32 C
Mumbai
March 7, 2026
Mumbai News Kannada
ಸುದ್ದಿ

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮ ಪ್ರಸಾದ ವಿತರಣೆ





ಚಿತ್ರ, ವರದಿ : ಪಿ.ಆರ್.ರವಿಶಂಕರ್ 

 ಬೊಯಿಸರ್  ತಾ.22- 01- 2024

” ಆಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿಯ ಪ್ರಾಣಪ್ರತಿಷ್ಟೆಯು ಜರಗುತ್ತಿದ್ದು ಈ ಐತಿಹಾಸಿಕ ಸಂದರ್ಭವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ.  ಬೊಯಿಸರ್ ನ ಶ್ರೀರಾಮ ಮಂದಿರದಲ್ಲಿ ಅಸಂಖ್ಯ ಭಕ್ತಾಭಿಮಾನಿಗಳು ಇಂದು ಶ್ರೀರಾಮಮಂದಿರ , ಮಹಾದೇವ ಮಂದಿರ ಹಾಗೂ ಸ್ವಾಮಿ ನಿತ್ಯಾನಂದ ಮಂದಿರಕ್ಕೆ ದರ್ಶನಾಕಾಂಕ್ಷಿಗಳಾಗಿ ಭೇಟಿ ನೀಡುತ್ತಿದ್ದಾರೆ. ಈ ವಿಶೇಷ ಕ್ಷಣಗಳ  ಸಂತಸವನ್ನು ಸಿಹಿ ಹಂಚಿಕೊಂಡು ಆಚರಿಸೋಣ ಎಂಬ ಸದುದ್ದೇಶದಿಂದ ಪ್ರಸಾದ ರೂಪದಲ್ಲಿ ಲಾಡೂ ಹಂಚುತ್ತಿದ್ದೇವೆ ” ಹೀಗೆಂದು ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್  ಅದ್ಯಕ್ಷರಾದ  ಶ್ರೀ  ರಘುರಾಮ್ ಎಮ್. ರೈ  ನುಡಿದರು.    ಬೊಯಿಸರ್ ಪಶ್ಚಿಮದಲ್ಲಿನ  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಇಂದು ಆರಂಭಗೊಂಡ ಐದನೆಯ ವರ್ಷದ  ದೇವೀ ಜಪಪಾರಾಯಣ ಅನುಷ್ಟಾನ ಕಾರ್ಯಕ್ರಮದ    ಆರಂಭದಲ್ಲಿನ ದೀಪಪ್ರಜ್ವಲನೆಯ ಬಳಿಕ ಅವರು ಮಾತನಾಡುತ್ತಿದ್ದರು.

          ಶ್ರೀ  ಸ್ವಾಮಿ ನಿತ್ಯಾನಂದ ಮಂದಿರ , ಶ್ರೀ ರಾಮ ಮಂದಿರ ಹಾಗೂ ಮಹಾದೇವ ಮಂದಿರ ಈ ಮೂರು ಮಂದಿರಗಳು ಒಂದೇ ಸ್ಥಳದಲ್ಲಿದ್ದು ಅಲ್ಲಿನ  ಪೂರ್ಣ ಪರಿಸರವು ಇಂದು ರಂಗೋಲಿ, ದೀಪಾಲಂಕಾರ ಹಾಗೂ ಹೂ ತೋರಣಗಳಿಂದ ಅಲಂಕೃತವಾಗಿದ್ದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.  ಬೆಳಿಗ್ಗೆಯಿಂದ   ರಾತ್ರಿಯ ತನಕ  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರ ದರ್ಶನಕ್ಕೆ ಆಗಮಿಸಿದ್ದರು. ಶ್ರೀ ರಾಮ ಮಂದಿರದಲ್ಲಿ ಭಜನೆ ಹಾಗೂ ಶ್ರೀ ರಾಮಾಯಣದ ಪ್ರವಚನ ಕಾರ್ಯಕ್ರಮ ಜರಗಿತು. 

ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ದೇವೀ ಜಪಪಾರಾಯಣ ಹಾಗೂ ದೀಪೋತ್ಸವ ಜರಗಿತು.

ಮಂದಿರದ ಮುಖದ್ವಾರದಲ್ಲಿ ಸಿದ್ಧಗೊಳಿಸಿದ ಪ್ರಸಾದ ಬೂತ್ ನಲ್ಲಿ  ಆಗಮಿಸಿದ ಭಕ್ತಾದಿಗಳೆಲ್ಲರಿಗೂ ಸಿಹಿ ಲಾಡೂಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಹೋಟೆಲ್ ಅಸೋಸಿಯೇಶನ್ ನ ಸದಸ್ಯರು ಹಾಗೂ ಸ್ವಾಮಿ ನಿತ್ಯಾನಂದ ಭಕ್ತವೃಂದದ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಚಿತ್ರ ಹಾಗೂ ವರದಿ

ಪಿ.ಆರ್.ರವಿಶಂಕರ್ ~8483980035

Photo journalist , Dahanu Road (W.Rly)



Related posts

ಅಂಕ್ಲೇಶ್ವರದಲ್ಲಿ ಭಾರತ್ ಬ್ಯಾಂಕ್‌ನ 47ನೇ ಸಂಸ್ಥಾಪನಾ ದಿನಾಚರಣೆ: ಯಶಸ್ಸಿನ ಮೈಲಿಗಲ್ಲು

Mumbai News Desk

ರೇಣುಕಾ ಸ್ವಾಮಿ ಪ್ರಕರಣ – ದರ್ಶನ್ ಸೇರಿ ಏಳು ಆರೋಪಿಗಳಿಗೆ ಜಾಮೀನು

Mumbai News Desk

ಅಯೋಧ್ಯೆಯಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಮುಂಬೈ ಜನತೆಯ ಭವ್ಯ ಸ್ವಾಗತ,

Mumbai News Desk

ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ನಿಧನ

Mumbai News Desk

ಮತ ಸೌಹರ್ದತೆಗೆ ಸಾಕ್ಷಿಯಾದ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಸಮಿತಿ

Mumbai News Desk

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk