರಾತ್ರಿ ಏಕಹಾ ಭಜನೆ ಯು ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯ ಸದಸ್ಯರು ಮತ್ತು ಭಕ್ತರಿಂದ ನಡೆದಿದೆ.
ಜ 25ರಂದು ಬೆಳಿಗ್ಗೆ ಏಕಹಾ ಭಜನೆ ಮಂಗಳೋತ್ಸವ, ಬೆಳಿಗ್ಗೆ 8 ಗಂಟೆಯಿಂದ ಮೂರ್ತಿ ಅಭಿಷೇಕ ಮತ್ತು ಪಾದುಕ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ, 11 ರಿಂದ ಭಜನೆ ಸಂಕೀರ್ತನ, ಮಧ್ಯಾಹ್ನ 12 ರಿಂದ 3 ತನಕ ಮಹಾಪ್ರಸಾದ ಭೋಜನ ಅನ್ನ ಸಂತರ್ಪಣೆಯ ಸಾಯಿ ಪ್ಯಾಲೆಸ್ ಗ್ರೂಪ್ ನ್ ರವೀಂದ್ರರ ಸುಂದರ್ ಶೆಟ್ಟಿ ಮತ್ತು ಸಹೋದರರು ಪರಿವಾರದವರ ಪ್ರಾಯೋಜಕತ್ವದಲ್ಲಿ. ಸಂಜೆ 4 ರಿಂದ ಶ್ರೀ ಸತ್ಯ ನಾರಾಯಣ ಮಹಾಪೂಜಾ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ 6.30 ರಿಂದ ತುಳು ಯಕ್ಷಗಾನ “ಮೈಮೆದಪ್ಪೆ ಮಂತ್ರದೇವತೆ” (ಗುರು ನಾರಾಯಣ ಯಕ್ಷಗಾನ ಮಂಡಳಿ ಇವರಿಂದ) ರಾತ್ರಿ 8.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ.
ಉದ್ಯಮಿ ಸಮಾಜ ಸೇವಕ ರವೀಂದ್ರ ಸುಂದರ ಶೆಟ್ಟಿಯವರ ಅಧ್ಯಕ್ಷೆತೆಯಲ್ಲಿ ಜರಗಲಿರುವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾದರ ಜೆ. ಪೂಜಾರಿ, ಮಾಜಿನಗರಸೇವಕ ಸ್ವಪ್ನಿಲ್ ತೆಂಬಾವಲ್ಕರ್, ಉದ್ಯಮಿ ಬಾಬುಬಾಯಿ ರಾತೊರ್, ಕುಲಾಲ ಸಂಘ ಮುಂಬಯಿಯ ಕಟ್ಟಡ ನಿಧಿಯ ಉಪ ಕಾರ್ಯಾಧ್ಯಕ್ಷ, ಉಧ್ಯಮಿ ಸುನಿಲ್ ಸಾಲ್ಯಾನ್ ಆಗಮಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಘು ಮೂಲ್ಯ, ಮುಖ್ಯ ಸಂಚಾಲಕರಾದ ಡಾ. ಶೈಲೇಶ್ ಜಿ, ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಕೋಶಾಧಿಕಾರಿ ಗಣೇಶ್ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ ಕೋಟ್ಯಾನ್ ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಸರ್ವ ಸದಸ್ಯರು ವಿನಂತಿಸಿದ್ದಾರೆ.