
ಮಲಾಡ್ ಪೂರ್ವ ಕುರಾರ್ ವಿಲೇಜ್ ಮಹತೋಭಾರ ಶನೀಶ್ವರ ದೇವಸ್ಥಾನಇದರ ಸುವರ್ಣ ಸಂಭ್ರಮದ ಆಚರಣೆಯ ಪ್ರಯುಕ್ತ ಸಮಾಲೋಚನ ಸಭೆ ಫೆಬ್ರವರಿ 4ರಂದು ಮಲಾಡ್ ಪೂರ್ವದ ಉತ್ಕರ್ಷ ವಿದ್ಯಾಮಂದಿರದ ಸಭಾಗ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸಾ ಸ್ಥಾಪಲ್ಯ ರ ಅಧ್ಯಕ್ಷತೆಯಲ್ಲಿ ನಡೆಯಲಿದೆ,
ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಸುತ್ತಾ ಬಂದಿದ್ದು, ಏಪ್ರಿಲ್ ತಿಂಗಳ 7 ರಂದು ದಸಹಿರ್ ಪೂರ್ವದ ಲತಾ ಮಂಗೇಶ್ಕರ್ ಸಭಾಭವನದಲ್ಲಿ ಅದ್ದೂರಿಯ ಸಮರೂಪ ಕಾರ್ಯಕ್ರಮ ನಡೆಯಲಿದ್ದು ಈ ಬಗ್ಗೆ ಸಭೆಯು ನಡೆಯಲಿದೆ, ಸದಸ್ಯರು. ಭಕ್ತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕಾಗಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಧಿಕಾರಿ ಹರೀಶ್ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ. ಶೀತಲ್ ಕೋಟ್ಯಾನ್ ಮತ್ತು ಸುವರ್ಣ ಸಂಭ್ರಮ ಆಚರಣೆಯ ಕಾರ್ಯ ಧ್ಯಕ್ಷ ಪ್ರೇಮನಾಥ್ ಸಾಲಿಯನ್, ವಿನಂತಿಸಿಕೊಂಡಿದ್ದಾರೆ