32 C
Mumbai
March 7, 2026
Mumbai News Kannada
ಪ್ರಕಟಣೆ

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ





ಮುಂಬಯಿ  ಜ 22. ಮುಂಬಯಿ ಯ ಜಿ ಎಸ್ ಬಿ ಸಭಾ, ಮುಲುಂಡ್ ಸಂಸ್ಥೆಯ  ಪ್ರಸ್ತುತಿಯಲ್ಲಿ ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ನಾಟಕ ಹಾಗೂ ಸಾಂಸ್ಕೃತಿಕ ತಂಡದ ಇತ್ತೀಚೆಗೆ  ದಹಿಸರ ಶ್ರೀ ಕಾಶೀ ಮಠದ ಸಹಯೋಗದಿಂದ ಬಹು ಪ್ರಚಲಿತಕ್ಕೆ ಬಂದ ಹಾಗೂ ಮುಂಬೈ, ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಹಲವೆಡೆ ಜಯಭೇರಿ ಗಳಿಸಿದ ಕೊಂಕಣಿ ಹಾಸ್ಯ ಪ್ರಧಾನ ಸಂಗೀತಮಯ ಕೊಂಕಣಿ ನಾಟಕ ‘ ಲಗ್ನಾ  ಪಿಶ್ಶ್ಯೆ’  ಪ್ರದರ್ಶನ ವು ಬರುವ  ಶುಕ್ರವಾರ, ಜನವರಿ 26, 2024 ರಂದು, ಮುಲುಂಡ್ ( ಪಶ್ಚಿಮ ) ದ ಮಹಾರಾಷ್ಟ್ರ  ಸೇವಾ ಸಂಘ ಹಾಲ್,ಜೆ ಏನ್ ರೋಡ್, ಸಂಕಿರಣದ ಮೊದಲನೆಯ ಮಹಡಿಯಲ್ಲಿ ಸಾಯಂಕಾಲ 4.30   ರಿಂದ  ನಡೆಯಲಿದೆ..

ಲಗ್ನಾ ಪಿಶ್ಶ್ಯೆ ಕೊಂಕಣಿ ನಾಟಕವನ್ನು ಉತ್ತರ ಕನ್ನಡ ಜಿಲ್ಲೆಯ ಬಾಲಕೃಷ್ಣ ಪುರಾಣಿಕ್ ಇವರು  ಹಾಸ್ಯ ಚಟಾಕಿಗಳ ಮಾಧ್ಯಮದ ಮುಖಾಂತರ ಅತಿ ಸುಂದರವಾಗಿ ರಚಿಸಿ , ಲಿಮ್ಕಾ ಖ್ಯಾತಿ ಡಾ. ಚಂದ್ರಶೇಖರ್ ಶೆಣೈ ಯವರು ಮಧುರಮ ಸಂಗೀತವನ್ನು ಪೋಣಿಸಿ ಅದ್ವಿತೀಯ ಬಗೆಯಲ್ಲಿ ನಿರ್ದೇಶಿಸಿದ್ದಾರೆ. 

ವಿಶ್ವ ಕೊಂಕಣಿ ಕೇಂದ್ರ ಪುರಸ್ಕೃತ A G Kamath ರು ವಿಶೇಷ ಮಾರ್ಗದರ್ಶನ ನೀಡಿರುವರು.

ಸಂಗೀತ ನಿರ್ದೇಶನವನ್ನು ಮುಂಬೈ ಸಾರಸ್ವತ ಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿದ  ಕೃಷ್ಣ ಚಂದಾವರ್ ಅವರು ನೀಡಿದ್ದಾರೆ.

