July 23, 2026
Mumbai News Kannada
ಸುದ್ದಿ

ನ್ಯಾಯವಾದಿ ರಾಘವ ಎಂ. ನೋಟರಿ ಪಬ್ಲಿಕ ಆಗಿ ನೇಮಕ







ಮುಂಬಯಿ : ಮಹಾನಗರದ ಹಿರಿಯ ವಕೀಲರಾದ ರಾಘವ ಎಂ. ಇವರನ್ನು ಬಾರತ ಸರಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ನೋಟರಿ ಪಬ್ಲಿಕ್ ಆಗಿ ನೇಮಕ ಮಾಡಿದೆ.

ಮುಂಬಯಿ ಮಹಾನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿರುವ ಇವರು 1996 ರಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯದಿಂದ ಕಾನೂನು ಪದವಿ ಪಡೆದು ಪ್ರಥಮ ಧರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ. ಕಾಸರಗೋಡಿನ ಖ್ಯಾತ ವಕೀಲರೊಂದಿಗೆ ತರಬೇತಿ ಪಡೆದ, ಇವರು ಮುಂಬೈಯಲ್ಲಿ ದೇಶದ ಪ್ರತಿಷ್ಠಿತ ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಮುಂಬೈ ವಿಮಾನದ ನಿಲ್ಧಾಣದಲ್ಲಿ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದಿದ್ದಾರೆ 2017 ರಿಂದ ದಹಿಸರ್ ನಲ್ಲಿ ತನ್ನದೇ ಆದ ಆರ್. ಎಂ. ಲಾ ಅಸೋಷಿಯೇಟ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಸಮಾಜ ಸೇವಾ ನಿರತರಾಗಿರುವ ರಾಘವ ಎಂ. ಅವರು ಕರ್ನಾಟಕ ಸಂಘ ಮಾಟುಂಗಾ, ಮೈಸೂರು ಅಸೋಷಿಯೇಶನ್, ತುಳು ಸಂಘ ಬೊರಿವಲಿ, ಸಂಸ್ಥೆಗಳ ಕಾರ್ಯಕಾರಿ ಸಮಿತಿಯಲ್ಲಿದ್ದು ಇನ್ನು ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಪ್ರತಿಷ್ಠ ತ  ಹೋಟೆಲ್ ಉದ್ಯಮಿ ಶಿವಚಂದ್ರ ಶೆಟ್ಟಿ ದಂಪತಿಗಳಿಗೆ ಸನ್ಮಾನ

Mumbai News Desk

ನಿಟ್ಟೆ ತೇಜಮ್ಮ ಪೂಜಾರಿ ನಿಧಾನ

Mumbai News Desk

ಶಾಲಾ ಹಂತದಲ್ಲೇ ಈಜು ಕಲಿಕೆ – ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಸಲಹೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘದ ವಾರ್ಷಿಕ ಮಹಾಸಭೆ. ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ, :ರಾಜು ಮೆಂಡನ್ 

Mumbai News Desk

ಮುಂಬೈ: ಮನೆಗೆ ಬೆಂಕಿ ತಗುಲಿ ಕುಟುಂಬದ ಐವರು ಸಾವು

Mumbai News Desk

ಮಹಾರಾಷ್ಟ್ರ ರಾಜ್ಯಪಾಲರು ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ

Mumbai News Desk