23.5 C
Karnataka
April 4, 2025
ಸುದ್ದಿ

ಪ್ರೇಕ್ಷಕರನ್ನು ಮನರಂಜಿಸಿದ ‌ಕೊಂಕಣಿ ಹಾಸ್ಯ  ನಾಟಕ ‘ ಲಗ್ನಾ ಪಿಶ್ಶ್ಯೆ ‘



ನಾಟಕವನ್ನು ವಿಶೇಷ ಮನರಂಜನೆ ನೀಡುವಲ್ಲಿನ ಪ್ರಯತ್ನಗಳನ್ನು ಶ್ಲಾಘಿಸಿದರು.: ಎಂ ನರೇಂದ್ರ

ಮುಂಬಯಿ   ಜ 30 ಮುಂಬಯಿ ಯ ಜಿ ಎಸ್ ಬಿ ಸಭಾ, ಮುಲುಂಡ್ ಸಂಸ್ಥೆಯ  ಪ್ರಸ್ತುತಿಯಲ್ಲಿ ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ನಾಟಕ ಹಾಗೂ ಸಾಂಸ್ಕೃತಿಕ ತಂಡದ ,  , ಕೊಂ ಕಣಿ ಹಾಸ್ಯ ಪ್ರಧಾನ ಸಂಗೀತಮಯ ನಾಟಕ ‘ ಲಗ್ನಾ ಪಿಶ್ಶ್ಯೆ ‘ಜಿ  26. ರಂದು ಮುಲುಂಡ್ ( ಪಶ್ಚಿಮ ) ದ ಮಹಾರಾಷ್ಟ್ರ  ಸೇವಾ ಸಂಘ ಹಾಲ್,ಜೆ ಏನ್ ರೋಡ್, ಸಂಕಿರಣದ ಮೊದಲನೆಯ ಮಹಡಿಯಲ್ಲಿ ಸಾಯಂಕಾಲನಡೆಯಿತು,

   ನಾಟಕ  ಮಧ್ಯಂತರದಲ್ಲಿ ಕಲಾವಿದರಿಗೆ ಗೌರವಿಸಲಾಯಿತು ಗೌರವಾನ್ವಿತ  ಗಣ್ಯರುಗಳಾಗಿಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ ಹೆಗ್ಡೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಾಜಿ ಸಿಎಂಡಿ ಎಂ ನರೇಂದ್ರ ಮತ್ತು ಮಾಜಿ ಬ್ಯಾಂಕರ್ (ಕೆನರಾ ಬ್ಯಾಂಕ್) ದಿನೇಶ್ ಕುಡ್ವಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಲಾವಿದರು ಮತ್ತು ನಿರ್ದೇಶಕ ಲಿಮ್ಕಾ ಖ್ಯಾತಿಯ ಡಾ.ಚಂದ್ರಶೇಖರ ಶೆಣೈ ಅವರನ್ನು ಶ್ಲಾಘಿಸಿದರು,

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಾಜಿ ಸಿಎಂಡಿ ಎಂ ನರೇಂದ್ರಯವರು ಕಲಾವಿದರನ್ನು ಗೌರವಿಸಿ ಮಾತನಾಡುತ್ತಾ ಬಾಲಕೃಷ್ಣ ಪುರಾಣಿಕ್ ಕಾಸರಕೋಡ್ ಅವರು ಬರೆದ ನಾಟಕ ಮತ್ತು ಡಾ. ಶೆಣೈ ನಿರ್ದೇಶಕ, ಎ ಜಿ ಕಾಮತ್, ವಿಶ್ವ ಕೊಂಕಣಿ ಕೇಂದ್ರ ಪುರಸ್ಕೃತ ಅವರ ಸೃಜನಶೀಲ ಒಳಹರಿವಿನ ಮೂಲಕ ನಾಟಕವನ್ನು ವಿಶೇಷ ಮನರಂಜನೆ ನೀಡುವಲ್ಲಿನ ಪ್ರಯತ್ನಗಳನ್ನು ಶ್ಲಾಘಿಸಿದರು.

      ಸುರೇಂದ್ರಕುಮಾರ ಹೆಗ್ಡೆ ಯವರು ತಂಡದ ಪ್ರತಿಭಾವಂತ ಕಲಾವಿದರನ್ನು ವಿಶೇಷವಾಗಿ ಅನುಭವಿ  ಕಲಾವಿದರೊಂದಿಗೆ ಅಕ್ಷತಾ ಕಾಮತ್ ಅವರು ತಮ್ಮ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಲು ಸಮರ್ಥರಾಗಿದ್ದಾರೆ, ಸಂಗೀತ ನಿರ್ದೇಶಕ ಕೃಷ್ಣ ಚಂದಾವರ್ ಮತ್ತು ಸುಧಾಕರ ಭಟ್ ಅವರ ಪ್ಲೇ ಬ್ಯಾಕ್ ಸಂಗೀತದ ಪ್ರಯತ್ನಗಳು ಶ್ಲಾಘನೀಯ.M Narendra ಇವರು ಕೊಂಕಣಿ ನಾಟಕ ಮುಂಚೂಣಿಯಲ್ಲಿ ಒಯ್ಯಲು ಕಮಲಾಕ್ಷ ಸರಾಫ್, ಲೇಖಕ – ನಿರ್ದೇಶಕ Dr.Chandrashekhar ಶೆಣೈ , A G Kamath ಇವರು ತುಂಬಾ ಪರಿಶ್ರಮಿಸಿದ ಕಾರಣ ಈವತ್ತಿನ ದಿನ ಇಷ್ಟು ಉತ್ತಮ ನಾಟಕಗಳನ್ನು ವೀಕ್ಷಿಸುವ ಸೌಭಾಗ್ಯ ಎಲ್ಲ ಪ್ರೇಕ್ಷಕರಿಗೆ ದೊರಕಿದೆ .ಎಂದು ಶ್ಲಾಘಿಸಿದರು. 

ಪಾತ್ರವರ್ಗದಲ್ಲಿ ಮುಂಬಯಿಯ ಖ್ಯಾತ ಕೊಂಕಣಿ – ಕನ್ನಡ ಹಾಸ್ಯ ರಂಗನಟ ಕಮಲಾಕ್ಷ ಸರಾಫ್, ಸಾರಸ್ವತ ಸಮಾಜದ ರಂಗನಟ ಹರೀಶ್ ಚಂದಾವರ್, ಯಕ್ಷಗಾನ ಕಲಾವಿದ ಹಾಗೂ ಹಿರಿಯ ಕೊಂಕಣಿ ರಂಗನಟ ವೆಂಕಟೇಶ್ ಶೆಣೈ, ಪ್ರತಿಭಾವಂತ ಹಾಗೂ ಪ್ರಬುದ್ಧ ಕಲಾವಿದೆ ಅಕ್ಷತಾ ಕಾಮತ್, ಪ್ರತಿಭಾವಂತ ಯುವ ಕಲಾವಿದ ಪ್ರಮೋದ್ ಮಲ್ಯ, ಚಂದ್ರಶೇಖರ್ ಶೆಣೈ ಮತ್ತು ಅರ್ಚನಾ ಭಟ್ ಇವರು ನಟಿಸಿದರು.

ನೇಪಥ್ಯದಲ್ಲಿ ರೋಹನ್ ಕಾಮತ್, ಕೇಶವ ಪುರಾಣಿಕ್,  , ಸುರೇಶ್ ಕಿಣಿ, ಆನಂದ್ರಾಯ ಕಿಣಿ ಇನ್ನಿತರರು ಸಹಕರಿಸಿದರು.

ಸಮಾರಂಭದಲ್ಲಿ ಕಲಾವಿದರು ಮತ್ತು ಅತಿಥಿಗಳನ್ನು  ಬಾಳಿಗಾ , ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಪಡಿಯಾರ್,  ಶ್ರೀ ಗಣೇಶ್ ರಾವ್, ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದು ಗೌರವಿಸಿದರು.

ಇದಕ್ಕೂ ಮುನ್ನ ಡಾ.ಚಂದ್ರಶೇಖರ ಶೆಣೈ ಅವರು ಶೈಕ್ಷಣಿಕ ವರ್ಷದ ತೇಜಸ್ವಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಜಿ ಎಸ್ ಬಿ ಸಭಾ, mulund ಪದಾಧಿಕಾರಿಗಳನ್ನು , ಬಳಿಕ, ಶಾಲು ಹೊದೆಸಿ, ಪುಷ್ಪ ಗುಚ್ಛ ನೀಡಿ ಆಮ್ಮಿ ರಂಗಕರ್ಮಿ ಮುಖ್ಯಸ್ಥರು ಸನ್ಮಾನಿಸಿದರು.

ಒಟ್ಟಿನಲ್ಲಿ ಅದು ವಿನೋದ, ಉಲ್ಲಾಸ ಮತ್ತು ಮನರಂಜನೆಯಿಂದ ಕೂಡಿದ ಭವ್ಯ ಸಂಜೆ.  ನಟನೆ, ಹಾಡುಗಳು, ದೇಹಭಾಷೆ, ( body language ) ನೃತ್ಯದ ಅನುಕ್ರಮ, ಹಾಸ್ಯಮಯ ಭಾವಗಳು ಪ್ರೇಕ್ಷಕರನ್ನು ಆಕರ್ಷಿಸಿದವು.

———- 

Related posts

ಶ್ರೀ ಲಕ್ಕಮ್ಮಾ ದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) – ವೈದ್ಯಕೀಯ ಚಿಕಿತ್ಸೆಗೆ ನೆರವು.

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ದೀಪಾ ಭಾಸ್ಕರ್ ಕಾಂಚನ್ ಗೆ  ಶೇ 85.67% ಅಂಕ 

Mumbai News Desk

ಮಂಗಳೂರಿಗೊಂದು ಹೊಸ ರಂಗ ಮಂದಿರ – ಕಲಾಗ್ರಾಮದ ಉದ್ಘಾಟನಾ ಸಮಾರಂಭ

Mumbai News Desk

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

Mumbai News Desk

ನಿಟ್ಟೆ ತೇಜಮ್ಮ ಪೂಜಾರಿ ನಿಧಾನ

Mumbai News Desk