ಪಾತ್ರವರ್ಗದಲ್ಲಿ, ನಗರದ ಖ್ಯಾತ ಕೊಂಕಣಿ – ಕನ್ನಡ ಹಾಸ್ಯ ರಂಗನಟ ಕಮಲಾಕ್ಷ ಸರಾಫ್, ಸಾರಸ್ವತ ಸಮಾಜದ ರಂಗ ಕಲಾವಿದ ಹರೀಶ್ ಚಂದಾವರ್, ಹಿರಿಯ ರಂಗನಟ ಹಾಗೂ ಯಕ್ಷಗಾನ ಕಲಾವಿದ ತೋನ್ಸೆ ವೆಂಕಟೇಶ್ ಶೆಣೈ,  ಮುಂಬಯಿಯ ಪ್ರಬುದ್ಧ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಅಕ್ಷತಾ ಕಾಮತ್, ಯುವ ಪ್ರತಿಭಾವಂತ ಕಲಾವಿದ ಪ್ರಮೋದ್ ಮಲ್ಯ , ಅರ್ಚನಾ ಭಟ್ ಮತ್ತು ಚಂದ್ರಶೇಖರ್ ಶೆಣೈ ಅಭಿನಯಿಸಲಿದ್ದಾರೆ.

ದ್ವನಿ, ಬೆಳಕು ಹಾಗೂ ರಂಗ ಸಜ್ಜಿಕೆ ಯಲ್ಲಿ ಸುಧಾಕರ್ ಭಟ್ ಇವರು ಸಕ್ರೀಯವಾಗಲಿರುವರು. ಮಾಸ್ಟರ್ ರೋಹನ್ ಕಾಮತ್ ಇನ್ನಿತರ ರಂಗಕರ್ಮಿಗಳು ನೇಪಥ್ಯದಲ್ಲಿ ಸಹಕರಿಸಲಿರುವರು. 

GSB Sabha, Mulund ಹಾಗೂ

DBS Tradelinks ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಸಂದರ್ಭದಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಸ್ತುತ ವರ್ಷದ ಪಾರಿತೋಷಕ ಹಾಗೂ ಗೌರವ ಪತ್ರಗಳನ್ನು ನೀಡಿ ಮುಖ್ಯ ಅತಿಥಿ Dr.Chandrashekhar Shenoy ರ ಸುಹಸ್ತಗಳಿಂದ ಪುರಸ್ಕರಿಸಲಾಗುವುದು.ಸೂಕ್ತ ಸಮಯದಲ್ಲಿ ಹಾಜರಿದ್ದು ಕೊಂಕಣಿ ಕಲಾಭಿಮಾನಿ ಗಳು ಸಹಕರಿಸುವಂತೆ GSB Sabha, Mulund ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಗಣೇಶ್ ರಾವ್ ಇವರು ವಿನಂತಿಸಿದ್ದಾರೆ

ನಾಟಕದ ಸಮಾಪ್ತಿ ನಂತರ ಅಲ್ಪ ಭೋಜನವನ್ನು ಪ್ರಾಯೋಜಿಸಲಾಗಿದೆ ಎಂದು ತಿಳಿಸಿರುವರು.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ, ಮೂಲ್ಕಿ : ಫೆ. 7ಕ್ಕೆ. ಸಿರಿಸಿಂಗಾರದ ನೇಮೋತ್ಸವ

Mumbai News Desk

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು : ಅ. 3ರಿಂದ ಶರನ್ನವತಾತ್ರಿ ಮಹೋತ್ಸವ.

Mumbai News Desk

ಶ್ರೀ ಜ್ವಾಲಾ ಮಹಾಮ್ಮಾಯಿ – ಕಾಲ ಭೈರವ ದೇವಸ್ಥಾನ ಅಲಂಗಾರು, ಮರೋಳಿ, ಮಂಗಳೂರು : ಫೆ 21ರಿಂದ ಪ್ರತಿಷ್ಠಾ ಮಹೋತ್ಸವ

Mumbai News Desk

ಸಿರಿಕಲಾ ಮೇಳದ ಪುಣೆ-ಮುಂಬೈ ದಶಮಾನೋತ್ಸವ ತಿರುಗಾಟ

Mumbai News Desk

ನ 9ಮತ್ತು 10: ಮುಂಬಯಿಯಲ್ಲಿ ಶಿವಪುರ್ಸಾದ ಬಬ್ಬರ್ಯೆ ತುಳು ನಾಟಕ. ಮಾಯಾನಗರಿಯಲ್ಲಿ ಬಬ್ಬರ್ಯನ ಮಾಯೆ

Mumbai News Desk