
ಜಗಜ್ಯೋತಿ ಕಲಾವೃಂದ (ರಿ.) ಮುಂಬಯಿ ಇದರ 37ನೇ ವಾರ್ಷಿಕೋತ್ಸವ ಮತ್ತು ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ
ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭ ರವಿವಾರ ದಿನಾಂಕ 11.02.2024 ಸಾಯಂಕಾಲ 4.30 ಗಂಟೆಗೆ
ಲೇವಾ ಭವನ, ಡಿ. ಎನ್. ಸಿ. ರೋಡ್, ದತ್ತ ನಗರ, ಡೊಂಬಿವಲಿ (ಪೂರ್ವ) ದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ದಿವಾಕರ ಟಿ. ಶೆಟ್ಟಿ ಇಂದ್ರಾಳಿ (ಕಾರ್ಯಾಧ್ಯಕ್ಷರು : ಕರ್ನಾಟಕ ಸಂಘ, ಡೊಂಬಿವಲಿ) ವಹಿಸಲಿರುವರು, ಅತಿಥಿಗಳಾಗಿ ಶ್ರೀ ಆನಂದ ಡಿ. ಶೆಟ್ಟಿ ಎಕ್ಕಾರು ( ಕಾರ್ಯಾಧ್ಯಕ್ಷರು-ಬಂಟ್ಸ್ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಶ್ರೀ ಸುಬ್ಬಯ್ಯ ಎ. ಶೆಟ್ಟಿ ( ಉಪ ಕಾರ್ಯಾಧ್ಯಕ್ಷರು -ಸಮಾಜ ಕಲ್ಯಾಣ ಸಮಿತಿ, ಬಂಟ್ಸ್ ಸಂಘ ಮುಂಬಯಿ), ಶ್ರೀ ಪ್ರಭಾಕರ್ ಆರ್. ಶೆಟ್ಟಿ ( ಉಪ ಕಾರ್ಯಾಧ್ಯಕ್ಷರು -ಬಂಟ್ಸ್ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಶ್ರೀ ಜಯಂತ್ ಎನ್. ಶೆಟ್ಟಿ ( ಅಧ್ಯಕ್ಷರು – ಕನ್ನಡ ಸಂಘ,ವರ್ತಕ್ ನಗರ, ಥಾಣೆ) ಶ್ರೀಮತಿ ಅಭಿಜ್ಞಾ ಪ್ರಕಾರ ಹೆಗ್ಡೆ(ಭರತ ನಾಟ್ಯ ಕಲಾವಿದೆ) ಉಪಸ್ಥಿತರಿರುವರು.
ಪ್ರಶಸ್ತಿ ವಿಜೇತರು :
ಕಥಾ ಪ್ರಶಸ್ತಿ – ಶ್ರೀಮತಿ ದಾಕ್ಷಾಯಣಿ ಯಡಹಳ್ಳಿ, ಡೊಂಬಿವಲಿ.
ಕಾವ್ಯ ಪ್ರಶಸ್ತಿ – ಶ್ರೀಮತಿ ಮಿಲನ ಕೆ. ಭರತ್, ಕೊಡಗು, ಕರ್ನಾಟಕ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ನೃತ್ಯ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪವಿ ಆರ್ಟ್ಸ್ ಇದರ ಸಂಚಾಲಕರಾದ ಗುರು ಶ್ರೀ ಪವಿತ್ರ ಭಟ್ ಮತ್ತು ಶ್ರೀಮತಿ ಅಪರ್ಣ ಶಾಸ್ತ್ರಿ ಭಟ್ ಅವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಸಾಹಿತ್ಯಾಭಿಮಾನಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರಾದ ರಮೇಶ್ ಎ. ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ಸಂತೋಷ ಪಿ. ಶೆಟ್ಟಿ, ಕೋಶಾಧಿಕಾರಿ ಚಂದ್ರ ಎನ್. ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಸಲಹೆಗಾರರಾದ ಶ್ರೀ ಸುಕುಮಾರ ಎನ್. ಶೆಟ್ಟಿ, ಪ್ರಶಸ್ತಿ ಸಮಿತಿಯ ಸಲಹೆಗಾರರಾದ ಶ್ರೀ ಶೇಖರ ಆರ್. ಶೆಟ್ಟಿ, ಇನ್ನ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.