23.5 C
Karnataka
April 4, 2025
ಮುಂಬಯಿ

ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಅಭಿನಂದನಾ ಸಭೆ



 ಸಂಸ್ಥೆಯ ವಿಶ್ವಸ್ಥ ರ, ಕಾರ್ಯಕರ್ತರ , ಕೊಡುಗೈ ದಾನಿಗಳ  ಸಹಕಾರವೇ  ಯಶಸ್ಸಿನ ಪ್ರೇರಣೆ: ಕೈರಬೆಟ್ಟು ವಿಶ್ವನಾಥ್ ಭಟ್..

ಚಿತ್ರ ವರದಿ : ದಿನೇಶ್ ಕುಲಾಲ್ 

    ಮುಂಬಯಿ  ಜ25.   ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನವು ಕಳೆದ 26 ವರ್ಷ ಗಳಿಂದ ಅದ್ಭುತ ಯಶಸ್ಸಿನ ಕಾರ್ಯಕ್ರಮಗಳನ್ನು ನಡೆಸಲು ಮುಂಬೈಯ ತುಳು ಕನ್ನಡಿಗರ,ವಿಶ್ವಸ್ಥರ , ಕಾರ್ಯಕರ್ತರ, ಕೊಡುಗೈ ದಾನಿಗಳ ಪೂರ್ಣ ಸಹಕಾರವೇ ಕಾರಣ, “ಸಂಘೆ ಶಕ್ತಿ ಕಲೌ ಯುಗೇ “ ಎಂಬ ಸುಭಾಷಿತ ದಂತೆ ಒಬ್ಬನಿಂದ ಮಾಡಲಾಗದ ಉತ್ತಮ ಕಾರ್ಯಗಳನ್ನು ನೂರಾರು ಜನರು ಒಟ್ಟು ಸೇರಿ ನಡೆಸಬಹುದು,ಅದರಿಂದ ಎಲ್ಲ ಸಹ ಭಾಗಿಗಳ ಜೀವನ ವಿಕಸಿತ,ಪವಿತ್ರವಾಗುವುದ ರೊಂದಿಗೆ ಸಮಾಜಕ್ಕೂ ಉತ್ತಮ ಕೊಡುಗಯನ್ನು ನೀಡಬಹುದಾಗಿದೆ, ಕಾರ್ಯಕ್ರಮದ ಮುಂಚಿನ ಎಲ್ಲ ಪರಿ ಶ್ರಮಗಳು,ಜನರ ತುಂಬಿದಶುಭ ಹಾರೈಕೆ,ತೃಪ್ತಿಯ ಮಾತುಗಳಿಂದ ಪೂರ್ಣ ನಿವಾರಣೆ ಯಾಗುತ್ತದೆ ಎಂದು ವಿದ್ವಾನ್ ಕೈರಬೆ ಟ್ಟು ವಿಶ್ವನಾಥ್ ಭಟ್ ಅವರು ನುಡಿದರು,, 

     ಅವರು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನವೂ ಕಳೆದ ಡಿಸೆಂಬರ್ 24ರಂದು ಸಂಸ್ಥೆಯು ಅದ್ಭುತವಾಗಿ ನಡೆಸಿದ ವಾರ್ಷಿಕೋತ್ಸವದ ನಂತರ ಪೇಜಾವರ ಮಠದಲ್ಲಿ ನಡೆಸಲಾದ ಅಭಿನಂದನಾ ಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು,, 

   ಸಂಸ್ಥೆಯ ವಿಶ್ವಸ್ಥರ, ಕಾರ್ಯಕಾರಿ ಸಮಿತಿಯ ಪೂರ್ಣ ಸಹಕಾರ ಇಲ್ಲದಿದ್ದರೆ ಇಂಥಹ ಉತ್ತಮ ಕಾರ್ಯಗಳನ್ನು ನಡೆಸುವುದು ಖಂಡಿತ ಅಸಾಧ್ಯ , ಕಳೆದ ಡಿಸೆಂಬರ್ 24ರಂದು ನಡೆಸಿದ ಸಾಮೂಹಿಕ ಮಹಾಗಣಪತಿ ಯಾಗ, ಶನೈಶ್ಚರ ಶಾಂತಿ ಹವನಕ್ಕೆ ಸಹಕರಿಸಿದ ಎಲ್ಲ ಭಕ್ತರನ್ನು ನೆನಪಿಸಿದರು,

ಜ 13 ರಂದು ಪೇಜಾವರ ಮಠದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ವಿಶ್ವಸ್ಥ ರಾದ ಅವಿನಾಶ್ ಶಾಸ್ತ್ರಿ,ಸುಶೀಲಾ ದೇವಾಡಿಗ, ಲಕ್ಷ್ಮಿ ಕೋಟ್ಯಾನ್,ಸುಚಿತ್ರ ಶೆಟ್ಟಿ,ಶ್ಯಾಮ್ ಸುಂದರ್ ಸಾಲಿಯಾನ್,ದಿನೇಶ್ ಕರ್ಕೇರ,ಪದ್ಮನಾಭ್ ಸಸಿಹಿತ್ಲು,ಹ್ಯಾರಿ ಸಿಕ್ವೇರಾ,ಅಮಿತ್ ಪೂಜಾರಿ,, ಸಂದೀಪ್ ಶೆಟ್ಟಿಗಾರ್ ಮತ್ತಿತರರನ್ನು  ಪೂರ್ಣವಾಗಿ ದುಡಿದ ಕಾರ್ಯಕರ್ತರನ್ನು ಶ್ರೀ ಕೃಷ್ಣ ಪ್ರತಿಮೆ,ಸ್ಮರಣಿಕೆ ಯನ್ನಿತ್ತು ಆಶೀರ್ವದಿಸಿ ಗೌರವಿಸಲಾಯಿತು,

ಸುಚಿತ್ರ ಶೆಟ್ಟಿ ಯವರ ಪ್ರಾರ್ಥನೆ ಮಾಡಿದರು, ಕಾರ್ಯಕ್ರಮವು ಸುಶೀಲಾ ದೇವಾಡಿಗ  ನಿರೂಪಿಸಿದರು, ಸಭೆಯ ನಂತರ ಪ್ರಸಾದ ರೂಪದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು,

Related posts

ಗೋರೆಗಾಂವ್ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನ -ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ .

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ, ಸಾಧಕರಿಗೆ ಸನ್ಮಾನ

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ಸಂಭ್ರಮೊಲ್ಲಸದ ರಜತ ಮಹೋತ್ಸವ ಸಮಾರಂಭ

Mumbai News Desk

ಸಯನ್ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ  ನೋಟ್ ಬುಕ್ ವಿತರಣೆ, ಅಭಿನಂದನಾ ಕಾರ್ಯಕ್ರಮ,

Mumbai News Desk

ರತನ್ ಪೂಜಾರಿ ಯವರಿಗೆ ಶ್ರೀ ವಿಷ್ಣು ಮಂದಿರದಲ್ಲಿ ಗೌರವಾರ್ಪಣೆ.

Mumbai News Desk

ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk